ಎಲ್ಲರಿಗೂ ಹೊಸವರ್ಷದ ಶುಭಾಷಯಗಳು.
ಮೈತ್ರಿಪುಸ್ತಕ -2021 ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದ್ದೇವೆ.
ಆಸಕ್ತರು ತಮ್ಮ 10 ಕತೆಗಳನ್ನು ಕೆಳಕಂಡ ವಿಳಾಸಕ್ಕೆ ಕಳಿಸಿಕೊಡಬೇಕು.
ಆಯ್ಕೆಯಾದ ಹಸ್ತಪ್ರತಿಗೆ 7000 ಬಹುಮಾನ, ಫಲಕ ಹಾಗೂ ಪುಸ್ತಕ ಪ್ರಕಟಿಸಲಾಗುತ್ತದೆ.
ಈ ಕೆಳಗಿನ ಆಂಶಗಳನ್ನು ಗಮನಿಸಿ.
1) ಇದುವರೆಗೂ ಒಂದೂ ಕತಾಸಂಕಲನ ಪ್ರಕಟಿಸದ ಕತೆಗಾರರಿಗೆ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಸಾಹಿತ್ಯದ ಇತರೇ ಪ್ರಕಾರಗಳಲ್ಲಿಒಂದೆರಡು ಪುಸ್ತಕ ಪ್ರಕಟವಾಗಿದವರೂ ಸ್ಫರ್ಧೆಯಲ್ಲಿ ಭಾಗವಹಿಸಬಹುದು.
2) ಕತೆಗಳನ್ನು ಕಡ್ಡಾಯವಾಗಿ ನುಡಿ./ಯುನಿಕೋಡ ಮೂಲಕ ಟಂಕಿಸಿ ಪ್ರಿಂಟರೂಪದಲ್ಲಿ ಕಳಿಸಬೇಕು. ಇಮೇಲ ಮೂಲಕ ಕಳಿಸಿದ ಕತೆಗಳನ್ನು ಸ್ವೀಕರಿಸುವುದಿಲ್ಲ.
3) ಹಸ್ತಪ್ರತಿಯಲ್ಲಿ ಎಲ್ಲಿಯೂ ಲೇಖಕರ ಹೆಸರು ಇರಕೂಡದು. ಪ್ರತ್ಯೇಕ ಹಾಳೆಯಲ್ಲಿ ತಮ್ಮಹೆಸರು, ವಿಳಾಸ ಸ್ವವಿವರ ನಮೂದಿಸಿರಬೇಕು.
4) ಕತೆಗಳು ಸುಮಾರು 1500-2000 ಪದಮಿತಿಯಲ್ಲಿರಲಿ. ನೀಳ್ಗತೆ, ನ್ಯಾನೊ ಕತೆಗಳುಬೇಡ.
5) ಕತೆಪೋಸ್ಟ/ಕೊರಿಯರ ಮೂಲಕ ಕಳಿಸಿಕೊಡಲು 31/01/2021 ಕೊನೆಯ ದಿನಾಂಕವಾಗಿರುತ್ತದೆ.
6) ಹಸ್ತಪ್ರತಿಗಳನ್ನು ವಾಪಸ ಮಾಡಲಾಗುವುದಿಲ್ಲ.
7) ಹೆಸರಾಂತ ಕತೆಗಾರರು ತೀರ್ಪುಗಾರರಾಗಿರುತ್ತಾರೆ ಅವರ ಆಯ್ಕೆಯೇ ಅಂತಿಮ.
ವಿಳಾಸ:
ಶ್ರೀಮತಿ ಅಂಜಲಿ ದೇಸಾಯಿ
ಮೈತ್ರಿಪ್ರಕಾಶನ
504, ಎರಡನೇ ಕ್ರಾಸ್,
ಎರಡನೇ ಬ್ಲಾಕ್
ಬಿ ಎಸ್ ಕೆ ಮೊದಲ ಹಂತ
ಬೆಂಗಳೂರು—560050
ಹೆಚ್ಚಿನಮಾಹಿತಿಗೆ—8317396164.