ಮೈ ಕ್ರೇಝಿ ಲೈಫ್ ಸ್ಟಿಲ್ ಗೋಸ್ ಆನ್..!!: ಸಚಿನ್ ಎಂ. ಆರ್.


ಫ್ಲಾಶ್ ಬ್ಯಾಕ್ ೧ (ಬ್ಲಾಕ್ ಅಂಡ್ ವೈಟ್ ಶೇಡ್): 
ಅದು ೨೦೦೫ರ ಇಸವಿ. ಗುಳಿ ಬಿದ್ದ ಕಣ್ಣುಗಳ ಸಾಧಾರಣ ಎತ್ತರದ ತೆಳ್ಳನೆಯ ಬಿಳಿ ಹುಡುಗ ಶಾಲಾ ಗೇಟಿಂದ ಹೊರಬಿದ್ದ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಚೀಟಿ ಕೈಲಿತ್ತು. ೮೪% ಮಾರ್ಕ್‌ಸ್ ಬಂದಿತ್ತು. ಒಂದು ಪರ್ಸಂಟ್ ಇಂದ ಡಿಸ್ಟಿಂಕ್ಷನ್ ಮಿಸ್ಸು. ಛೇ.. ಹಳಹಳಿಸಿದ ಆತ..! 
ಕಾಲೇಜು ಮೆಟ್ಟಿಲು ಹತ್ತುವ ಹೊತ್ತು. ಅಪ್ಪ ಕೇಳಿದ್ರು ನಿನ್ನ ಮುಂದಿನ ಗುರಿ ಏನೊ?
ಅವನುತ್ತರ ಗೊತ್ತಿಲ್ಲಪ್ಪ..,  ಆದ್ರೆ ನಾನು ಸೈಕಿಯಾಟಿಸ್ಟ್ ಆಗ್ತೀನಿ, ಎಲ್ರ ಬುಲ್ಡೆ ಒಳಗಿರೊ ಮೆದುಳಿನ ಬಗ್ಗೆ ತಿಳಿಯೋಣ ಅಂತ ಅಂದ್ಕೊಡಿದೀನಿ.
ಥೂ, ಮಳ್ ಮಳ್ರ ಥರಾ ಏನೇನೋ ಹೇಳಡ.. ಸರಿಯಾಗಿ ಡಿಸಿಜನ್ ತಗೋ ಅಪ್ಪನ ಪ್ರತ್ಯುತ್ತರ.
ನಂಗೆ ಗೊತ್ತಾಗ್ತಿಲ್ಲ ನೀವ್ ಏನ್ ಹೇಳ್ತೀರೋ ನಾ ಹಂಗ್ ಮಾಡ್ತೆ ಅಂದ ಆ ಹುಡುಗ.
ಅಪ್ಪ ಸಿನ್ಸಿಯರ್ ಆಗಿ ನಾಕಾರು ಜನರತ್ರ ವಿಚಾರಿಸಿ ಕೊನೆಗೂ ಡಿಪ್ಲೊಮಾ ಇಜ್ ಬೆಟರ್ ಅನ್ನೋ ನಿರ್ಧಾರಕ್ಕೆ ಬಂದ್ರು. ಸರಿ ಶುರುವಾಯ್ತು ಸೀಟ್ ಬೇಟೆ. ಪ್ರೋಸ್ಪೆಕ್ಟರ್ಸ್ ನೋಡಿ ತಲೆ ತಿರುಗೋಯ್ತು. ಡಿಪ್ಲೋಮಾದಲ್ಲೂ ನೂರಾರು ಕೋರ್ಸುಗಳು. ಯಾವ ಡಿಪ್ಲೊಮಾ ಮಾಡ್ತಿಯೋ? ಗೊತ್ತಿಲ್ಲ, ನೀವ್ ಹೇಳಿ ನಾ ಅದನ್ನೇ ಮಾಡ್ತೆ. ಶಿರಸಿಲಿ ಇಲೆಕ್ತ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್ ಮಾಡ್ತೀಯ? ನಿಂಗೆ ಗವರ್ನ್‌ಮೆಂಟ್ ಇಂದ ಮಾರ್ಕ್ಸ್ ಮೇಲೆ ಹಣದ ರಿಯಾಯತಿ ಸಿಗತ್ತೆ. ಹುನ್ ಅದ್ನೇ ಮಾಡ್ತೆ ಹಾರಿಕೆಯ ಉತ್ತರ ಕೊಟ್ಟು ಕ್ರಿಕೇಟ್ ಆಡೋಕೆ ಹೋದ.

