ನನ್ನ ಅಪ್ಪ
ಅಪ್ಪ ಶಬ್ದ ಕೇಳಿದಾಗ ನೆನಪಾಗುವ,
ಮೊದಲ ಪ್ರಿಯ ದೇವರು ನೀವು,
ನನ್ನ ಬಾಳ ಬಲಹೀನ ಕ್ಷಣಗಳ ಮಳೆಗೆ,
ಬಲಿಷ್ಟವಾದ ಆಸರೆಯ ಕೊಡೆ ನೀವು,
ನನ್ನ ಎದೆಯ ವೈಭವ ಗೋಪುರದ,
ಹೆಮ್ಮೆಯ ಸುವರ್ಣ ಕಳಸವು ನೀವು,
ನನ್ನ ಜೀವನದ ಹುಡುಕಾಟದ ಗುರಿ,
ನಿಮ್ಮ ಮೊಗದ ಚಿರು ನಗುವಿನಲ್ಲಿ ಅಡಗಿರುವುದು,
ನಿಮ್ಮ ಕರುಣೆಯ ಆಳವನು ಹೇಗೆ ಅರಿಯಲಿ,
ಅದು ನನಗೆ ಚಿದಂಬರ ರಹಸ್ಯವಾಗಿದೆ.
–ಬಿ.ಸಿ.ಪ್ರಮೋದ.
ಎಮ್.ಟೆಕ್.
ಎನ್.ಐ.ಟಿ.ಕೆ. ಸುರತ್ಕಲ.
ಅವಳು….???
ಅವಳೆನ್ನೆದೆಯ ಹೃದಯ ಬಡಿತ
ಅದೇಕೋ ನಾನರಿಯೇ ಅವಳೆಡೆಗಿನ ನನ್ನ ಮನದ ಮೌನ ತುಡಿತ
ಅವಳಿಲ್ಲದ ನನ್ನ ಬಾಳಿನ ಕಲ್ಪನೆ ವಿಹಿತ
ಯಾಕೆಂದರೆ ಅವಳೆನ್ನೆದೆಯ ಹೃದಯ ಬಡಿತ
ಅವಳೆಡೆಗಿನ ಪ್ರೀತಿಯ ತುಡಿತಕ್ಕೆ ನನ್ನಲ್ಲಿಲ್ಲ ಹಿಡಿತ
ಹಿಡಿತ ಸಾಧಿಸಲು ಹೊರಟರೆ
ಜೋರಾಗುವುದು ನನ್ನೆದೆಯ ಮಿಡಿತ
ಕಾರಣ ಅವಳೆನ್ನೆದೆಯ ಹೃದಯ ಬಡಿತ
ಅವಳೊಂದಿಗಿನ ಭಾವಿ ದಾಂಪತ್ಯಕ್ಕಾಗಿ ಕಂಡಿರುವೆನು
ನೂರಾರು ಕನಸುಗಳ ಮಿಳಿತ
ಭಯವಾಗುತ್ತಿದೆ… ಮದುವೆಗೆ ಅವರಪ್ಪ ತೆಗೆಯಬಹುದೆನೊ ವರಾತ
ಹಾಗೇನಾದರೂ ಆದರೆ ನಾನಿರಲಾರೆ ಜೀವಂತ
ಯಾಕೆ ಗೊತ್ತಲ್ಲ… ಅವಳೆನ್ನೆದೆಯ ಹೃದಯ ಬಡಿತ
ನಮ್ಮಿಬ್ಬರಲ್ಲಿ ಆಗಾಗ ಹುಟ್ಟುತ್ತಿರುತ್ತದೆ ಹುಸಿಮುನಿಸಿನ ವರಾತ
ಕಾರಣವಿಷ್ಟೆ ಮದುವೆಯ ನಂತರ ನಮ್ಮ ಪ್ರೀತಿಯ
ಅಮರ ಸಂಕೇತವಾಗಿ ಜನಿಸುವ ನಮ್ಮ
ಮುದ್ದು ಮಗುವಿಗೆ ಹೆಸರೆನಡಬೇಕಂಬ ತುಡಿತ
ಕೊನೆಗೂ ನಾನೆ ಸೋಲುತ್ತೇನೆ
ಯಾಕೆ ಗೊತ್ತಾ? ಜಗಳದಲ್ಲಿ ಅವಳು ಬಲು ನುರಿತ
-ಮಂಜುನಾಥ ರಾಠೋಡ
ವಾಸ್ಕೋ-ಡ-ಗಾಮಾ ಗೋವಾ
1.
ಇರುವೆ ಸಾಲಿನಗುಂಟ
ಹೋದರೆ ಸಕ್ಕರೆ ಸಿಕ್ಕೀತು
ಪಟ್ಟಣದೊಳಗಿನ ಕಡ್ಡಿ ಗೀರಿದರೆ
ಬೆಂಕಿ-ಬೆಳಕು ಹುಟ್ಟೀತು
ಹನಿ ಹನಿ ನೀರು ದಾಹ
ನೀಗೀತು
ನಡೆದರೆ ಇಟ್ಟು ಮೊದಲ ಹೆಜ್ಜೆ
ದೀರ್ಘ ಪಯಣವೂ ಸಲೀಸು ಎನಿಸೀತು!
2
ಎಷ್ಟೊಂದು ಮಾತುಗಳು
ಕಿವಿಯೆಲ್ಲಾ ಮೈಲಿಗೆ
ಉತ್ತಮ ಮಾತುಗಳು ಕೂಡಾ
ಓಡುತಿವೆ ನೂರಾರು ಮೈಲಿಗೆ!
3
ಸಾವಿರ ವೈಮನಸ್ಸಿದ್ದರೂ
ಸಾವಿಗೆ ಸಾಟಿಯಲ್ಲ
ಸಾವಿನ-ಸೂತಕದಲ್ಲೂ ದ್ವೇಷ
ಸಾಧಿಸುವವರು ಮನುಷ್ಯರೇ ಅಲ್ಲ!
4
ಮೌನವೇ ಎಲ್ಲವನ್ನೂ
ಹೇಳುತ್ತದೆ ಅಂತ ಅಂದವರು ಯಾರು
ಮಾತಿಲ್ಲದೇ ಬಾಳುವ ಪರಿ
ನೋಡಿದರೆ ನಾಳಿನ ಭರವಸೆಯೇ ಇಲ್ಲ ಚೂರು!
5
ಈ ಹೃದಯ
ಗಾಜಿನದಾಗಬೇಕಿತ್ತು
ಅದು ಒಡೆದ ಶಬ್ಧವಾದರೂ
ನಿನಗೆ ಕೇಳಿಸುತ್ತಿತ್ತು!
-ಸಂತೆಬೆನ್ನೂರು ಫೈಜ್ನಟ್ರಾಜ್
ಮೂರು ಕವಿತೆಗಳು ಚೆನ್ನಾಗಿವೆ.
ಈ ಹೃದಯ
ಗಾಜಿನದಾಗಬೇಕಿತ್ತು
ಅದು ಒಡೆದ ಶಬ್ಧವಾದರೂ
ನಿನಗೆ ಕೇಳಿಸುತ್ತಿತ್ತು!
Superb thought!!!!