ಮೊದಲು ಓದುಗನಾಗು

‘ರಾಗವಿಲ್ಲದಿದ್ದರೂ ಸರಿ’ ನಾಲಿಗೆ ಮೇಲೆ ನುಲಿಯುತಿರಲಿ: ಜಹಾನ್ ಆರಾ ಕೋಳೂರು

ಗಜಲ್ ಕಾವ್ಯ ನಿಜಕ್ಕೂ ಬಹಳ ನಿಯಮಬದ್ಧವಾದ ಸಾಹಿತ್ಯಪ್ರಕಾರ ಎಂದು ಹೇಳಬಹುದು ಇದು ಸಾಮಾನ್ಯವಾಗಿ ಒಂದೆರಡು ಪ್ರಯತ್ನಗಳಲ್ಲಿ ಒಲಿಯುವಂಥದ್ದಲ್ಲ ಉಮರ್ ರವರ ಕಠಿಣ ಪರಿಶ್ರಮ ಮತ್ತು ಅಧ್ಯಯನಶೀಲತೆಯಿಂದಾಗಿ ಇದು ಅವರಿಗೆ ಒಲಿಯಲು ಸಾಧ್ಯವಾಗಿರಬಹುದು.

” ರಾಗವಿಲ್ಲದಿದ್ದರೂ ಸರಿ” ಎಂದು ಹೇಳಿ ಭಾವ ತೀವ್ರವಾದ ಹೃದಯಸ್ಪರ್ಶಿಯಾದ ಪ್ರಾಮಾಣಿಕವಾದ ರಾಗಗಳನ್ನು ಕವಿ ನಮ್ಮ ಕೈಗೆ ಇಟ್ಟಿದ್ದಾರೆ. ಸೂಫಿ ಮಾದರಿಯ ಮುಖಪುಟ ದೊಂದಿಗೆ ಮಾನವೀಯತೆಯ ಗಜಲ್ ಗಳ ಅನಾವರಣಗೊಂಡಿವೆ.

ಈ ಕೃತಿಗೆ ವಿಶಿಷ್ಟವಾದ ಶೈಲಿಯಲ್ಲಿ ಮುನ್ನುಡಿಯನ್ನು ಬರೆದಿರುವಂತಹ ಶ್ರೀಮತಿ ಮೆಹಬೂಬ್ ಬಿ ಶೇಕ್ ಅವರು ಗಜಲ್ ಕಾವ್ಯಪರಂಪರೆಯ ಒಂದು ಸಂಕ್ಷಿಪ್ತ ಪರಿಚಯ ದೊಂದಿಗೆ ಸಂಕಲನದಲ್ಲಿರುವ ಗಜಲ್ ಗಳನ್ನು ವಿವಿಧ ದೃಷ್ಟಿಕೋನಗಳಲ್ಲಿ ತೆರೆದಿಟ್ಟಿದ್ದು ಅವರ ಗಜಲ್ ಗಳ ಮೇಲಿನ ಉತ್ಕೃಷ್ಟ ಪ್ರೇಮ ಮತ್ತು ಅಧ್ಯಯನದ ಆಳವನ್ನು ಬಿಂಬಿಸುತ್ತಿದೆ. ಬೆನ್ನುಡಿಯಲ್ಲಿ ಕೇಶವ ಮಳಗಿ ಯವರ ಶುಭಾಶಯಗಳು ಮೆರಗು ತಂದಿದೆ. ಜಬಿವುಲ್ಲಾ ರವರು ಬರೆದಿರುವ ಚಿತ್ರಗಳು ಅಷ್ಟೇ ಮೋಹಕವಾಗಿವೆ ಫೇಸ್ಬುಕ್ ಮೂಲಕ ಪರಿಚಯವಾದ ಉಮರ್ ದೇವರಮನಿ ನವರ ಗಜಲ್ ಗಳನ್ನು ಫೇಸ್ಬುಕ್ನಲ್ಲಿ ಆಗಾಗ ಗಮನಿಸುತ್ತಿದ್ದೆ. ಅವರ ಮೊದಲ ಸಂಕಲನವನ್ನು ಬಹಳ ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದಾರೆ. ಮತ್ತೆ ಮತ್ತೆ ಓದಿಸಿಕೊಳ್ಳುವ ಗಜಲ್ಗಳು ಹಾಗೆ ಪದೇ ಪದೇ ಕಾಡುವ ಗಜಲ್ಗಳು ಇದಾಗಿದೆ. ಕವಿಯ ವಿಶ್ವಭಾತೃತ್ವ ತತ್ವ ಸೇರಿದಂತೆ ಸ್ವಾತಂತ್ರ್ಯ-ಸಮಾನತೆ ಸಾವು-ನೋವು ವೈರಾಗ್ಯ ಪ್ರೇಮ ಎಲ್ಲವೂ ಗಜಲ್ ಗಳಲ್ಲಿ ರಾಗ ಕಟ್ಟಿವೆ. ಅಷ್ಟೇ ಅಲ್ಲದೆ ಬಹಳ ಪ್ರೀತಿಯಿಂದ ಸರಳವಾಗಿ ಮತ್ತು ನೇರವಾಗಿ ಸಮಾಜವನ್ನು ತಿದ್ದಲು ಈಗ ಗಳು ಸಿದ್ಧವಾಗಿದೆ.
ನನಗೆ ಇಷ್ಟವಾದ ಕೆಲವು ಮತ್ಲಾಗಳನ್ನು ಇಲ್ಲಿ ನಮೂದಿಸಿದ್ದೇನೆ
‘ಕಲ್ಲಾಗುವುದು ಅಷ್ಟು ಒಳ್ಳೆಯದಲ್ಲ ಸಖಿ
ಅರಳಬೇಕು ಅಲ್ಲಿ ಪ್ರೀತಿಯ ಹೂವು ಮಣ್ಣಾಗು’