ಫ್ಲಾಶ್ ಬ್ಯಾಕ್ ೨ (ಈಸ್ಟ್ ಮನ್ ಕಲರ್ ಪಾರ್ಟ್ ೧, ಹಾರ್ಟ್ said): 
೨೦೦೬ ಆಗಸ್ಟ್. ಥೂ, ಏನಪ್ಪಾ ಇದು ಈ ಮ್ಯಾತ್ಸು, ಸೈನ್ಸು, ಇಲೆಕ್ಟ್ರಿಕಲ್ ಸಬ್ಜೆಕ್ಟು ಯಾವುದೂ ಅರ್ಥವಾಗ್ತಾನೆ ಇಲ್ಲ. ನಮ್ ಕ್ಲಾಸಲ್ಲಿ ಎಲ್ರೂ ಪಿಯುಸಿ ಮುಗಿಸಿ ಬಂದವರೇ ಇದಾರೆ. ನಾನೊಬ್ನೇ ಕಿಡ್ ಆಗೋದ್ನಲ್ಲಾ ಇಲ್ಲಿ. ಯಾರತ್ರ ಹೇಗೆ ಕೇಳೋದು? ಅಯ್ಯೋ ಏನಿದು ಇಷ್ಟು ಕಷ್ಟ..! ವರ್ಷಕ್ಕೆ ೧೪ ಸಬ್ಜೆಕ್ಟು ಓದ್ಬೇಕು, ಆ ಡ್ರಾಯಿಂಗು, ಆ ಪ್ರಾಕ್ಟಿಕಲ್ಲು ಯಪ್ಪಾ.. ನೆನ್ನೆ ಅಷ್ಟೆ ಕರೆಂಟ್ ಶಾಕ್ ಬೇರೆ ಹೊಡೆಸ್ಕೊಂಡೆ ಪ್ರಾಕ್ಟಿಕಲ್ ಕ್ಲಾಸ್ ಅಲ್ಲಿ..! ಯಾವಾಗ ಮುಗಿಯತ್ತೋ ಇದು..?? 

(ಈಸ್ಟ್ ಮನ್ ಕಲರ್ ಪಾರ್ಟ್ ೨, ಹಾರ್ಟ್ said): 

೨೦೦೮ ಮೇ, ಥಾಂಕ್ಸ್ ಗಾಡ್, ಇಂಥ ಡಬ್ಬಾ ಬ್ರಾಂಚಲ್ಲೂ ಒಂದ್ ಸಬ್ಜೆಕ್ಟ್ ಕೂಡಾ ಬ್ಯಾಕ್ ಇಟ್ಕಳ್ದೇ ಇರೋ ಹಾಗೆ ಪಾಸ್ ಮಾಡ್ಸಿದಿಯ. ಲವ್ ಯೂ ಗಾಡ್, ಆದ್ರೂ ಈ ಇಲೆಕ್ಟ್ರಿಕಲ್ ಸಬ್ಜೆಕ್ಟ್ ಮಜಾ ಬರ್‍ತಿಲ್ಲ. ಕಣ್ಣಿಗೆ ಕಾಣದ ಕರೆಂಟ್‌ನ ಅಸ್ಯೂಮ್ ಮಾಡ್ಕಂಡು ನಾ ಎಷ್ಟೂ ಅಂತ ಸ್ಕೆಚ್ ಹಾಕಲಿ? ಸಾಲದ್ದಕ್ಕೆ ಆ ಮ್ಯಾತ್ಸ್ ಬೇರೆ ಥೀಟಾ, ಬೀಟಾ, ಇಂಟಿಗ್ರೇಶನ್ನು, ಡಿಫರೆಂನ್ಸಿಯೇಷನ್ನು ಅಂದ್ಕೊಂಡು.. ಸಾಕಾಗೋಗಿದೆ ಈ ಓದು ಕಾಲೇಜು ಎಲ್ಲಾ..!!

