ಯಾದಗಿರಿ ಜಿಲ್ಲೆಯಲ್ಲಿ ಮಕ್ಕಳೋತ್ಸವ ಕಾರ್ಯಕ್ರಮ: ವಿಶ್ವನಾಥ ಕೆ.ಎಂ.

ಸಾರ್ವಜನಿಕ ಶಿಕ್ಷಣ ಶಿಕ್ಷಣ ಯಾದಗಿರಿ, ಕಲಿಕೆ ಸರ್ ರತನ್ ಟಾಟಾ ಟ್ರಸ್ಟ್‌ನ ಅಡಿಯಲ್ಲಿ ಯಾದಗಿರಿ  ತಾಲೂಕಿನ ಆಯ್ದ ಶಾಲೆಗಳಲ್ಲಿ ಇದೀಗ ಮಕ್ಕಳೋತ್ಸವ ಎನ್ನುವ  ವಿನೂತನ ಬೇಸಿಗೆ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. 

ಕಾರ್ಯಕ್ರಮದ ಹಿನ್ನಲೆ
ಮಕ್ಕಳಿಗೆ ಶಾಲೆಯ ಬಗ್ಗೆ ಆಸಕ್ತಿ ಮೂಡಿಸುವುದು. ಶಾಲಾ ವಾತವರಣದಲ್ಲಿ ಮಕ್ಕಳಿಗೆ ಉತ್ತಮ ಶಾಲೆಯ ಕಲ್ಪನೆ ಕೊಡುವುದು. ಹೊರಗಿನ ಪ್ರಪಂಚಕ್ಕೆ ಮಕ್ಕಳ ಜ್ಞಾನವನ್ನು ಬೆಳೆಸುವುದು. ವಿವಿಧ ಸಾಮಾಜಿಕ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡುವುದು. ವಿವಿಧ ರೀತಿಯ ಹಬ್ಬಗಳ ಬಗ್ಗೆ ಮಾಹಿತಿ ನೀಡುವುದು. ದಿನ ವಿಶೇಷಗಳ ಬಗ್ಗೆ ಮಾಹಿತಿ ಕೊಡುವುದು. ಸೃಜನಾತ್ಮಕ ಕಲೆಗಳ ಬಗ್ಗೆ, ಚಿತ್ರಕಲೆ, ನಾಟಕ, ಹಾಡು, ನೃತ್ಯ, ಮನೋರಂಜನೆ, ಒಳಾಂಗಣ ಆಟಗಳು, ಹೊರಾಂಗಣ ಆಟಗಳು, ವಿವಿಧ ರೀತಿಯ ವಿನೂತನ ಚಟುವಟಿಕೆಗಳನ್ನು ಮಕ್ಕಳಿಗೆ ಕಲಿಸುವ ಹಿನ್ನಲೆಯನ್ನು ಇಟ್ಟುಕೊಳ್ಳಲಾಗಿದೆ. 

ಪ್ರಾರಂಭ
ಯಾದಗಿರಿ ಜಿಲ್ಲೆಯಲ್ಲಿ ಜುಲೈ ೨೦೧೧ ಕ್ಕೆ ಆಯ್ದ ೪೦ ಶಾಲೆಗಳಲ್ಲಿ ೬ನೇ ತರಗತಿಯಿಂದ ೧೦ನೇಯ ತರಗತಿವರೆಗೆ ಹಾಗೂ ಶಾಲೆ ಬಿಟ್ಟ ಕಲಿಯುವ, ಕಲಿಯದ ಮಕ್ಕಳಿಗೆ ಚಟುವಟಿಕೆಗಳನ್ನು ನೀಡಲು ಆಯಾ ಗ್ರಾಮದ ಮಕ್ಕಳನ್ನು ಊರಿನ ಒಂದು ಸ್ಥಳದಲ್ಲಿ ಸೇರಿಸಿ ಶಾಲೆಯ ಶಿಕ್ಷಕರು ಹಾಗೂ ಮುಖ್ಯ ಗುರುಗಳ ಸಮ್ಮುಖದಲ್ಲಿ ಶಾಲಾ ಹಂತದ ಮಕ್ಕಳ ಕೂಟ ರಚನೆ ಮಾಡಲಾಯಿತು. ಪ್ರತಿ ಶಾಲೆಯಲ್ಲಿ ೪೦ ರಿಂದ ೬೦ ಮಕ್ಕಳ ತಂಡ ರಚಿಸಿ ಅದಕ್ಕೊಂದು ಹೆಸರು ನೀಡಿ ಪ್ರತಿ ಶನಿವಾರ ಮಕ್ಕಳಿಗೆ ಅದೇ ಹಳ್ಳಿಯ ಪ್ರೇರಕರ ಮೂಲಕ ವಿವಿಧ ಚಟುವಟಿಕೆ ನೀಡುವ ಕಾರ್ಯಕ್ರಮ ರೂಪಿಸಲಾಯಿತು.  ಆಯಾ ಗುಂಪಿನಲ್ಲಿ ಮಕ್ಕಳಿಗೆ ನಾಯಕತ್ವ ವಹಿಸಿಕೊಡಲಾಯಿತು ಪ್ರತಿ ಶನಿವಾರ ಸೇರಿ ಹಲವಾರು ವಿಷಯಗಳನ್ನು ಕಲಿಯುವುದು ಸರಕಾರದೊಂದಿಗೆ ಸೇರಿ ಕಾರ್ಯಕ್ರಮ ರೂಪಿಸಲಾಯಿತು.  

ಕಾರ್ಯಕ್ರಮದ ಉದ್ದೇಶ
ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಸದೃಢಗೊಳಿಸುವುದು. ಮಕ್ಕಳಲ್ಲಿ ಅಡಗಿರುವ ಜೀವನ ಕೌಶಲ್ಯ ಬೆಳೆಸುವುದು. ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವುದು. ಮಕ್ಕಳಲ್ಲಿ ಆತ್ಮ ಸ್ಥೈರ್ಯ ಮೂಡಿಸಿ ಅವರಲ್ಲಿಯ ಸಭಾಕಂಪನ ಹೋಗಲಾಡಿಸುವುದು. ಮಕ್ಕಳಲ್ಲಿರುವ ಸೃಜನಾತ್ಮಕ ಚಟುವಟಿಕೆಗಳನ್ನು ಹೊರಹಾಕುವುದು. ಬೇಸಿಗೆ ರಜೆಯಲ್ಲಿ ಮಕ್ಕಳು ಶಾಲೆಯ ಕಡೆಗೆ ಬರುವ ಹಾಗೆ ಮಾಡುವುದು. ಮಕ್ಕಳು ಸ್ವತ: ಕೈಯಾರೆ ಮಾಡಿಕಲಿ ತತ್ವದ ಮೂಲಕ ಕಲಿಯುವ ಚಟುವಟಿಕೆಗಳ ಜೊತೆಗೆ ಆರೋಗ್ಯ,ಶಿಕ್ಷಣ, ಭಾಷೆಯ ಮಹತ್ವ ಕಲಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿರುತ್ತದೆ. 

ಕಾರ್ಯಕ್ರಮದ ವ್ಯಾಪ್ತಿ 
ಯಾದಗಿರಿ ತಾಲೂಕಿನ ಆಯ್ದ ೩೮ ಶಾಲೆಗಳಲ್ಲಿ ಬೇಸಿಗೆ ಹಾಗೂ ಛಳಿಗಾಲದಲ್ಲಿ ಮಕ್ಕಳಿಗೆ ಈ ರೀತಿಯ ಕ್ರೀಯಾತ್ಮಕ ಚಟುವಟಿಕೆಗಳನ್ನು ಕಲಿಸುವ ಉದ್ದೇಶ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಲಿಕೆ ಸರ್ ರತನ್ ಟಾಟಾ ಟ್ರಸ್ಟ ಹೊಂದಿರುತ್ತದೆ.  ಈ ಕಾರ್ಯಕ್ರಮಕ್ಕೆ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಮಕ್ಕಳೇ ನಡೆಸಿಕೊಡುವ ಕಾರ್ಯಕ್ರಮ ಮಕ್ಕಳೋತ್ಸವ ಎಂದು ಕರೆಯಲಾಗಿದೆ. ಈ ಶಿಬಿರದಲ್ಲಿ ಊರಿನ ಯಾವುದೇ ಮಕ್ಕಳು ಭಾಗವಹಿಸಬಹುದು. ಹೆಚ್ಚಾಗಿ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಕಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು ಮೊದಲಿಗೆ ಮಕ್ಕಳನ್ನು ಈ ಶಿಬಿರಕ್ಕೆ ಕರೆತರಲು ಕಾರ್ಯನಿರ್ವಹಿಸಲಾಗುತ್ತಿದೆ. ಊರಿನ ಪ್ರಮುಖ ವ್ಯಕ್ತಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರಿಂದ ಕೆಲವು ಚಟುವಟಿಕೆಗಳನ್ನು ಮಾಡಿಸಲಾಗುತ್ತಿದೆ. 

