ಅನಂತಪುರ ಎಂಬ ಊರಿನಲ್ಲಿ ಹಬ್ಬಿದ ನಾಥ ಎಂಬ ಶ್ರೀಮಂತ ವ್ಯಕ್ತಿ ವಾಸವಾಗಿದ್ದನು ಅವನು ತನ್ನ ಸುಂದರವಾದ ಸಂಸಾರದೊಂದಿಗೆ ಉತ್ತಮ ಜೀವನ ನಡೆಸುತ್ತಾ ಸಂತೋಷದಿಂದ ಬದುಕುತ್ತಿದ್ದರೂ ತನ್ನ ಸ್ನೇಹಿತರಿಗೆ ಹಾಗೂ ನಂಬಿಕಸ್ಥ ರಿಗೆ ಕಾಳು-ಕಡಿ ಅಥವಾ ಹಣವನ್ನು ನೀಡಿ ಅವರ ದುಡಿಮೆಗೆ ನೆರವಾಗುತ್ತಿದ್ದರು ಸಾಲ ಪಡೆದವರು ಕಾಲಕ್ಕೆ ಸರಿಯಾಗಿ ತಾವು ಪಡೆದ ವಸ್ತುಗಳನ್ನು ಅಥವಾ ಹಣವನ್ನು ತಿರುಗಿಸುತ್ತಿದ್ದರು . ಅಲ್ಪ ಪ್ರಮಾಣದ ಬಡ್ಡಿಯನ್ನು ಪಡೆಯುತ್ತಿದ್ದಾನೆ ಯಾರಿಗೂ ನೋಯಿಸದೆ ವ್ಯವಹಾರವನ್ನು ನಡೆಸುತ್ತಿದ್ದನು.
ಅದ್ಭುತ ನಾಥನಿಗೆ ಸಾಲವನ್ನು ಮರಳಿ ಕೇಳಲು ಊರಿಂದ ಊರಿಗೆ ಹೋಗಿ ಬರಲು ಒಂದು ಕುದುರೆಯ ಅವಶ್ಯಕತೆ ಉಂಟಾಯಿತು ಅವನನ್ನು ರಾಯರೇ ಒಂದು ಉತ್ತಮವಾದ ಕುದುರೆಯನ್ನು ಕೊಂಡುಕೊಳ್ಳಿ ನಿಮಗೆ ಸಹಾಯವಾಗುತ್ತದೆ ಎಂದು ಸಲಹೆಯಿತ್ತರು. ಅದರಂತೆ ಶ್ರೀಮಂತನು ಪಕ್ಕದ ಊರಿಗೆ ಹೋಗಿ ಒಂದು ದಷ್ಟಪುಷ್ಟ ಸುಂದರವಾದ ಕುದುರೆಯನ್ನು ಕೊಂಡು ತಂದನು. ಕುದುರೆಯನ್ನು ತಂದ ಮೊದಲಲ್ಲಿ ಅದನ್ನು ಚೆನ್ನಾಗಿ ನೋಡಿಕೊಳ್ಳ ತೊಡಗಿದನು ಕಾಲಕ್ಕೆ ತಕ್ಕ ಹಾಗೆ ಅದಕ್ಕೆ ಊಟ ನಿದ್ದೆ ಸ್ನಾನ ಹೀಗೆ ಕುದುರೆಗೆ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಂಡರು. ಪಕ್ಕದ ಊರುಗಳಿಗೆ ಹೋಗುವಾಗ ಶ್ರೀಮಂತನೂ ಕುದುರೆಯ ಮೇಲೆ ಹತ್ತಿ ದೂರದ ಊರುಗಳಿಗೆ ಪ್ರಯಾಣ ಮಾಡಿ ಕೆಲಸ ಕಾರ್ಯಗಳನ್ನು ಮುಗಿಸಿದ ನಂತರ ಮನೆಗೆ ಹಿಂದಿರುಗುತ್ತಿದ್ದ.