ಫ್ಲಾಶ್ ಬ್ಯಾಕ್ ೩ (ಇಂಪ್ರೂಡ್ ವರ್ಷನ್ ಈಸ್ಟ್ ಮನ್): 
ಕಂಗ್ರಾಟ್ಸ್ ಮಗಾ ಕ್ಯಾಂಪಸ್ ಲಿ ಸೆಲೆಕ್ಟ್ ಆದ್ಯಂತೆ, ಅಂತೂ ಡಿಪ್ಲೋಮಾ ಮೂರು ವರ್ಷನೂ ಮುಗಿತು. ಕೆಲಸಕ್ಕೆ ಹೋಗಂಗೆ ಆದಿ. ಸೂಪರ್ ಲೈಫ್ ಸೆಟಲ್, ನಮ್ಮದು ಇನ್ನೂ ಎರಡು ವರ್ಷ ಓದ್ಬೇಕು. ಆಮೇಲೆ ಕೆಲಸಕ್ಕೆ ಅಲಿಬೇಕು. ಡಿಗ್ರಿ ಜಾಯಿನ್ ಆಗಿ ತಪ್ ಮಾಡಿದೆ ಅನ್ನಿಸ್ತಿದೆ. ಹೀಗಂದವ ಡಿಗ್ರಿ ಎರಡನೇ ವರ್ಷ ಓದುತ್ತಿದ್ದ ಹೈಸ್ಕೂಲು ಸ್ನೇಹಿತ. ನಿನ್ ಮಕಾ, ಕಳೆದ ಮೂರು ವರ್ಷದಲ್ಲಿ ನಮ್ಮದು ಎಲ್ಲೆಲ್ಲಿ ಹೆಂಗೆಂಗೆ ಹರ್‍ದಿತ್ತು ಅಂತ ಇವಂಗೇನ್ ಗೊತ್ತು? ಅಳಕಂಡ್ ಹೇಳ್ತು ನನ್ ಮನಸ್ಸು. ಪಾಪ ನನ್ನ ಮನಸ್ಸಿನ ದುಃಖಕ್ಕೂ ಕಾರಣ ಇತ್ತೂ ಅನ್ನಿ. ಮೊದಲೇ ಅರ್ಥವಾಗದ ಸಬ್ಜೆಕ್ಟು ನಾನ್ ಓದ್ತಾ ಇದ್ದದ್ದು.! ಆದ್ರೂ ಎಲ್ಲಾ ಫಸ್ಟ್ ಅಟೆಂಪ್ಟ್ ಗೇ ಪಾಸು ಮಾಡೋ ಹುಚ್ಚು ಛಲ. ಬರೀ ಓದೋದೆ ಜೇವನ ಅಂದಂಗಾಗಿತ್ತು. ಸಾಲದ್ದಕ್ಕೆ ನಮ್ ಇಲೆಕ್ಟ್ರಿಕಲ್ ಬ್ರಾಂಚಲ್ಲಿ ಹುಡುಗಿಯರೂ ಇಲ್ಲ. ಎಲ್ರೂ ಹುಡುಗ್ರೇ. ಪಕ್ಕದ ಇಲೆಕ್ಟ್ರಾನಿಕ್ಸ್ ಬ್ರಾಂಚಲ್ಲಿ ಎಂಟತ್ತು ಹುಡುಗಿಯರು ಬಿಟ್ರೆ ಎದುರಿನ ಕಾಮರ್ಸ್ ಕಾಲೇಜ್ ಹುಡುಗಿಯರನ್ನೇ ನಾವು ಲೈನ್ ಹೊಡಿಬೇಕಿತ್ತು. ಅದರಲ್ಲೂ ಇಲೆಕ್ಟ್ರಾನಿಕ್ಸ್ ಬ್ರಾಂಚ್ ಹುಡುಗ್ರ ಜೊತೆ ಯಾವಾಗ್ಲೂ ಕಿರಿಕ್ಕು.! ಪಾಪ ಆ ಹುಡುಗರದ್ದೂ ತಪ್ಪಿಲ್ಲ. ಅವರ ೪೫ ಜನರ ಕ್ಲಾಸಿನಲ್ಲಿ ಇದ್ದದ್ದೇ ಎಂಟತ್ತು ಹುಡುಗಿಯರು. ಅವರ ಮೇಲೆ ನಾವ್ ಕಣ್ಣಾಕಿದ್ರೆ ಅವ್ರು ಉರ್ಕೊಳೋದು ಸಹಜವೇ? ಅಣ್ಣಾ ನಮಗೇ ಇಲ್ಲಿ ಶಾರ್ಟೆಜಿದೆ, ನೀವ್ ಬೇರೆ ಇಲ್ಲಿ ಬರ್‍ಬೇಡ್ರಣ..! ಅಂತ ಹೇಳಿದ್ಮೇಲೇನೆ ನಾವು ಅವರಿಗೆ ಬಿಟ್ಟುಕೊಟ್ಟಿದ್ದು. ಅದೇನೇ ಇರ್‍ಲಿ ಅಂತೀಂತ ಘನಗೋರ ಪರಿಸ್ಥಿತೀಲಿ ಕಾಲೇಜು ಮುಗಿಸಿ ಹೊರಬಿದ್ದೆ. (ಹುಡುಗ ಅಲ್ಲಿಗೆ ದೊಡ್ಡವನಾದ)
ಮುಂದೆ ಇಂಜಿನಿಯರಿಂಗ್ ಮಾಡೋ, ಸಾಲ ಮಾಡಿ ಆದ್ರೂ ಓದಿಸ್ತೀನಿ ಅಮ್ಮನ ಮಾತು. ಇಲ್ಲ ಓದಲ್ಲ, ಕೆಲಸಕ್ಕೆ ಹೋಗಿ ಕರೆಸ್ಪಾಂಡೆನ್ಸ್ ಅಲ್ಲಿ ಓದ್ತೀನಿ ಧಿಕ್ಕರಿಸಿ ಕೆಲಸಕ್ಕೆ ಹೊಂಟ ಧೀರ ಮಗ ನಾನೇ..!!

