ಮೂಕ ಪ್ರೇಮ: ಮಹಾಂತೇಶ್ ಯರಗಟ್ಟಿ

 

ಕೌಸಲ್ಯ ರಾಮ ಪೂಜಾ ಸಂಧ್ಯಾ ಪ್ರವ. . . . .! ಎಂದೂ ಸುಪ್ರಭಾತ ಕಿವಿಗೆ ಕೇಳುತ್ತಲೇ ಕಣ್ಣುತೆರೆದು ಗಡಿಯಾರ ಕೈಗೆತ್ತಿಕೊಂಡು ನೋಡಿದರೆ ಬೆಳಿಗ್ಗೆ ೬.೩೦ರ ಸಮಯ ಹೊದ್ದ ಹಾಸಿಗೆಯಲ್ಲ ಬದಿಗೆ ಸರಿಸಿ ಎದ್ದು ಲೈಟ್ ಆನ್ ಮಾಡಿದರೆ ಕರೆಂಟೇ ಇಲ್ಲಾ.

ರಾಜ್ಯಧಾನಿಗೂ ತಗುಲಿದ ವಿದ್ಯುತ್ ಶಾಕ್

ಹಳ್ಳಿಗಳಿಗೆ ಒಂಭತ್ತು ಘಂಟೆಗಳ ಕಾಲ ಮಾತ್ರ ವಿದ್ಯುತ್

ಎಲ್ಲೋ ದಿನ ಪತ್ರಿಕೆಯಲ್ಲಿ ಓದಿದ್ದು ನೆನಪಾಯಿತು ಇದ್ಯಾರಪ್ಪ ಟೇಪರೆಕಾರ್ಡ್‌ರು ಅಂತಾ ಬಾಗಿಲು ತೆರೆದು ನೋಡಿದರೆ –

ಗುಳಿಕೆನ್ನೆ ಹುಡುಗಿ, ಗಿಳಿಯ ಕೊಕ್ಕೆನಾಚುವಂತ ಮೂಗು, ಮನಕಲಕುವ ಆ ಕಣ್ಣೋಟ ಏಂಥಾ? ಜಾಣನನ್ನು ಪೆದ್ದು ಮಾಡುವ ಆ ಮುದ್ದು ನಗು, ದಸರಾ ಗೊಂಬೆಗೆ ಬಣ್ಣದಿಂದ ತೀಡಿದಂತಾ ಆ ಹುಬ್ಬು ಮಾತನಾಡಿದರೆ ಎಲ್ಲಿ ಮಾಸಿದಾವು ಎನ್ನುವ ಆ ಗುಲಾಬಿ ತುಟಿಗಳು, ಆಗಾಗ  ಅವಳ ಕೆನ್ನೆಗೆ ಮುತ್ತಿಡುವ ಆ ಮುಂಗುರುಳುಗಳು, ಒಟ್ಟಾರೇ ಅವಳ ಆ ಸಹಜ ಸುಂದರತೆ ನನ್ನನ್ನ ಕನಸಿನ ಲೋಕಕ್ಕೆ ಕರೆದೊಯ್ಯುವವು ಅವಳು ಅಂಗಳಗೂಡಿಸಿ ಅಂಗಳಕ್ಕೆ ಎರಚಿದ ನೀರು ಒಂದೇರೆಡು ಹನಿ ಮುಖಕ್ಕೆ ಬಡಿದಾಗ ನಾನು ವಾಸ್ತವಕ್ಕೆ ಮರಳಿದೆ.

ಅವಳು ರಂಗೋಲಿಯ ಚಿತ್ತಾರ ಹಾಕಿ ಮುಗಿಸುವಷ್ಟರಲ್ಲಿ ಮಲ್ಲಿಗೇ ಕಾಲೇಜಿಗೆ ಟೈಂ ಆಗುತ್ತ ಬೇಗಬಾರೇ ಎಂದು ಅಮ್ಮನ ಧ್ವನಿ ಕೇಳುತ್ತಲೇ ಅವಳು ಒಳಗೆ ಓಡಿದಳು.

ಅವಳನ್ನ ಮತ್ತೆ ಕಾಣುವ ತವಕದಿಂದ ಒಳಗೆ ಬಂದು ಖಾಲಿಯಾದ ಹಲ್ಲುಜ್ಜುವ ಪೇಸ್ಟ್‌ನ ಬಲವಂತವಾಗಿ ಬ್ರೇಶ್‌ಗೆ ಹಚ್ಚಿ ಕ್ಷಣಾರ್ಧದಲ್ಲಿ ಹಲ್ಲುಜ್ಜಿ ತಣ್ಣೀರಿನಿಂದ ಸ್ನಾನ ಮಾಡಿ, ಅನಾಥವಾಗಿ ಮೊಳೆಗೆ ನೇತಾಡುತ್ತಿದ್ದ ಬಟ್ಟೆಯನ್ನು ಮೈಗೇರಿಸಿಕೊಂಡು ಹಸಿದ ಹೊಟ್ಟೆಯ ವಿರೋಧ ತಾಳಲಾರದೆ ಲೋಟ ನೀರು ಕುಡಿದು ಬುಕ್ಸ್ ಹೊಂದಿಸಿಕೊಂಡು ಹೊರಬರುವಷ್ಟರಲ್ಲಿ ಅವಳು ಕಾಲೇಜಿಗೆ ಹೋದ ಸುದ್ದಿತಿಳಿಯಿದು.

ನಿರಾಶಯನಾಗಿ ಅವಳ ನೆನಪಲ್ಲಿ ಒಂದೊಂದು ಹೆಜ್ಜೆ ಇಡುತ ಕಾಲೇಜು ಸಮೀಪಿಸಿದೆ. ಅಷ್ಟರಲ್ಲಿ ಇಂಗ್ಲೀಷ್ ಲೆಕ್ಟರರ್ ಪಾಠ ಮಾಡುತ್ತಿದ್ದರು. ಲೇಟಾದ ತಪ್ಪಿಗೆ ಅವರ ಒಪ್ಪಿಗೆ ಪಡೆದು ಒಳಗೆ ಬಂದು ಆಸನ ಕುದುರಿಸಿಕೊಳ್ಳುವಷ್ಟರಲ್ಲಿ ತಿರುಗಿ ನೋಡಿದರೆ ಪಕ್ಕದ ಸಾಲಿನಲ್ಲಿ ಅವಳೇ ಹಾಗೇ ಅವಳನ್ನೇ ನೋಡುತ್ತಾ..! ಜಯಂತ್ ಕಾಯ್ಕಿಣಿ ಅವರು ನನಗಾಗಿಯೇ ಈ ಗೀತೆ ಬರೆದಿದ್ದಾರೇನೋ ಅಂದುಕೊಂಡು..

ಅನಿಸುತ್ತದೆ ಯಾಕೋ ಇಂದು ನಿನೇನೇ ನನ್ನವಳೆಂದು ಮಾಯದ ಲೋಕದಿಂದ ನನಗಾಗಿ ಬಂದವಳೆಂದು

ಅಂತ ನನಗಷ್ಟೇ ಕೇಳುವ ಹಾಗೇ ಮನಸಿನಲ್ಲಿ ಗುನುಗುತ್ತ ಅವತ್ತಿನ ಆ ಎಲ್ಲಾ ಕ್ಲಾಸುಗಳು ಅವಳ ನೆನಪಿಗೆ ಕಾಣಿಕೆಯಾದವೂ ನಂತರ ಲಾಂಗ್ ಬೆಲ್ಲ್ ಹೊಡೆದ ಶಬ್ದ ಕೇಳಿ ಕ್ಲಾಸು ಬಿಟ್ಟಿದ್ದು ಅರಿವಾಯಿತು.

ನನ್ನ ಎಲ್ಲಾ ಗೆಳೆಯರಿಗೆ ಲಗುಬಗೆಯ ಗುಡ್ ಬೈ ಹೇಳಿ ಅವಳಿಗಿಂತ ಮೊದಲೇ ಕಾಲೇಜು ಕ್ಯಾಂಪಸ್ಸಿನ ಹೊರಗೆ ಅವಳಿಗಾಗಿ ಕಾಯುತ್ತ ನಿಂತೆ ಹೊಸದಾಗಿ ಕಾಲೇಜಿಗೆ ಸೇರಿದರಿಂದ, ಅವಳಿಗೆ ಅಷ್ಟಾಗಿ ಯಾರು ಪರಿಚಯವಿಲ್ಲದ ಕಾರಣ ಒಬ್ಬಂಟಿಯಾಗೇ ಮೆಲ್ಲಗೇ ನಡೆಯುತ್ತ ಕ್ಯಾಂಪಸ್ಸಿನ ಹೊರಗೆ ಬಂದಳು. ನನಗೆ ಮಾತ್ರ ಏಕೋ ಎದೆ ಬಡಿತ ತಂತಾನೆ ಜೋರಾಯಿತು. ಮಾತನಾಡಿಸಲೇ ಬೇಡವೋ ಎಂದು ಮಾನಸಿಕವಾಗಿ ಹಿಂಸೆಪಟ್ಟು ಕೊನೆಗೆ ಮಾತನಾಡಿಸಲೇಬೇಕೆಂಬ ನಿರ್ಧಾರದಿಂದ ಅವಳ ಹತ್ತಿರ ಹೋಗಿ.

ಹಲೋ . . . .! ನಿಮ್ಮ ಹೆಸರೇನೂ ಅಂದೆ (ಗೊತ್ತಿದ್ದರು) ಅವಳು ಮೆಲ್ಲಗೇ ಮಲ್ಲಿಗೆ ಅಂತ ನುಡಿದಳು ನಾನಂತೂ ತುಂಬಾ ಭಯಭೀತನಾಗಿದ್ದೆ ಕೈ ಬೆರಳುಗಳು ನಡುಗುತ್ತಿದ್ದವು ಬಾಯಲಿ ಮಾತು ಹೊರಡದೇ ಮತ್ತೆ ಮನಸಿಗೆ ಧೈರ್ಯ ತಂದುಕೊಂಡು ಹೊಸ ಅಡ್ಮಿಷನ್‌ನಾ ಎಂದೇ. . . ಅದಕ್ಕೆ ಅವಳು ಕಿರುಧ್ವನಿಯಿಂದ ಹೌದು ಎಂದಳು ನನಗಂತೂ ಅಷ್ಟಕ್ಕೆ ಸಾಕಾಗಿತ್ತು ಅವಳಿಗೊಂದು ಥ್ಯಾಂಕ್ಸ್ ಹೇಳಿ ಅವಳನ್ನೆ ಅಲ್ಲಿಂದ ಬಿಳ್ಕೋಟ್ಟೆ ಅವಳು ಮಾಯವಾಗುತ್ತಿದ್ದಂತೆ ತಿರುಗಿನೋಡಿ ಮುಗುಳ್ನಗೆ ನಕ್ಕು ಹೋದಳು. ನನಗಂತೂ ಅವತ್ತು ಎಲ್ಲಿಲ್ಲದ ಸಂತೋಷ ಅವಳಾಡಿದ ಆ ಎರಡೂ ಮಾತಿನಲ್ಲಿ ಏಳು ಜನ್ಮಕ್ಕಾಗುವ ಸಂತೋಷವನ್ನ ಒಮ್ಮೇಲೇ ಅನುಭವಿಸಿದ ಖುಷಿ.

ಇಷ್ಟರಲ್ಲಿ ಪರಿಚಿತವಾದ ಅವಳು ದಿನಗಳು ಉರುಳಿದಂತೆ ಒಳ್ಳೇಯ ಸ್ನೇಹಿತೆಯಾದಳು ಅವಳಿಗೆ ಗುಡ್ ಮಾರ್ನಿಂಗ್‌ಯಿಂದ ಹಿಡಿದು ಗುಡ್‌ನೈಟ್ ಹೇಳೋವರೆಗೂ, ಅವಳು ಆಗಾಗ ತಿನ್ನುವ ಚುಯಿಂಗ್ ಗಮ್‌ನಿಂದ ಹಿಡಿದು ಕಾಲೇಜು ಕ್ಯಾಂಟಿನ್ ಕಾಫಿವರೆಗೂ ಪ್ರತಿಯೊಂದನ್ನು ಹಂಚಿಕೊಳ್ಳುತ್ತಿದ್ದೆವು.

ಅವಳ ಆ ಸ್ನೇಹದಿಂದ ಅವಳ ಬಗ್ಗೆವಿರುವ ಒಂದೊಂದು ಪ್ರೀತಿಯ ಆಸೆಗಳು ಬತ್ತಿ ಹೋಗ ತೊಡಗಿದವು. ನಾನವತ್ತು ಅವಳ ಪ್ರೇಮ ಖೈದಿಯಾದರು ಅವಳ ಸ್ನೇಹದ ಸೆರೆಯಲ್ಲಿರುವಂತೆ ಮಾಡಿತು.

ಅವಳಾಡುವ ಆ ಒಂದೊಂದು ಸಲಿಗೆಯ ಆ ಮಾತುಗಾಳು ನನ್ನನ್ನು ಪ್ರೀತಿಸುತ್ತಿದ್ದಾಳೆನೋ ಎನ್ನುವ ನನ್ನ ಹುಚ್ಚುಕೋಡಿ ಮನಸ್ಸಿಗೆ ಇಲ್ಲಾ ಎನ್ನುವ ತಗಾದೆ ತೆಗೆದು ಒಮ್ಮೊಮ್ಮೆ ನನಗೇ ನಾನೇ ಸುಮ್ಮನಾಗಿ ಬಿಡುತ್ತಿದ್ದೆ.

ಅವಳನ ಪ್ರತಿ ವಿಷಯದಲ್ಲಿ ಪ್ರೀತಿಸುವ ನಾನು. ನಿನನ್ನ ಪ್ರೀತಿಸ್ತೀನಿ. ಅಂತ ಹೇಳಿದರೆ ಎಲ್ಲಿ ಕಳೆದೋಕ್ತಾಳೇನೋ ಎನ್ನುವ ಭಯ ನಿನ್ನನ್ನು ಯಾವತ್ತು ಆ ಪ್ರೇಮದ ಕಣ್ಣಿನಿಂದ ನೋಡೇ ಇಲ್ಲಾ ಕಣೋ ಅಂತ ಹೇಳುತ್ತಾಳೇನೋ ಎನ್ನುವ ಭಯ.

ಸದಾ ಆ ಭಯದ ನೆರಳಲ್ಲಿ ಬದುಕುವ ನನಗೆ ಜೊತೆಗೆ ದುಃಖ ಆದಾಗಲೆಲ್ಲ ನನಗೆ ನಾನೇ ಸಾಂತ್ವನ ಹೇಳಿಕೊಂಡು ಬಿಡುತ್ತಿದ್ದೆ.

ಎಲ್ಲಿಂದ ಒಂದೇ ನೀನು ಈ ಹುಚ್ಚು ಮನಸ್ಸಿನಲ್ಲಿ ಹೆಚ್ಚೆಚ್ಚು ಆಸೆ ಹುಟ್ಟಿಸಿ ಹಾಳುಮಾಡಿ ಬಿಟ್ಟೆ ಎಂದು ಒಲ್ಲದ ಮನಸ್ಸಿನಿಂದ ಒಳ ಒಳಗೆ ಅವಳಿಗೆ ಬೈದು ಕಡೆಗೆ ನಾನೇ ಕ್ಷಮೇ ಕೇಳಿ ಬಿಡುತ್ತಿದ್ದೆ. ಇಷ್ಟೆಲ್ಲಾ ನೋವುಂಡ ನನಗೆ ಕಡೆಗೆ ಹೇಳಲೇ ಬೇಕು ಎಂದಾಗಲೆಲ್ಲ ಒಂದೊಂದು ಸಂದರ್ಭಗಳು ನನ್ನುನ್ನು ಕಟ್ಟಿಹಾಕಿ ಬಿಡುತ್ತಿದ್ದವೂ. ಇಷ್ಟರಲ್ಲಿ ಅವರು ಮನೆ ಬದಲಾಯಿಸಿದರಿಂದ ಅವಳ ಭೇಟಿ ಕೂಡಾ ಅಪರೂಪವಾಯಿತು. ಅವುಗಳ ಮಧ್ಯೆ ಪರೀಕ್ಷೆ ವೇಳೆ ಕೂಡಾ ಸಮೀಪಿಸಿತು.

ಒಂದು ದಿನಾ ಕಾಲೇಜಿನಲ್ಲಿ ಏಕ್ಟ್ರಾಕ್ಲಾಸ್ ಇದ್ದುದರಿಂದ ಎಲ್ಲರಿಗಿಂತ ಮೊದಲೇ ಬಂದು ಕ್ಲಾಸ್‌ನಲ್ಲೆ ಕುಳಿತಿದ್ದೆ. ಹೊರಗೆ ನಿಂತು ಯಾರೋ ಕೂಗಿ ಕರೆದಂತಾಯಿತು ಎದ್ದು ಹೋಗಿ ನೋಡಿದರೆ ನನ್ನ ಮನಸ್ಸಿನಲ್ಲಿರೋ ಆ ಮಲ್ಲಿಗೇನೇ. . . .

ಅವಳಾಗಿ ನಿನ್ನ ಹತ್ರ ಸ್ವಲ್ಪ ಮಾತನಾಡಬೇಕು ಎಂದಳು. ಆ ಸಮಯದಲ್ಲಿ ತುಸುಖುಷಿಯಾಯಿತು. ಈ ಸಮಯದಲ್ಲಾದರೂ ನನ್ನ ಪ್ರೀತಿಯ ವಿಷಯ ಅವಳಿಗೆ ಹೇಳುವ ಅವಕಾಶ ಒಲಿದು ಬಂದಂತಾಗಿ. . . .

ಜೊತೆಯಲ್ಲಿ ಇಬ್ಬರು ಹೂದೋಟದತ್ತ ನಡೆದವು.

ನಾನಾಗಿಯೇ ಏನು ವಿಷಯ ಎಂದೇ. . . . ಅವಳ ಮುಖದೇಕೋ ಬಾಡಿತ್ತು ದಿನದ ತರಹ ಅವಳಲ್ಲಿ ಅವಳು ಇರಲಿಲ್ಲ. ಅವಳ ಆ ಮುಗುಳ್‌ನಗೆ ಎಲ್ಲೋ ಮಾಯವಾಗಿತ್ತು. ಅವಳ ಹೃದಯವನ್ನು ಯಾವುದೋ ವಿಷಯ ಕೊರೆಯುತ್ತಿತ್ತು. ಆ ದ್ವಂದ್ವ ಮುಖದಿಂದ ನನ್ನನ್ನೇ ನೋಡುತ್ತ ಮಾತು ಹೊರಡದೆ ನಡುಗುತ್ತಿರುವ ಆ ನಾಲಿಗೆಯಿಂದ ಕಿರುಧ್ವನಿಯಲ್ಲಿ. . . . . .

ಪರೀಕ್ಷೆದಿನಗಳೂ ಸಮೀಪಿಸಿವೆ. ಚೆನ್ನಾಗಿ ಓದು ಯಾವುದರ ಬಗ್ಗೆ ಯೋಚಿಸದೆ ಒಳ್ಳೆ ಪೆಸ್ಮೆಂಟ್ ಮಾಡು ಆಲ್ ದಿ ಬೆಸ್ಟ್ ಇನ್ ಯುವರ್ ಲೈಫ್ ಅಂತ ಹೇಳಿ ಕೈಗೊಂದು ಬಿಳಿ ಬಣ್ಣದ ಕಾಗದ ಕವರ್ ಒಂದನ್ನ ಕೊಟ್ಟು ಅಲ್ಲಿಂದ ಮರೆಯಾದಳು.

ಮನಸ್ಸಿನಲ್ಲಿ ಬೇರೇನೋ ಅನಿಸಿಕೆ ಇಟ್ಟುಕೊಂಡು ಅದನ್ನ ತೆರೆದು ನೋಡಿದರೆ ಅದು ಅವಳ ಮದುವೆ ಆಮಂತ್ರಣ ಪತ್ರಿಕೆಯಾಗಿತು. ಅಷ್ಟರಲ್ಲಿ ಅದರ ಜೊತೆಗಿದ್ದ ಚಿಕ್ಕದೊಂದು ಪತ್ರ ಥಟ್ ಅಂತ ಕೆಳಗೆ ಬಿದ್ದಿತ್ತು ಕೆಳಗೆ ಬಾಗಿ ಆ ಪತ್ರವನ್ನು ಕೈಗೆತ್ತಿಕೊಂಡು ನೋಡಿದರೆ ಅವಳದೇ ಹಸ್ತಾಕ್ಷರವಿರುವ ಅವಳು ನನಗಾಗಿಯೇ ಬರೆದಿರುವ ಪತ್ರ 

ಪ್ರೀತಿಯ ನಿನ್ನ . . . . . . .

ನನಗಂತೂ ನನ್ನ ಪ್ರೀತೀನಾ  ಗುಟ್ಟಾಗಿಡಲೂ ಸಾಧ್ಯವಾಗುತ್ತಿಲ್ಲ ಬರೀ ನಿನ್ನದೇ ನೆನಪು. . . ನಿನ್ನನ್ನ ಪ್ರೀತಿಸ್ತೀನಿ ಅಂತ ಹೇಳೋಕೆ ಎಷ್ಟೋ ದಿನ ಎಷ್ಟೋವಾರ, ಎಷ್ಟೋತಿಂಗಳುಗಳು ಉರುಳಿದವು ಆ ಒಂದೊಂದು ದಿನಗಳಿಗೂ ಕಣ್ಣೀರಿನಿಂದ ಲೆಕ್ಕಕೊಟ್ಟಿದ್ದೇನೆ. ಕಡೆಗೂ ನಿನಗೆ ಹೇಳದೆ ನನಗೆ ನಾನೇ ಮೋಸಮಾಡಿಕೊಂಡುಬಿಟ್ಟೆ ಅನಿಸುತ್ತೆ. ಆದರೂ ಪ್ರೀತಿಯನ್ನ ಹೇಳಿಕೊಳ್ಳಲಾಗದ ನನ್ನ ಆ ಸ್ಥಿತಿ ನನ್ನೊಳಗಿನ ಹೃದಯಕ್ಕೆ ಮಾತ್ರಗೊತ್ತು. 

ಎಷ್ಟೋ ಸಲ ಪ್ರೀತಿಯನ್ನ ಹೇಳಿಕೊಳ್ಳಲು ನಮ್ಮೊಳಗಿನ ಆ ನಗು ಕಾರಣವಾಗಿ ಬಿಡುತ್ತೆ. ಪ್ರತಿಸಲ ನನ್ನ ನಗುವನ್ನ ಇಷ್ಟಪಡೋ ನೀನು ನೀ ನಗ್ತಾಯಿದ್ದರೆ ಚೆನ್ನಾಗಿ ಕಾಣ್ತೀಯಾ ಅನ್ನೋ ನೀನು ನಿನ್ನ ಮನಸ್ಸಿನಲ್ಲಿ ನನ್ನನ್ನ ಪ್ರೀತಿಸಬೇಕು ಅಂತ ಒಮ್ಮೇಯಾದರೂ ಅನಿಸಲಿಲ್ಲವೇನೋ ಆ ನಿನ್ನ ಹಾಳು ಮನಕೆ.

ಅದಲ್ಲದೆ ನಿನ್ನ ಜೊತೆ ಎಷ್ಟೋ ಸಲ ಸಲಿಗೆಯ ಮಾತುಗಳನ್ನ ಕೂಡಾ ಆಡಿದ್ದೇನೆ. ಆಗಲಾದರೂ ನನ್ನೊಳಗಿನ ಅಂತರಮುಖಿ ನಿನಗೆ ಗೋಚರಿಸಲಿಲ್ಲವೇನೋ ಪೆದ್ದು, ಈ ನಿನ್ನ ಒಲವಿನ ಹೂವು ಪ್ರತಿದಿನ ಖುಷಿಖುಷಿಯಾಗಿರುತ್ತೆ ಅಂದ್ರೆ ಅದಕ್ಕೆ ನಿಜವಾಗಿಯೂ ನೀನೆ ಕಾರಣ ಕಣೋ.

ನಿನ್ನನ್ನ ಅದೇಷ್ಟು ಪ್ರೀತಿಸ್ತೀನಿ ಅಂದ್ರೆ ಪ್ರೆಂಡ್‌ಶಿಫ್ ಡೇ ದಿನ ನೀ ನನಗೆ ಕಟ್ಟಿದ ಆ ಫ್ರೆಂಡ್ ಬೆಲ್ಟ್ ಕೈಯಲ್ಲಿ ಮಾಸದಂತೆ ನೋಡಿ ಕೊಂಡಿದ್ದೇನೆ. ಆದರೆ ಜೊತೆಗೆ ಗಿಫ್ಟಾಗಿ ನೀ ಕೊಟ್ಟ ಆ ಪೆನ್ನನ್ನು ಕೂಡಾ ಪ್ಯಾಕ್ ಬಿಚ್ಚದೆ ಶೋ ಕೋಷದಲ್ಲಿ ಸೇಪ್ ಆಗಿ ಇಟ್ಟಿದ್ದೇನೆ.

ನನ್ನ ಬರ್ತಡೇಗೆ ನೀಕೊಟ್ಟ ಹೂಗುಚ್ಚದ ಒಂದೊಂದು ದಳಗಳನ್ನ ನನ್ನ ಡೈರಿಯಲ್ಲಿ ಅಂಟಿಸಿ ಅವುಗಳಿಗೆ ಮಿಂಚಿನ ರಂಗುಕೊಟ್ಟಿದ್ದೇನೆ. ನಿನಗೆ ಗೊತ್ತಿಲ್ಲದೆ ಬುಕ್ಸ್‌ನಲ್ಲಿರೋ ನಿನ್ನ ಹಸ್ತಾಕ್ಷರಗಳಿಗೆ ಲೆಕ್ಕವಿಲ್ಲದಷ್ಟು ಮುತ್ತಿನ ಮಳೆಗರೆದಿದ್ದೇನೆ. ನನ್ನ ಪ್ರತಿ ರಾತ್ರಿಯ ಹೊಂಗನಸನ್ನ ನಿನಗಾಗಿ ಮೀಸಲಿಟ್ಟಿದ್ದೇನೆ.

ನಿನ್ನನ್ನು ಎಷ್ಟು ಪ್ರೀತಿಸ್ತೀನಿ ಅಂತ ಇನ್ನೊಂದೇ ಕಲ್ಪನೆಗೂ ಅಸಾಧ್ಯ.

ಕಡೇ ಪಕ್ಷ ಈ ಹೇಳಲಾಗದ ಪ್ರೀತಿಗೊಂದು ನಿನ್ನಂದ ಧಿಕ್ಕಾರವಿರಲಿ.

ನಿನ್ನ ಪ್ರೀತಿಯ ತೋಟದಲ್ಲಿ ಬೆಳೆದು ಇನ್ನೊಬ್ಬರ ಮುಡಿಯನ್ನ ಆಶ್ರಯಿಸಲು ಹೊರಟಿರುವ ಈ ನಿನ್ನ ಮಲ್ಲಿಗೆಗೆ ಕಡೆಗೊಂದು ನಿನ್ನ ಕ್ಷಮೆ ಇರಲಿ. 

ಇಂತಿ 

 ನಿನ್ನ ಒಲವಿನ ಹೂ

ನನಗೆ ಗೊತ್ತಿಲ್ಲದೆ ಕಣ್ಣೀರಿನ ಹನಿಯೊಂದು ಥಟ್ ಅಂತ ಕಂಪ್ಯೂಟರಿನ ಕೀಬೋರ್ಡ್ ಮೇಲೆ ಬಿತ್ತು ಕನಸಿನ ಲೋಕದಿಂದ ಎಚ್ಚೆತ್ತುಕೊಂಡೆ ನಮ್ಮ ಆಫೀಸ್‌ನಲ್ಲಿ ಕೆಲಸ ಮಾಡೋ ನನ್ನ ಸಹೋದ್ಯೋಗಿ ಒಬ್ಬರ ಮದುವೆಯ ಆಮಂತ್ರಣ ಪತ್ರಿಕೆ ಬಿಚ್ಚಿನೋಡಿದಾಗ ನನಗಂತೂ ಕಾಲೇಜಿನ ದಿನಗಳು ನೆನಪಾದವೂ.

ಆ ದಿನ ಅಂತೂ ಮನಸಿಗೆ ಬೇಜಾರಾಗಿ ಆಫೀಸಿಗೆ ರಜೆ ಹಾಕಿ ಮನೆ ಕಡೆ ನಡೆದೆ. . . . 

-ಮಹಾಂತೇಶ್.ಯರಗಟ್ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
gaviswamy
11 years ago

ಸುಮಧುರ ಭಾವನೆಗಳು ಝರಿಯಂತೆ ಜುಳುಜುಳು ಹರಿದಿವೆ. full of emotions!
ಅಂತ್ಯದಲ್ಲಿ ವಿಷಾದವಿದ್ದರೂ ಪ್ರೀತಿಯ ಮಾಧುರ್ಯ ಅದನ್ನು ಮರೆಮಾಚುತ್ತದೆ.

ಚೆನ್ನಾಗಿದೆ .

ramesh bj
ramesh bj
11 years ago

kathe tumba bhavanatmakavagide.  vaividyateinda koodida innastu kathegalu nimminda barali.  

ಉಶಿರು
ಉಶಿರು
8 years ago

ಕಲ್ಲು ಬಂಡೆಯ ಮೇಲೆ
ಬಲ್ಲ ಹೆಸರನು ಗೀಚಿ
ಒಲವನ್ನು ತೋರ್ಪಡಿಪ
ಮಂದ ಪ್ರೇಮಿಯೇ ಕೇಳು
ಅರಿಯದಾ ಬೆಟ್ಟಕ್ಕೆ
ಹೋಗುವುದ ಬಿಟ್ಟು
ಸ್ಪಂದಿಸುವ ಹೃದಯಕ್ಕೆ
ಒಲವನ್ನು ಹೇಳು
-ಉಶಿರು

3
0
Would love your thoughts, please comment.x
()
x