ಮೂಲ ವಿಜ್ಞಾನ ಮತ್ತು ಐ.ಟಿ: ಸ್ಮಿತಾ ಮಿಥುನ್

ಹೀಗೆ ನೆನ್ನೆ ಮೊನ್ನೆ ಪತ್ರಿಕೆ ಮತ್ತು ಫ಼ೇಸ್ ಬುಕ್ ತಿರಿವು ಹಾಕ್ತ ಇದ್ದಾಗ ಸ೦ಶೋಧನೆ ಯಲ್ಲಿ ನಮ್ಮ ದೇಶ  ಏನು  ಸಾದಿಸಿಲ್ಲ ಅ೦ತ  Infosys ಸ್ತಾಪಕ ನಾರಾಯಣ ಮೂರ್ತಿಯವರು ಅಭಿಪ್ರಾಯಪಟ್ಟಿರುವುದನ್ನ ಓದಿ ಮನಸ್ಸಿಗೆ ಬೇಸರವಾಯ್ತು. ನಾನು ಪ್ರಗತಿ ವಿರೋಧಿ ಅಲ್ಲ ಮೊಬೈಲ್, ಸ್ಮಾರ್ಟ್ ಫ಼ೋನ್ ಇಲ್ಲದೆ ಇವತ್ತು ಏನು ಆಗಲ್ಲ. ನಮ್ಮ ಬೆ೦ಗಳೂರು ಐ.ಟಿ. ಹಬ್ ಆಗಿದ್ದು ಖುಶಿಯ ವಿಷಯವೆ. ಮಧ್ಯಮ ವರ್ಗಕ್ಕೆ ಅವಕಾಶಗಳ  ಬಾಗಿಲು ತೆಗೆದ,  ನಮ್ಮನ್ನ ದಿಡೀರ್  ಅ೦ತ ಶ್ರೀಮ೦ತರನ್ನಾಗಿಸಿದ  ಐ.ಟಿ. ಕೆಲವು  ಅಡ್ಡ ಪರಿಣಾಮಗಳನ್ನ ಬೀರಿದ್ದು  ನಿಜ. ಅದರಲ್ಲು ಬೇಸಿಕ್ ಸೈನ್ಸ್ ಅಧ್ಯಯನಕ್ಕೆ ಕೊಡಲಿ ಪೆಟ್ಟು ಕೊಟ್ಟಿದು ಈ ಐ.ಟಿ. 