ಅಲೌಕಿಕ ಪಾರಮಾರ್ಥಿಕ ಪದಗಳ ಒಂದು ಚಮತ್ಕಾರ ಈ ಸಾಲುಗಳಲ್ಲಿ ಇವೆ. ಕಲ್ಲಾಗುದರಲ್ಲಿ ಅರ್ಥಹೀನತೆ ಇದೆ ಅದರ ಬದಲು ಫಲವತ್ತತೆಯನ್ನು ಮಿಡಿಯುವಂತಹ ಮಣ್ಣು ಆಗಬೇಕು. ಜೀವಸಂಕುಲದ ಹಿತ ಬಯಸುವ ಈ ಗಜಲ್
‘ಬಯಲಲ್ಲಿ ಬಯಲಾಗಿ ಅನಂತವಾಗುವುದಾದರೆ
ಇಲ್ಲಿ ಮನೆಕಟ್ಟಿ ಕೊನೆಯಾಗ ಬೇಕಂತೆ ಹೇಗೆ’
ಕುವೆಂಪುಯವರು ಹೇಳುವಂತೆ ಅನಂತತೆಯ ಪರಿಶೋಧನೆದಲಿ ಉಮರ್ ಇಲ್ಲಿ ಸಾಗಿದ್ದಾರೆ ಎಂದರೆ ತಪ್ಪಾಗಲಾರದು.

“ಹೊಟ್ಟೆ ತುಂಬೆಲ್ಲಾ ಹರಾಮಿತನ ತುಂಬಿಕೊಂಡು
ಸಾಜ್ಧಗಳು ಎಂದು ಸ್ವೀಕೃತವಾಗುವುದೇ ಇಲ್ಲ”
ಅನೇಕ ಮುಖವಾಡಗಳನ್ನು ಕಿತ್ತು ಬಿಸಾಕುವ ಸಾಲುಗಳು
ದೇವರಲ್ಲಿ ಮೊರೆಹೋಗಬೇಕಾದ್ರೆ ನಿಜಕ್ಕೂ ಮಗು ಮನಸ್ಸು ಬೇಕು ಆದ್ರೆ ಒಳ್ಳೆ ತನ ಯಾರಿಗೂ ಬೇಡ ವಾಸ್ತವ ಕ್ಕೆ ಹಿಡಿದ ಕನ್ನಡಿ ಇದು.

