ಪರಿತ್ಯಕ್ತರು
ಆ ಅರಳಿ ಕಟ್ಟೆಮೇಲೆ
ಒಂದಷ್ಟು ಜನ
ಹಿರಿಯರು,
ಇನ್ನೊಂದು ಕಡೆ
ಗಾಜು ಒಡೆದಿದ್ದಕ್ಕೆ
ಚಿತ್ರ ಮಾಸಿದ್ದಕ್ಕೆ
ಪೂಜೆಯ ಅರ್ಹತೆ
ಕಳೆದುಕೊಂಡ
ದೇವರ ಫೋಟೋಗಳು
-ಶಂಕರ್ ಕೆಂಚನೂರು
ಅನಾಥ ನಿರೀಕ್ಷೆ
ತುಕ್ಕು ಹಿಡಿದ ತಕ್ಕಡಿಯಂತ ಹೃದಯವನ್ನಾ
ಅದ್ಯಾರದೋ ಮನಸ್ಸಿಗೆ ತೂಕಕಿಟ್ಟೆ
ಅದೂ ಪಕ್ಕಾ ವ್ಯಪಾರಿ
ತೂಕಿಸಿಕೊಂಡು
ಮತ್ತೆ ಕೆಲಸಕೆ ಬರದ ತಕ್ಕಡಿಯೆಂದು ನನ್ನತ್ತ ತಳ್ಳಿತು
ಅನಾಥ ಹೃದಯ ಮತ್ತೆ ಎತ್ತಿಕೊಳುವ
ಮನಸಿಗೆ ಕಾಯುತಿಹುದು ಶಬರಿ ಕಾದಂತೆ
-ಪ್ರತಾಪ್ ಬ್ರಹ್ಮವಾರ್
ಬಂಡೆಯ ಚುಟುಕಗಳು
ಮುಳುಗಡೆಗೆ ನಿಂತ ದೋಣಿ ನಾನಾಗಾಯಿತು,
ಹರೆಯ ಎಂದಿಗೂ ಬರಲೇಬಾರದಿತ್ತು,
ಹರಿಷಡ್ವರ್ಗ ಎನ್ನ ಕೊಲೆಯ ಮಾಡಿತ್ತು,
ಚಿಣ್ಣನಾಗಿ ಇನ್ನೂ ಕನಸು ಕಾಣೋದಿತ್ತು,
ಬಯಲೆಲ್ಲ ಸುತ್ತಾಡಿ ಕಾಲು ನೊಂದಿತ್ತು,
ಹರೆಯ ಎಂದಿಗೂ ಬರಲೇಬಾರದಿತ್ತು…….!
*****
ಬಂಗಲೆ ಎದುರಿನ ರಸ್ತೆಯಲ್ಲಿ ಹೊರಟ ಬಡವನೊಬ್ಬನ ಇಡೀ ದೇಹ ಮರುದಿನ ನೇತಾಡುತ್ತಿತ್ತು,
ಕಾರಣ
ನೆನ್ನೆ ಬಂಗಲೆಯೊಳಗಿಂದ ನಾಯಿ ಇವನ ಕಂಡು ಬೊಗಳುತ್ತಿತ್ತು.:-)
*****
-ರಾಜಶೇಖರ (ಬಂಡೆ)
ಎಲ್ಲವೂ ಚೆನ್ನಾಗಿದೆ.
ಇಷ್ಟವಾದವು ಎಲ್ಲವೂ….
ಎಲ್ಲವೂ ಇಷ್ಟವಾದವು
All are superb!!