ಭೂಲೋಕದ ಸ್ವರ್ಗ
ಭೂಲೋಕದ ಸ್ವರ್ಗ ಈ ಕರ್ನಾಟಕ
ಯಾತ್ರಿಕರ ಹೃದಯಕ್ಕೊಂದು ಪುಳಕ
ಕೈಮುಗಿದು ಬಿನ್ನಹಿಸಿ ಈ ನಾಡಿಗೆ
ನಮ್ಮಮ್ಮ ಭುವನೇಶ್ವರಿ ಮಾತೆಗೆ
ಹಗಲಿರುಳು ದುಡಿಯಿರಿ
ವಾಙ್ಮಯದಭಿವೃದ್ಧಿಗೆ
ಎಡಬಿಡದೆ ಶ್ರಮಿಸಿರಿ
ಸಿರಿಗನ್ನಡದೇಳಿಗೆಗೆ
ಎಂದೆಂದಿಗೂ ಕಡೆಗಣಿಸದಿರಿ
ಸವಿಗನ್ನಡನುಡಿಗೆ
ಸಿರಿಗನ್ನಡನಾಡಿಗೆ
ಚಿನ್ನದ ಮಣ್ಣಿಗೆ
ಪುಣ್ಯದ ಭೂಮಿಗೆ
ಬೆಳದಿಂಗಳಬೀಡಿಗೆ
ಉಸಿರಿರುವರೆಗೂ ನುಡಿಯಲಿ
ನಮ್ಮ ನಾಲಿಗೆ
ಅಮೃತ ಸವಿಯ ಜೇನು ರುಚಿಯ
ಕನ್ನಡ ನುಡಿಗೆ
ಒಗ್ಗಟ್ಟಾಗಿ ಹೋರಾಡ ಬನ್ನಿರಿ
ತಾಯಿನಾಡಿನರಕ್ಷಣೆಗೆ
ಕನ್ನಡದ ಛಲವೊಂದೆ
ಕನ್ನಡದ ನೆಲವೊಂದೆ
ಕನ್ನಡದ ನುಡಿವೊಂದೆ
ಕನ್ನಡದ ಮನವೊಂದೆ!
–ರಾಜಹಂಸ
ಎತ್ತ ಹೋಗುತ್ತಿದೆಯೋ ಹುಚ್ಚು ಖೊಡಿ ಮನಸ್ಸು
ಹುಚ್ಚು ಖೊಡಿ ಮನಸ್ಸು
ಎತ್ತ ಹೋಗುತ್ತಿದೆಯೋ
ಬೆತ್ತಲಾಗಿದೆ,ಕತ್ತಲಲ್ಲಿದೆ
ಹುತ್ತದ ಒಳಗೂ ಕೈಯ ಹಾಕುತ್ತದೆ
ಹುಚ್ಚು ಖೊಡಿ ಮನಸ್ಸು
ಎತ್ತ ಹೋಗುತ್ತಿದೆಯೋ
ಬೆಚ್ಚಿ ಬೀಳುವ ಸ್ವಭಾವ ವಾದರು
ಮಚ್ಚನು ಹಿಡಿವುದ ಬಿಡುವುದೇ ಇಲ್ಲ
ಕೊಚ್ಚೆಯಲ್ಲೂ ರೂಪಾಯಿ ಕಂಡರೆ
ಎತ್ತಿ ಮಡಿಚುವುದ ಮರೆವುದೇ ಇಲ್ಲ
ಹುಚ್ಚು ಖೊಡಿ ಮನಸ್ಸು
ಎತ್ತ ಹೋಗುತ್ತಿದೆಯೋ
ಮಿಣ ಮಿಣ ಮಿಂಚುವ ಬಟ್ಟೆಯ ತೊಟ್ಟರು
ತರ ತರ ಆಸೆಗೆ ತಲೆ ಬಗ್ಗುವುದಿದುವೆ
ಲಕ ಲಕ ಹೊಳೆಯುವ ಹುಡುಗಿಯ ಕಂಡರೆ
ತಕ ತಕ ಎಂದು ಕುಣಿವುದು ಇದುವೇ
ಹುಚ್ಚು ಖೊಡಿಮನಸ್ಸು
ಎತ್ತ ಹೋಗುತ್ತಿದೆಯೋ!!!
-ಸೋಮೇಶ್ ಎನ್ ಗೌಡ
ಅಮಲಿನ ಅರಿವು—–by-ಕೆ.ಮುರಳಿ ಮೋಹನ್ ಕಾಟಿ chennagide.
ಇನ್ನೂ ಚೆನ್ನಾದ ಓದು ಬೇಕು. ಬರೆಯುತ್ತಿರಿ.
ಅಮಲು ಮತ್ತು ಕರುನಾಡ ಬಗೆಗಿನ ಕವನಗಳು ಚೆನ್ನಾಗಿವೆ.
ಹುಚ್ಚುಕೋಡಿ ಮನಸ್ಸು ಕೂಡ ಚೆನ್ನಾಗಿದೆ . ಕೊಂಚ ಕಾಗುಣಿತ ದೋಷಗಳಿವೆ. ಬರೆಯುವಾಗ ಕೊಂಚ ಎಚ್ಚರವಾಗಿರಿ.
ಮೂರ್ನಾಲ್ಕು ಬಾರಿ ಓದಿದ ನಂತರವೇ ಅದನ್ನು ಪ್ರಕಟಿಸಲು ಕಳುಹಿಸಬೇಕು.
( ಉದಾ: ಖೊಡಿ—ಕೋಡಿ
ಸ್ವಭಾವ ವಾದರು—ಸ್ವಭಾವವಾದರೂ )
ಜೊತೆಗೆ ಅಲ್ಪವಿರಾಮ, ಪೂರ್ಣವಿರಾಮ ಚಿಹ್ನೆಗಳ ಸದುಪಯೋಗದಿಂದ ಓದುಗನಿಗೆ ಯಾವಾಗ ಎಲ್ಲೆಲ್ಲಿ ಯಾವ ರೀತಿ ಓದಬೇಕೆಂಬುದು ಸಹಾಯವಾಗುತ್ತದೆ.
ಓದುತ್ತಲಿರಿ, ಬರೆಯುತ್ತಲಿರಿ…ಎಲ್ಲರಿಗೂ ಶುಭವಾಗಲಿ.
chennagive
ರಾಜಹಂಸರ ಭೂಲೋಕದ ಸ್ವರ್ಗ ಕವನ : ಕನ್ನಡದ ಮೇರುವನ್ನು ಹಾಡಿ ಹೊಗಳುತ್ತದೆ. ಇಂತಹ ನುಡಿ ಪ್ರೀತಿಯು ಎಲ್ಲರಿಗೂ ಆದರ್ಶವಾಗಲಿ.
ಎತ್ತ ಹೋಗುತ್ತಿದೆಯೋ ಹುಚ್ಚು ಖೊಡಿ ಮನಸ್ಸು ಸೋನೇಶರ ಅತ್ಯುತ್ತಮ ವಿಡಂಬನಾತ್ಮಕ ಕವನ
ಮುರಳಿಯವರ ಅಮಲಿನ ಅರಿವು ಕವನದ ಆಶಯ ತಿದ್ದುವಿಕೆ, ಇದು ಪ್ರಚಲಿತವಾಗಬೇಕಾದ ಕವನ.