ನಾವು ಪ್ರತಿ ದಿನ ಬೆಳಿಗ್ಗೆ ಎದ್ದು ಹಲ್ಲುಜ್ಜುವುದರ ಟೂತ್ ಪೇಸ್ಟ್ ನಿಂದ ಹಿಡಿದು ರಾತ್ರಿ ಸೊಳ್ಳೆ ಬತ್ತೀನೋ ಲಿಕ್ವಿಡ್ದೋ ಹಚ್ಚಿ ಮಲಗುವವರೆಗೆ ಎಷ್ಟು ಕಂಪನಿಗಳ ಎಷ್ಟು ಸರಕುಗಳನ್ನು ಬಳಸಿರು ತ್ತೇವೆ, ಎಷ್ಟು ಸೇವೆಯನ್ನು ಪಡೆದಿರುತ್ತೇವೆ. ಯಾವ ಸರಕು/ವಸ್ತು ನಮ್ಮ ಅವಶ್ಯಕತೆಯನ್ನು ಎಷ್ಟರಮಟ್ಟಿಗೆ ಪೂರೈಸಿದೆ? ಯಾವ ಸರಕಿನ ಸರಬರಾಜುದಾರರು ನಮಗೆ ಉತ್ತಮ ಸೇವೆಯನ್ನು ನೀಡಿದ್ದಾರೆ? ಲೆಕ್ಕ ಇಟ್ಟಿರುತ್ತೆವೆಯೇ? ಕೆಲವರು ಇಟ್ಟಿದ್ದರೆ ಇಟ್ಟಿರಬಹುದು, ಅದೂ ಬಹಳ ಕಡಿಮೆ. ಒಂದು ವೇಳೆ ನಾವು ಕೊಂಡ ಸರಕು/ಸೇವೆ ಸರಿಯಾಗಿದ್ದರೆ ಯಾವುದೇ ಸಮಸ್ಯೆ ಇಲ್ಲ. ಆಗ ನಾವದನ್ನು ಗಮನಿಸುವುದೂ ಇಲ್ಲ. ಆದರೆ ಒಂದು ವೇಳೆ ಸರಕು ಮತ್ತು ಸೇವೆಯನ್ನು ಕೊಂಡ/ಪಡೆದ ದಿನದಿಂದಲೇ ಅಥವಾ ಅದರ ಬಳಕೆಯ ಕಡಿಮೆ ಅವಧಿಯಲ್ಲೇ ತೊಂದರೆ, ಸಮಸ್ಯೆ ಎದುರಾದರೆ ಮಾತ್ರ ನಾವು ಎಚ್ಚೆತ್ತುಕೊಳ್ಳುತ್ತೇವೆ. ಅಲ್ಲವಾ ?
ನಾವು ಪಡೆದ ಸರಕು/ಸೇವೆ ನಮಗೆ ತೃಪ್ತಿಗೆ ನೀಡದಿದ್ದಲ್ಲಿ ಯಾವ ರೀತಿ ಅದನ್ನು ಒಬ್ಬ ಗ್ರಾಹಕರಾಗಿ ಪ್ರತಿಭಟಿಸಬಹುದು? ಅದರಲ್ಲೂ ಒಬ್ಬ ಕಲಾವಿದ ಹೇಗೆ ಜಗತ್ತಿಗೆ ಅದನ್ನು ತೋರ್ಪಡಿಸಬಹುದು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ…..
೩೧ನೇ ಮಾರ್ಚ್ , ೨೦೦೮
ಅಮೇರಿಕಾದಲ್ಲಿ ಡೇವ್ ಕರೋಲ್ ಎಂಬ ಗಾಯಕ ಮತ್ತವನ ತಂಡ "ಸನ್ಸ್ ಆಫ್ ಮ್ಯಾಕ್ಸ್ ವೆಲ್ " ತಮ್ಮ ತವರಾದ ಹಾಲಿಫಾಕ್ಸ್, ಕೆನಡಾದಿಂದ ಒಮಾಹಾ ಮತ್ತು ನೆಬ್ರಸ್ಕಾ ಗೆ ಒಂದು ವಾರದ ಮ್ಯೂಸಿಕ್ ಫೆಸ್ಟಿವಲ್ ಗೆ ವಿಮಾನ ದಲ್ಲಿ ಹೊರಡುತ್ತಾರೆ. ಈ ತಂಡ ಸುಮಾರು ಇಪ್ಪತ್ತು ಹೆಚ್ಚು ವರ್ಷದಿಂದ ಪಾಪ್ – ಫೋಕ್ ಶೈಲಿಯ ಸಂಗೀತ ಕಾರ್ಯಕ್ರಮಗಳನ್ನು ಅಮೆರಿಕಾದ ಹಲವು ಸಿಟಿಗಳಲ್ಲಿ ನೀಡುತ್ತಿರುತ್ತದೆ.