"ದೇವರಮನೆ ಬಾಗಿಲು ಮುಚ್ಚಿಬಿಡೇ" ಅಪರೂಪಕ್ಕೆ ಬಂದ ಗೆಳತಿ ಅಸ್ಪೃಶ್ಯಳಂತೆ ಬಾಗಿಲಲ್ಲೇ ನಿಂತು ಹೇಳುತ್ತಿದ್ದಳು. ಯಾಕೆಂದು ಕೇಳುವ ಅಗತ್ಯವಿರಲಿಲ್ಲ. ನಾನು ಹೋಗಿ ಮುಚ್ಚಿದೆ. "ಅಯ್ಯೋ ಬಿಡೇ ನೀನೊಬ್ಬಳು ಅಡಗೂಲಜ್ಜಿ ತರಹ ಆಡ್ತೀಯಮ್ಮಾ"-ಜೊತೆಯಲ್ಲಿದ್ದ ಇನ್ನೊಬ್ಬ ಗೆಳತಿಯ ಪ್ರತಿಕ್ರಿಯೆ. ಅವಳಲ್ಲಿ ಉತ್ತರವಿರಲಿಲ್ಲ, ಮುಖ ಪೆಚ್ಚಾಯಿತು. ಅದೊಂದು ನಂಬಿಕೆಯಷ್ಟೆ. ನಂಬಿಕೆಯೊಳಗೆ ಪ್ರಶ್ನೆಗಳೂ ಹುಟ್ಟುವುದಿಲ್ಲ, ಹಾಗೂ ಉತ್ತರಗಳೂ ಇರುವುದಿಲ್ಲ. ಪ್ರಶ್ನೆ ಇದ್ದರದು ನಂಬಿಕೆಯಾಗಿರುವುದಿಲ್ಲ, ಒಂದು ಸಂಶಯವಾಗಿರುತ್ತದೆ. ಸಂಪ್ರದಾಯಸ್ಥ ಮನೆಗಳಿಂದ ಬಂದ ಇಂದಿನ ಹೆಣ್ಣುಮಕ್ಕಳೆಲ್ಲರೂ ಇದೊಂದು ಅರ್ಥವಿಲ್ಲದ ಆಚರಣೆ ಎಂದು ತಿಳಿದಿದ್ದರೂ, ಅದನ್ನೊಂದು ಸಹಜಪ್ರಕ್ರಿಯೆ […]
೧೯೭೪ನೇ ಇಸವಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿತ್ತನಡ್ಕದಲ್ಲಿರುವ ಸರ್ಕಾರೀ ಪ್ರಾಥಮಿಕ ಶಾಲೆಗೆ ಒಂದನೇ ತರಗತಿಗೆ ಸೇರಿದಾಗ ನನ್ನ ವಯಸ್ಸು ಐದು. ಮನೆಯಿಂದ ಶಾಲೆಗೆ ಒಂದು ಮೈಲಿ ನಡೆದೇ ಹೋಗುತ್ತಿದ್ದುದು. ನಮಗೆ ಮಹಮ್ಮದ್ ಎಂಬ ಶಿಕ್ಷಕರು ಅ ಆ ಇ.. .. ಕನ್ನಡ ಅಕ್ಷರ ಮಾಲೆ ಕಲಿಸಿದವರು. ಅವರ ಮೇಜಿನಮೇಲೆ ನಾಗರಬೆತ್ತ ಸದಾ ಇರುತ್ತಿತ್ತು. ಒಮ್ಮೆಯೂ ನಾನು ಅದರ ಪೆಟ್ಟಿನ ರುಚಿ ಪಡೆದವಳಲ್ಲ! ಆದರೆ ಏಕೋ ಗೊತ್ತಿಲ್ಲ ಆ ಬೆತ್ತದಮೇಲೆ ನನಗೆ ಬಲು ಕೋಪವಿತ್ತು. ನಮ್ಮ ಮೇಸ್ಟರು […]
೧. ಇಸ್ರೋದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು? ೨. ಸಿಖ್ಖರ ಪವಿತ್ರ ಗ್ರಂಥ ಯಾವುದು? ೩. ಮತದಾನದ ವಯಸ್ಸನ್ನು ೨೧ ವರ್ಷದಿಂದ ೧೮ ವರ್ಷಕ್ಕೆ ಯಾವ ವರ್ಷದಲ್ಲಿ ಇಳಿಸಲಾಯಿತು? ೪. ಮರಾಠಾ ಒಕ್ಕೂಟಕದ ಸ್ಥಾಪಕ ಯಾರು? ೫. ವಿಶ್ವವನ್ನು ಸುತ್ತಿ ಬಂದ ಭಾರತೀಯ ನೌಕೆಯ ಹೆಸರೇನು? ೬. ಗ್ರಾಮ್ ಸ್ವರಾಜ್ ಎಂಬ ವಿಚಾರವನ್ನು ಪ್ರತಿಪಾದಿಸಿದವರು ಯಾರು? ೭. ಮದರ್ ತೆರೆಸ್ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ? ೮. ’ಪೆನಾಲ್ಟಿ ಕಾರ್ನರ್’ ಯಾವ ಕ್ರೀಡೆಗೆ ಸಂಬಂಧಿಸಿದ್ದು? ೯. ಪೋಲಿಯೋ ಕಾಯಿಲೆಯನ್ನು […]