ಲೇಖನ

ಯುವ ಮನಸ್ಸಿಗೊಂದು ಕಿವಿಮಾತು: ವಸಂತ ಬಿ. ಈಶ್ವರಗೆರೆ.

ಯೌವನಾವಸ್ಥೆ ಪ್ರಾರಂಭದ ಪೂರ್ವದಲ್ಲೇ ವಿವಿಧ ಭಾವನೆಗಳು ಯುವ ಪೀಳಿಗೆಯ ಮನಸ್ಸಿನಲ್ಲಿ ಉದಯಿಸಿರುತ್ತವೆ, ಆದರೆ ಅವು ರೂಪ ಪಡೆದು ನಿಜವಾದ ಆಕಾರವನ್ನು ಪಡೆಯುವುದು ಬಣ್ಣದ ಬದುಕಿನ ಕಾಲೇಜು ಜೀವನಕ್ಕೆ ಕಾಲಿಟ್ಟ  ಆನಂತರ. ಒಂದೊಂದು ರೀತಿಯಲ್ಲಿ ಅವರ ಚಿಂತನೆಯ ಆವಿಷ್ಕಾರದ ರೂಪ ಕೆಲವು ಅವಘಡಗಳು ಸಂಭವಿಸಿ  ಉತ್ತಮ ರೀತಿಯ ಚಿಂತನೆಯನ್ನು ಮನಸ್ಸಿನಲ್ಲಿ ಮೂಡಿಸಬಹುದು. ಇಲ್ಲವೇ ಅವು ನಕಾರಾತ್ಮಕ ಚಿಂತನೆಯನ್ನು ಪಡೆದು ಸಮಾಜ ಘಾತುಕ ಚಟುವಟಿಕೆಯಲ್ಲಿ ತೊಡಗಲೂ ಪ್ರೇರೇಪಿಸ ಬಹುದು.

ಯುವ ಮನಸ್ಸಿನ ಚಿಂತನೆಗಳು ಸಕಾರಾತ್ಮಕವಾಗಿದ್ದಾಗ ಅಂತಹ ವ್ಯಕ್ತಿಗಳಿಂದ ಸಮಾಜಕ್ಕೆ ಉತ್ತಮ ಮಹತ್ವ ಪೂರ್ಣ ಕೂಡುಗೆ ಬಳುವಳಿಯಾಗಿ ದೊರೆತು, ಈ ನಿಟ್ಟಿನಲ್ಲಿ ಮುಂದಿನ ಭವಿಷ್ಯತ್ತಿನಲ್ಲಿ ತೂಡಗಲು ಅನುವು ಮಾಡಿಕೊಡುತ್ತವೆ. ಎಲ್ಲಾ ಸಕಾರಾತ್ಮಕ ಯುವ ಮನಸ್ಸಿನ ಬೆಳೆವಣಿಗೆಗೆ ಸಾದ್ಯವಾಗುವುದು ಅವರ ಮೇಲೆ ಬೀರುವ ಶಾಲೆ, ಸಮಾಜ, ಸಮುದಾಯ, ಸಮವಯಸ್ಕರ ಗುಂಪು, ಪರಿಸರ ಮತ್ತು ನೆರೆ-ಹೋರೆಯಂತ ಪರಿವರ್ತಕ ಪರಿಸರದಿಂದ ಸಾಧ್ಯ. ವಾಸ್ಥವ ಬದುಕಿನ ಅರಿವಿರದೆ ಪ್ರೀತಿ-ಪ್ರೇಮದ ಮಾಯಾಲೋಕದಲ್ಲಿ ಮುಳುಗಿದರೆ ಅದರಾಚೆಯ ಬದುಕಿನ ಜ್ಞಾನೋದಯವಾದಾಗ ಅದು ಬೇರೆಯ ಲೋಕವನ್ನೇ ಸೇರಿರುತ್ತದೆ. ಇದು ಯುವ ಮನಸ್ಸಿನ ಬೆಳವಣಿಗೆಯ ಪರಿಸರವನ್ನು ಆವಲಂಭಿಸಿದೆ.      

