ಯೂಟ್ಯೂಬ್‌ ನಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡ ಮಾಧ್ಯಮದಲ್ಲಿ ಬ್ಯಾಂಕ್ ಪರೀಕ್ಷೆಯ ತರಬೇತಿ

ಆತ್ಮೀಯರೆ, ನನಗೆ ಬಹಳ ಖುಷಿ ಎನಿಸುತ್ತಿದೆ. ಯಾಕೆಂದರೆ ಕನ್ನಡ ಮಾಧ್ಯಮದಲ್ಲಿ ಉಚಿತವಾಗಿ ಬ್ಯಾಂಕ್ ಪರೀಕ್ಷೆ ತರಬೇತಿಯನ್ನು ಯೂಟ್ಯೂಬ್ ಮುಖಾಂತರ ಪ್ರಾರಂಭಿಸಿದ್ದೇನೆ. ನೀವೆಲ್ಲ ಕೈಜೋಡಿಸುವಿರಿ ಎಂದು ನಿರೀಕ್ಷಿಸುತ್ತೇನೆ.

ನಾನು ಭಾರತೀಯ ಸ್ಟೇಟ್ ಬ್ಯಾಂಕಿನ ಸೇವೆಗೆ ರಾಜೀನಾಮೆ ನೀಡಿ ಸ್ಪರ್ಧಾಕಾಂಕ್ಷಿಗಳಿಗೆ ಬ್ಯಾಂಕ್ ಪರೀಕ್ಷೆಯ ತರಬೇತಿಯನ್ನು ಪ್ರಾರಂಭಿಸಿದೆ. ಬೆಳಗಾವಿ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ಬಂದು ತರಬೇತಿ ಪಡೆದು ಕೆಲವರು ಯಶಸ್ಸನ್ನೂ ಗಳಿಸಿದರು. ಆದರೆ ನಾನು ಕ್ಲಾಸರೂಮಿನಲ್ಲಿ ಕಲಿಸಲು ಸಾಧ್ಯವಾಗುತ್ತಿರುವುದು ಕೇವಲ ನಲವತ್ತು ಐವತ್ತು ಜನರಿಗೆ ಮಾತ್ರ. ಅವಶ್ಯವಿದ್ದವರಿಗೆಲ್ಲ ನನ್ನಲ್ಲಿರುವ ಜ್ಞಾನವನ್ನು ಹಂಚಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಕೊರಗು ಇತ್ತೀಚೆಗೆ ಶುರುವಾಯಿತು.

ಅದರ ಜೊತೆಗೆ ನನಗೆ ಕಾಡುತ್ತಿದ್ದ ಇನ್ನೊಂದು ವಿಷಯವೆಂದರೆ ಕನ್ನಡ ಮಾಧ್ಯಮದಲ್ಲಿ ಕಲಿತ, ಇಂಗ್ಲೀಷ ಅಥವಾ ಹಿಂದಿಯಲ್ಲಿ ಪ್ರಶ್ನೆಗಳನ್ನು ಅರ್ಥಮಾಡಿಕೊಂಡು ಉತ್ತರ ಬರೆಯಲು ಕಷ್ಟ ಪಡುತ್ತಿರುವ ವಿದ್ಯಾರ್ಥಿಗಳಿಗೆ ಏನು ಮಾಡಬೇಕು ಎಂಬುದು. ಆಗ ನನಗೆ ಹೊಳೆದದ್ದು ಯೂಟ್ಯೂಬ್ ಮುಖಾಂತರ ನಾನು ಇಂಥ ಎಲ್ಲ ವಿದ್ಯಾರ್ಥಿಗಳನ್ನು ತಲುಪಬಹುದು ಎಂದು.

ನನಗೆ ಮೊದಲಿನಿಂದಲೂ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳೂ ಕೂಡ ಬ್ಯಾಂಕ್ ಅಥವಾ ಇನ್ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸುಲಭವಾಗಿ ಪಾಸಾಗಬಹುದು ಎಂಬ ದೃಢ ನಂಬಿಕೆ ಇತ್ತು. ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಹೇಗೆ ಪ್ರಶ್ನೆಗಳನ್ನು ಇಂಗ್ಲೀಷಿನಲ್ಲಿದ್ದರೂ ಅರ್ಥಮಾಡಿಕೊಂಡ ವೇಗವಾಗಿ ಉತ್ತರಗಳನ್ನು ಕೊಡಬೇಕು ಎಂಬುದರ ತರಬೇತಿ ಸಿಗದಿರುವುದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡಿಬರುತ್ತಿಲ್ಲ.