“ಹಸನ ಆಗಿರಬೇಕು ಹೊಲ ಮಳೆಯ ಮುನ್ನ
ಬರೀ ಕಸವೇ ಹುಟ್ಟಿತ್ತು ಹನಿ ಬಿದ್ದ ನೆಲದಲ್ಲಿ”
ಬರುವ ಮಳೆಗೆ ನೆಲದ ಮೇಲೆ ಬೇಧಭಾವ ಇಲ್ಲ ತೇವವಾಗಿಸುವುದು ಅದರ ಗುಣ ಅಷ್ಟೆ ಮನಸ್ಸು ಹೊಲ ಯಾವತ್ತೂ ಬೇರೆ ಅಲ್ಲ ಅಲ್ಲಿ ಬಯಕೆಗಳೇ ಮೂಡುವುದು ಆ ಬಯಕೆಗಳಿಂದ ಲಾಭ ಪಡೆಯುವುದು ಅಥವಾ ನಷ್ಟ ಅನುಭವಿಸುವುದು ಆ ರೈತನ ಹೊಣೆ. ಇಂತಹ ಅನೇಕ ಭಾವನೆಗಳು ಇಲ್ಲಿ ಭರವಸೆ ಆಗಿದೆ ಅನೋದು ಈ ಗಝಲ್ ಗಳ ಚಮತ್ಕಾರ.

“ಯುದ್ಧವೇ ಇಲ್ಲ ಬಿಡು ನಿನ್ನ ನೀನು ಗೆದ್ದಮೇಲೆ
ಸೋಲನ್ನು ಬರಲು ಬಿಡು ಪ್ರೀತಿಸುವುದಾದರೆ”
ವಿಶ್ವಾಸದ ವಿಜಯದ ಮುಂದೆ ಯಾವ ಹೋರಾಟವೂ ಇಲ್ಲ ಇದ್ದಷ್ಟು ದಿನ ನಾವು ನಮ್ಮೊಂದಿಗೆ ಹೋರಾಡುತ್ತಿರುವ ಬೇಕು ಹಾಗೂ ಒಂದು ವೇಳೆ ಸೋಲು ಬಂದರೆ ಅದನ್ನು ಪ್ರೀತಿಸಬೇಕು ಎಂದು ಹೇಳುವಂತಹ ಈ ಮಾತು ನಿಜಕ್ಕೂ ಅದ್ಭುತ ಸೋತ ಅಷ್ಟು ಗೆಲವು ದೃಢವಾಗುತ್ತದೆ ಆದರೆ ಅದನ್ನು ಪ್ರೀತಿಸಿದರೆ ಮಾತ್ರ.

ಮಹಾನ್ ಕವಿಗಳ ತತ್ವಜ್ಞಾನಿಗಳ ಸೂಫಿ ಸಂತರು ಶಿವಶರಣರ ಕ್ರಾಂತಿಕಾರಿಗಳ ಅನೇಕ ವಿಚಾರಗಳನ್ನು ಒಡೆದು ಕಟ್ಟುವ ಪ್ರಯತ್ನ ಇಲ್ಲಿ ರಾಗವಾಗಿದೆ.

ಅನುಭವವನ್ನು ಅನುಭಾವಗೊಳಿಸುವ ಮಾತನ್ನು ಮೌನದೊಂದಿಗೆ ಪ್ರೀತಿಯನ್ನು ನೀತಿಯೊಂದಿಗೆ ತತ್ವವನ್ನು ತಾತ್ವಿಕ ದೊಂದಿಗೆ ಭಾವನೆಗಳನ್ನು ಭರವಸೆಯ ಗಳೊಂದಿಗೆ ಸಂವಹನ ಬೆಸೆಯುವ ಕಲೆ ಉಮರ್ ರವರ ಗಜಲ್ ಗಳಲ್ಲಿದೆ.

ಉಮರ್ ನವರ ಗಝಲ್ಗಳು “ರಾಗವಿಲ್ಲದಿದ್ದರೂ ಸರಿ” ಕಾವ್ಯಾಸಕ್ತರ ನಾಲಿಗೆ ಮೇಲೆ ನುಲಿಯುತಿರಲಿ.

-ಜಹಾನ್ ಆರಾ ಕೋಳೂರು

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *