ಪಂಜು-ವಿಶೇಷ

ಯುಗಾದಿ ವಿಶೇಷಾಂಕಕ್ಕೆ ಬರಹ ಆಹ್ವಾನ

ಪ್ರಿಯ ಪಂಜುವಿನ ಓದುಗರೇ ಹಾಗು ಬರಹಗಾರರೇ,

ನಿಮ್ಮೆಲ್ಲರ ಸಹಕಾರದಿಂದ ಪಂಜು ತನ್ನ ಎಂಟನೇ ವರ್ಷದ ಯುಗಾದಿಯ ಸಂಭ್ರಮದಲ್ಲಿದೆ. ಕಳೆದ ವರ್ಷಗಳಂತೆ ಈ ಬಾರಿಯೂ ಯುಗಾದಿ ವಿಶೇಷಾಂಕವನ್ನು ತರಲು ಪಂಜು ಬಯಸುತ್ತದೆ. ಆದ ಕಾರಣ ಈ ವಿಶೇಷಾಂಕಕ್ಕಾಗಿ ನಿಮ್ಮ ಲೇಖನ, ಪ್ರಬಂಧ, ಕವಿತೆ, ಕತೆ ಇತ್ಯಾದಿ ಸಾಹಿತ್ಯದ ಬರಹಗಳನ್ನು ಪಂಜುವಿಗಾಗಿ ಕಳಿಸಿಕೊಡಿ. ನಿಮ್ಮ ಲೇಖನಗಳು ಮಾರ್ಚ್ 23 ರ ಸಂಜೆಯೊಳಗೆ ನಮಗೆ ತಲುಪಲಿ…

ನಿಮ್ಮ ಬರಹಗಳನ್ನು editor.panju@gmail.com ಮತ್ತು smnattu@gmail.com ಮೇಲ್ ಐಡಿಗಳಿಗೆ ಕಳುಹಿಸಿಕೊಡಿ.

ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ…

ಧನ್ಯವಾದಗಳೊಂದಿಗೆ
ಪಂಜು ಬಳಗ
https://panjumagazine.com/

ವಿ.ಸೂ.: ಪಂಜು ಅಪ್ರಕಟಿತ ಬರಹಗಳನ್ನಷ್ಟೇ ಸ್ವೀಕರಿಸುತ್ತದೆ. ಲೇಖಕರು ಕಳುಹಿಸುವ ಲೇಖನವು ಬ್ಲಾಗ್, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಬರಹವನ್ನು ಸ್ವೀಕರಿಸುವುದಿಲ್ಲ.


ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಯುಗಾದಿ ವಿಶೇಷಾಂಕಕ್ಕೆ ಬರಹ ಆಹ್ವಾನ

 1. ಗಜಲ್:-೧

  ನೂಲಿನ ದಾರ ಸೂಜಿಯಲ್ಲಿ ನೇರವಾಗಿ ಹೋಗಲು ಮುಲುಗುತ್ತಿದೆ ಸರ್ದಾರ
  ಸೂಜಿನ ಕೊನೆಯ ಸಂದಿಯಲ್ಲಿ ಸೇರದೆ ಡೊಂಕು ಬಾಲವಾಗಿ ಮಲುಗುತ್ತಿದೆ ಸರ್ದಾರ

  ಇಣುಕುವ ಕೂಸಾಗಿದೆ ಬಾಗಿಲ ಬಳಿ ಹರಿದ ವಸ್ತ್ರ ಜೋಡಿಸಲು
  ಮಣಿ ದಾಟಿ ಮತ್ತೆ ಮರಳಿ ಬಾಗಿ ಏಳುತ್ತಾ ಒಲಿದಿದೆ ಸರ್ದಾರ

  ಕತ್ತರಿಸುವ ಬುದ್ಧಿ ಇಲ್ಲದ ಮೂಖ ಮಾತಿನ ಸೋಜಿಗಾರ
  ಮರಳಿ ಒಗ್ಗೂಡಿಸುವ ಸಂಬಂಧಗಳ ಬಂಟವಾಗಿ ನಿಂತಿದೆ ಸರ್ದಾರ

  ಚೂಪಾಗಿ ತೂರುವವ ವಸ್ತ್ರದ ಸಂದಿಯಲ್ಲಿ ಎಳೆಯ ಬಿಂದುವಾಗಿ
  ಪದರದಲ್ಲಿ ಸರಣಿ ಸಾಲುವಾಗಿ ಮಿಂದು ಬೆಂದು ಚೆಂದ ಕಾಣುತ್ತಿದೆ ಸರ್ದಾರ

  ಸೂಜಿಯು ಸಮನತ್ವದ ಬದುಕು ಅರಿತಿರ ಬಹುದು
  ಹರಿದ ಚರ್ಮದ ‘ವೀರ’ ಸ್ರಾವ ನಿಲ್ಲಿಸಲು ನರಳಿ ನರಳಿ ನಲುಗುತ್ತಿದೆ ಸರ್ದಾರ

  ವಿ.ಹುಸೇನಿ ವೆಲ್ಲೂರು
  ರಾಜ್ಯ ಆಂಧ್ರಪ್ರದೇಶ್
  ಮೊಬೈಲ್ ನಂಬರ್:-೮೯೭೦೧೪೭೯೧೦

Leave a Reply

Your email address will not be published. Required fields are marked *