ಕಾವ್ಯಧಾರೆ

ಮೂರು ಕಾವ್ಯಗಳು

ಮನಸ್ಸೆಂಬ ಚಿಟ್ಟೆ

*************

ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ 

ನೋಡಲು ಕಣ್ಣುಗಳು ಸಾಲದು

ಮೈಯ ಮೇಲೆಲ್ಲಾ ಕಪ್ಪು ಕಂಗಳು

ನೋಡುಗರ ಕಣ್ಮನ ಸೆಳೆಯುವುದು 

 

ಅಲ್ಲಿಂದಿಲ್ಲಿಗೆ ಹಾರುವೆ 

ಹಿಡಿಯಲು ಹೋದರೆ ಓಡುವೆ 

ಜಗದ ಸೃಷ್ಟಿಯ ಮೆಚ್ಚಲೇ ಬೇಕು 

ನಿನಗೆ ನೀನೆ ಸಾಟಿಯಿರಬೇಕು 

 

ಒಮ್ಮೆ ಇಲ್ಲಿ ಒಮ್ಮೆ ಇನ್ನೆಲ್ಲೋ 

ಹಾರುವ ನಿನ್ನನು ನೋಡಿದರೆ 

ಮನಸು ಕೂಡ ನಿನ್ನೊಡನೆಯೇ 

ಕುಣಿಯುತ ಹೊರಡುವುದು ಬೇರೆಡೆಗೆ !!

-ಅರ್ಪಿತಾ ರಾವ್ 

ನವಮಾಸ 

*********

ನವಮಾಸ ಬಂದಿದೆ

ಆಹ್ಲಾದವ ತಂದಿದೆ

ಎನ್ನ ಬಾಳಿನಲ್ಲಿ

ಸಂಭ್ರಮ ತುಂದಿದೆ 

ಇದನ್ನು ಕಂಡು 

ಕೂಹು ಎನೆ ಕೂಗು

ಓ ಚೈತ್ರದ ಕೋಗಿಲೆ

ಕೂಹು ಎನೆ ಕೂಗು

 

ತಂಗಾಳಿಯು ಬೀಸಿದೆ

ಹರುಷವ ತಂದಿದೆ

ಮಯೂರ ನರ್ತಿಸಿದೆ

ಕಂಠಿಯು ಗರ್ಜಿಸಿದೆ

ಬಾನಿಂದ ಹನಿಗಳು

ಧರೆಗೆ ಜಿನುಗಿವೆ

ಇದನ್ನು ಕಂಡು 

ಕೂಹು ಎನೆ ಕೂಗು

ಓ ಚೈತ್ರದ ಕೋಗಿಲೆ

ಕೂಹು ಎನೆ ಕೂಗು

 

ಮುಂಜಾವಿನ ವೇಳೆ 

ಹಕ್ಕಿಯು ಹಾಡಿದೆ

ಮೊಗ್ಗು ಅರಳಿದೆ

ನರುಗಂಪು ಬೀರಿದೆ

ಹೂದೋಟದಿ ಮಲ್ಲಿಗೆಯು

ಘಮ್ಮೆಂದು ಅರಳಿದೆ

ಇದನ್ನು ಕಂಡು 

ಕೂಹು ಎನೆ ಕೂಗು

ಓ ಚೈತ್ರದ ಕೋಗಿಲೆ

ಕೂಹು ಎನೆ ಕೂಗು

-ರಾಜಹಂಸ

ಬಿ.ಎ. ಪ್ರಥಮ ವರ್ಷ
ಡಾ.ಶ್ರೀ ಜಚನಿ ಪ್ರಥಮ ದರ್ಜೆ ಕಾಲೇಜು
ಚಿಕ್ಕಬಳ್ಳಾಪುರ – 562 101

ಸಾವಿನ ಚೈತನ್ಯಗಳು

*****************
ನಿನ್ನ ಅತ್ಮ ತನ್ನನ್ನು ತಾನು ಹುಡುಕಬೇಕಿದೆ
ಮಾಸಿದ ಕಲ್ಲಿನ ಸಮಾದಿಯ ಮಧ್ಯರಾತ್ರಿಯ ಭಾವನೆಗಳು;
ಒಬ್ಬರಲ್ಲ ಸಾವಿರಾರು ಜನ ನಿನ್ನ ಬದುಕಿನ 
ರಹಸ್ಯ ಘಳಿಗೆಗಳನ್ನು ಗಮನಿಸುತ್ತಿದ್ದಾರೆ

ಏಕಾ೦ತದಲ್ಲಿ ಮೌನವಾಗಿರು
ಇದು ಬರೀ ಏಕಾ೦ತವಲ್ಲ-ನ೦ತರ
ನೀನು ಬದುಕಿದ್ದಾಗ ನಿನ್ನ ಜೊತೆ ಸದಾ ಇದ್ದವರು;
ಮತ್ತೆ ನಿನ್ನ ಸಾವಿನ ನ೦ತರ ಸುತ್ತುವರೆದಿರುವ೦ತಹ
ಸಾವಿನ ಚೈತನ್ಯಗಳು ಅವುಗಳ ಆತ್ಮಶಕ್ತಿ
ನಿನ್ನನ್ನು ಮ೦ಕಾಗಿಸಲಿವೆ

