ಪ್ರಕಟಣೆ

ಮೈತ್ರಿ ಪ್ರಕಾಶನದ ವತಿಯಿಂದ “ಅಮ್ಮ ಎಂದರೆ..…” ಪುಸ್ತಕಕ್ಕಾಗಿ ಲೇಖನಗಳ ಆಹ್ವಾನ

ಮೈತ್ರಿ ಪ್ರಕಾಶನದ ವತಿಯಿಂದ “ಅಮ್ಮ ಎಂದರೆ..…” ಪುಸ್ತಕಕ್ಕಾಗಿ ಲೇಖನಗಳ ಆಹ್ವಾನ

ನಮ್ಮ ಮೈತ್ರಿ ಪ್ರಕಾಶನದ ವತಿಯಿಂದ ಈಗಾಗಲೇ ಅಪ್ಪನ ಕುರಿತಾಗಿ ಎರಡು ಪುಸ್ತಕಗಳು ಬಂದು ಜನಜನಿತವಾಗಿವೆ
ಈಗ ನಿಮ್ಮ ತಾಯಿಯ ಕುರಿತಾಗಿ ಭಾವನೆಗಳ ಅನಾವರಣಗೊಳಿಸಲು ಸದಾವಕಾಶ.
ಅವ್ವ, ಆಯಿ, ಮಾಯಿ, ಅಬ್ಬೆ ಹೀಗೆ ಅವಳ ನಾಮ ಹಲವು ದೈವಿರೂಪ ಒಂದೇ..!
ನಿಮ್ಮ ತಾಯಿಯ ಬಗ್ಗೆ ನಿಮಗಿರುವ ಆದರ,ಪ್ರೀತಿ, ಅಂತಃಕರಣ ಲೇಖನದ ರೂಪದಲ್ಲಿ ಪ್ರಕಟಿಸುವ ವಿಚಾರವಿದೆ..ಲೇಖನ ಬರೆದು ಕೊಡಲು ನಿಮಗೆ ಖುಶಿ ಅನಿಸಿದರೆ
ಪ್ರಕಟಿಸಲು ಮೈತ್ರಿಗೆ ಡಬಲ್ ಖುಷಿ….!!

ಈ ಕೆಳಗಿನ ನಿಯಮಗಳಿಗೆ ಅನುಗುಣವಾಗಿ ಲೇಖನ ಕಳಿಸಿ….
1) ಕವಿತೆ, ಹನಿಗವಿತೆ ಅಂತೆಯೇ ಕತೆಗಳ ಪರಿಗಣಿಸುವುದಿಲ್ಲ
2) ಲೇಖನ 1500 ಪದ ಮೀರಬಾರದು, ಹಾಗೆಯೇ ಹಿಂದೆ ಯಾವುದೇ ಪತ್ರಿಕೆ, ಜಾಲತಾಣದಲ್ಲಿ ಪ್ರಕಟವಾಗಿರಬಾರದು
3) ಲೇಖನ ನುಡಿ, ನಲ್ಲಿ ಇರಬೇಕು. ಮೇಲ್ ಜೊತೆ ಲೇಖನದ ಪ್ರತಿ ಲಗತ್ತಿಸಿರಬೇಕು,ಮೇಲಿನಲ್ಲಿಯೇ ಬರೆದು ಕಳಿಸಿದ ಲೇಖನ ಪರಿಗಣಿಸುವುದಿಲ್ಲ.
4) ಲೇಖನದ ಜೊತೆ ನಿಮ್ಮವಿವರ ಅಂದರೆ ಹೆಸರು,ವಿಳಾಸ,ವೃತ್ತಿ ಗಳ ವಿವರವಿರಲಿ. 18 ವಯಸ್ಸಿನ ಕೆಳಗಿನವರಿಗೆ ಅವಕಾಶವಿಲ್ಲ.
5) ಒಂದು ವೇಳೆ ತಾಯಯ ಮಮತೆ ಹುಟ್ಟಿನಿಂದ ಸಿಗದೇ ಹೋಗಿ ಸಾಕಿದ ಮಾಮಿ,ಚಿಗವ್ವ,ಕಾಕು,ದೊಡ್ಡವ್ವ ಹೀಗೆ ಯಾವುದೇ ರೂಪದಲ್ಲಿ ತಾಯಿಯ ಮಮತೆ ಉಂಡಿದ್ದರೂ ಅವರ ಬಗೆಗೆ ಬರೆದು ಕಳಿಸಬಹುದು.
6) ಲೇಖನ ಕಳಿಸಲು 31/12/2019 ಕೊನೆಯ ದಿನ
7) ಲೇಖನ ಕಳಿಸಲು ಇಮೇಲ್: mythriprakashana@gmail.com

ವಾಟ್ಸ್‌ ಆಪ್‌ ನಂ: 8317396164


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *