ಕಬ್ಬಿಣದಂತಹ ಕೆಲವು ವಸ್ತುಗಳನ್ನು ಪ್ರೀತಿಯಿಂದ ಸೆಳೆದು ಕೊಳ್ಳುವ ವಿಶೇಷ ರೀತ್ಯ ವಸ್ತುಗಳನ್ನು ಆಯಸ್ಕಾಂತಗಳು ಎಂದು ಕರೆಯುತ್ತೇವೆ. ಅವುಗಳಿಗೆ ಈ ಆಯಸ್ಕಾಂತ ಎಂಬ ಹೆಸರು ಬಂದಿದ್ದು ಒಲವು ಎಂಬ ಅರ್ಥ ನೀಡುವ ಐಮಂತ್ ಎಂಬ ಫ್ರೆಂಚ್ ಭಾಷೆಯ ಪದದಿಂದ. ಇಲ್ಲಿ ಒಲವು ಎಂದರೆ ಕಬ್ಬಿಣದಂತಹ ವಸ್ತುಗಳ ಬಗೆಗಿರುವ ಪ್ರೀತಿ ಎಂದು ಬೇರೆ ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ. ಪ್ರಾನ್ಸಿನವರು ಮಾತ್ರ ವಲ್ಲ ನೈಸರ್ಗಿಕವಾಗಿ ದೊರೆಯುತ್ತಿದ್ದ ಆಯಸ್ಕಾಂತಗಳನ್ನು ಮೊದಲ ಬಾರಿ ಹಡಗು ದೋಣಿಗಳಲ್ಲಿ ದಿಕ್ಕು ತೋರಿಸುವ ಸೂಜಿಗಲ್ಲುಗಳಾಗಿ ಬಳಸಿದ್ದ ಚೀನಿಯರು ಕೂಡ ಅವುಗಳನ್ನು ಒಲವಿನ ಶಿಲೆಗಳು ಎಂಬರ್ಥ ನೀಡುವ ‘ಚುಷುಯು’ ಎಂಬ ಹೆಸರಿನಿಂದ ಕರೆಯುತ್ತಿದ್ದರಂತೆ. ಇವುಗಳ ಒಲವು ಕೂಡ ಸಾಮಾನ್ಯದ್ದೇನಲ್ಲ ಎನ್ನುವುದು ಎಷ್ಟು ನಿಜವೋ, ಅದು ಕಬ್ಬಿಣ್ಕಕೆ ಮಾತ್ರ ಸೀಮಿತ ವಲ್ಲ ಎನ್ನುವುದೂ ಅಷ್ಟೇ ನಿಜ.ಈ ಅಯ ಸ್ಕಾಂತಗಳು ನಿಕ್ಕಲ್,ರೋಬಲ್ಟ್ ಚಿನ್ನ ಬೆಳ್ಳಿ ಪ್ಲಾಟಿನಂತನಂತಹ ಲೋಹಗಳನ್ನೂ ತಮ್ಮ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಬಿಟ್ಟಿವೆ. ನಮ್ಮಲ್ಲಿ ಹಲವಷ್ಟು ಜನರು ಈ ಆಯಸ್ಕಾಂತಗಳನ್ನು ಕೇವಲ ಮಕ್ಕಳಾಟದ ವಸ್ತುಗಳೆಂದೇ ಭಾವಿಸಿ ಬಿಟ್ಟಿದ್ದಾರೆ. ಆದರೆ ಇವು ನಾನಾ ಕ್ಷೇತ್ರಗಳಲ್ಲಿ ತರಹೇವಾರಿ ರೀತಿಗಳಲ್ಲಿ ಬಳಕೆಯಾಗುತ್ತಿವೆ. ನೈಸಗಿಕ ಆಯಸ್ಕಾಂತಗಳ ಆಕರ್ಷಣ ಸಕ್ತಿ ಅಷ್ಟೇನೂ ಪ್ರಬಲವಾಗಿಲ್ಲದಿರುವುದರಿಂದ ವಿದ್ಯುದಯಸ್ಕಾಂತ ಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಈ ವಿದ್ಯುದಯಸ್ಕಾಂತಕ್ಕೆ ಶಕ್ತಿಯನ್ನು ನಮಗಿಷ್ಟಬಂದಂತೆ ನಿಯಂತ್ರಿಸಬಹುದು. ಆದ್ದ ರಿಂದ ಅವುಗಳು ಬಳಕೆ ಮಾಡಿ ಅತೀ ವಿಶಿಷ್ಟ ಕಾರ್ಯಗಳನ್ನು ಸಾಧಿಸಬಹುದಾಗಿದೆ. ಹಡಗು ಒಡೆಯುವ ಸ್ಥಳಗಳಲ್ಲಿ ಹಾಗೂ ಕಬ್ಬಿಣದ ಕಾರ್ಖಾನೆಗಳಲ್ಲಿ ದೊಡ್ಡ ದೊಡ್ಡ ಲೋಹದ ತುಂಡು ಗಳನ್ನು ತಗಡುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುವುದು ಬಹಳ ಕಷ್ಟದ ಕೆಲಸ. ಅವುಗಳನ್ನು ಒಟ್ಟು ಮಾಡಬೇಕು,ಹಗ್ಗ ತಂತಿಗಳ ಸಹಾಯದಿಂದ ಕಟ್ಟಿ ಹಲವಾರು ಜನ ಕೂಲಿ ಆಳುಗಳನ್ನು ಬಳಸಿ ಸಾಗಿಸಬೇಕಾ ಗುತ್ತದೆ.
ಆದರೆ ಈಗ ವಿದ್ಯುತ್ಕಾಂತೀಯ ಕ್ರೇನುಗಳನ್ನು ಈ ಕೆಲಸಕ್ಕೆ ಬಳಸಲಾಗುತ್ತಿದೆ. ಈ ರೀತಿಯ ಕ್ರೇನಿನ ತೋಳಿನ ತುದಿಯಲ್ಲಿ ದೊಡ್ಡ ವಿದ್ಯುದಯಸ್ಕಾಂತವನ್ನು ಜೋಡಿಸಿರಲಾಗುತ್ತದೆ. ಅದಕ್ಕೆ ವಿದ್ಯುತ್ತನ್ನು ಪೂರೈಸಿದ ಕೂಡಲೆ ಅಲ್ಲಿ ಉತ್ಪತ್ತಿಯಾಗುವ ಪ್ರಬಲ ಕಾಂತ ಶಕ್ತಿಯು ಸುತ್ತಲಿನ ಲೋಹದ ವಸ್ತುಗಳನ್ನು ಸೆಳೆದು ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ಅಂದರೆ ಕೆಲಸ ಸುಲಭ. ಆ ಕ್ರೇನನ್ನು ಲೋಹದ ಸರಕಿನ ಬಳಿಯಿಟ್ಟು ವಿದ್ಯುತ್ ಪೂರೈಸಿದ ಕೂಡಲೆ ಯಾವುದೇ ಹಗ್ಗ ತಂತಿಗಳ ಸಹಾಯವಿಲ್ಲದೆ ಅಲ್ಲಿದ್ದ ಸರಕುಗಳು ಕ್ರ್ರೇನಿನ ತೋಳಿಗೆ ಬಂದು ಗಟ್ಟಿಯಾಗಿ ಅಂಟಿಕೊಳ್ಳುತ್ತವೆ. ವಿದ್ಯುತ್ತಿನ ಪೂರೈಕೆಯನ್ನು ಹೆಚ್ಚಿಸಿದರೆ ಹಿಡಿತ ಇನ್ನಷ್ಟು ಬಿಗಿಗೊಳ್ಳುತ್ತದೆ. ನಂತರ ಅವನ್ನು ಎತ್ತಿಕೊಂಡು ಬೇರೆ ಸ್ಥಳವನ್ನು ತಲುಪಿದ ನಂತರ ವಿದ್ಯುತ್ ಪೊರೈಕೆಯನ್ನು ನಿಲ್ಲಿಸಿದರಾಯಿತು. ಈ ರೀತಿ ಸಮಯ, ಸಲಕರಣೆ ಹಾಗೂ ಆಳುಗಳ ಅವಶ್ಯಕತೆಯನ್ನು ಗಣನೀಯ ವಾಗಿ ತಗ್ಗಿಸಬಹುದು. ಅಷ್ಟೇ ಅಲ್ಲದೆ ದೊಡ್ಡ ಗುಜರಿ ಅಂಗಡಿಗಳಲ್ಲಿ ಕಸ ವಿಲೇವಾರಿ ಘಟಕಗಳಲ್ಲಿ ಲೋಹಗಳನ್ನು ಬೇರೆ ವಸ್ತುಗಳಿಂದ ಬೇರ್ಪಡಿಸಲೂ ಇದೇ ರೀತಿಯ ಕ್ರೇನು ಗಳನ್ನು ಬಳಸುತ್ತಾರೆ. ಹೇಗಿದೆ ನೋಡಿ ವಿಜ್ಞಾನ ಮತ್ತು ನಿಸ ರ್ಗದ ಜೋಡಿಯಾಟ? ಇಷ್ಠೇ ಅಲ್ಲದೆ ಅನ್ನ ದಾತನಿಗೆ ಸಹಾಯ ಮಾಡುವ ಒಂದು ತಂತ್ರಜ್ಞಾನ ಈಗೀಗ ಬಳಕೆಗೆ ಬರುತ್ತಿದೆ. ಬಡ ರೈತರ ಬಹುದೊಡ್ಡÀ ಸಮಸ್ಯೆಗಳಲ್ಲಿ ಒಂದು ಬೇಕಾದ ತಳಿಯ ಬೀಜಗಳೊಂದಿಗೆ ಬೆರೆತಿರುವ ಕಳೆ ಬೀಜ ಗಳನ್ನು ಹೆಕ್ಕಿ ತೆಗೆಯುವುದು. ಈ ಕಳೆಗಳ ಬೀಜಗಳು ತಮ್ಮ ಉಳಿವಿಗಾಗಿ ಮಾಡಿಕೊಂಡಿರುವ ಒಂದು ವಿಶಿಷ್ಟ ಉಪಾಯ ವನ್ನೆ ಕಾಂತತ್ವದೊಂದಿಗೆ ಬೆರಸಿ ಅವುಗಳನ್ನು ಹೆಕ್ಕುವ ಹೊಸ ವಿಧಾನ ಈಗ ನಮ್ಮ ಬಳಿ ಇದೆ. ಹತ್ತಿರದಿಂದ ಹಾದು ಹೋಗುವ ಪ್ರಾಣಿಗಳ ತುಪ್ಪಳಕ್ಕೆ ಸಿಕ್ಕಿಕೊಂಡು ತಾಯಿ ಗಿಡದಿಂದ ದೂರ ಹೋಗಿ ಹರಡಿಕೊಳ್ಳಲು ಸಹಾಯವಾಗುವಂತೆ ಆ ಕಳೆಯ ಬೀಜಗಳಿಗೆ ಒಂದು ರೀತಿಯ ಸಣ್ಣ ಸಣ್ಣ ಅಂಟುವ ಕೂದಲುಗಳಿರುತ್ತವೆ. ಇವುಗಳು ಬೆರೆತುಹೋಗಿರುವ ಉತ್ತಮ ಬೆಳೆಯ ಬೀಜಗಳನ್ನು ಒಂದು ಕಡೆ ಪೇರಿಸಿ ಆ ರಾಶಿಗೆ ಒಂದಿಷ್ಟು ಸಣ್ಣ ಕಬ್ಬಿಣದ ಪುಡಿಯನ್ನು ಬೆರೆಸಲಾಗುತ್ತದೆ. ಆಗ ಅ ಮಿಶ್ರಣದಲ್ಲಿರುವ ಕಳೆ ಬೀಜಗಳು ಅ ಕಬ್ಬಿಣದ ಪುಡಿ ಗಳಿಗೆ ಅಂಟಿಕೊಳ್ಳುತ್ತವೆ, ನಂತರ ಒಂದು ದೊಡ್ಡ ಆಯಸ್ಕಾಂತದ ಸಹಾಯದಿಂದ ಅ ಕಬ್ಬಿಣದ ಪುಡಿಯನ್ನು ಸೆಳೆದುಕೊಂಡರೆ ಅವುಗಳೊಂದಿಗೆ ಕಳೆಯ ಬೀಜಗಳೂ ಬಂದು ಸೇರಿಕೊಳ್ಳುತ್ತವೆ. ಜೊತೆಗೆ ಬೆಳೆಯ ಬೀಜಗಳು ಸುಲಭವಾಗಿ ಶುದ್ಧವಾಗುತ್ತವೆ. ಅತ್ಯುತ್ತಮ ಸರಳ ವಿದಾನ ಇದಾಗಿದ್ದರೂ ಎಲ್ಲ ಬೆಳೆಗಳಿಗೂ ಎಲ್ಲಾ ಕಳೆಗಳಿಗೂ ಇದು ಎಷ್ಟರ ಮಟ್ಟಿಗೆ ಅನ್ವಯವಾಗುತ್ತದೆ ಎಂಬುದರ ಕುರಿತು ಪ್ರಯೋಗಗಳು ಇನ್ನೂ ನಡೆಯುತ್ತಿವೆ.
ಈ ವಿದ್ಯುತ್ಕಾಂತವನ್ನು ಕೇವಲ ಒಳ್ಳೆಯ ಕೆಲಸಗಳಿಗೆ ಮಾತ್ರವಲ್ಲದೆ ಮುಗ್ಧ ಮಾನವರ ಕಿವಿಗಳಿಗೆ ದಾಸವಾಳದ ಹೂವಿಡುವಂತಹ ಕಾರ್ಯಗಳಿಗೂ ಬಳಸಲಾಗುತ್ತದೆ. ಅದನ್ನು ಮಾಯಾಜಾಲ ಎನ್ನುವಿರೋ ಮಾಟಮಂತ್ರ ಎನ್ನುವಿರೋ ಅಥವಾ ಮಂಕುಬೂದಿ ಎನ್ನುವಿರೋ ಅದು ನಿಮಗೆ ಬಿಟ್ಟಿದ್ದು. ಒಮ್ಮೆ ಒಬ್ಬ ಮಾಂತ್ರಿಕ ಪೂಜಾ ಕಾರ್ಯ ವೊಂದಕ್ಕೆ ಬಂದಿದ್ದಾಗ ಅವನ ಶಿಷ್ಯನೊಬ್ಬ ಪೂಜಾ ಸಾಮಾನುಗಳನ್ನು ಖಾಲಿ ಮಾಡಿದ ನಂತರ ಖಾಲಿ ಪೊಟ್ಟಣವನ್ನು ಮುದ್ದೆ ಮಾಡಿ ಗುರುಗಳ ಪಕ್ಕದಲ್ಲೇ ಇಟ್ಟುಬಿಡುತ್ತಾನೆ, ಅಗ ಕೆಂಡಾಮಂಡಲವಾದ ಅ ಗುರುಗಳು ತನ್ನ ಮಂತ್ರದಂಡವನ್ನು ಆ ಪೊಟ್ಟಣದ ಬಳಿ ಹಿಡಿಯುತ್ತಾರೆ. ಕೂಡಲೇ ಅ ಪೊಟ್ಟಣ ಅಲುಗಾಡುತ್ತ ಮಂತ್ರದಂಡಕ್ಕೆ ಹೆದರಿ ಓಡ ತೊಡಗುತ್ತದೆ. ಜನರಿಗೆ ಪರಮಾಶ್ಚರ್ಯ ಏಕೆಂದರೆ ಅವರಿಗೆ ಅ ಮಂತ್ರದಂಡದ ತುದಿ ಯಲ್ಲಿರುವ ಪ್ರಬಲ ಕಾಂತವಾಗಲಿ ಅ ಪೊಟ್ಟಣದಲ್ಲಿ ಅಡಗಿರುವ ಯಾವಾಗಲೂ ಕಾಂತಗಳಿಂದ ದೂರ ಓಡುವ ಸತುವಿನಂತಹ ಅಡ್ಡ ಕಾಂತೀಯ ವಸ್ತುವಾಗಲಿ ಕಾಣುವುದಿಲ್ಲ. ಕಂಡರೂ ಭಕ್ತಿ ಮತ್ತು ಭಯಗಳ ನೆರಳಿನಲ್ಲಿ ಬುದ್ದಿಯೆಂಬ ಗಾಡಿಯನ್ನು ಮಕಾಡೆ ಮಲಗಿಸಿಬಿಟ್ಟಿರುತ್ತಾರೆ. ಇನ್ನು ಕೆಲವು ಕಡೆ ಕಬ್ಬಿಣದ ಪೆಟ್ಟಿಗೆಯೊಂದನ್ನು ಜನರಿಗೆ ತೋರಿಸಿ ಅದನ್ನು ಎತ್ತುವಂತೆ ಹೇಳುತ್ತಾರೆ ಯಾವನೊ ಒಬ್ಬ ಬಂದು ಸಲೀಸಾಗಿ ಎತ್ತಿ ತೋರಿ ಸುತ್ತಾನೆ. ಆಗ ಅ ಮಾಂತ್ರಿಕ ಯಾರಿಗೂ ಅರ್ಥವಾಗದ ಭಾಷೆಯಲ್ಲಿ ಕರ್ಕಶವಾಗಿ ಏನನ್ನೋ ಒದರಿ ಒಂದಿಷ್ಟು ಕುಂಕುಮ ಬೆರೆಸಿದ ಅಕ್ಕಿಕಾಳುಗಳನ್ನು ಅ ಪೆಟ್ಟಿಗೆಯ ಮೇಲೆ ಎಸೆಯು ತ್ತಾನೆ, ನಂತರ ಅ ಪೆಟ್ಟಿಗೆಯನ್ನು ಎತ್ತಿ ಎಂದು ಹೇಳುತ್ತಾನೆ ಮೊದಲು ಎತ್ತಿದವನಿಂದ ಶುರುವಾಗಿ ಸರದಿಯಲ್ಲಿ ಇದ್ದಬದ್ದ ವರೆಲ್ಲ ಪಟ್ಟು ಹಾಕಿ ಎತ್ತಿದರೂ ಪೆಟ್ಟಿಗೆ ಅಲುಗಾಡುವುದಿಲ್ಲ, ಆಗ ನಮ್ಮ ಜನ ಅದೇ ಸರದಿಯಲ್ಲಿ ಬಂದು ಅ ಮಾಂತ್ರಿಕನ ಕಾಲಿಗೆರಗುತ್ತಾರೆ ಆದರೆ ಯಾರೊಬ್ಬರೂ ಅ ಕಬ್ಬಿಣದ ಪೆಟ್ಟಿಗೆಯ ಅಡಿಯಲ್ಲಿದ್ದ ಪ್ರಬಲ ವಿದ್ಯುದಾಸ್ಕಾಂತವನ್ನು,ಅದಕ್ಕೆ ಇದ್ಯುತ್ ಪೂರೈಸಲೆಂದೇ ದೂರದಲ್ಲಿ ಕುಳಿತಿದ್ದ ಶಿಷ್ಯೋತ್ತಮ ನೊಬ್ಬನನ್ನು ನೋಡೆ ಇರುವುದಿಲ್ಲ.
ಸ್ವತಂತ್ರವಾಗಿ ತೂಗುಬಿಟ್ಟ ಆಯಸ್ಕಾಂತಗಳು ಯಾವಾಗಲೂ ಉತ್ತರ-ದಕ್ಷಿಣ ದಿಕ್ಕುಗಳಿಗೆ ಮುಖ ಮಾಡಿ ನಿಂತುಬಿಡುತ್ತವೆ ಎನ್ನುವುದು ಎಲ್ಲರಿಗೂ ತಿಳಿದಿರುವ ಕಾಂತಗಳ ಗುಣಲಕ್ಷಣ. ಇದನ್ನಿಟ್ಟುಕೊಂಡು ನಮ್ಮ ಮಾಂತ್ರಿಕರು ಮಾಟ ಮಾಡಿದ ಜಾಗವನ್ನೋ ಮುಂದೆ ದೇವಾಲಯ ಕಟ್ಟಬೇಕಾದ ಜಾಗವನ್ನೊ ತಮ್ಮ ಕೈಲಿರುವ ದೇವಾಂಶ ಸಂಭೂತ ಗೊಂಬೆಯಿಂದ ತೋರಿಸಿಕೊಡುತ್ತಾರೆ. ಆದರೆ ಆ ವಿಶಿಷ್ಟ ಗೊಂಬೆಯ ಪಾದದÀ ತಳ ಕಬ್ಬಿಣದ್ದಾಗಿರುತ್ತದೆ. ಅದಕ್ಕೊಂದು ಆಯಸ್ಕಾಂತವನ್ನು ಅಂಟಿಸಿರುತ್ತಾರೆ.