ಕಷ್ಟಪಟ್ಟು, ಅಧ್ಯಯನ ಮಾಡಿ ಹೇಗಾದರೂ ಒಳ್ಳೆಯ ಹುದ್ದೆಯನ್ನು ಪಡೆಯಬೇಕು ಎಂಬ ಮಹಾತ್ವಾಕಾಂಕ್ಷೆ ಇರುವ ಎಷ್ಟೋ ವಿದ್ಯಾರ್ಥಿಗಳು ತರಬೇತಿ ಪಡೆಯಲು ಬೇಕಾದ ಹಣಕಾಸನ್ನು ಹೊಂದಿಸಲಾಗದೇ ತಾವೇ ಸ್ವತ: ಪ್ರಯತ್ನ ಪಟ್ಟು ಅವರಲ್ಲಿ ಸಾಮಥ್ರ್ಯವಿದ್ದರೂ ನನ್ನ ಕೈಲಾಗುವುದಿಲ್ಲ ಎಂಬ ತಪ್ಪು ನಂಬಿಕೆಯಿಂದ ತಮ್ಮ ಕನಸನ್ನು ನನಸು ಮಾಡಿಕೊಳ್ಳದೇ ಒದ್ದಾಡುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬರತೊಡಗಿತು.
ಈ ಎಲ್ಲ ವಿಷಯಗಳನ್ನು ಮನಗಂಡು ಯೂಟ್ಯೂಬ್ ಮುಖಾಂತರ ಕನ್ನಡ ಮಾಧ್ಯಮದಲ್ಲಿ ಬ್ಯಾಂಕ್ ಪರೀಕ್ಷೆಯ ತರಬೇತಿಯನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದೇನೆ. ಇನ್ನೂ ಮೂರು ತಿಂಗಳು ಸಾಧ್ಯವಾದಷ್ಟು ದಿನಂಪ್ರತಿ ಒಂದೊಂದು ಪರಿಕಲ್ಪನೆಯನ್ನು ವಿಡಿಯೋ ಮೂಲಕ ನೀಡಲು ಪ್ರಯತ್ನಿಸುತ್ತೇನೆ. ಅದರ ಜೊತೆಗೆ ಅಭ್ಯಾಸಕ್ಕಾಗಿ ಪ್ರಶ್ನೆಗಳನ್ನೂ ಉಚಿತವಾಗಿ ನೀಡುತ್ತೇನೆ.

ಯಾರಿಗೆ ಸಾಧ್ಯವೋ ಅವರೆಲ್ಲ ನನ್ನ ಜೊತೆಗೆ ಕೈಗೂಡಿಸಿ ಇದನ್ನು ಯಶಸ್ವಿಯಾಗಿಸಬೇಕೆಂದು ಕೋರುತ್ತೇನೆ. ಆದಷ್ಟು ಹೆಚ್ಚು ಜನರಿಗೆ ಇದನ್ನು ತಲುಪಿಸಬೇಕೆಂದು ವಿನಂತಿಸುತ್ತೇನೆ.

-ಪ್ರವೀಣ್‌ ಕುಲಕರ್ಣಿ

This is YouTube channel for IBPS Coaching. Bank Exam Coaching in Kannada Language by Destine Institute. Helpful for those preparing for Bank Exams IBPS, IBPS RRB, Specialist officers, SBI and RBI Exams, Railway Exams, SSC, IAS, KAS, and other competitive Exams. The Coaching provided by Mr. Praveen, Former chief Manager, SBI. Like, Subscribe, Comment and share:

https://www.youtube.com/channel/UCQtornU-IVQsHbi9VFD-jVg


ಟಿಪ್ಪಣಿ: ಪ್ರವೀಣ್‌ ಕುಲಕರ್ಣಿಯವರು ಪಂಜುವಿನ ಲೇಖಕರು. ಅವರ ಈ ಪ್ರಯತ್ನಕ್ಕೆ ಪಂಜು ಬಳಗದ ಪರವಾಗಿ ಶುಭ ಹಾರೈಸುತ್ತಾ ನೀವುಗಳು ಪ್ರವೀಣ್‌ ರವರ ಯೂಟ್ಯೂಬ್‌ ಚಾನಲ್‌ ಗೆ subscribe ಆಗಿ. ಹಾಗೆಯೇ ಪ್ರತಿ ವಾರ ಪಂಜುವಿನಲ್ಲೂ ಸಹ ಪ್ರವೀಣ್‌ ರವರ ಬ್ಯಾಕಿಂಗ್‌ ತರಬೇತಿಯ ವಿಡಿಯೋದ ಲಿಂಕ್‌ ಅನ್ನು ಶೇರ್‌ ಮಾಡುತ್ತೇವೆ. ಉಚಿತವಾಗಿರುವ ಈ ತರಬೇತಿಯನ್ನು ತಾವು ಉಪಯೋಗಿಸಿಕೊಳ್ಳಲು ನಿಮ್ಮಲ್ಲಿ ವಿನಂತಿ.

-ಪಂಜು ಬಳಗ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x