
ಹೊಸ ವರ್ಷದ ಹೊಸಿಲಲ್ಲಿ ಮೈತ್ರಿ ಪ್ರಕಾಶನ ಹೊಸ ಯೋಜನೆಯೊಂದಿಗೆ ನಿಮ್ಮ ಮುಂದೆ ಬಂದಿದೆ….
ಒಂದು ಕಥಾ ಸ್ಫರ್ಧೆಯನ್ನು ಆಯೋಜಿಸಲಾಗುತ್ತಿದೆ. ಮೈತ್ರಿ ಪುಸ್ತಕ ಪ್ರಶಸ್ತಿ ಆರಂಭಿಸುತ್ತಿದ್ದೇವೆ..!
ಆಸಕ್ತ ಲೇಖಕರು ೮-೧೦ ಕತೆಗಳ ಡಿಟಿಪಿ ಮಾಡಿಸಿ ಕತೆಗಳನ್ನು ಕಳಿಸಬಹುದು….
ಈ ಕೆಳಗಿನ ನಿಯಮಾವಳಿಗಳನ್ನು ಗಮನಿಸಿ…
೧) ಕತೆಗಳು ಸ್ವಂತದ್ದಾಗಿರಬೇಕು. ಅನುವಾದ, ಆಧಾರ ಸ್ಫೂರ್ತಿ ಪಡೆದ ಕತೆಗಳಿಗೆ ಅವಕಾಶವಿಲ್ಲ.
೨) ಇದುವರೆಗೂ ಒಂದೂ ಕಥಾಸಂಕಲನ ತರದ ಹೊಸಬರಿಗೆ ಮಾತ್ರ ಈ ಸ್ಫರ್ಧೆಯಲ್ಲಿ ಅವಕಾಶವಿದೆ.
೩) ಸುಮಾರು ೮-೧೦ ಕತೆಗಳನ್ನು ಡಿಟಿಪಿ ಮಾಡಿಸಿ (ನುಡಿ/ಯುನಿಕೋಡ್) ಹಸ್ತಪ್ರತಿಗಳನ್ನು ಕಳಿಸಿಕೊಡಬೇಕು/ಕೈ ಬರಹದ ಪ್ರವೇಶ ಸ್ವೀಕರಿಸುವುದಿಲ್ಲ.
೪) ಪ್ರತಿ ಕತೆಗಳ ಗಾತ್ರ ೨೦೦೦-೨೫೦೦ ಪದಗಳ ಮಿತಿಯಲ್ಲಿರಲಿ.
೫) ಹಸ್ತಪ್ರತಿಯ ಯಾವುದೇ ಪುಟದಲ್ಲಿ ಲೇಖಕರ ಹೆಸರು ಇರಕೂಡದು ಈ ನಿಯಮ ಪಾಲಿಸದ ಪ್ರವೇಶ ಸ್ಫರ್ಧೆಗೆ ಪರಿಗಣಿಸುವುದಿಲ್ಲ.
೬) ಮೈತ್ರಿ ಪ್ರಕಾಶನ ಕತೆಗಳನ್ನು ಪ್ರಕಟಿಸುವ ಜವಾಬ್ದಾರಿ ಹೊರುತ್ತದೆ ಇದಕ್ಕೆ ಲೇಖಕರಿಂದ ಹಣ ಕೀಳುವುದಿಲ್ಲ..!!
೭) ಆಯ್ಕೆಗೊಂಡ ಲೇಖಕರಿಗೆ “ಗೌರವಧನ” –೫೦೦೦ ರೂ ಹಾಗೂ ಒಂದು ಫಲಕ ನೀಡಲಾಗುವುದು.
೮) ಕತೆಗಳ ಹಸ್ತಪ್ರತಿ ಕಳಿಸಿಕೊಡಲು ೨೫/೦೨/೨೦೨೦ ಕೊನೆಯ ದಿನಾಂಕವಾಗಿರುತ್ತದೆ.
೯) ಹಿರಿಯ ಕತೆಗಾರರೊಬ್ಬರು ತೀರ್ಪುಗಾರರಾಗಿರುತ್ತಾರೆ…ಪ್ರಕಾಶಕರು ಆ ತೀರ್ಪುಗಾರರ ಆಯ್ಕೆಗೆ ಬದ್ಡರಿರುತ್ತಾರೆ.
ಹಸ್ತಪ್ರತಿ ಕಳಿಸುವ ವಿಳಾಸ:
ಮೈತ್ರಿ ಪ್ರಕಾಶನ
c/o ಅಂಜಲಿ ದೇಸಾಯಿ
೫೦೪, ಎರಡನೇ ಕ್ರಾಸ್, ಎರಡನೇ ಬ್ಲಾಕ್
ಬಿ ಎಸ್ ಕೆ ಮೊದಲ ಹಂತ
ಬೆಂಗಳೂರು-೫೬೦೦೫೦
ಮೊ: 8317396164