ಹಾಗೇನೇ ಈ ಕಾರ್ಯಕ್ರಮವೂ ಒಂದು. ಪ್ರಯಾಣದ ಮಧ್ಯೆ ಚಿಕಾಗೋ ವಿಮಾನ ನಿಲ್ದಾಣದಲ್ಲಿ ವಿಮಾನ ಬದಲಿ ಮಾಡುವ ಸಂಧರ್ಭದಲ್ಲಿ ಯುನೈಟೆಡ್ ಏರ್ಲೈನ್ಸ್ ನ ಬ್ಯಾಗೇಜ್ ಸಿಬ್ಬಂದಿ ಸರಕುಗಳನ್ನು mishandle ಮಾಡುತ್ತಿರುವುದನ್ನು ಪ್ರಯಾಣಿಕರು ಅಸಹಾಯಕ ರಾಗಿ ಗಮನಿಸುತ್ತಾರೆ. ಅದರಲ್ಲಿ ಡೇವ್ ಕರೋಲ್ ತಂಡವು ಕೂಡ. ದುರಾದೃಷ್ಟವೆಂದರೆ ಡೇವ್ ಕರೋಲ್ ನ ೩,೫೦೦ ಡಾಲರ್ ಬೆಲೆಯುಳ್ಳ ಟೇಲರ್ ಗಿಟಾರ್ ಕೂಡ ಮುರಿದಿರುತ್ತದೆ. ಕೂಡಲೇ ಅವನು ಸಂಭಂಧಿಸಿದವರಿಗೆ ದೂರುತ್ತಾನೆ. ಅವರು ನಿಮ್ಮ ಏಜೆಂಟ್ ಗೆ ಹೇಳಿ ಎಂದು ಕೈತೊಳೆದು ಕೊಳ್ಳುತ್ತಾರೆ. ನಂತರ ಒಮಾಹಾ ವಿಮಾನ ನಿಲ್ದಾಣಕ್ಕೆ ಬಂದು ಯುನೈಟೆಡ್ ಏಜೆಂಟನಿಗೆ, ಹಾಲಿಫಾಕ್ಸ್ ಏರ್ ಪೋರ್ಟ್ ಗೆ ದೂರು ನೀಡುತ್ತಾನೆ. ಹಾಲಿಫಾಕ್ಸ್ ನಲ್ಲಿ ಅವನಿಗೆ ಕೆಲವು ದೂರ ವಾಣಿ ಸಂಖ್ಯೆಗಳನ್ನು ನೀಡಿ ಸಂಪರ್ಕಿಸಲು ಸೂಚಿಸುತ್ತಾರೆ. ಮತ್ತಲ್ಲಿಂದ ಭಾರತದ ಕಾಲ್ ಸೆಂಟರ್ ಗೆ, ಅಲ್ಲಿಂದ ಚಿಕಾಗೋ ವಿಮಾನ ನಿಲ್ದಾಣಕ್ಕೆ ಗಿಟಾರ್ ತಪಾಸಣೆಗೆ ಹಾಜರುಪಡಿಸಲು ಯುನೈಟೆಡ್ ಬ್ಯಾಗೇಜ್ ನವರು ತಿಳಿಸುತ್ತಾರೆ.
ಡೇವ್ ಕರೋಲ್ ತಾನು ಚಿಕಾಗೊದಿಂದ ೧೨೦೦ ಮೈಲಿ ದೂರವಿರುವುದಾಗಿ ವಿವರಿಸಿದರೂ ಅವನ ದೂರನ್ನು ಭಾರತದ ಕಾಲ್ ಸೆಂಟರ್ ಗೆ ವರ್ಗಾಯಿಸುತ್ತಾರೆ. ಯುನೈಟೆಡ್ ಪ್ರತಿನಿಧಿಗಳು ಭಾರತದ ಕಾಲ್ ಸೆಂಟರ್ ನಿಂದ ಕರೋಲ್ ನೊಂದಿಗೆ ಸಂಪರ್ಕದಲ್ಲಿದ್ದು ನಂತರ ಈ – ಮೇಲ್ ನಲ್ಲಿ ಕರೋಲ್ ಯುನೈಟೆಡ್ ಏರ್ ಲೈನ್ಸ್ ನವರನ್ನು ಕಾಂಟಾಕ್ಟ್ ಮಾಡುತ್ತಾನೆ. ಅಲ್ಲಿಗೆ ಡೇವ್ ಕರೋಲ್ ಈ ವಿಷಯ ವಾಗಿ ಪ್ರೋಸೆಸ್ ಮಾಡುತ್ತಾ ಸುಮಾರು ತಿಂಗಳು ಗತಿಸಿರುತ್ತವೆ. ಕೊನೆಗೊಮ್ಮೆ ಯುನೈಟೆಡ್ ನವರು ಈ ದೂರನ್ನು ಘಟನೆ ನಡೆದ ೨೪ ಘಂಟೆಗಳಲ್ಲಿ ಸಲ್ಲಿಸಬೇಕಿದ್ದು, ಅದನ್ನು ಮಾಡದ ಕಾರಣ ಈ ಕ್ಲೇಮ್ ಡಿನೈ ಮಾಡುತ್ತಾರೆ. ಕರೋಲ್ ತನ್ನ ಫ್ಲೈಟ್ ವೋಚರ್ ೧೨೦೦ ಡಾಲರ್ ಮತ್ತು ಗಿಟಾರ್ ರಿಪೇರಿ ಖರ್ಚು ನೀಡಲು ಕೋರುತ್ತಾನೆ. ಉಹೂ ಅದೂ ಉಪಯೋಗವಾಗಲಿಲ್ಲ. ಕೊನೆದಾಗಿ ಯುನೈಟೆಡ್ ಪ್ರತಿನಿಧಿಗಳಿಗೆ ಕರೋಲ್ ತಿಳಿಸಿದ್ದೇನೆಂದರೆ; " ನಾನು ಯುನೈಟೆಡ್ ಏರ್ಲೈನ್ಸ್ ಬಗ್ಗೆ ಮೂರು ಹಾಡು ಗಳನ್ನು ಬರೆದು ವೀಡಿಯೊ ಶೂಟ್ ಮಾಡಿ ಯು ಟ್ಯೂಬ್ ಗೆ ಪೋಸ್ಟ್ ಮಾಡುತ್ತೇನೆ. ಒಂದು ವರ್ಷದಲ್ಲಿ ಕನಿಷ್ಠ ಒಂದು ಮಿಲಿಯನ್ ಹಿಟ್ಸ್ ಹೊಂದುವುದೇ ನನ್ನ ಗುರಿ…."