ಫ್ಲಾಶ್ ಬ್ಯಾಕ್ ೪( ಕಲರ್ ವರ್ಷನ್): 

ಸೀನ್೧. ೨೦೦೮ ಸೆಪ್ಟೆಂಬರ್
ಪೂಣಾದಲ್ಲಿ ಜಾಬು. ನಾಲ್ಕುಜನರ ಜೊತೆ ಹೊರಟೆ ಪೂಣೆಗೆ. ಮೊದಲೇ ಸಿ.ಎನ್.ಸಿ ಮಶೀನಲ್ಲಿ ಕೆಲಸ. ಪಕ್ಕಾ ಮೆಕ್ಯಾನಿಕಲ್ ಡಿಪಾರ್ಟ್‌ಮೆಂಟಿನವರ ಕೆಲಸ. ತಲೆ ಬುಡ ಅರ್ಥ ಆಗಿಲ್ಲ. ಥೋ ಇಲ್ಲಿ ಸಾವಾಸಲ್ಲ. ಮರಾಠಿಲಿ ಏನ್ ಬೈತಾರೋ ಹೊಗಳ್ತಾರೋ ಗೊತ್ತಿಲ್ಲ. ಮಗಾ ಈ ಊರು ಸರಿ ಬರ್‍ತಿಲ್ಲ. ನಡಿ ಬೆಂಗಳೂರಿಗೆ ಹೋಗುವ.. ಅಲ್ಲಿ ಜಾಬ್ ಟ್ರೈ ಮಾಡುವ  ಅಂತ ಹೇಳಿ ಪೂಣಾ ಗೆ ಬೈ ಬೈ..

ಸೀನ್೨.  ೨೦೦೮ ಡಿಸೆಂಬರ್
ಹುಬ್ಬಳ್ಳಿಯಲ್ಲಿ ಮಣ್ಣು ಹೋರೋದು ನಿರಂತರವಾಗಿ ನಡೀತು ಮೂರು ವರ್ಷ. ಹುಬ್ಬಳ್ಳೀಲಿ ಜಾಬ್ ಸಿಗ್ತು ಸ್ನೇಹಿತನ ರೆಕಮೆಂಡಿಂದ. ಏನ್ ಕೆಲಸ ನಿಂದು, ಆ ಕಂಪನೀಲಿ? ಇಂಜಿನಿಯರ್ ಮಾ, ಫುಲ್ ಬಿಂದಾಸ್ ಹಿಂಗೆ ಹೇಳ್ಕೊಂಡ್ ತಿರುಗ್ತಿದ್ದೆ ಹೊರಗಿನ ಸ್ನೇಹಿತರತ್ರ.. ಮತ್ತೆ ಹೆಂಗೆ ಹೇಳೋದು ಅಲ್ಲಿ ಬೆಳಗಿಂದ ರಾತ್ರಿ ತನಕ ಹಮಾಲಿ ಮಾಡ್ತಿದ್ದೇ ಅಂತ..!! ಸರ್ ಮೂರು ವರ್ಷ ಆಯ್ತು ಅಪಾಯಿಂಟ್‌ಮೆಂಟ್ ಕೊಡಿ, ಪರ್ಮನೆಂಟ್ ಮಾಡ್ಕಳಿ..! ಮುಂದಿನ ವರ್ಷ ಖಂಡಿತಾ ಮಾಡ್ತೀವಿ, ಪ್ರಪೋಸಲ್ ಇದೆ, ನಿಮ್ ಬ್ಯಾಚ್ ಅವರಿಗೆಲ್ಲಾ ಪ್ರಮೋಶನ್ ಇದೆ. ನಮ್ಮ ಮೇಲಿನವನ ಉತ್ತರ. ಗಾಯ್ಸ್, ನಾವೆಲ್ಲಾ ಮಾಸ್ ರಿಸೈನ್ ಮಾಡುವ. ಅಪಾಯಿಂಟ್ಮೆಂಟ್ ಮಾಡ್ಕೋತಿವಿ ಅಂತ ಬರಿ ಸುಳ್ಳು ಹೇಳಿ ಆಯಿಂಟ್‌ಮೆಂಟ್ ಹಚ್ತಾರೆ. ಎಲ್ರೂ ಬೇರೆ ಬೇರೆ ನೆಲೆನ ಹುಡುಕಿಕೊಳ್ಳುವ ಹೀಗಂತ ಹೇಳಿ ರಿಸೈನ್ ಮಾಡಿ ಮುಂದಿನ ಪಯಣ ರಾಜಧಾನಿಯತ್ತ ಮುಂದುವರೆಸಿದೆ. ಅಲ್ಲಿನ ಬಹಳಷ್ಟು ನಮ್ಮ ಬ್ಯಾಚ್ ಮೇಟ್ಸ್ ಕೆಲಸ ಬಿಟ್ರು, ಸಿಇಓ ಮನೆಗೋದ, ಮ್ಯಾನೆಜರ್ ಡಿಸ್‌ಮಿಸ್ ಆದ. ಆದ್ರೆ ಇದ್ಯಾವುದೂ ನಮಗೀಗ ಸಂಬಂಧಿಸಿದ್ದಲ್ಲ.

ಸೀನ್೩. ೨೦೧೧ ಜನವರಿ
ಬೆಂಗಳೂರಿನ ಕೆಲಸ ನಿಜಕ್ಕೂ ಆರಾಮ. ಇಟಲಿ ಬೇಸ್ ಕಂಪನಿ. ಬೆಂಗಳೂರು ಯೂನಿಟ್‌ನಲ್ಲಿ ಕೆಲಸ. ಹುಬ್ಬಳ್ಳಿ ತರ ಪ್ರೆಷರ್ ಇಲ್ಲ. ಎಲ್ಲಾ ಸೂಪರ್. ತಿಂಗಳಿಗೆ ಮೂರು ಬಾರಿ ಆಂಧ್ರ ವಿಸಿಟ್ಟು. ಗೊತ್ತಿಲ್ದೇ ಇರೋ ಊರು, ಗೊತ್ತಿಲ್ದೇ ಇರೋ ಭಾಷೆ, ಹೊಸ ಜನರ ಜೊತೆ ಏಕಾಂಗಿಯಾಗಿ ವ್ಯವಹರಿಸಬೇಕಾದ ಅನಿವಾರ್ಯತೆ. ಚಾಲೆಂಜಿಂಗ್ ಜಾಬ್. ಐ ಲವಿಂಗ್ ಇಟ್ !! ದುರಾದೃಷ್ಟ ಬೆನ್ನತ್ತಿತ್ತು. ಆ ಕಂಪನಿ ಧಿಡೀರನೆ ಮುಚ್ಚೋಯ್ತು. ಇಲ್ಲಿನ ಕೆಲವು ಕೆಲಸಗಾರರು ಶಿಫಾರಸ್ಸಿನ ಮೇಲೆ ಇಟಲಿಗೆ ಹೋಗಿ ಅಲ್ಲಿ ಸೆಟಲ್ ಆದ್ರು. ನಾನೂ ಅಳಕ್ ಬುಳಕ್ ಅಂತೆಲ್ಲಾ ಟ್ರೈ ಮಾಡಿದೆ, ಏನು ನಡಿಲಿಲ್ಲ. ಎರಡು ತಿಂಗಳ ಸಂಬಳ ಕೊಟ್ಟು ಬೀದಿಗೆ ಬಿಟ್ರು. ಅಲ್ಲಿಗೆ ಫ್ಯಾಕ್ಟರಿ ಜಾಬ್ ಅಂತ್ಯ.
ನಿರುದ್ಯೋಗಿಯಾಗಿ ಎರಡು ತಿಂಗಳು ಖಾಲಿ ಪೀಲಿ. ಹಾಳಾದ್ದು ರಿಸೇಷನ್ ಈಗ್ಲೇ ಬರ್‍ಬೇಕಾ? ಸಿಕ್ಕಿದ್ ಜಾಬ್‌ಗೆ ಸಿವಾ ಅಂದ್ಬಿಡನ ಅಂತ ಸರ್ಚಿಂಗ್ ಸರ್ಚಿಂಗ್..