ರಾತ್ರಿ ಪ್ರಶಾ೦ತವಾಗಿದ್ದರೂ ಕ್ಷೋಬೆಗೊ೦ಡಿದೆ
ಬೆಳಕಿನ೦ತಹ ಭರವಸೆಯನ್ನು ಸಾಯುವವರಿಗೆ ಕೊಡುತ್ತ
ಸ್ವರ್ಗದ ಎತ್ತರವಾದ ಸಿ೦ಹಾಸನದಲ್ಲಿ ಕುಳಿತ
ನಕ್ಷತ್ರಗಳು ನಮ್ಮನ್ನು ಗಮನಿಸುವುದಿಲ್ಲ.
ಆದರೆ ಅವುಗಳ ಕಳೆಗು೦ದಿದ ಕೆ೦ಪನೆಯ ವೃತ್ತ
ನಿನ್ನ ಆಯಾಸವನ್ನು ಕಾಣಿಸುವುದು
ಧಗಧಗಿಸುವ ಉರಿ ಮತ್ತು ಜ್ವರ
ನಿನಗೆ ಎ೦ದೆ೦ದಿಗೂ ಜೋತುಬಿದ್ದಿವೆ.

ಈಗ ಭಾವನೆಗಳನ್ನು ನೀನು ನಾಶ ಮಾಡಲಾಗವುದಿಲ್ಲ
ಈ ಕಾಣ್ಕೆಗಳು ಕಣ್ಮರೆಯಾಗುವುದಿಲ್ಲ
ಬೆಳಗಿನ ಮ೦ಜಿನ ಹನಿಯು ಹುಲ್ಲಿನಿ೦ದ
ಇ೦ಗುವ೦ತೆ ಇವ್ಯಾವುವು ನಿನ್ನ ಚೈತನ್ಯದ
ಮೂಲಕ ಹಾದುಹೋಗುವುದಿಲ್ಲ.

ತ೦ಗಾಳಿ, ಭಗವ೦ತನ ಉಸಿರು ಮತ್ತು
ಮ೦ಜು ಇನ್ನೂ ಬೆಟ್ಟದ ಮೇಲೆಯೆ ಇದೆ.
ಇನ್ನೂ ಮುರಿಯಲಾಗದಿರುವ ಕಡು ಕಪ್ಪು ಬಣ್ಣದ ನೆರಳು
ಒ೦ದು ಸ೦ಕೇತ ಮತ್ತು ಗುರುತು
ಇದು ಹೇಗೆ ಮರಗಳಿಗೆ ಜೋತುಬಿದ್ದಿದೆ
ಇವೆಲ್ಲವು ರಹಸ್ಯದೊಳಗಿನ ರಹಸ್ಯಗಳು.

ಮೂಲ  : ಎಡ್ಗರ್ ಅಲೆನ್ ಪೋ
ಕನ್ನಡಕ್ಕೆ: ಕೆ ಕಾ೦ತರಾಜು

 
ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಮೂರು ಕಾವ್ಯಗಳು

 1. ಅರ್ಪಿತ ರಾವ್ ಮತ್ತು ಕಾಂತರಾಜು ಅವರ ಕವಿತೆಗಳು ಚೆನ್ನಾಗಿವೆ. ರಾಜ ಹಂಸ ಅವರ ಕವಿತೆ ಇನ್ನೊ ಸ್ವಲ್ಪ ಪಕ್ವತೆ ಕಾಣಬಹುದಿತ್ತು.

 2. ಎಲ್ಲವೂ ಚೆನ್ನಾಗಿವೆ.

  ರಾಜ ಹಂಸ ಬರೆಯುತ್ತಲೇ ಇರಿ, ನೀವೇ ಪಕ್ವವಾಗುತ್ತಾ ಹೋಗುತ್ತೀರಾ…

  ಅರ್ಪಿತ, ನಿಮ್ಮ ಚಿಟ್ಟೆ ಕವನ ಚಿಕ್ಕಮಕ್ಕಳ ಪದ್ಯದಂತೆ short and Cute ಆಗಿದೆ. ಬರೀತಾ ಇರಿ.

  ಕಾ೦ತರಾಜು, ಕನ್ನಡಕ್ಕೆ ಅನುವಾದಿಸಿದ್ದಕ್ಕೆ ಧನ್ಯವಾದಗಳು. ಚೆನ್ನಾಗಿದೆ.
  ಮೂಲ ಆಂಗ್ಲಭಾಷೆಯಲ್ಲಿದೆಯೇ? ಹಾಗಿದ್ದರೆ ದೇವರಾಣೆಗೂ ಓದಿದ್ದರೆ ಅರ್ಥವಾಗುತ್ತಾ ಇರಲಿಲ್ಲ.
  ಕನ್ನಡಕ್ಕೆ ಎಳೆತಂದದ್ದಕ್ಕೆ ಧನ್ಯವಾದಗಳು.

 3. bhavanegalige manasembudu spandisidaaga abhivyktagolluva abhivykthiye kaavya

  kavya prayogada prayatnakke yashassagali kannada mattu sathya baalalli belagali

Leave a Reply

Your email address will not be published. Required fields are marked *