ಯಾರು  ಬಿ. ಎಸ್ಸಿ.,  ಎಮ್. ಎಸ್ಸಿ  ಓದೊಕ್ಕೆ ಮನಸ್ಸು ಮಾಡ್ತ ಇಲ್ಲ! ವಿದ್ಯಾರ್ಥಿ ಗಳ ಕೊರತೆ ಯಿ೦ದ ಹಲವು ಒಳ್ಳೆ ಕೋರ್ಸ್ ಗಳು ನಿ೦ತು ಹೋಗುತ್ತಿವೆ.  ಐ. ಟಿ ಬ೦ದ ಮೇಲೆ ಹಲವು  ಕೋರ್ಸ್ ಗಳು ತಮ್ಮ ಬೆಲೆ ಕಳೆದು ಕೊ೦ಡವು. ಓದಿದ್ರೆ ಅದು  ಐ.ಟಿ. ಅದ್ರಲ್ಲು ಅಂದ್ರೆ  ಸಾಫ್ಟ್ ವೇರ್ ಇಂಜಿನಿಯರ್ ಇಲ್ಲ   ಅ೦ದ್ರೆ ಜೀವನ ವ್ಯರ್ಥ ಅನ್ನೊ  ಭಾವನೆ ಎಲ್ಲರಲ್ಲು ಬ೦ತು. ಅಪ್ಪ- ಅಮ್ಮ೦ದಿರಿಗೆ ತಮ್ಮ ಮಕ್ಕಳು ಬೇಗ ಬೇಗ ಓದಿ ಕ೦ಪ್ಯೂಟರ್ ಇ೦ಜಿನಿಯರ್ ಗಳಾಗ ಬೇಕೆ೦ಬ ಹ೦ಬಲ. ಈಗಲೂ ಈ ಹಂಬಲ ನಿ೦ತಿಲ್ಲ. ಅದರಲ್ಲೂ ಹಳೇ ಮೈಸುರು ಭಾಗದಲ್ಲಿ ಮಿತಿ ಮೀರಿದ  ಐ.ಟಿ  craze, ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ ಅ೦ದ್ರೆ ಯಾರು ಹೆಣ್ಣು ಕೊಡಲ್ಲ! ಇದರ  ಪೂರ್ಣ ಲಾಭ  ಪಡೆದದ್ದು ನಮ್ಮ ಶಿಕ್ಷಣ ಸ೦ಸ್ಥೆಗಳು  Management seatಗಳ  ಹೆಚ್ಚಳ,  ಹೆಚ್ಚು ಇ೦ಜಿನಿಯರಿ೦ಗ್ ಕಾಲೇಜುಗಳು,  ಅವರು ಕೇಳಿದಷ್ಟು ಡೊನೇಷನ್ ಕೊಟ್ಟು ಮಕ್ಕಳನ್ನ ಓದಿಸಲ್ಲು ಮು೦ದೆ ಬರುವ  ತ೦ದೆ-ತಾಯಿಯರು.  ಪರಿಣಾಮ  ಬೇಸಿಕ್ ಸೈನ್ಸ್ ಓದೋರೆ ಇಲ್ಲ. ನಾನು ಬಿ.ಎಸ್ಸಿ. ಓದುವಾಗ ಇದ್ದಿದು ಬರಿ ೧೫ ಜನ. ತು೦ಬಿದ ಕಾಲೇಜ್ ನ ಕಲರ್ ಫ಼ುಲ್ ಸೀನ್ ನೋಡಿದ್ದು ಬರಿ ರವಿಚ೦ದ್ರನ್ ಸಿನಿಮದಲ್ಲಿ! ಆಮೇಲೆ ಎಮ್.ಸ್ಸಿ . ಮಾಡೊವಾಗ ನಾವು ಇದ್ದಿದು ಬರಿ ೩೦ ಜನ. ಜೊತೆಗೆ  ಹೋಮ್ ಸೈನ್ಸ್ ಅನ್ನೊ ತಾತ್ಸಾರ.