ಕುದುರೆಯು ಅಬ್ದುಲ್ ಅನಾಥನ ಎಲ್ಲಾ ಕಾರ್ಯಗಳಿಗೆ ನಮ್ಮ ವಾದ ಸಹಾಯವನ್ನು ನೀಡುತ್ತಾ ಇರುವುದರಿಂದ ಅದ್ಭುತ ನಾಥನ ಕೆಲಸಕಾರ್ಯಗಳು ಸುಗಮವಾಗಿ ತೊಡಗಿದವು. ಇದರಿಂದಾಗಿ ಇನ್ನೂ ಹೆಚ್ಚು ಹೆಚ್ಚು ಕೆಲಸಗಳನ್ನು ವಹಿಸಿಕೊಂಡನು. ವ್ಯವಹಾರವು ಹೆಚ್ಚಿದಂತೆ ಅಬ್ಯುದನಾಥನ ಬಳಿ ಹಣವೂ ಹೆಚ್ಚತೊಡಗಿತು. ಹಣದ ಮೋಹ ಹೆಚ್ಚಿತು. ಇದರಿಂದಾಗಿ ಕುದುರೆಗೆ ಕೆಲಸಗಳು ಹೆಚ್ಚಿದವು. ವಿಶ್ರಾಂತಿ ಇಲ್ಲದೇ ಕುದುರೆಯು ಪ್ರತಿದಿನ ಪ್ರಯಾಣ ಕೈಗೊಳ್ಳಬೇಕಾಯಿತು. ಅಭ್ಯುದನಾಥನು ಕುದುರೆಯನ್ನು ಮೊದಲಿನಂತೆ ನೋಡಿಕೊಳ್ಳದೇ ಅಪೂರ್ಣ ಆಹಾರ, ಅವಿಶ್ರಾಂತ ಕೆಲಸ, ಅನಾರೋಗ್ಯದಲ್ಲೂ ಕೆಲಸಕ್ಕೆ ತೊಡಗಿಸುವುದು, ಸರಿಯಾದ ಉಪಚಾರ ಮಾಡದಿರುವುದೇ ಇರುವುದರಿಂದ ಕುದುರೆಯು ಮೊದಲಿನ ಹಾಗೆ ಕೆಲಸದಲ್ಲಿ ಶ್ರದ್ಧೆ ಆಸಕ್ತಿಯನ್ನು ತೋರಿಸಲಿಲ್ಲ. ಅಭ್ಯುದನಾಥನು ಕುದುರೆಯು ಮೊದಲಿನ ಹಾಗೆ ಕೆಲಸದಲ್ಲಿ ಆಸಕ್ತಿಯನ್ನು ತೋರಿಸುತ್ತಿಲ್ಲವೆಂದು ಮೂದಲಿಸುತ್ತಾ ಕುದುರೆಗೆ ಸರಿಯಾಗಿ ಆಹಾರ ನೀಡದೇ ಥಳಿಸುತ್ತಿದ್ದನು. ಎಲ್ಲರೂ ರಾಯರ ಕುದುರೆ ಕತ್ತೆ ತರ ಆಗಿದೆ ಎಂದು ಮಾತನಾಡಿಕೊಳ್ಳತೊಡಗಿದರು. ಅಭ್ಯುದನಾಥನಿಗೆ ಕುದುರೆಯ ಬಗ್ಗೆ ಚಿಂತೆಮಾಡತೊಡಗಿದನು.
ಒಂದು ದಿನ ಅಭ್ಯುದನಾಥನ ಮನೆಗೆ ಸನ್ಯಾಸಿಯೊಬ್ಬರು ಆಗಮಿಸಿದರು. ಅಭ್ಯುದನಾಥನ ಕ್ಷೇಮ ಸಮಾಚಾರ ವಿಚಾರಿಸುತ್ತಾ ಇರುವಾಗ ಅಭ್ಯುದನಾಥನು ತನ್ನ ಕುದುರೆಯ ಬಗ್ಗೆ ಹೇಳಿಕೊಂಡನು. ಸನ್ಯಾಸಿಯು ಕುದುರೆಯ ಪೂರ್ವಾಪರ ಹಾಗೂ ಅದರ ಕೆಲಸ ಕಾರ್ಯದ ಬಗ್ಗೆ ತಿಳಿದು ಒಂದು ಸಲಹೆ ನೀಡಿದರು. ಪ್ರತಿ ದಿನವೂ ಕುದುರೆಗೆ ಮೊದಲಿನ ಹಾಗೆ ಆಹಾರ, ವಿಶ್ರಾಂತಿ, ಉಪಚಾರ ಹಾಗೂ ಕೆಲಸವನ್ನು ನೀಡಲು ತಿಳಿಸಿದರು. ಅಭ್ಯುದನಾಥನು ಸನ್ಯಾಸಿಗಳ ಮಾತಿನಂತೆ ಕುದುರೆಯನ್ನು ನೋಡಿಕೊಳ್ಳತೊಡಗಿದನು. ಕುದುರೆಯು ದಿನಗಳು ಉರುಳಿದಂತೆ ಮೊದಲಿನ ಹಾಗೆ ಕೆಲಸದಲ್ಲಿ ಆಸಕ್ತಿ ತೋರಿಸತೊಡಗಿತು. “ರಾಯರ ಕುದುರೆ ಕತ್ತೆಯಾಯ್ತು ” ಎನ್ನುತ್ತಿದ್ದ ಜನ ಕುದುರೆಯ ಈಗಿನ ಕೆಲಸ ಕಾರ್ಯಗಳನ್ನು ಕಂಡು ಮೂಕವಿಸ್ಮಿತರಾದರು.
–ವೆಂಕಟೇಶ ಚಾಗಿ