ಮೂರು ಕವಿತೆಗಳು: ಕಾವ್ಯ ಪ್ರಿಯ, ಬಸವರಾಜ್ ಕದಮ್, ರಾಣಿ ಪಿ.ವಿ.

ಬ್ಯಾಚುಲರ್ ಫುಡ್ಸ್..
ಬೆಳಗಾಗುತ್ತಲೆ ಎದ್ದೊಡನೆ ಏನಾಗುವುದು
ನನಗೇಕೊ ಮೊದಲು ಹಸಿವಾಗುವುದು
ಊರಿನಲ್ಲಿದ್ದಾಗ ತಿ೦ಡಿ ತಯಾರಾಗುತ್ತಿದ್ವು
ಹೊಟ್ಟೆ ತು೦ಬ ತಿ೦ದು ಅಡ್ಡಾಡುತ್ತಿದ್ದೆವು…

ಇ೦ದಿನ ಪರಿಸ್ತಿತಿ ಬದಲಾಗಿಹುದು
ರಾತ್ರಿ ಮನೆಗೆ ಬ೦ದರೂ ಕೇಳರಾರಿಹರು
ಊಟ ತಿ೦ಡಿ ಉಪಚಾರದ ಮಾತೆಲ್ಲಿಹುದು
ಪಿಜಾ ಅ೦ಗಡಿಯವನಿಗೆ ವ್ಯಾಪಾರ ಜೋರು…

ಇದಕ್ಕೆ ಬೇಕೊ೦ದು ಶಾಶ್ವತ ಪರಿವಾರವು
ಯೊಚಿಸಿ ನೊಡಿದೆ ಎನಿಹುದು ದಾರಿಯೂ
ಅಡಿಗೆ ಮಾಡುವುದು ನನಗೆ ಸುಲಭವು
ಲೇಟಾದರೂ ಹಚ್ಚುವೆನು ಒಲೆಯ ದಿನವೂ….

ಬೆಳಗಿನ ತಿ೦ಡಿಗೆ ಕಾರ್ನ್ ಫ್ಲೇಕ್ಸು
ಮಧ್ಯಾನ ಕ್ಯಾ೦ಟೀನ ಮಿನಿ ಮೀಲ್ಸು
ಸ೦ಜೆ ಆಫೀಸ್ ಗೇಟಿನ ಬಜ್ಜಿ ಮೊಮೊಸ್
ರಾತ್ರಿ ಮನೆಯಲ್ಲಿ ನಳಪಾಕ,ಇದ್ದರೆ ಪೆಷನ್ಸ್…

ವೀಕೆ೦ಡ್ಸ್ ಏಳುವುದೇ ಊಟದ ಸಮಯ
ನೆಡೆವುದು ಭರ್ಜರಿ ಅಡುಗೆಯ ವಿಸ್ಮಯ
ತಿ೦ದು ತೇಗುವುದರಲಿ ಸ೦ಧ್ಯಾ ಸಮಯ
ಮತ್ತೆ ನೆನೆದು ಮಲಗುವೆ ವೀಕ್ಡೇಸ್ನ ದಿನಚರಿಯ…

— ಕಾವ್ಯಪ್ರಿಯ

 

 

 

 


ಚುಟುಕಗಳು

ಗೆಳತಿ,
ನೀ ಹಚ್ಚಿದ ನನ್ನೊಳಗಿನ
ಪ್ರೀತಿಯ ಜ್ಯೋತಿ.
ಬದುಕು ಹಸಿರಾಗಿಸಲು ನೀನೇ
ಸದಾ ಸ್ಫೂರ್ತಿ…

ಗೆಳತಿ,
ಉಳಿದುಹೋದ ಗೆಳತಿ ಮಾತುಗಳು
ಪ್ರೀತಿ ಅಂತ ಹೇಳಿದವು ಕಂಬನಿಗಳು. 