ನನ್ನ  ಓದಿನ ವಿಷಯವಾಗಿ ಸಾಕಷ್ಟು ವ್ಯ೦ಗ್ಯ ಚುಚ್ಚು ಮಾತುಗಳನ್ನ ಕೇಳಿದ್ದೀನಿ. "ಏನು ಪ್ರಯೋಜನ ಇಲ್ಲ ಬಿ.ಎಸ್ಸಿ. ಓದ್ತ ಇರೋದು,  ತಲೇಲಿ ಬುದ್ದಿ ಇದ್ದಿದ್ದರೆ ಇ೦ಜಿನಿಯರಿ೦ಗ್ ಸೀಟ್ ಸಿಗ್ತಾ ಇತ್ತು” ಬಾಕಿ  ಕೊರ್ಸ್ ಗಳದ್ದು ಅದೇ ಕಥೆ,  ಹೋದ ವರ್ಷ ಬಿ. ಎಸ್ಸಿ. ಗೆ ಬರಿ ೧೦ ಜನ   ವಿದ್ಯಾರ್ಥಿ ಗಳು ಅರ್ಜಿ ಹಾಕಿದ್ದರ೦ತೆ   ಜೀಯಲಜಿ, ಮೈಕ್ರೊಬಯಲಜಿ,  ಮು೦ತಾದ ಹಲವು ಆಸಕ್ತಿಕರ ಕೋರ್ಸ್ ಗಳ ಅದ್ಯಯನಕ್ಕೆ  ಯಾರು ಮು೦ದೆ ಬರುತ್ತಿಲ್ಲ. ಅಮೇರಿಕಾ  ಯುರೋಪ್ ದೇಶಗಳ ಕೆಲಸ ವನ್ನು ಕಡಿಮೆ ವೆಚ್ಚದಲ್ಲಿ ಮಾಡಿಕೊಡಲು ಇಲ್ಲಿ ಇರೋ ಮಾನವ  ಶಕ್ತಿಯನ್ನು ಉಪಯೊಗಿಸಿಕೊ೦ಡರು. ಇ೦ಜಿನಿಯರಿ೦ಗ್ ಸೇರಿದ್ರೆ  ಕೊನೆ  ವರ್ಷ  ದಲ್ಲಿ ಇರಬೇಕಾದ್ರೆ  ಕೆಲಸ ದ ಆಫ಼ರ್ ಬರುತ್ತೆ, ಅದ್ರೆ ಇವತ್ತು chemistry, physics ನಲ್ಲೊ ಎಮ್.ಸ್ಸಿ. ಮುಗಿಸಿ  ಬ೦ದವರಿಗೆ ಸೂಕ್ತ ಉದ್ಯೋಗ ಅವಕಾಶಗಳು ಇವೆಯೆ? ಇಲ್ಲ ಶಿಕ್ಷಕ ವೃತ್ತಿಗೆ ಸೇರಬೇಕು,  ಇಲ್ಲ ಅ೦ದ್ರೆ ಯಾವುದಾದ್ರು ಕಾಲೇಜಿನಲ್ಲಿ  ಅರೆ ಕಾಲಿಕ ಉಪನ್ಯಾಸಕ   ಕೆಲಸಕ್ಕೆ ಸೇರಬೇಕು. ಇಲ್ಲ ಅ೦ದ್ರೆ ಕಾಲ್ ಸೆ೦ಟರ್ ಸೇರಬೇಕು.

ಸ೦ಶೋಧನೆಗೆ ಪೂರಕ ವಾತಾವರಣ ನಮ್ಮಲಿ ಇದೆಯೆ? ನಮ್ಮ ಬಾಸುಮತಿ ಅಕ್ಕಿಯ ಮೇಲೆ ಅಮೇರಿಕದ ಕ೦ಪನಿ  ಹಕ್ಕು ಸಾದಿಸಲು ಹೊರಟಾಗ ನಮ್ಮ ವಿಜ್ಞಾನಿಗಳು ಹೋರಾಡಿ ಗೆದ್ದರು. ಇದೇ ರೀತಿ ಬಿ.ಟಿ.ಬದನೆ ಬಗ್ಗೆ ಹೇಳಬೇಕು. ನಮ್ಮ ಸಿ.ಎನ್.ಆರ್. ರಾವ್ ಸರ್ ಬಳಿ ಹಲವು ಪೇಟೆ೦ಟ್ ಇದೆ. ಮೂಲ ವಿಜ್ಞಾನ ದ ಕುರಿತು ಅವರ ಕಳಕಳಿ ನಾವು ಅರ್ಥ ಮಾಡಿಕೊಳ್ಳಬೇಕು. ಇವತ್ತು ನಾವು ಏನೇ ಟೆಕ್ನಾಲಜಿಯ ಮಾತನಾಡಿದ್ರು ಅದು ಸಾದ್ಯ ವಾಗಿದ್ದು ಮೂಲ ಆ ವಿಜ್ಞಾನದ ಸ೦ಶೋಧನೆಯ ಫಲದಿ೦ದ. ಸರ್ಕಾರದಿ೦ದ ಕಡಿಮೆ ವೆಚ್ಚದಲ್ಲಿ ಜಮೀನು ಪಡೆದು ಅಗ್ಗದ ದರದಲ್ಲಿ ನೀರು, ಕರೆ೦ಟ್ ಪಡೆದು ಇವರು ಏನೆಲ್ಲಾ ಮಾಡಿದರು. ಗೂಗಲ್, ಐಬಿಎಮ್, ಮುಂತಾದ ಬೇರೆ ದೇಶದ ಐ. ಟಿ ಕ೦ಪನಿಗಳು ಸ೦ಶೋಧನೆಗೆ ಹಣ ಸಹಾಯ ಮಾಡುತ್ತವೆ, ನಮ್ಮಲಿ ಇ೦ತ ವಾತಾವರಣ ಇದೆಯ? ಕನಿಷ್ಠ ಕನ್ನಡಿಗರಿಗೆ ಅಲ್ಲಿ ಕೆಲಸ ಇಲ್ಲ. ಸಾಫ್ಟ್ ವೇರ್ ಇಂಜಿನಿಯರ್  ಅನ್ನುವುದು ನಮ್ಮ ಇ೦ದ್ರ ಪದವಿಗೆ ಸಮನಾಗಿ  ಇತ್ತು, ಏನು ಅವರ ವೈಭವ.  ಅಪವಾದಗಳು ಇವೆಯಾದರೂ ಬೇರೆಯರನ್ನ ಕನಿಷ್ಥ ಮಾನವೀಯತೆ ಯಿ೦ದಲೂ ನೋಡ್ತಾ ಇರ್ಲಿಲ್ಲ. 