ಡೇವ್ ಕರೋಲ್ ಮೊದಲ ಸಾಂಗ್ "ಯುನೈಟೆಡ್ ಬ್ರೆಕ್ಸ್ ಗಿಟಾರ್" ಅನ್ನು ಅವನ ಸ್ನೇಹಿತರ ಜೊತೆ ಗೂಡಿ "ಕರ್ವ್ ಪ್ರೊಡಕ್ಷನ್ಸ್ ಇನ್ ಹ್ಯಾಲಿಫ್ಯಾಕ್ಸ್" ಅಡಿ ವೀಡಿಯೊ ಆಲ್ಬಮ್ ಅನ್ನು ಕೇವಲ ೧೫೦ ಡಾಲರ್ ವೆಚ್ಚದಲ್ಲಿ ಜನಗಳು ನೀಡುವ ಸಮಯ ಮತ್ತು ಜಾಗಗಳಲ್ಲಿ ಶೂಟ್ ಮಾಡುತ್ತಾನೆ. ಅವನು ಈ ಮುಂಚೆ ಸ್ವಯಂಸೇವಕನಾಗಿ ಕೆಲಸ ನಿರ್ವಹಿಸುತ್ತಿದ್ದಂಥ ವೆವೆರ್ಲಿ, ನೋವಾ ಸ್ಕಾಟಿಯಾದ ಫೈರ್ ಸ್ಟೇಷನ್ ಅವನ ಹಾಡಿನಲ್ಲಿ ಬರುವ O' Hare ವಿಮಾನ ನಿಲ್ದಾಣವಾಗುತ್ತೆ. ೦೬ನೇ ಜುಲೈ ೨೦೦೯ ರಂದು ರಾತ್ರಿ ೧೦ ಗಂಟೆಗೆ ಕರೋಲ್ ಗೆಳೆಯ Ryan Moore ಆ ಹಾಡನ್ನು ಯು-ಟ್ಯೂಬ್ ಗೆ ಪೋಸ್ಟ್ ಮಾಡುತ್ತಾನೆ. ರಾತ್ರಿ ಕಳೆದು ಮಾರನೇ ದಿನ ಬೆಳಗಾಗುವ ಹೊತ್ತಿಗೆ ಸಣ್ಣ ಟೀಮ್ ಹುಟ್ಟಿ ಕೊಂಡು ಅವರವರ ಗೆಳೆಯರಿಗೆ ಟ್ವೀಟ್ ಮಾಡಿ ವೀಡಿಯೊ ವೀಕ್ಷಿಸಲು ತಿಳಿಸಿದ್ದರಲ್ಲದೇ ಯುನೈಟೆಡ್ ಏರ್ಲೈನ್ಸ್ನಲ್ಲಿ ಅನುಭವಿಸಿದ ಕೆಟ್ಟ ಕ್ಷಣಗಳನ್ನು ಸಹ ವೀಕ್ಷಿಸಿದ ಸದಸ್ಯರಲ್ಲಿ ಮೀಡಿಯಾ ದ Jay Leno, Jimmy n Fallon ಮತ್ತು Perez Hilton ಒಳಗೊಂಡಂತೆ ಸಾಕಷ್ಟು ಜನ ಬರೆದುಕೊಳ್ಳುತ್ತಾರೆ.
ದಿನಾಂಕ ೭-೭-೨೦೦೯ ರಂದು Consumerist.com website affiliated with Consumer Union, America's leading not-for-profit consumer advocacy organization ಮತ್ತು publisher of Consumer Reports Magazine ಎಲ್ಲರೂ ಈ ಪ್ರಕರಣವನ್ನು ಪ್ರಕಟ ಪಡಿಸುತ್ತಾರೆ. ದಿನಾಂಕ ೮-೭-೨೦೦೯ , ೯-೭-೨೦೦೯ ಮತ್ತು ೧೦-೭-೨೦೦೯ರ ಹೊತ್ತಿಗೆ ಕೇವಲ ನಾಲ್ಕು ದಿನದ ಅಂತರದಲ್ಲೇ ಈ ವೀಡಿಯೊ ೧. ೬ ಮಿಲಿಯನ್ ವೀಕ್ಷಕರನ್ನು ತಲುಪಿಬಿಡುತ್ತೆ. ಜುಲೈ,೨೦೦೯ ರ ಅಂತ್ಯಕ್ಕೆ ಸುಮಾರು ೪.೬ ಮಿಲಿಯನ್ ವೀಕ್ಷಣೆಯನ್ನು "ಯುನೈಟೆಡ್ ಬ್ರೆಕ್ಸ್ ಗಿಟಾರ್ " ವೀಡಿಯೊ ಇಡೀ ಜಗತ್ತಿನಾದ್ಯಂತ ತಲುಪುತ್ತದೆ. ಅವನ ಈ ವೀಡಿಯೊ ವೀಕ್ಷಿಸುವ ಪರಿಗೆ ಅವನ ಸ್ವಂತ ವೆಬ್ ಸೈಟ್ www.davecarrollmusic.com ಜಾಮ್ ಆಗುತ್ತೆ. ಆದ್ದರಿಂದ ಆ ವೀಡಿಯೊ ಸಿ. ಡಿ ಗಳನ್ನೂ ಸಾಕಷ್ಟು ಸಂಖ್ಯೆಯಲ್ಲಿ ಕರೋಲ್ ಮಾರಾಟ ಮಾಡುತ್ತಾನೆ.