ಅಮ್ಮ :
ಅಮ್ಮ ಕಾಣುವ ಕನಸಿನ ತೊಟ್ಟಿಲಿಗೆ
ಮಕ್ಕಳು ನನಸುಗಳು ಮಾಡಿ ತೂಗಬೇಕು.

ಗೆಳತಿ,
ನನ್ನ ಹೃದಯದಲ್ಲಿರುವ ಪ್ರೀತಿಯ
ಹಣತೆ ನಾನಾದರೆ..
ಅದನ್ನು ಬೆಳಗಿಸುವ ಜ್ಯೋತಿ
ನಿನಾಗಬೇಕು…

ಗೆಳತಿ,
ನೀನು ನನ್ನವಳಲ್ಲ
ಕನಸಿನಲ್ಲಿ ಬರಲಿಲ್ಲ
ಮುಂದೆ ಬರುವವಳ
ಬಗ್ಗೆ ತಿಳಿಯಲಿಲ್ಲ.

ಗೆಳತಿ,
ನನ್ನ ಹೃದಯದ ಪ್ರತಿ ಉಸಿರು
ನಿನ್ನ ಹೆಸರು…

ಬದುಕು :
ಬದುಕು ಒಂದು ಆಟ
ಸಾಗುತ್ತಾ ಇರಬೇಕು ಓಟ
ಕಲಿಯಬೇಕು ಜೀವನದ ಪಾಠ
ಇಲ್ಲದಿದ್ದರೆ ಬದುಕು ಜೂಜಾಟ..!

ಮೌನ:
ಮೌನ ಮಾತುಗಳು ಆದಾಗ ;
ಬದುಕಿನಲ್ಲಿ ಹೊಸ ಅಲೆಗಳು ಸೃಷ್ಟಿಸಿತು.

ಕನಸು :
ಕನಸು ಕಾಣುವುದು ನನ್ನ ಬಯಕೆ
ಕಣ್ಣುಗಳಿಗೆ ಇಂದು ಮಾಡಿದೆ ಆರೈಕೆ
ಮಲುಗಲು ಬಿಡುತ್ತಿಲ್ಲ ನನ್ನ ಬಾಯಾರಿಕೆ.

ಜೀವನ :
ಬದುಕಿಗೊಂದು ದಾರಿ
ವೃತ್ತಿಯೆ ನಮಗೆ ಮಾದರಿ
ಸಂಬಳವೇ ಜೀವನದ ಸವಾರಿ…

-ಬಸವರಾಜ್ ಪಿ. ಕದಮ್

 

 

 

 


 

ನಗು

ನಗಬಾರದೇಕೆ ಓ ಜೀವವೇ

ನೀನೊಮ್ಮೆ ನಗಬಾರದೇಕೆ..

ನೀ ನಕ್ಕು ಸಂಗಡಿಗರ

ಕೋಪವ ನೀಗಬಾರದೇಕೆ..

 

ನೀ ನಕ್ಕರೆ ನಿನಗದು ಅಂದವು

ಕಷ್ಟದಲು ನೀ ನಗುತಿರಲು

ಹಲವರಿಗೆ ನೀ ಸ್ಪೂರ್ತಿಯು

ನೊಂದವರಿಗದೆ ಸಮಾಧಾನವು..

ನೀ ಗೆಲ್ಲಲು -ನಕ್ಕು ಗೆಲುವ

ಎಲ್ಲರೂಡನೆಯು ಹಂಚಬಾರದೇಕೆ..

 

ಸೋಲಲು..ಹುಸಿಮಿತ್ರರು ಹಸಿ ನಗಲು

ಅವರೊಡನೆಯೆ ನಕ್ಕು ನೋವ ಮರೆಯಬಾರದೇಕೆ..

ನಗಬಾರದೇಕೆ ಓ ಜೀವವೇ

ಹೊಸ ಕಾರಣಗಳನುಡುಕಿ

ನಕ್ಕು -ನಲಿವ ಚಿಮ್ಮಿ

ಮತ್ತೂ ನಗಬಾರದೇಕೆ..!!

-ರಾಣಿ ಪಿ.ವಿ.

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x