ಪ್ರತಿ ಶಿಬಿರಕ್ಕೆ ೫ ರಿಂದ ೬ ಜನ ಸಂಪನ್ಮೂಲ ವ್ಯಕ್ತಿಗಳಿದ್ದು ಅವರಿಗೆ ಹಲವು ರೀತಿಯಲ್ಲಿ ತರಬೇತಿ ಹಾಗೂ ಸಂಪನ್ಮೂಲ ಒದಗಿಸಲಾಗಿದೆ. ಆಯಾ ಶಾಲೆಯಲ್ಲಿ ಸಂಪನ್ಮೂಲ ಶಿಕ್ಷಕರನ್ನು ಈ ಶಿಬಿರದಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಇದರ ಜೊತೆಗೆ ಜಾನಪದ ಸಾಹಿತ್ಯ ಕಲೆ ಸಂಪ್ರದಾಯಿಕ ಹಾಡುಗಳು ಭಾವಗೀತೆ ರಸಪ್ರಶ್ನೆ ಇತ್ಯಾದಿಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳಿಂದ ಮಕ್ಕಳನ್ನು ರಂಜಿಸಿ ಶಾಲೆಯ ನೆನಪು ಹಸಿರಾಗಿ ಉಳಿಯಲು ಕಲಿಕೆ ಸರ್ ರತನ್ ಟಾಟಾ ಟ್ರಸ್ಟ್ ಶ್ರಮಿಸುತ್ತಿದೆ. 

ಗುಣಾತ್ಮಕ ಶಿಕ್ಷಣ ದೊರೆಯುತ್ತಿಲ್ಲ ಎನ್ನುವ ಕೂಗಿಗೆ ಯಾದಗಿರಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಲಿಕೆ ಸರ್ ರತನ್ ಟಾಟಾ ಟ್ರಸ್ಟ್ ತುಂಬ ಶ್ರಮವಹಿಸಿ ಕೆಲಸ ಮಾಡುತ್ತಿದೆ. ಈ ಭಾಗದ ಮಕ್ಕಳಲ್ಲಿ ತಾವು ಕಲಿಯುವ ವಿಷಯ ಭಾವಿ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಸುಂದರ ಬದುಕನ್ನು ರೂಪಿಸಿಕೊಳ್ಳಲಿ ಎಂಬುವುದು ಈ ಶಿಬಿರಗಳ ಪ್ರಮುಖ ಉದ್ದೇಶವಾಗಿರುತ್ತದೆ. 

ಬೇಸಿಗೆಯಲ್ಲಿಯೂ ಸಹ ಸರಕಾರ ಮಕ್ಕಳಿಗೆ ಬಿಸಿ ಊಟವ ನೀಡಿ ಹಸಿವು ಮುಕ್ತ ಕರ್ನಾಟಕ ಮಾಡುವಲ್ಲಿ ಶ್ರಮಿಸುತ್ತಿದೆ. ಇದಕ್ಕೆ ಪೂರಕವಾಗಿ ಯಾದಗಿರಿಯ ಜಿಲ್ಲೆಯಲ್ಲಿ ಮಕ್ಕಳ ಶಿಕ್ಷಣದ ಬದ್ರ ಬುನಾದಿ ರೂಪಿಸುವಲ್ಲಿ ಕಲಿಕೆ ಸರ್ ರತನ್ ಟಾಟಾ ಟ್ರಸ್ಟ್ ಸರಕಾರದ ಜೊತೆಗೆ ಸೇರಿ ಅನೇಕ ಯೋಜನೆಗಳ ಮೂಲಕ ಗುಣಾತ್ಮಕ ಶಿಕ್ಷಣ ರೂಪಿಸುವ ಕೆಲಸ ಮಾಡಲಾಗುತ್ತಿದೆ. 

ಈ ಬೇಸಿಗೆ ಶಿಬಿರಗಳ ಮೂಲಕ ಯಾದಗಿರಿ ಜಿಲ್ಲೆಯ ಹತ್ತಿಕುಣಿ-೪೧, ಅಚೋಲಾ-೪೦, ಕೊಯಿಲೂರು-೭೬, ಮಲ್ಹಾರ-೫೮, ಯಲಸತ್ತಿ-೬೦, ತಳಕ-೬೦, ವಡ್ನಳ್ಳಿ-೯೩, ಕೆ.ಶಹಾಪೂರ-೪೪, ಮುಷ್ಟೂರು-೫೫, ವಂಕಸಂಬ್ರ-೬೦, ಮದ್ವಾರ-೭೧, ಗಣಪೂರ-೬೨, ಕಾಳಬೆಳಗುಂದಿ-೬೭,  ಸಾವೂರು-೬೦,  ಹೆಡಗಿಮದ್ರ-೬೩ ಹೀಗೆ ಪ್ರತಿಯೊಂದು ಗ್ರಾಮದಲ್ಲಿ ೯೦೪ ಮಕ್ಕಳಿಗೆ ಈ ಮಕ್ಕಳೋತ್ಸವ ಕಾರ್ಯಕ್ರಮವನ್ನು ಮುಟ್ಟಿಸಲಾಗಿದೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ನಾಗರತ್ನಾ ಗೋವಿಂದನ್ನವರ
ನಾಗರತ್ನಾ ಗೋವಿಂದನ್ನವರ
10 years ago

ಉತ್ತಮ ಲೇಖನ

1
0
Would love your thoughts, please comment.x
()
x