ಒಂದೇ ವೇಗದ ಓಟದ ಗತಿಯನ್ನು ಯುವ ಮನಸ್ಸಿನಲ್ಲಿ ಕಾಣಲಾಗದು. ಏಕೆಂದರೆ ಯವ್ವನದ/ಕಿಶೋರಾವಸ್ಥೆಯಲ್ಲಿ ನಿಂತಿರುವ ಮನಸ್ಸು ಚಂಚಲತೆಯ ಬಹುಮುಖಿ ಚಿಂತನೆಗಳನ್ನು ಒಳಗೂಂಡು ನೆಡೆಯುತ್ತಾ ಇರುತ್ತದೆ. ಒಮ್ಮೆ ಆತಿಯಾಗಿ ಕ್ರೀಡೆಯನ್ನು ಇಷ್ಟಪಡುವ ಮನಸ್ಸು ಅದರೊಟ್ಟಿಗೆ ಯಶಸ್ಸಿನ ಮೆಟ್ಟಿಲ ಶಿಖರವೇರುವ ಬಗೆಯ ವಿವಿಧ ಮುಖಗಳನ್ನು ಅರಿಯುವ ಪ್ರಯತ್ನದಲ್ಲಿ ತೂಡಗಿ ಮುಂದುವರಿದು ತನಗೆ ಅರಿವಿಲ್ಲದಂತೆ ದ್ವೇಷ-ಅಸೂಯೆಯಂತ ಗುಣ-ಲಕ್ಷಣಗಳನಗಳನ್ನು ಒಟ್ಟಿಗೆ ಒಡಲೂಳಗೆ ತುಂಬಿಕೂಳ್ಳುತ್ತಾ ಹೋಗುವುದು. ಇದು ಯಾವ ಸಂದರ್ಭದಲ್ಲಿ  ಸ್ಪೊಟಿಸಿ ಬಹುದೊಡ್ಡ ಊಹಿಸಲು ಆಸಾಧ್ಯವಾದಗಂತ ಪ್ರಮಾದವನ್ನು ಏಸಗುವುದೆಂದು ಹೇಳಲುಬಾರದು. ಅದು ಪ್ರತಿಸ್ಪರ್ಧಿಯ ಕೂಲೆಯಲ್ಲೋ, ತನ್ನನ್ನು ತಾನೇ ಅಂತ್ಯಗೋಳಿಸಿ ಕೋಳ್ಳುವುದರಲ್ಲೋ ಕೊನೆಗಾಣುತ್ತದೆ.  

ಕಾಲೇಜು ಜೀವನದಲ್ಲಿ ಪ್ರಾರಭದಲ್ಲಿ ಯುವ ಮನಸ್ಸಿಗೆ ಸಿಗುವುದು ಪ್ರೀತಿಯ ಬಂಗಾರದ ಜೀವನ. ಆದರೆ ವ್ಯಾಸಂಗ ಪ್ರವೃತ್ತಿಯ ಬಿಡುಗಡೆಯ ಬೀಳ್ಕೋಡುಗೆಯ ಆನಂತರ ಉಂಟಾಗುವ ಮನಸ್ಸು ಮೊದಲಿನಂತೆ ಇರುವುದಿಲ್ಲ. ವ್ಯಾಸಂಗ ಜೀವನದ ವಿವಿಧ ರಸಕ್ಷಣಗಳನ್ನು ಸ್ವಗತದ ಸವಿಯನ್ನು ಸವಿಯುತ್ತಾ, ಅದರೂಟ್ಟಿಗೆ ತಪ್ಪುಗಳ ಬಗೆಗೆ ವಿವೇಚನೆ ಹೊಂದುತ್ತದೆ. ತಾನು ಕಳೆದ ಕ್ಷಣಗಳು ಆ ಕ್ಷಣಕ್ಕೆ ಅಷ್ಟೆ ಸೀಮಿತ, ಈ ದಿನಗಳಿಗೆ ಅವು ದೂರದ ಬೆಟ್ಟಗಳೇ ಸರಿ ಎಂದು ಎಷ್ಟು ಬಾರಿ ಮನಸ್ಸು ಒತ್ತಿ ಹೇಳಿದರೂ ಅದನ್ನು ಒಪ್ಪಿಕೂಳ್ಳುವ ಸ್ಥಿತಿಯಲ್ಲಿ ಮನಸ್ಸು ಸಿದ್ದವಿರುವುದಿಲ್ಲ. ಕೂನೆಗೆ ಇದು ಆರಿವಾಗುವುದು ಯಶಸ್ಸಿನಲ್ಲಿ ಸೋಲುಂಡು, ಸೋಲಿಗೆ ಕಾರಣ ಹುಡುಕ ಹೊರಟಾಗ ಮಾತ್ರ.     

ಯುವ ಮನಸ್ಸು ಎಷ್ಟೇ ಬದಲಾವಣೆ ವಿರುದ್ದವಾಗಿ ತನ್ನನ್ನು ತೆರೆದು ಕೂಂಡರೂ ಸಹ: ಪರಿಸ್ಥಿಯ ಕೈಗೊಂಬೆಯ ಕೂಸಾದಾಗ ಖಂಡಿತ ಸಾಧ್ಯವಿಲ್ಲ. ಏಕೆಂದರೆ ಪರಿಸ್ಥಿತಿಯ ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿಯಾಗಿ ಬದಲಾವಣೆಯ ಬಹುಮುಖ ಪ್ರಕ್ರಿಯೆಗೆ ಅವಕಾಶವಿರುವಾಗ ಬದಲಾವಣೆಯ ಸ್ಥಿರತೆಗೆ ಅವಕಾಶವೆಲ್ಲಿ…? ಇದೇ ಕಾರಣಕ್ಕೆ ಒಂದು ಸ್ಥಿರವಾದ ನೆಲೆಯನ್ನು ಈ ಹಂತದಲ್ಲಿ ಹೊಂದಿರಲು ಸಾಧ್ಯವಿಲ್ಲ. ಜೀವನವೆಂದರೆ ಬಣ್ಣದಲೋಕದ ಸಿನೆಮಾ ಕತೆಯೊಂದರ ವಿವಿಧ ಕಲ್ಪನೆಯ ಬದುಕೆಂದು ತಿಳಿದಿರುವಾಗ, ಇದರಾಚೆ ನಿಂತು ಯೋಚಿಸುವ ಔದಾರ್ಯವೆಲ್ಲಿ ತೋರಿಬರಬೇಕು..| ಒಟ್ಟಾರೆಯಾಗಿ "ಅತ್ತದರಿ, ಇತ್ತ ಪುಲಿ" ಎಂಬ ರೀತಿಯಲ್ಲಿ ಡೂಲಾಯಾನ ಮಾನವಾಗಿ ಜೀವಿಸುವ ಸ್ಥಿತಿ ನಮ್ಮದಾಗಿರುತ್ತದೆ.     