ದಿನಾಂಕ ೦೮-೭-೨೦೦೯ರ ಹೊತ್ತಿಗೆ ಯುನೈಟೆಡ್ ಏರ್ಲೈನ್ಸ್ ಸಿಬ್ಬಂದಿಗೆ ಈ ವೀಡಿಯೊ ತಲುಪಿದಾಗಲೇ ಯುನೈಟೆಡ್ ಏರ್ಲೈನ್ಸ್ ದಿಂದ ಆಗಿರುವ ತೊಂದರೆ ಏನೆಂಬುದು ಮುಖ್ಯಸ್ಥರಿಗೆ ಅರಿವಾಗುತ್ತದೆ. ಅಲ್ಲಿಗಾಗಲೇ ಜಗತ್ತಿನಾದ್ಯಂತ ಯುನೈಟೆಡ್ ಏರ್ಲೈನ್ಸ್ ನ ೧೮೦ ಮಿಲಿಯನ್ ಡಾಲರ್ ನಷ್ಟು ಮೊತ್ತದ ಶೇರುಗಳು ಇಳಿಕೆ ಕಂಡಿರುತ್ತದೆ. ಯುನೈಟೆಡ್ ಏರ್ಲೈನ್ಸ್ ನ ಆಕ್ಸಿಡೆಂಟಲ್ ಚೀಫ್ ಮಾರ್ಕೆಟಿಂಗ್ ಆಫೀಸರ್ ಖುದ್ದಾಗಿ ಡೇವ್ ಕರೋಲ್ ನನ್ನು ಸಂಪರ್ಕಿಸಿ ಅವನಿಗೆ ೧,೨೦೦ ಡಾಲರ್ ನಗದು ಮತ್ತು ೧,೨೦೦ ಡಾಲರ್ ಫ್ಲೈಟ್ ವೋಚರ್ ಮೊತ್ತ ನೀಡಲು ಮುಂದೆ ಬರುತ್ತಾರೆ.
೧೪-೯-೨೦೦೯ರಂದು ಡೇವ್ ಕರೋಲ್ ಯುನೈಟೆಡ್ ಏರ್ಲೈನ್ಸ್ ನ ಇಬ್ಬರು ಹಿರಿಯ ಮುಖ್ಯಸ್ಥರನ್ನು ಭೇಟಿಯಾಗುತ್ತಾನೆ. ಅವರು ಕರೋಲ್ ನ "ಯುನೈಟೆಡ್ ಬ್ರೆಕ್ಸ್ ಗಿಟಾರ್ " ಹಾಡನ್ನು ತಮ್ಮ ಸಂಸ್ಥೆಯ ಪ್ರಯಾಣಿಕರನ್ನು ಅಟೆಂಡ್ ಮಾಡುವಲ್ಲಿ ಸಿಬ್ಬಂದಿಗೆ ಅವಶ್ಯವಿರುವ ತರಬೇತಿಗಾಗಿ ಬಳಸಿಕೊಳ್ಳು ತ್ತಾರೆ. ಸಿಬ್ಬಂದಿಯನ್ನು ಪ್ರಯಾಣಿಕರ ಸರಕುಗಳನ್ನು ಡ್ಯಾಮೇಜ್ ಆಗದ ರೀತಿಯಲ್ಲಿ ಹಾಗೂ ಪ್ರಯಾಣಿಕರನ್ನು ಎದುರುಗೊಳ್ಳುವ ಬಗ್ಗೆ, ಪಾಲಿಸುವ ಕ್ರಮಗಳ ಬಗ್ಗೆ ತೀಕ್ಷ್ಣವಾಗಿ ಎಚ್ಚ್ಚರಿಸುತ್ತಾರೆ. ಕೊನೆಗೆ ಕರೋಲ್ ಯುನೈಟೆಡ್ ಏರ್ಲೈನ್ಸ್ ನವರು ಆಫರ್ ಮಾಡಿದ ೧,೨೦೦ ಡಾಲರ್ ನಗದು ಮತ್ತು ೧,೨೦೦ ಡಾಲರ್ ಫ್ಲೈಟ್ ವೋಚರ್ ತಿರಸ್ಕರಿಸುತ್ತಾ, ಅದನ್ನು ತನ್ನಂತೆ ಅನಾನುಕೂಲ ಅನುಭವಿಸಿದ ಪ್ರಯಾಣಿಕರಿಗೆ ವಿತರಿಸಲು ಹೇಳಿ ಎದ್ದುಬಿಡುತ್ತಾನೆ. ಆ ಮೊತ್ತವನ್ನು ಯುನೈಟೆಡ್ ಏರ್ಲೈನ್ಸ್ ನವರು ಒಂದು ಸಂಗೀತ ಶಾಲೆಗೇ ದೇಣಿಗೆ ಕೊಡುತ್ತಾರೆ.
ಹೇಗೆ ಒಂದು ಪ್ರಸಂಗದ ಸೇವಾ ನಿರ್ಲಕ್ಷ್ಯವನ್ನು ಪ್ರತಿಭಟಿಸಬೇಕು? ಈಗಿರುವ ನಮ್ಮ ಸಾಧ್ಯತೆಗಳ, ಮಾಧ್ಯಮಗಳನ್ನು ಹೇಗೆ ನಾವು ಉಪಯೋಗ ತೆಗೆದುಕೊಳ್ಳಬೇಕು? ಮತ್ತು ಹೇಗೆ ಒಂದು ದೊಡ್ಡ ಸಂಸ್ಥೆ ತನ್ನ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಎಷ್ಟೆಲ್ಲಾ ನಷ್ಟ ಹೊಂದಬೇಕಾದೀತು? ಮತ್ತು ಮ್ಯಾನೇ ಜ್ಮೆಂಟ್ ನ ಕೊರತೆ ಮತ್ತು ದಾಷ್ಟ್ಯತನದಿಂದ ಹೀಗೆ ತನ್ನ ಗುಡ್ ವಿಲ್ ಕಳೆದುಕೊಂಡು ಆರ್ಥಿಕ ಸಂಕಷ್ಟ ಎದುರಿಸಬೇಕಾಗಬಹುದು? ಎಲ್ಲಕ್ಕಿಂತ ಹೆಚ್ಚಾಗಿ ಪ್ರಯಾಣಿಕರ/ ಸೇವೆ ಪಡೆಯುವವರ ಮನಸ್ಸಿನಿಂದ ತಿರಸ್ಕೃತವಾಗುತ್ತೆ ಅನ್ನುವುದೇ ಕರೋಲ್ ಈ ಪ್ರಕರಣದಿಂದ ಪಡೆದ ಉಪಯೋಗ ಮತ್ತು ಈ ಬರಹದ ಮೂಲ ಉದ್ದೇಶ ಆಗಿದೆ. ಅಲ್ಲದೇ, ಕೇವಲ ಈ ತರಹದ ಪ್ರಸಂಗಗಳಿಂದ ಗ್ರಾಹಕರು ತಮಗಾದ ಆದ ನಷ್ಟಕ್ಕೆ ಪರಿಹಾರ ಪಡೆಯುವುದೇ ಆಗಿರದೇ, ಕೋಟ್ಯಾಂತರ ಗಳಿಕೆಯ ಕಂಪನಿಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುವ ಭರದಲ್ಲಿ ಪ್ರಯಾಣಿಕರ/ ಗ್ರಾಹಕರ ನಂಬಿಕೆ, ಹಣ ಮತ್ತು ಭರವಸೆಗಳನ್ನು ಆಪೋಶನ ತೆಗೆದುಕೊಳ್ಳುವ ಬುಧ್ದಿಗೂ ಒಂಚೂರು ಬಿಸಿ ಮುಟ್ಟಿಸುವ ಇಂಥ ಪ್ರಸಂಗಗಳು ಆಗಾಗ ನಡೆಯಬೇಕಾಗುತ್ತವೆ.
ಈಗಲೂ ಯು ಟ್ಯೂಬ್ ನಲ್ಲಿ "United breaks guitar" ಸರ್ಚ್ ಮಾಡಿ ಹಾಡು ನೋಡಿ. ಆದರೆ ಆ ಹಾಡಿನ ಹಿಂದೆ ಇಷ್ಟು ಕಥೆ ಇದೆ ಎಂಬುದು ಸಹ ಅಷ್ಟೇ ಸತ್ಯ.
