ಸಾಮಾಜಿಕ ಪರಿವರ್ತನ ಚಳುವಳಿಗಾರರ ಸ್ಮರಣೆಯಲ್ಲಿ ಗಣಕರಂಗ, ಧಾರವಾಡ ಆಯೋಜಿಸುವ ಸಾಮಾಜಿಕ ಶಾಂತಿ-ಮೈತ್ರಿಗಾಗಿ, ಬುದ್ಧ-ಬಸವ-ಬಾಬಾಸಾಹೇಬ(ತ್ರಿಬಿ) ನೆನಪಿನ ಕವಿಗೋಷ್ಠಿ-22ರಲ್ಲಿ, 2564ನೇ ಬುದ್ಧ ಪೂರ್ಣಿಮೆಯ ಪ್ರಯುಕ್ತ, “ವರ್ತಮಾನದಲ್ಲಿ ಬುದ್ಧ-ಬಸವ-ಬಾಬಾಸಾಹೇಬರು” ಕುರಿತು ಸ್ವರಚಿತ ಕವನ/ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.
ಕವನ/ಪ್ರಬಂಧ ಕಳಿಸಲು ಕೊನೆಯ ದಿನಾಂಕ: 24-05-2020
ಕಳಿಸಬೇಕಾದ ಇ-ಮೇಲ್ : ganakaranga@gmail.com
ಆಸಕ್ತರ ಗಮನಕ್ಕೆ :
1.ಹೊಸತನದ ಪರಿಕಲ್ಪನೆಯ ಎಲ್ಲಿಯೂ ಪ್ರಕಟವಾಗಿರದ ಕನಿಷ್ಟ 30-35 ಸಾಲುಗಳ ಮಿತಿಯುಳ್ಳ ಸ್ವರಚಿತ ಕವನ ಅಥವಾ ಕನಿಷ್ಟ ಐದು ಪುಟಗಳಿಗೆ ಮೀರದಂತಿರುವ 1500 ಪದಗಳ ಮಿತಿಯಲ್ಲಿರುವ ಟೈಪಿಸಿದ ಪ್ರಬಂಧವನ್ನು ಕಳಿಸಬೇಕು. ಇಮೇಜ್ ರೂಪದ ಅಥವಾ ಕೈಬರಹದ ಕವನ/ಪ್ರಬಂಧ ಸ್ವೀಕರಿಸಲಾಗುವುದಿಲ್ಲ. ; ಯಾವುದೇ ವಯಸ್ಸಿನ ನಿರ್ಬಂಧವಿಲ್ಲ.
2.ನುಡಿ, ಯುನಿಕೋಡ್ ಆವೃತ್ತಿಯ ಸ್ವರಚಿತ ಕವನ/ಪ್ರಬಂಧವನ್ನು Text ಆವೃತ್ತಿಯಲ್ಲಿ ಇ-ಮೇಲ್ ಮೂಲಕ ಕಡ್ಡಾಯವಾಗಿ ಕಳಿಸತಕ್ಕದ್ದು ; ಕವನ/ಪ್ರಬಂಧ ಆಯ್ಕೆಯಾಗುವ ಕವಿಗಳಿಗೆ/ಪ್ರಬಂಧಕಾರರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು.
3.ಕೊರೋನಾ ಸೋಂಕಿನಿಂದಾದ ಲಾಕ್ಡೌಆನ್ ಸಂಪೂರ್ಣ ಕ್ಲಿಯರ್ ಆದ ನಂತರ ಆಯೋಜಿಸುವ ಕಾರ್ಯಕ್ರಮದಲ್ಲಿ/ಕವಿಗೋಷ್ಟಿಯಲ್ಲಿ ಭಾಗವಹಿಸುವ ಕವಿಗಳಿಗೆ/ಪ್ರಬಂಧಕಾರರಿಗೆ ಪ್ರಮಾಣಪತ್ರ ಸೇರಿದಂತೆ ಇನ್ನಿತರ ಸೂಕ್ತವಾದ ಗೌರವ ನೀಡಲಾಗುವುದು.
4.ಕವನ/ಪ್ರಬಂಧಗಳ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ಚರ್ಚೆಗೆ ಅವಕಾಶವಿಲ್ಲ ; ಸಹಕಾರವಿರಲಿ. ಕಾರ್ಯಕ್ರಮ ಆಯೋಜಕರ ತೀರ್ಮಾನವೇ ಅಂತಿಮ ; ಸಹಕಾರವಿರಲಿ.
5.ಸ್ವೀಕೃತವಾದ ಮತ್ತು ಸೂಕ್ತವೆನಿಸುವ ಕವನ/ಪ್ರಬಂಧಗಳನ್ನು ಐ.ಎಸ್.ಬಿ.ಎನ್. ನೊಂದಾಯಿತ ಪುಸ್ತಕ ಅಥವಾ ಇನ್ನಾವುದೇ ರೂಪದಲ್ಲಿ ಗಣಕರಂಗ ಪ್ರಕಾಶನದಿಂದ ಪ್ರಕಟಿಸಲಾಗುವುದು ; ಸಹಕಾರವಿರಲಿ.
ಮಧುರ ಮೈತ್ರಿಗಳೊಂದಿಗೆ, ತಮ್ಮೆಲ್ಲರ ಸಹಕಾರವಿರಲಿ.
ಕವಿಗೋಷ್ಟಿ ಸಮಿತಿ, ಗಣಕರಂಗ, ಧಾರವಾಡ
ಮಾಹಿತಿಗೆ : 9845109480 / 9902674005 / 9480249704 / 8660111052, ganakaranga@gmail.com