“ಓ ನೀನು ಅಡುಗೆ ಮಾಡೋದನ್ನ ಓದಿರೋದು?ನಮ್ಮ ಮಗ  Infosys ನಲ್ಲಿ ಇರೋದು” ಈ ಮಾತು ಹೇಳಿದ್ದು ನನ್ನ ಗ೦ಡನ ದೊಡ್ಡಮ್ಮ.  ನನ್ನ ಪತಿ ಮಿಥುನ್  ಕೂಡ ಇ೦ತ ನೋವು ಅವಮಾನದಿ೦ದ ಬೇಸತ್ತು ದುಬೈ ಗೆ ಬ೦ದಿದ್ದು. ಇವತ್ತು ಮಗಳಿಗೆ ನಾವು ಪಿಜ್ಜಾ, ಬರ್ಗರ್ ಯಾಕೆ ತಿನ್ನಬಾರದು?  ಅ೦ತ ವಿವರಿಸಬೇಕಾದರೆ ತು೦ಬಾ ಖುಶಿ ಆಗುತ್ತೆ.

ಗಾ೦ಧೀಜಿ ಹೇಳಿದ ಹಾಗೇ ನಾವು “ DIGNITY OF LABOUR” ನ ಪಾಲಿಸೋಣ, ಎಲ್ಲ ಓದನ್ನು ನಾವು ಗೌರವಾದರಗಳಿ೦ದ ಕಾಣೋಣ. ಮು೦ಚೆ Food Science ಓದಿದಕ್ಕೆ ಬಹಳ ಕೀಳರಿಮೆ ಇ೦ದ ಬಳಲಿ ಹೋಗಿದ್ದೆ. ಇವತ್ತು ಮ್ಯಾಗಿ ಯಲ್ಲಿ ಸೀಸದ ಅ೦ಶ ಇದೆ, ಹಣ್ಣನ್ನು ಕೆಮಿಕಲ್ ಹಾಕಿ ಹಣ್ಣು ಮಾಡ್ತಾರೆ ಇ೦ತವುಗಳು ನನಗೆ ಅಚ್ಚರಿ ಅನ್ನಿಸೋದೆ ಇಲ್ಲ. ಇನ್ನು ಮು೦ದಾದರು ನಮ್ಮ ಮಕ್ಕಳು ಬೇಸಿಕ್ ಸೈನ್ಸ್ ಓದೋ ಹಾಗೇ ಆಗಲಿ. ಸ೦ಶೋಧನೆಗೆ  ಪೂರಕ ವಾತಾವರಣ ಬರಲಿ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಸಚಿನ್
ಸಚಿನ್
8 years ago

ಒಳ್ಳೆಯ ಅಭಿಪ್ರಾಯ

1
0
Would love your thoughts, please comment.x
()
x