Related Articles
ಗಡಿಯಾರ ರಿಪೇರಿ: ಗುಂಡೇನಟ್ಟಿ ಮಧುಕರ
ನಾನು ಚಿಕ್ಕವನಿದ್ದಾಗ ಅಪ್ಪನಿಂದ ಹಣವನ್ನಿಸಿದುಕೊಂಡು ಗಡಿಯಾರ ರಿಪೇರಿಯನ್ನು ಮಾಡಿಸಿಕೊಂಡು ಬಂದ ಪ್ರಸಂಗವನ್ನು ನಿಮ್ಮ ಮುಂದೆ ಹೇಳಬೇಕಿದೆ. ನನ್ನ ಹಾಗೂ ಗಡಿಯಾರದ ನಡುವೆ ಅನ್ಯೋನ್ಯತೆ ಅದು ಹೇಗೆ ಬೆಸೆದುಕೊಂಡಿತ್ತೊ ಏನೋ, ನಾನು ಚಿಕ್ಕವನಿದ್ದಾಗ ನಮ್ಮೂರಿನಿಂದ ಸಮೀಪದ ಊರಾದ ಬೈಲೂರಿಗೆ ಬಸವಣ್ಣನ ಜಾತ್ರೆಗೆಂದು ಅಪ್ಪನ ಭುಜವನ್ನೇರಿ ಎರಡೂ ಕಾಲುಗಳನ್ನು ಜೋತು ಬಿಟ್ಟು ಅಪ್ಪನ ತಲೆಯನ್ನು ಹಿಡಿದುಕೊಂಡು ಕುಳಿತು ಜಾತ್ರೆಗೆ ಹೋಗಿದ್ದೆ. ಅಂದರೆ ಅಪ್ಪನ ಸವಾರಿ ಮಾಡಿದ್ದೆ. ಆ ಜಾತ್ರೆಗೆ ಹೋದಾಗ ಆಸೆ ಪಟ್ಟು ಅಪ್ಪನಿಂದ ಕೊಡಿಸಿಕೊಂಡದ್ದು ಪುಟ್ಟ ವಾಚನ್ನು. ಅಪ್ಪ, […]
ಮಳೆಯೆ೦ಬ ಮಧುರ ಆಲಾಪ: ಸ್ಮಿತಾ ಅಮೃತರಾಜ್.
ಒ೦ದು ಬರಸಿಡಿಲು, ಕಿವಿಗಡಚಿಕ್ಕುವ ಗುಡುಗು,ಕಣ್ಣು ಕೋರೈಸುವ ಮಿ೦ಚು. ಇವೆಲ್ಲ ಮಳೆ ಬರುವ ಮುನ್ನಿನ ಪೀಠಿಕೆಯಷ್ಟೆ. ಮತ್ತೆ ಇದ್ಯಾವುದೇ ತಾಳ ಮೇಳಗಳಿಲ್ಲದೆ, ಅ೦ಜಿಕೆ ಅಳುಕಿಲ್ಲದೆ ದಿನವಿಡೀ ಸುರಿಯುತ್ತಲೇ ಇರುತ್ತದೆ ಒ೦ದು ಧ್ಯಾನಸ್ಥ ಸ್ಥಿತಿಯ೦ತೆ. "ಮಳೆ" ಇದು ಬರೇ ನೀರ ಗೆರೆಯಲ್ಲ.ಕೂಡಿಟ್ಟ ಬಾನಿನ ಭಾವದ ಸೆಲೆ.ಬಾನ ಸ೦ಗೀತ ಸುಧೆ ಮಳೆಯಾಗಿ ಹಾಡುತ್ತಿದೆ.ಎ೦ಥ ಚೆ೦ದದ ಆಲಾಪವಿದು.. ಮಳೆ ಶುರುವಾದಾಗ ಒ೦ದು ತರಹ, ನಿಲ್ಲುವಾಗ ಮತ್ತೊ೦ದು,ಬಿರುಸಾಗಿ ಸುರಿಯುವಾಗ ಇನ್ನೊ೦ದು, ಮಳೆ ಪೂರ್ತಿ ನಿ೦ತ ಮೇಲೂ ಕೊನೆಯದಾಗಿ ಉರುಳುವ ಟಪ್ ಟಪ್ ಹನಿಯ ರಾಗವೇ […]
ಒತ್ತಡಮುಕ್ತ ಜೀವನ ಸಾಧ್ಯವೇ ?: ಗಾಯತ್ರಿ ನಾರಾಯಣ ಅಡಿಗ
ಇಂದಿನ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಒತ್ತಡಯುಕ್ತ ಜೀವನವನ್ನು ನಾವು ನಮಗೆ ಅರಿವಿಗೆ ಬಂದೋ ಬಾರದೆಯೋ ಅದನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೇವೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದೇವೆ. ಸ್ವಲ್ಪ ಹೊತ್ತು ಕುಳಿತು ಕಾಫಿ ಹೀರಲು ನಮ್ಮಲ್ಲಿ ಸಮಯವಿಲ್ಲ. ತಂದೆ – ತಾಯಿ, ಬಂಧು – ಬಳಗವನ್ನು ಹತ್ತಿರದಿಂದ ಮಾತನಾಡಲು ನಮ್ಮ ಉದ್ಯೋಗ ಬಿಡುತ್ತಿಲ್ಲ. ಮೊಬೈಲ್ ನಲ್ಲಿ ನಾವು ಗಂಟೆಗಟ್ಟಲೆ ವ್ಯವಹರಿಸುತ್ತೇವೆ. ಆದರೆ ನಮ್ಮ ಮಕ್ಕಳ ಜೊತೆ, ಅವರ ಆಸಕ್ತಿ – ಅಭಿರುಚಿಗಳೊಂದಿಗೆ ಬೆರೆಯುವ ಆಸ್ಥೆ ನಮಗಿಲ್ಲ. ಅವರ ಅನುಭವಗಳನ್ನು ನಮ್ಮೊಡನೆ […]