ಇದು ಎಲ್ಲೋ ಅಮೆರಿಕಾದಲ್ಲಿ ನಡೆದ ಒಂದು ಘಟನೆ ಆಯಿತು. ಒಂದಾರು ತಿಂಗಳೋ ವರ್ಷದ ಕೆಳಗೆ ನಮ್ಮ ಫೇಸ್ ಬುಕ್ ಗೆಳೆಯ ರಾಜೇಂದ್ರ ಪ್ರಸಾದ್ ಎಂಬ ಕವಿಯು ಅನುಭವಿಸಿದ ಘಟನೆ ಒಂದಿದೆ. ಬಹುಶಃ ಅವನ ಗೆಳೆಯರ ಲಿಸ್ಟ್ ನಲ್ಲಿರುವ ಎಲ್ಲರಿಗೂ ಗೊತ್ತಿರುತ್ತೆ ಅಂದುಕೊಳ್ಳುತ್ತೇನೆ. ಬಟ್ ಸ್ಟಿಲ್ ಹೇಳಿಬಿಡುತ್ತೇನೆ. e-bay ಎನ್ನುವ ಆನ್ ಲೈನ್ ಮಾರ್ಕೆಟಿಂಗ್ ಕಂಪನಿಯಿಂದ ಒಂದು ನಿಕಾನ್ ಕಂಪನಿಯ ನಲವತ್ತು ಸಾವಿರ ಬೆಲೆ ಬಾಳುವ ಕ್ಯಾಮೆರಾ ಒಂದನ್ನು ಬುಕ್ ಮಾಡಿದ್ದಾನೆ. ಆದರೆ, ಪೋಸ್ಟ್ ನಲ್ಲಿ ಬಂದ ಬಾಕ್ಸ್ ಓಪನ್ ಮಾಡಿ ಮಾಡಿದಾಗ ಕೇವಲ ಬಾಕ್ಸ್ ಮಾತ್ರವೇ ಇದೆ. ಅದರಲ್ಲಿ ಕ್ಯಾಮೆರಾವೇ ಇರದಿದ್ದುದನ್ನು ಕಂಡು ತನ್ನ ಫೇಸ್ ಬುಕ್ ಸ್ಟೇಟಸ್ ನಲ್ಲಿ ಫೋಟೋ ಸಮೇತ ಹಾಕಿ ವಿವರಿಸಿದ್ದಾನೆ. e-bay ಎಂಬ ಆನ್ ಲೈನ್ ಮಾರ್ಕೆಟಿಂಗ್ ಕಂಪನಿಗೂ ದೂರು ನೀಡಿದ್ದಾನೆ. ಯಾವಾಗ ಕಂಪನಿಯವರು ಕಿವಿಗೆ ಹಾಕಿಕೊಂಡಿಲ್ಲವೋ, ನೇರವಾಗಿ ಅವರ ವಿರುದ್ಧ ಮಾಧ್ಯಮಗಳ ಮೊರೆ ಹೋಗುವುದಾಗಿ ಗುಟುರು ಹಾಕಿದ್ದಾನೆ. ಆಗ ತಮ್ಮ ಕಂಪನಿಯ ಗುಡ್ ವಿಲ್ ಗೆ ಧಕ್ಕೆ ಬಂದೀ ತೆಂದು ಪಟ್ಟು ಸಡಿಲಿಸಿಕೊಂಡು ಕ್ಯಾಮೆರಾವನ್ನು ಕಳುಹಿಸಿಕೊಟ್ಟಿದ್ದಾರೆ. ರಾಜೇಂದ್ರ ಪ್ರಸಾದ್ ಹೇಳು ವಂತೆ ಕೆಲವರಿಗೆ ಡಬ್ಬಿಯಲ್ಲಿ ಕಲ್ಲು ಸಹ ಇಟ್ಟು ಕಳಿಸಿದ ಉದಾಹರಣೆಗಳಿವೆ.
ನಾನು ಗ್ರಾಹಕರ ವೇದಿಕೆ (Dist.Consumer Forum) ಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ನಾನು ಸಾಕಷ್ಟು ಬಗೆಯ ಪ್ರಕರಣಗಳನ್ನು ನೋಡಿದ್ದೇನೆ, ನೋಡುತ್ತಿದ್ದೇನೆ. ಮೇಲಿನ ಈ ಎರಡು ಪ್ರಸಂಗಗಳನ್ನು ಮಾತ್ರವೇ ಹೇಳುವ ಉದ್ದೇಶವಿಲ್ಲ. ಇದರಂತೆ ಹಲವು ಕಡೆ ನಡೆದಿರಬಹುದು. ಆದರೆ ಬೆಳಕಿಗೆ ಬಂದಿರಲಿಕ್ಕಿಲ್ಲ. ಆದರೆ, ಬರೀ ಗ್ರಾಹಕರಾಗಿದ್ದರೆ, ಕೊಳ್ಳುವವರಾಗಿದ್ದರೆ ಮಾತ್ರ ಸಾಲದು, ಕೆಟ್ಟದ್ದನ್ನು ಪ್ರಶ್ನಿಸುವ, ಗುಣಮಟ್ಟವನ್ನು ಪರೀಕ್ಷಿಸುವ, ಸೇವೆಯಲ್ಲಿನ ನ್ಯೂನ್ಯತೆಯನ್ನು ಸರಿಪಡಿಸಿ ಕೊಳ್ಳಲು ತಮಗಿರುವ ಹಕ್ಕನ್ನು ಚಲಾಯಿಸುವುದು ಅಷ್ಟೇ ಮುಖ್ಯ. ಚಾನಲ್ ಗಳಲ್ಲಿ ನೋಡಿರುತ್ತೇವೆ; "ಜಾಗೋ ಗ್ರಾಹಕ್ ಜಾಗೋ" ಜಾಹಿರಾತು. ಆದರೆ ಎಷ್ಟು ಜನ ಗ್ರಾಹಕರು ಗ್ರಾಹಕರಿಗಿರುವ ಹಕ್ಕನ್ನು ಚಲಾಯಿಸುತ್ತಾರೆ? ಎಷ್ಟು ಜನ ಗ್ರಾಹಕರ ಹಿತರಕ್ಷಣ ಕಾಯ್ದೆಯ ಉಪಯೋಗ ಪಡೆದಿದ್ದಾರೆ ಅನ್ನುವುದು ಸಹ ಮುಖ್ಯವಾಗುತ್ತದೆ.