ವಿದ್ಯಾರ್ಥಿ ಜೀವನದಲ್ಲಿ ಮೋಜು-ಮಸ್ತಿ ಅನುಭವಗಳು ಸಹಜವಾಗೆ ದೊರೆಯುವಂತವುಗಳೇ ಆದರೆ ವಿದ್ಯಾರ್ಥಿ ಜೀವನದ ಆಚೆಯ ಬದುಕನ್ನು ಕಲ್ಪಿಸಿಕೊಂಡಾಗ ಬೇರೆಯದೇ ಅಗಿದೆ. ಈ ಮನಸ್ಥಿತಿಯಿಂದ ದೂರ ಬರಲು ಉತ್ತಮ ಹವ್ಯಾಸ, ಒಳ್ಳೆಯ ಕೃತಿಗಳ ಓದು, ಆದರ್ಶ ಪುರುಷರ ಅನುಕರಣೆ, ಗುರುಗಳ ಮಾರ್ಗದರ್ಶನಗಳಂತ ಗುಣಗಳನ್ನು ಆಳವಡಿಸಿ ಕೂಳ್ಳುವುದರಿಂದ ಜೀವನದ ಬದಲಾವಣೆ ಮಾಡಿಕೂಂಡು ಸಕಾತ್ಮಕ ಮನಸ್ಥಿತಿಯನ್ನು ಪಡೆಯಬಹುದು. ಮನಸ್ಸನ್ನು ನಿಯಂತರಿಸುವ, ಹಾಗೆ ಅರಿಬಿಡುವ ಎರೆಡು ಪ್ರಕ್ರಿಯೆಯೂ ನಮ್ಮ ನಿಯಂತ್ರಣದಲ್ಲೇ ಇದೆ. ಈಗಿದ್ದೂ ಉನ್ನತ ಸಾಧನೆಮಾಡುವ ದಾರಿಯನ್ನು ಯಾರೇನು ಸೂಚಿಸಿ ತಿಳಿಸಬೇಕಾಗಿಲ್ಲ. ಹಾಗಾದರೆ "ವಿದ್ಯಾರ್ಥಿಗಳ ಜೀವನ ಬಂಗಾರದಂತ ಜೀವನ " ಎಂಬ ಮಾತನ್ನು ನಿಜವಾಗಿಸುವತ್ತ ನಮ್ಮ ಮನಸ್ಸನ್ನು ಕೇಂದ್ರೀಕರಿಸಿ ಸಾಗೋಣ. ಕನಿಷ್ಠ ಪಕ್ಷ ಗಾಂಧಿ, ಆಂಬೇಡ್ಕರ್, ವಿವೇಕಾನಂದರಂತೆ ಆಗುವುದಾದರು ಬೇಡ, ಅವರ ಆದರ್ಶ ಪರಿಪಾಲನೆಯೊಂದಿಗೆ ಅವರ ಮಟ್ಟಕ್ಕೆ ಬೆಳೆಯಲು ಮನಸ್ಸು ಮಾಡೊಣ. ವಿದ್ಯಾರ್ಥಿ ಜೀವನವನ್ನು ಯಶಸ್ವಿಯಾಗಿ ಉತ್ತಮ ರೀತಿಯಲ್ಲಿ ಮುಗಿಸಲು ಮುಂದಾಗೂಣ…..  

-ವಸಂತ ಬಿ. ಈಶ್ವರಗೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಯುವ ಮನಸ್ಸಿಗೊಂದು ಕಿವಿಮಾತು: ವಸಂತ ಬಿ. ಈಶ್ವರಗೆರೆ.

  1. Brother nice instruction . but some people not read the full story because here you wrote only fact special and i beginning only told instructions so i thing give a essential examples with the story. Then you see how uu get feedback
    this not a comment only my own things thanking youu bye i waiting next story of uuuu

Leave a Reply

Your email address will not be published. Required fields are marked *