ತೊಂದರೆಯಿರುವ ಜಾಗಕ್ಕೆ ಬರುವ ಮಂತ್ರವಾದಿ ಗಳು ಅಲ್ಲಿನ ಪರಿಸರ ಜನಾಭಿಪ್ರಾಯವನ್ನು ಅರಿತು, ಆ ಅಯಸ್ಕಾಂತವನ್ನು ತಮಗೆ ಜೇಕಾದ ರೀತಿಯಲ್ಲಿ ಗೊಂಬೆಯ ಜಾಗಕ್ಕೆ ಅಂಟಿಸಿ, ಒಂದು ಭಯಾನಕ ಪೂಜೆಯನ್ನು ಮಾಡಿ ,ತೊಂದರೆಯ ಜಾಗವನ್ನು ತೋರಿಸಬೇಕೆಂದು ಕೇಳಿಕೊಳ್ಳುತ್ತಾರೆ. ದಾರದ ಮೂಲಕ ಅದನ್ನು ತೂಗಿಬಿಡುತ್ತಾರೆ, ಆ ಗೊಂಬೆ ಯಾವುದೋ ಒಂದು ದಿಕ್ಕಿಗೆ ನಿಂತುಬಿಡುತ್ತದೆ. ಅದು ತೋರಿಸಿದ ದಿಕ್ಕಿನ ಯಾವುದೋ ಒಂದು ಜಾಗ ತೋರಿಸಿ ಅಲ್ಲಿ ಒಂದು ಪೂಜೆಯಾಗಬೇಕು,ಧನಬೇಕು,ಧಾನ್ಯಬೇಕು ಕೊನೆಗೊಂದು ಬಲಿಯೂ ಬೇಕೆಂದು ಪಟ್ಟಿಯೊಂದನ್ನು ಭಕ್ತರ ಕೈಗಿಡುತ್ತಾರೆ. ನಿಮಗೆ ಅನುಮಾನವಿದ್ದಲ್ಲಿ ನೋಡಿಬಿಡಿ ಎಂದು ಗೊಂಬೆ ಯನ್ನು ಗಿರ್ರನೆ ಒಂದು ಸುತ್ತು ಸುತ್ತಿಸುತ್ತಾರೆ, ಅದೇನಾಶ್ಚಾರ್ಯ ಆ ಗೊಂಬೆ ಮತ್ತೆ ಅದೇ ದಿಕ್ಕನ್ನೆ ತೋರಿಸುತ್ತದೆ. ಆದರೆ ಇದು ಆಗುತ್ತಿರುವುದು ಮಾತ್ರ ಕಾಂತತ್ವದಿಂದ. ಗೊಂಬೆಯ ಅಡಿಯಲ್ಲಿರುವ ಕಾಂತ ನೀವು ಗಿರ್ರನೆ ತಿರುಗಿಸಿದರೂ ಪುರ್ರನೆ ಆಡಿಸಿದರೂ ಅದು ಕೊನೆಗೆ ನಿಲ್ಲುವುದು ಉತ್ತರ ದಕ್ಷಿಣ ದಿಕ್ಕಿಗೆ ಅಭಿಮುಖವಾಗಿ ನಮ್ಮ ಮಾಂತ್ರಿಕರುಎಷ್ಟು ಬುದ್ಧಿವಂತ ರೆಂದರೆ ಅಲ್ಲಿಯೇ ಪಕ್ಕದ ಮನೆಗೆ ಪೂಜೆಗೆ ಹೋದರೆ ಅ ಗೊಂಬೆಯ ಕಾಲಿನಲ್ಲಿರುವ ಕಾಂತವನ್ನು ಸ್ವಲ್ಪ ತಿರುಗಿಸಿ ಬಿಡುತ್ತಾರೆ. ಅದಕ್ಕನುಗುಣವಾಗಿ ಅ ಗೊಂಬೆ ತೋರಿಸುವ ದಿಕ್ಕು ಬದಲಾಗುತ್ತದೆ. ಅ ವಿಶೇಷ ಪೂಜೆಗಳನ್ನು ನೋಡಿದ ಭಕ್ತರ ಭsಕ್ತಿ ಇನ್ನೂ ಹೆಚ್ಚಾಗುತ್ತದೆ. ಮೊನ್ನೆ ಮೊನ್ನೆಯಷ್ಟೇ ಯಾರೊ ಹೇಳುತ್ತಿದ್ದರು, ಯಕ್ಷಿಣಿ ವಿದ್ಯೆ ಬಲ್ಲವರೊಬ್ಬರು ವೇದಿಕೆಯ ಮೇಲೆ ಸಾವಿರಾರು ಜನರ ಎದುರಿಗೇ ಬುಟ್ಟಿ ಯೊಂದರ ಮುಚ್ಚಳವನ್ನು ಹಗ್ಗದ ಸಹಾಯದಿಂದ ಮೇಲಕ್ಕೆತ್ತಿ ದರಂತೆ. ಒಳಗಿನಿಂದ ಹಾವೊಂದು ನಿಧಾನಕ್ಕೆ ತೆಲೆಯೆತ್ತಿ ನಿಲ್ಲ ತೊಡಗಿತಂತೆ. ಆ ಮುಚ್ಚಳ ಹೇಗೆಲ್ಲ ಆಡುತ್ತದೊ ಆ ಹಾವು ಹಾಗೇ ಆಡುತ್ತಿತ್ತಂತೆ.
ಕೊನೆಗೆ ಮುಚ್ಚಳವನ್ನು ಮೇಲಕ್ಕೆ ಎತ್ತಿದಾಗ ಆ ಹಾವು ನೆರವಾಗಿ ನಿಂತುಬಿಟ್ಟಿತಂತೆ. ಹತ್ತಿರ ಹೋಗಿ ನೋಡಿದರೆ ಅದು ಹಾವಲ್ಲ ಕಬ್ಬಿಣದ ಸರಪಳಿಯಾಗಿ ತ್ತಂತೆ. ಅಷ್ಟರಲ್ಲೆ ಅದನ್ನು ನೋಡಿದ ಇನ್ನೊಬ್ಬರು ಬಂದು ಕೆರೆಹಾವೊ,ಕಾಳಿಂಗವೊ ಹಾಗೆ ನಿಲ್ಲುತ್ತದೆ. ಅದರೆ ಕಬ್ಬಿಣದ ಸರಪಳಿ ಹಾಗೆ ಯಾವುದೇ ಆಧಾರವಿಲ್ಲದೆ ನಿಂತದ್ದನ್ನು ನೋಡಿರಲಿಲ್ಲ. ಅ ಮುಚ್ಚಳ ಮತ್ತು ಸರಪಳಿಯ ಮಧ್ಯೆ ದಾರವೇನೂ ಇರಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೆ ಎಂದು ಬಿಟ್ಟರು.ಹೆದರಿ ಆ ಯಕ್ಷಿಣಿದಾರನಿಗೆ ‘ಶಹಭಾಸ್’ ಹೇಳುವುದನ್ನೂ ಅವರು ಮರೆಯಲಿಲ್ಲ. ಆದರೆ ನಾವು ಇಲ್ಲಿ ವಿಜ್ಞಾನವನ್ನು ಮರೆಯಬಾರದು. ಗಮನಿಸಿ ಅ ಕಬ್ಬಿಣದ ಸರಪಳಿ ಕಬ್ಬಿಣದ ಸರಪಳಿ ಕಬ್ಬಿಣದಿಂದ ಮಾಡಲ್ಪಟ್ಟಿತ್ತು; ಅಂದರೆ ಭಾರವಿತ್ತು, ಅದು ಬುಟ್ಟಿಯ ಮುಚ್ಚಳದೊಂದಿಗೆ ಓಡಾಡುತ್ತಿತ್ತು. ಆ ಬುಟ್ಟಿಯ ಮುಚ್ಚಳದಲ್ಲೊಂದು ಪ್ರಬ¯ ಆಯಸ್ಕಾಂತ ಮತ್ತು ಅದರ ಆಕರ್ಷಣೆಗೊಳಪಟ್ಟ ಅ ಕಬ್ಬಿಣದ ಸರಪಳಿ ಮುಚ್ಚಳದೊಂದಿಗೆ ಮೇಲೇರುತ್ತಿತ್ತು. ಅದು ಭಾರವಾದ ದ್ದರಿಂದ ಸಂಪೂರ್ಣ ಸರಪಳಿ ಅ ಆಯಸ್ಕಾಂತಕ್ಕೆ ಅಂಟಿ ಕೊಂಡಿರುವುದಿಲ್ಲ. ಹೀಗಾಗಿ ಆ ಸರಪಳಿಯ ತುದಿ ಸುಲಭ ವಾಗಿ ಆಕರ್ಷಿತಗೊಂಡು ಮೇಲಕ್ಕೇರುತ್ತಾ ಹೋಗುತ್ತಿರುತ್ತದೆ. ಸರಪಳಿಯ ಭಾರ ಆ ತುದಿ ಮುಚ್ಚಳಕ್ಕೆ ಅಂಟಿಕೊಳ್ಳದಂತೆ ತಡೆಯುತ್ತದೆ,ಆದರೂ ಛಲ ಬಿಡದ ಅ ತುದಿ ಕಾಂತವನ್ನು ಸೇರುವ ತವಕದಲ್ಲಿಯೇ ಇರುತ್ತದೆ, ಅದಕ್ಕೆ ಸಮನಾಗಿ ಮುಚ್ಚ ಳವನ್ನು ನಿಧಾನಕ್ಕೆ ಮೇಲೇರಿಸುತ್ತಾ ಹೋದರೆ ಸರಪಳಿ ನೇರವಾಗಿ ಎದ್ದು ನಿಲ್ಲುತ್ತದೆ. ಬುಟ್ಟಿಯ ಮುಚ್ಚಳ ಸ್ವಲ್ಪ ಅಲುಗಾಡಿದರೆ ಸರಪಳಿಯ ತುದಿಯೂ ಅಲುಗಾಡುತ್ತದೆ, ದೂರದಲ್ಲಿದ್ದವರಿಗೆ ಅದು ಹಾವಿನಂತೆಯೇ ಕಾಣುತ್ತದೆ. ಅದ್ಭುತ ಎನಿಸುತ್ತದೆ. ಈ ತಂತ್ರ ಇಂದು ನಿನ್ನೆಯದಲ್ಲ. 17ನೇ ಶತಮಾನದಲ್ಲೆ ಈ ತಂತ್ರವನ್ನು ಬಳಸಲಾಗುತ್ತಿತ್ತು. ಮಂಕುಬೂದಿ ಎರಚಲಿಕ್ಕೆ.
ವಿಜ್ಞಾನವೆಂಬ ದಟ್ಟಡವಿಯಲ್ಲಿ ಕಾಂತತ್ವವೆಂಬುದು ಒಂದು ಮರ. ಅಗತ್ಯತೆಯೆಂಬ ಮಾನವನ ಹಸಿವಿಗೆ ಅದು ತರತರದ ಹಣ್ಣುಗಳನ್ನು ನೀಡುತ್ತಿದೆ. ಆದರೆ ಕೆಲವು ಡಾಂಭಿಕರು ಮಾಂತ್ರಿ ಕರು ಸೇರಿ ಆ ಮರದ ಕೊಂಬೆಯನ್ನೆ ಕಡಿದು ಮೌಢ್ಯವೆಂಬ ಕೊಡಲಿಗೆ ಕಾವನ್ನಾಗಿಸಿಕೊಂಡು,ವಿಜ್ಞಾನದ ಅಡವಿಗೆ ಮನು ಕುಲದ ನಾಡಿಗೆ ತಿಲಾಂಜಲಿ ಇಡ ಹೊರಟಿದ್ದಾರೆ. ಸರಿಯಾಗಿ ನೀರೆರೆದು ವಿಜ್ಞಾನವನ್ನು ಪೋಷಿಸೋಣ ದಟ್ಟವಾಗಿಸೋಣ ಆ ಅಡವಿಯನ್ನು ಕಡಿಯುವುದು ಹಾಗಿರಲಿ ಹತ್ತಿರ ಕಾಲಿಡಲೂ ಹೆದರಬೇಕು ಆ ಮೂಢರು.
*****