ಪ್ರಿಯ ಪಂಜುವಿನ ಓದುಗರೇ ಹಾಗು ಬರಹಗಾರರೇ,
ನಿಮ್ಮೆಲ್ಲರ ಅಭಿಮಾನದಿಂದ ಪಂಜು ಕಳೆದ ತಿಂಗಳು ಜನವರಿ 21 ರಂದು ಐದು ವರ್ಷ ತುಂಬಿ ಆರನೇ ವರ್ಷಕ್ಕೆ ಕಾಲಿಟ್ಟಿದೆ. ಹತ್ತಾರು ವೆಬ್ ತಾಣಗಳ ನಡುವೆಯೂ ತನ್ನದೇ ಆದ ಓದುಗ ಬಳಗವನ್ನು ಹೊಂದಿರುವ ಪಂಜು, ತಿಂಗಳಿಗೆ ಕಡಿಮೆ ಎಂದರೂ ಎರಡೂವರೆ ಲಕ್ಷ ಹಿಟ್ಸ್ ಜೊತೆಗೆ ಸುಮಾರು ಏಳೂವರೆ ಸಾವಿರ ಓದುಗರು ಪಂಜುಗೆ ಭೇಟಿ ನೀಡುತ್ತಾರೆ ಎಂಬುದು 2017ರ ಹೈಲೈಟ್ಸ್.. ಪಂಜು ಆಗಾಗ ವಿಶೇಷ ಸಂಚಿಕೆಗಳನ್ನು ಹೊರ ತರುವುದು ವಾಡಿಕೆ. ಈ ವರ್ಷದ ಮೊದಲ ವಿಶೇಷ ಸಂಚಿಕೆಯಾಗಿ ಯುಗಾದಿ ವಿಶೇಷಾಂಕವನ್ನು ತರಲು ಪಂಜು ಬಯಸುತ್ತದೆ. ಆದ ಕಾರಣ ಯುಗಾದಿ ವಿಶೇಷಾಂಕಕ್ಕಾಗಿ ನಿಮ್ಮ ಲೇಖನ, ಪ್ರಬಂಧ, ಕವಿತೆ, ಕತೆ ಇತ್ಯಾದಿ ಸಾಹಿತ್ಯದ ಬರಹಗಳನ್ನು ಪಂಜುವಿಗಾಗಿ ಕಳಿಸಿಕೊಡಿ. ನಿಮ್ಮ ಲೇಖನಗಳು ಮಾರ್ಚ್ 15 ರ ಸಂಜೆಯೊಳಗೆ ತಲುಪಲಿ…
ಬರಹಗಳನ್ನು editor.panju@gmail.com ಮತ್ತು smnattu@gmail.com ಮೇಲ್ ಐಡಿಗಳಿಗೆ ಕಳುಹಿಸಿಕೊಡಿ.
ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ…
ಧನ್ಯವಾದಗಳೊಂದಿಗೆ
ಪಂಜು ಬಳಗ
ವಿ.ಸೂ.: ಪಂಜು ಅಪ್ರಕಟಿತ ಬರಹಗಳನ್ನಷ್ಟೇ ಸ್ವೀಕರಿಸುತ್ತದೆ. ಲೇಖಕರು ಕಳುಹಿಸುವ ಲೇಖನವು ಬ್ಲಾಗ್, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಬರಹವನ್ನು ಸ್ವೀಕರಿಸುವುದಿಲ್ಲ.
ಉಗಾದಿ ಕಾಣಿಕೆ
ಉಗಾದಿ ಹರುಷ ತರಲಿ
ಇಡೀ ವರುಷ ಇರಲಿ
ಕಹಿ ಮಾತಿಗೆ ಬೆಲೆಯೇನು
ನಕಲಿ ಮಾತಲಿ ಬಲವೇನು
ಮಿತಭಾಷೆ ಕಲೆತ ಕಿರುನಗೆ
ಸಕ್ಕರೆ ಬೆರೆತಂತೆ ಸಿಹಿ ಹಣ್ಣಿಗೆ
ಮುಖವು ತೇಜಸ್ಸು ಬೀರಲಿ
ಮನದ ಪ್ರತಿಬಿಂಬ ವಾಗಲಿ