ನನ್ನ ಒಂದು ವಿನಂತಿ ಏನೆಂದರೆ, ಫೇಸ್ ಬುಕ್ ನಲ್ಲಿ ಸಾಕಷ್ಟು ನನಗಿಂತ ವಿದ್ಯಾವಂತ ಗೆಳೆಯ ರಿದ್ದೀರಿ, ನನಗಿಂತ ಚೆನ್ನಾಗಿರುವ ಆರ್ಥಿಕ ಸ್ಥಿತಿವಂತರು, ಸಾಕಷ್ಟು ಶಾಪಿಂಗು ಮಾಡುವವರು, ಕವಿಗಳು, ಸಂಗೀತಗಾರರು, ಹಾಡುವವರು ಎಲ್ಲರೂ ಇದ್ದೀರಿ. ಪ್ರತಿದಿನ ಒಂದಿಲ್ಲೊಂದು ವಸ್ತುವನ್ನು ಒಬ್ಬರಲ್ಲಾ ಒಬ್ಬರು ಖರೀದಿಸಲೂಬಹುದು. ಎಲ್ಲೋ ಒಂದು ಕಡೆ ಒಬ್ಬೊಬ್ಬರಿಗೆ ಒಂದೊಂದು ಖರೀದಿಸಿದ ವಸ್ತುವಿನ ಸಮಸ್ಯೆ, ದೋಷ, ಕಂಡು ಬಂದಲ್ಲಿ ಗ್ರಾಹಕರಾಗಿ ಹಕ್ಕನ್ನು ಚಲಾಯಿಸಿ. ಮತ್ತೂ ಒಂದು ಮಾತು- ಒಂದೊಂದು ಕಾರಣಕ್ಕೂ ಅದ್ಭುತವಾದ ಕವನವನ್ನು ಚೆಂದಗೆ ಬರೆದು ಫೇಸ್ ಬುಕ್ ಗೆ, ಪ್ರಿಂಟ್ ಮಾಧ್ಯಮಕ್ಕೆ ಕಳುಹಿಸುವ ನಮ್ಮ ಸ್ನೇಹಿತರು – ತಾವು ಕೊಂಡ ದೋಷವಿದ್ದ ಆ ವಸ್ತುವಿನ ಮೇಲೆ, ಕ್ವಾಲಿಟಿ ಮೇಲೆ, ಸೇವಾ ನ್ಯೂನ್ಯತೆ ಮೇಲೆ, ಕಂಪನಿಯ ಮೇಲೆ , ಲಘು ಹಾಸ್ಯ ಮತ್ತು ಸೂಕ್ಸ್ಮ "ಇರಿತ" ಗಳಿರುವಂತೆ ಬರೆದೂ, ಹಾಡಿಯೂ (gunine ಆಗಿ ಪರಿಹಾರ ಕಂಡುಕೊಳ್ಳುವ ಪ್ರಯತ್ನದ ನಂತರ) ಸಹ ಪೋಸ್ಟ್ ಮಾಡಿ ನೋಡಿ. ಆ ಪ್ರತಿಕ್ರಿಯೆ ಹೇಗಿರುತ್ತದೆಂದು. ಪರಿಣಾಮ ನೂರಕ್ಕೆ ನೂರು ಕ್ಲಿಕ್ ಆಗುತ್ತೇ ಅಂತಲ್ಲ, ಆದರೆ ಯಾರಾದ್ರೂ ಆ ಥರದ ಬರಹಗಳನ್ನೂ ತುಣುಕುಗಳನ್ನೂ ಸಂಭಂಧಿಸಿದವರ ಗಮನಕ್ಕೆ ತಂದು ಎಚ್ಚರಿಸಿದರೆ ಅದೇ ಮೊದಲ ಗೆಲುವಲ್ಲವೇ?
ಈಗಿನ ದಿನಗಳಲ್ಲಿ ಹುಟ್ಟಿಸಿದ ತಂದೆ ತಾಯಿ ನೀವೇ ಎಂದು ಮಕ್ಕಳು ಹೇಳಿದರೂ ಅದನ್ನೂ ಪ್ರೂವ್ ಮಾಡಲು D.N.A.ದಂಥ ಪರೀಕ್ಷೆಗಳು ಅಗತ್ಯ. ಅಂಥಾ D.N.A.ಪರೀಕ್ಷೆ ಮಾಡಿಸಲೂ, ಅದಕ್ಕಾಗಿ ರಕ್ತದ ಸ್ಯಾಂಪಲ್ ನೀಡಲು ಸಹ ಕೋರ್ಟಿನ ಆದೇಶವಿದ್ದರೇನೇ "ತಂದೆ ತಾಯಿ"ಯಾದವರು ಒಪ್ಪುವಂಥ ಪರಿಸ್ಥಿತಿ ಇದೆ. ಅದು ಪಕ್ಕಾ ಆದ ಮೇಲೆಯೂ ತಂದೆ ತಾಯಿ ಮಕ್ಕಳನ್ನು ಮಕ್ಕಳೆಂದು ಒಪ್ಪಿಕೊಳ್ಳಲು ಕೋರ್ಟಿನ ಮೆಟ್ಟಿಲೇರಿ ಸಕ್ಸಸ್ ಅದೆರೆನ್ನಿ . ಆದರೂ ಒಪ್ಪಿ ಜೊತೆಗೂಡಲು ವರ್ಷಗಳು ಉರುಳುತ್ತವೆ. ಅಂಥದ್ದರಲ್ಲಿ ಮನುಷ್ಯನೇ ಹುಟ್ಟು ಹಾಕಿದ ಕಂಪನಿಗಳು, ತಯಾರಿಸಿದ ವಸ್ತುಗಳು, ನೀಡಿದ ಸೇವೆಗಳು ತಮ್ಮವೆಂದು ಒಪ್ಪಿಕೊಳ್ಳಲು, ದೋಷವಿದ್ದಲ್ಲಿ, ಸೇವೆಯ ಲೋಪವಿದ್ದಲ್ಲಿ ತಕ್ಷಣವೇ ಸರಿಪಡಿಸಿಕೊಡುವ ಜಾಯಮಾನದವಲ್ಲ. ಅದಕ್ಕಾಗಿ ಟರ್ಮ್ಸ್ ಅಂಡ್ ಕಂಡೀಶನ್ ಗಳ ದುರ್ಲಾಭ ವನ್ನು, ಕಾನೂನಿನ ಸಮರದಲ್ಲಿ ಗ್ರಾಹಕರ ಸಮಯ ಮತ್ತು ತಾಳ್ಮೆಯನ್ನು ಪರೀಕ್ಷೆಗೆ ಒಡ್ಡುತ್ತವೆ. ಕಾನೂನಿನ ಸಮರ ಇದ್ದದ್ದೇ. ಆದರೆ, ಆಧುನಿಕ ಜಗತ್ತಿನ ವೈಜ್ಞಾನಿಕ ಅನ್ವೇಷಣೆಗಳ ಉಪಯೊಗ ವನ್ನೂ ಪಡೆಯಬಾರದೇಕೆ? ಎಂಬುದು ನನ್ನ ಅಭಿಪ್ರಾಯ. ಹಿಂದಿಯಲ್ಲಿ ಒಂದು ಮಾತಿದೆ " ಜಬ್ ಸೀದಿ ಉಂಗ್ಲಿ ಸೇ ಘೀ ನಹಿ ನಿಕಲ್ತಾ, ತೋ ತೇಡಾ ಕರ್ನಾ ಪಡ್ತಾ ಹೈ" ಅಂತ.. ಹೀಗಿದ್ದಾಗ ಕಾನೂನಿನ ಸವಲತ್ತಿನ ಉಪಯೋಗದ ಜೊತೆ ಜೊತೆಗೆ ಚಾಲ್ತಿಯಲ್ಲಿರುವಂಥ ವೈಜ್ಞಾನಿಕತೆಯನ್ನು, ತಕ್ಷಣಕ್ಕೆ ಲಭ್ಯವಾಗುವಂಥ ಸಂವಹನ ಮಾರ್ಗವನ್ನು ಸಹ ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ ಅಂದುಕೊಳ್ಳುತ್ತೇನೆ. ಆದರೆ ಈ ಎಲ್ಲಾ ಮಾರ್ಗಗಳನ್ನು ಬ್ಲಾಕ್ಮೇಲ್ ಮಾಡಲು ಅಥವಾ ದುರುಪಯೋಗ ಪಡೆಯಲು ಬಳಸಿ ದಲ್ಲಿ, ಬಳಸಿದವರಿಗೆ ಎದುರಾಗುವ ಅಪಾಯವನ್ನೂ ಸಹ ಅಷ್ಟೇ ಗಮನದಲ್ಲಿಟ್ಟುಕೊಳ್ಳುವಂಥದ್ದು.
ಇದೇ ಮಾರ್ಚ್ ೧೫ಕ್ಕೆ ವಿಶ್ವ ಗ್ರಾಹಕರ ದಿನಾಚರಣೆ ಇದೆ. ಆಚರಣೆ ಕೇವಲ ನಾವು ವೇದಿಕೆ ಮೇಲೆ ಆಚರಿಸುವುದನ್ನು ನೋಡಿ ಚಪ್ಪಾಳೆ ಹೊಡೆದು ಕೈಬಿಡುವುದಲ್ಲ. ಅದನ್ನು ಸದುಪಯೋಗಪಡಿಸಿ ಕೊಳ್ಳುವುದರಲ್ಲಿ ಅದರ ಸಫಲತೆ ಇದೆ ಎಂದು ಭಾವಿಸುತ್ತೇನೆ. ಅಲ್ಲವಾ ?
*****
Very meaning full article. Good one.
Amar, your article/write up is indeed a tribute to Consumer Awareness!
Amar, Very interesting but useful article from you.
Very happy to read it!
Good one and informative article , Even though Its not one of your regular patren article!
thanks amar for enlightening the consumers
ಬಹಳ ಉಪಯುಕ್ತವಾದ ಲೇಖನ . ಯಾವ ಸಂಸ್ಥೆಯೂ ಗ್ರಾಹಕರಿಗೆ ಬಿಟ್ಟಿ ಸೇವೆ ಮಾಡುತ್ತಿಲ್ಲ . ದುಡ್ಡು ಕೊಟ್ಟ ಗ್ರಾಹಕನಿಗೆ ಸೇವೆ ಒದಗಿಸುವುದು ಸಂಸ್ಥೆಗಳ ಕರ್ತವ್ಯ
ವಿನೋದ್ ಕುಮಾರ್ ಬೆಂಗಳೂರು
Chennagide Lekhana, keep it up.
Beaytiful Article promoting awareness.
Olle maahithi iro lekhana … Graahakalaagi naanu swalpa mattigaadroo nanna javabdari thilkondiddini anta hemme annisthide
nimagiddashte kaalaji ellarallU barai embude nanna aashaya….madam. (y)
Good one sir.congrats
nice article keep it up dear