ಮೈತ್ರಿ ಪ್ರಕಾಶನದ ಕಥಾಸಂಕಲನಕ್ಕಾಗಿ ಕತೆಗಳ ಆಹ್ವಾನ

ಹೊಸದಾಗಿ ಪ್ರಾರಂಭವಾಗಿರುವ 'ಮೈತ್ರಿ ಪ್ರಕಾಶನ' ಕನ್ನಡ ಕಥಾಪ್ರಪಂಚಕ್ಕೆ "ಧ್ವನಿಗಳು" ಎಂಬ ಕಥಾಸಂಕಲನವನ್ನು ಅರ್ಪಿಸಲು ಉದ್ದೇಶಿಸಿದೆ. 
ಈ ಹಿಂದೆ ಪ್ರಕಟಿಸಿದಂತೆ "ಮಹಿಳೆಯರು  ಬರೆದ ಕಥೆಗಳು" ಎಂಬ ನಿರ್ಭಂದ ತೆಗೆದುಹಾಕಲಾಗಿದ್ದು , ಈಗ ಈ ಸಂಕಲನದಲ್ಲಿ ಕೆಳಗಿನ 
ನಿಯಮಗಳಿಗೆ ಒಳಪಟ್ಟು ಯಾರು ಬೇಕಾದವರೂ ಕತೆ ಕಳಿಸಬಹುದಾಗಿದೆ.

ಮೇಲಾಗಿ ಮೊದಲ ಮೂರು ಕತೆಗಳಿಗೆ ಬಹುಮಾನ ಘೋಶಿಸಲಾಗಿದ್ದು ಮೊದಲ ಬಹುಮಾನ ೫೦೦೦, ಎರಡನೇ ಬಹುಮಾನ ೩೦೦೦ ಮತ್ತು ಮೂರನೆಯ ಬಹುಮಾನವಾಗಿ
೨೦೦೦ ನಗದು ರೂಪದಲ್ಲಿ ಕೊಡಲು ನಿರ್ಧಾರಮಾಡಿರುವುದನ್ನು ತಿಳಿಸಲು ಅತ್ಯಂತ ಖುಶಿಯಾಗುತ್ತದೆ.

ಒಟ್ತು ಹದಿನೈದು ಕತೆಗಳ ಸಂಕಲನ ಇದಾಗಲಿದೆ.. ಬಹುಮಾನ ಗಳಿಸಿದ ಹಾಗೂ ಮೆಚ್ಚುಗೆ ಗಳಿಸಿದ ಕತೆಗಳ ಗುಚ್ಛ ಇದಾಗಲಿದೆ.
ಇಷ್ಟವಿದ್ದಲ್ಲಿ ನಿಮ್ಮದೊಂದು ಕಥೆಯನ್ನು ಕಳಿಸುವುದರ ಮೂಲಕ ನೀವು ಇದರಲ್ಲಿ ಭಾಗವಹಿಸಬಹುದು.    

ನಿಯಮಗಳು ಈ ಕೆಳಗಿನಂತಿವೆ :
೧) ಕಥೆ ಸ್ವಂತ ಮತ್ತು ಸ್ವತಂತ್ರವಾಗಿರಬೇಕು. ಅನ್ಯ ಭಾಷೆಯ ಅನುವಾದಿತ ಅಥವಾ ಆಧಾರಿತ ಕಥೆಗಳಿಗೆ ಪ್ರವೇಶವಿಲ್ಲ.
೨) ಕಥೆ ಈ ಮೊದಲು ಎಲ್ಲೂ ಯಾವ ಪತ್ರಿಕೆಯಲ್ಲೂ ಪ್ರಕಟವಾಗಿರಬಾರದು.
೩) ಹಸ್ತಪ್ರತಿ ಒಂದೇ ಮಗ್ಗುಲಿಗೆ ಬರೆದದ್ದಾಗಿರಬೇಕು. ೧೦ ಫುಲ್ ಸ್ಕೇಪ್ ಪುಟಗಳೊಳಗೆ ಇದ್ದು, ೩೦೦೦ ಪದಗಳನ್ನು ಮೀರಬಾರದು.  .
೪) ನುಡಿ ಅಥವಾ ಯುನಿಕೋಡ್ ನಲ್ಲಿ ಟೈಪ್ ಮಾಡಿಯೂ ಕಥೆಗಳನ್ನೂ ಕಳಿಸಬಹುದು. 
೫) ಹಸ್ತಪ್ರತಿಯಲ್ಲಿ ಎಲ್ಲಿಯೂ ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಅಥವಾ ಮೇಲ್ ಐಡಿ ಗಳನ್ನು ನಮೂದಿಸಿರಬಾರದು. 
೬) ಹಸ್ತಪ್ರತಿಯ ಜೊತೆಗೆ ನಿಮ್ಮ ಹೆಸರು, ಸಂಪರ್ಕ ವಿಳಾಸ ಮೇಲ್ ಐಡಿ ಇತ್ಯಾದಿಗಳನ್ನು ಪ್ರತ್ಯೇಕ ಕಾಗದದಲ್ಲಿ ಬರೆದು ಜತೆಗಿರಿಸಬೇಕಾದದ್ದು ಅವಶ್ಯ. 
೭) ಹೆಸರಾಂತ ಕತೆಗಾರರು ನಿರ್ಣಾಯಕರಾಗಿದ್ದು, ಅವರು ಆಯ್ಕೆ ಮಾಡಿಕೊಟ್ಟ ಕಥೆಗಳನ್ನು ಸಂಕಲನದಲ್ಲಿ ಸೇರಿಸಿಕೊಳ್ಳಲಾಗುವುದು. 
೮) ಆಯ್ಕೆಯಾದ ಕತೆಗಳನ್ನು ಬರೆದವರಿಗೆ ಮೇಲ್  ಅಥವಾ ಪತ್ರದ ಮೂಲಕ ತಿಳಿಸಲಾಗುವುದು.
೯) ಯಾವುದೇ ಕಾರಣಕ್ಕೂ ಕಳಿಸಿದ ಹಸ್ತಪ್ರತಿ ವಾಪಸ್ ಮಾಡಲಾಗುವುದಿಲ್ಲ.
೧೦) ಕತೆ ಕಳಿಸಲು ಕೊನೆಯ ದಿನಾಂಕ–೧೫/೦೩/೨೦೧೬.
೧೦) ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ..


mythriprakashana@gmail.com

mythri Prakashana
c/o Anjali.Desai
504,2nd cross, 2nd Block
BSK 1st stage
bangalore-560050
7411307748

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
viny
viny
8 years ago

Can send through mail?

1
0
Would love your thoughts, please comment.x
()
x