ಸೀನ್೪. ೨೦೧೨ ಏಪ್ರಿಲ್
ಯುರೇಕಾ, ಯುರೇಕಾ ಹುರ್ರೇ.. ಜಾಬ್ ಸಿಕ್ತು ಜಾಬ್ ಸಿಕ್ತು. ಸಾಫ್ಟ್‌ವೇರ್ ಕಂಪನಿಲಿ ಜಾಬ್ ಆಯ್ತು. ಫುಲ್ ಕಂಪ್ಯೂಟರ್ ವರ್ಕ್. ಎಗರಾಡಿಬಿಟ್ಟಿದ್ದೆ. ಆದ್ರೆ ಫೀಲ್ಡ್ ಬೇರೆ ಇದ್ದಿದ್ರಿಂದ ಎಕ್ಸಪೀರಿಯನ್ಸ್ ಕೌಂಟ್ ಆಗಿಲ್ಲ. ಬೇರೆ ಜಾಬ್ ಸಿಗಲಿಲ್ಲ. ಕಡಿಮೆ ಸ್ಯಾಲರಿಗೆ ಕೆಲಸ. ಆದ್ರೂ ಕಂಪನಿ ತುಂಬಾ ಹುಡುಗಿಯರು. ಮರುಭೂಮಿ ಲೈಫ್‌ಲಿ ಓಯಾಸಿಸ್ ಸಿಕ್ಕಿದಂಗಾಗಿತ್ತು. ಅದ್ಕೇ ಮುಚ್ಕೋಂಡ್ ಅಲ್ಲೇ ಇದ್ದೆ. ಜಾಸ್ತಿ ಹಣ ಅಭ್ಯಾಸ ಆಗಿ ಕಡಿಮೆ ಹಣ ತಗೊಳ್ಳೋಕೆ ಮನಸ್ಸು ಒಪ್ಪಲ್ಲ. ಇದಕ್ಕೆ ಬೇರೆ ದಾರಿ ಏನಾದ್ರೂ ಬೇಕಲ್ಲ..!! ಥಿಂಕಿಂಗ್ ಥಿಂಕಿಂಗ್ ಥಿಂಕಿಂಗ್..!! 

೨೦೧೨ ಡಿಸೆಂಬರ್ 
ಫ್ರೆಂಡೊಬ್ಬ ಸಿಕ್ಕಿದ ಆತ ಗ್ರಾಫಿಕ್ ಡಿಸೈನರ್ ಮಗಾ ನಮ್ ಆಫೀಸಿಗೆ ಆರ್ಟಿಕಲ್ ಬರೆದು ಕೊಡ್ತೀಯಾ? ನಮಗೆ ಅಗತ್ಯ ಇದೆ. ಸುಮ್ನೇ ಈ ಫೇಸ್ ಬುಕ್ಕಲ್ಲಿ ಯಾಕೆ ಏನೇನೋ ಗೀಚ್ಕೊಂಡು ಕುಂತಿರ್ತಿಯಾ? ರೊಟ್ಟಿ ಹಳಸಿತ್ತು, ನಾಯಿ ಹಸಿದಿತ್ತು. ಓಕೆ ಮಗಾ ಪಾರ್ಟ್‌ಟೈಮ್ ಜಾಬ್ ಇದ್ರೆ ಹೇಳು ಬರ್ತಿನಿ..! ಮಾತಾಡಿದೆ ಕಣೋ, ಬಾಸ್ ಬಾ ಅಂದ್ರು ಜಾಯಿನ್ ಆಗು ಈ ಬಾರಿ ನಾನು ರೊಟ್ಟಿಯಾಗಿದ್ದೆ.!!
ಬಾಸ್ ರೀ ನಮಗೆ ಫುಲ್ ಟೈಮ್ ಗೆ ಬೇಕು ನೀವು ನಿಮ್ಮ ಆಫೀಸ್ ಸ್ಯಾಲರಿ ನಮ್ಮ ಪಾರ್ಟ್ ಟೈಮ್ ಸ್ಯಾಲರಿ ಎರಡೂ ಸೇರಿಸಿದ್ರೆ ಬರೋ ಅಮೌಂಟ್‌ಗಿಂತ ಜಾಸ್ತಿ ಕೊಡ್ತೀವಿ. ಬರ್‍ತೀರಾ? ನಾನು ಖುಷಿಯಿಂದ ವ್ಹಾವ್ ಬರ್‍ತೀನಿ ಸರ್. ಯಾವಾಗಿಂದ ಜಾಯಿನ್ ಆಗ್ಲೀ? ಈಗಾಗ್ಲೆ ಇಲ್ಲಿ ಪಾರ್ಟ್ ಟೈಮ್ ಬರೋಕೆ ಶುರು ಮಾಡಿ ೬ ಮಂತ್ ಆಯ್ತು.!
ಈ ರೀತಿ ಸಾಫ್ಟ್‌ವೇರ್ ಕಂಪನಿಗೆ ಬೈ ಬೈ ಹೇಳಿದೆ. ನಾನು ಬಿಟ್ಟ ಕೆಲವೇ ತಿಂಗಳಲ್ಲಿ ಆ ಕಂಪನಿಯ ಯೂನಿಟ್ ಕೂಡಾ ಮುಚ್ಚಿದ್ದು ಕಾಕತಾಳೀಯ

೨೦೧೩ ಮೇ
ಪತ್ರಿಕಾ ರಂಗದಲ್ಲಿ ನಾನು. ತಲೆ ಬುಡ ಗೊತ್ತಿಲ್ಲ, ಬರೀ ಕಾಮನ್ ಸೆನ್ಸ್ ಮಾತ್ರದಿಂದಲೇ ನೇತಾಡುತ್ತಿರೋನು. ಓದೋ ಹವ್ಯಾಸ ಬೆಳೆಸಿಕೊಳ್ಳಬೇಕು. ಅದಕ್ಕೆ ಬುಕ್ ಹಿಡಿದೆ. ಅದರ ಹೆಸರು ಫೇಸ್‌ಬುಕ್..! ತರ್ಲೆ ಮಾಡೋದ್ರಲ್ಲಿ ಮಜಾ ಸಿಕ್ತಿತ್ತು. ಮಾಡ್ತಾ ಹೋದೆ. ಅನೇಕರ ಸ್ನೇಹ ಸಿಕ್ತು, ಪರಿಚಯವಾಯ್ತು. ಆಲ್ ಇಜ್ ವೆಲ್ ಅನ್ನುವಷ್ಟರಲ್ಲಿ, ನಮ್ ಬಾಸ್ ಗೆ ಏನಾತೋ ಏನೋ ಜವಾಬ್ದಾರಿ ಕಳಕೊಂಡ್ರು, ಕೆಲಸ ಮಾಡೋದೆ ಬಿಟ್ರು. ಹೆಣ್ಣಿನ ಹುಚ್ಚು ಹೆಚ್ಚಾಗಿ ಅದರ ಬಿಸಿ ನಮಗೂ ತಾಕಹತ್ತಿತು. ದಿನಾ ಕಿರಿಕ್ಕು, ಗಲಾಟೆ, ಸ್ಯಾಲರಿ ಇಲ್ಲದೇ ೨ ತಿಂಗಳಾನುಗಟ್ಟಲೆ ಕಳೆದೆ. ಬರೀ ಸುಳ್ಳು, ವಂಚನೆಗಳಿಂದಲೇ ಬಾಸ್ ಬದುಕುತಿದ್ದ. ಅಲ್ಲಿಂದ ಹೇಗಾದ್ರೂ ಹೊರಹೋಗಬೇಕು. ಯಾವುದಾದರೂ ಒಳ್ಳೇ ಪೇಪರ್ ಅಥವಾ ಟೀವಿಗೆ ಸೇರಿಕೊಳ್ಳಬೇಕು ಅನ್ನೋದು ನನ್ನಾಸೆಯಾಗಿತ್ತು. ಬಿಕಾಸ್ ಮೀಡಿಯಾ ಇಸ್ ಮೈ ಪ್ಯಾಶನ್..!! ಅದರೆ ಆದದ್ದೇ ಬೇರೆ..! 

ನನಗೆ ಆ ಕಂಪನಿಯಿಂದ ಗುರುಗಳು ಸಿಕ್ಕಿದ್ರು, ಸ್ನೇಹಿತ ಸಿಕ್ಕಿದ. ಒಮ್ಮೆ ಮಿತಿಮೀರಿ ಗಲಾಟೆ ಆಯ್ತು. ನಂಗೆ ಕಂಪನಿಯಿಂದ ಗೇಟ್ ಪಾಸ್ ಕೂಡ ಸಿಕ್ತು. ಮತ್ತೆ ನಿರುದ್ಯೋಗಿ. ನಾ ಬದಲಾಯಿಸಿದ ಐದನೇ ವೃತ್ತಿಯೂ ಈಗಿಲ್ಲ. ಇದಕ್ಕೂ ಮೊದಲು ಬುಕ್ ಅಂಗಡಿಲಿ ಕೆಲಸಗಾರನಾಗಿ, ಮೆಕ್ಯಾನಿಕಲ್ ವರ್ಕ್ ಮಾಡಿ, ಮೋಟಾರು ರಿಪೇರಿ ಕಲಿತು, ಜೆನರೇಟರ್ ಟೆಸ್ಟಿಂಗ್‌ಮಾಡಿ, ಅಲ್ಪ ಸ್ವಲ್ಪ ಮೊಬೈಲ್ ರಿಪೇರಿಯೂ ಕಲಿತು, ಸಾಫ್ಟ್‌ವೇರ್ ನಲ್ಲಿ ಸಾಫ್ಟ್ ಆಗಿ ಪೇಪರ್‌ನಲ್ಲಿ ರಿಪೋರ್ಟರ್ ಆಗಿ ಸಧ್ಯಕ್ಕೆ ನಿರುದ್ಯೋಗಿಯಾಗಿದ್ದೆ..!! 
ಗುರುಗಳು ಮೊರಲ್ ಸಪೋರ್ಟ್‌ಗೆ ಬಂದ್ರು, ಸ್ನೇಹಿತ ಅವನೂ ಕೆಲಸ ಬಿಟ್ಟು ನನ್ನೊಂದಿಗೆ ಬಂದ ಜಾಬ್ ಪಾರ್ಟ್ನರ್ ಆಗಿ.!! ಹೊಸ ಅಡ್ವೇಂಚರ್ ಶುರು ಮಾಡಿದ್ವಿ.! 

ಫ್ಲಾಶ್ ಬ್ಯಾಕ್ ಓವರ್, ಪ್ರೆಸೆಂಟ್ (ಅಟ್ ತ್ರಿಡಿ ಕನ್ನಡಕ)
ಇಸವಿ ೨೦೧೪ ಜನವರಿ
ಮುಂದೆ ಗುರಿ ಇದೆ. ಹಿಂದೆ ಗುರು ಇದಾರೆ. ಜೊತೆಗೆ ನೂರಾರು ಜನರ ಆಶೀರ್ವಾದ, ನಂಬುಗೆ ಇದೆ. ಶುರು ಮಾಡಿದ್ವಿ ಅಡ್ವಟೈಸಿಂಗ್ ಕಂಪನಿ. ಜೊತೆಗೆ ವಾರ ಪತ್ರಿಕೆ ಕೂಡಾ. ಹಣ ಇಲ್ಲ ಇಲ್ಲ ಆದ್ರೆ ಛಲ ಇದೆ. ಅನುಭವ ಇಲ್ಲ ಆದ್ರೆ ನಂಬಿಕೆ ಇದೆ. ತ್ರೀಡಿ ಕನ್ನಡಕದಲ್ಲಿ ಎಲ್ಲಾ ಹತ್ತಿರವೇ ಕಾಣಿಸ್ತಿದೆ, ಅದೂ ಮಜಬೂತಾಗಿ..!! ಎಲ್ಲಾ ಹೊಸತರ. ಲೈಫ್ ಎಂಜಾಯ್ ಮಾಡ್ತಾ ಇದಿನಿ, ಜೊತೆಗೊಂದಿಷ್ಟು ಮೌಲ್ಯಗಳೊಂದಿಗೆ. ಈಗ ನಾನೊಂದು ಪತ್ರಿಕೆಯ ಸಂಪಾದಕ. ಅದ್ರೂ ಆ ಹುಡುಗಾಟ, ತರ್ಲೆ ಬುದ್ದಿ ಕಮ್ಮಿ ಆಗಿಲ್ಲ. ಅದ್ರೆ ಆ ಸಂಪಾದಕ ಅನ್ನೋ ಪೊಸಿಶನ್ ಅಲ್ಲಿ ಕುಂತಾಕ್ಷಣ ನಾನು ನಾನಾಗಿರೊಲ್ಲ. ಅದು ಆ ಜಾಗದ ಮಹಿಮೆ ಇರಬೇಕು.  ನನ್ನ ಹಳೇ ಪೇಪರ್ ಕಂಪನಿ ಕೂಡಾ ಗ್ರಾಂಡ್ ಆಗಿ ಮಕಾಡೆ ಮಲಗ್ತು. ನಮ್ ಹಳೇ ಬಾಸ್ ಈಗ ಬೀದಿ ಪಾಲಾಗಿದಾರೆ. ನಮ್ಮ ಕಣ್ಣೆದುರಲ್ಲೇ. ರಕ್ತ ಕಣ್ಣೀರು ಉಪೇಂದ್ರ ಆಗಿದಾರೆ.
ಅಯ್ಯೋ ಬಿಡಿ ಆ ವಿಷ್ಯ. ಇನ್ನೂ ಈಗಷ್ಟೆ ನನ್ ಫಿಲ್ಮ ಸ್ಟಾರ್ಟ್ ಆಗಿದೆ. ಇನ್ನೂ ಹೆಸರು ತೋರ್ಸಕ್ಕೂ ಶುರು ಮಾಡಿಲ್ಲ. ಪಿಚ್ಚರ್ ಬಗ್ಗೆ ಈಗ್ಲೇ ಹೇಗ್ ಹೇಳೋದು?? ಯಾಕಂದ್ರೆ ಮೈ ಕ್ರೇಝಿ ಲೈಫ್ ಸ್ಟಿಲ್ ಗೋಸ್ ಆನ್..!! 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Guruprasad Kurtkoti
10 years ago

ಚೆನ್ನಾಗಿದೆ ಪಿಚ್ಚರ್ರು! ಎರಡನೇ ಭಾಗ ರಿಲೀಸ್ ಮಾಡಿ 🙂

sachin
sachin
10 years ago

Ha ha
Thnx Guruprasad..

2
0
Would love your thoughts, please comment.x
()
x