ಮುಖವಾಡ ಕಳಚಿದಾಗ: ಅಮುಭಾವಜೀವಿ

amu

ವ್ಯಕ್ತಿ ಹಾಗೂ ವ್ಯಕ್ತಿತ್ವದ ಮುಖವಾಡಗಳು ಕಳಚುವ ಕಾಲದ ನಂಬಿಕೆಯ ಪರಿಸ್ಥಿತಿ ನಿಜಕ್ಕೂ ಕಳವಳಕಾರಿಯಾಗಿರುತ್ತದೆ. ನಾವು ನಮಗಿಂತಲೂ ಹೆಚ್ಚು ನಂಬಿಕೆಯಿಟ್ಟ ಮನುಷ್ಯ ನಮ್ಮ ನಂಬಿಕೆಗೆ ಅರ್ಹನಲ್ಲ ಎಂದು ತಿಳಿದಾಗ ನಮ್ಮ ಮೇಲೆ ನಮಗೆ ಜಿಗುಪ್ಸೆಯಾಗುತ್ತದೆ.

ಮಾನವ ಸಂಘಜೀವಿ .ಇಲ್ಲಿ ಬದುಕುವ ಪ್ರತಿಯೊಬ್ಬರಿಗೂ ಇನ್ನೊಬ್ಬರ ಅವಶ್ಯಕತೆ  ಇದ್ದೇ ಇರುತ್ತದೆ. ಈ ಜಗತ್ತಿನಲ್ಲಿ ಒಂಟಿ ಬದುಕು ಅಷ್ಟು ಸುಲಭವಲ್ಲ. ನೀರು ಆಹಾರ ಬಟ್ಟೆ ಮೈಥುನ ಸುಖದುಃಖ ನೋವುನಲಿವುಗಳನ್ನು ಹಂಚಿಕೊಳ್ಳಲು ಇನ್ನೊಬ್ಬರ ಸಹಾಯವನ್ನು ನಾವು ಯಾಚಿಸಲೇಬೇಕು. ನೀರು ಸ್ವಾಭಾವಿಕ ಆದರೂ ಅದನ್ನು ತಂದುಕೊಡಲು ನಮಗೆ  ನೀರಿನವನ ಸಹಾಯ ಬೇಕೇಬೇಕು. ಆಹಾರ ಬಟ್ಟೆ ಇವುಗಳನ್ನು ಪಡೆಯಲು ನಮಗೆ ರೈತ ಬೆಳೆದುಕೊಡಲೇಬೇಕು. ಹೀಗೆ ನಿತ್ಯ ನಾವು ಇನ್ನೊಬ್ಬರ ಸಹಕಾರದ ಮೇಲೆಯೇ ದಿನವನ್ನು ಯಶಸ್ವಿಯಾಗಿ ಮುಗಿಸುತ್ತಿರುತ್ತೇವೆ. ಒಂದು ದಿನ ಪೇಪರ್ನವನು ಹಾಲಿನವನು ಬರದೇ ಹೋದರೆ ನಾವೆಷ್ಟೊಂದು ಚಡಪಡಿಸುತ್ತೇವೆ. ಇಲ್ಲಿ  ಎಲ್ಲ  ಅಂದರೆ ಎಲ್ಲವೂ ಇನ್ನೊಬ್ಬರಿಂದಲೇ ನಮಗೆ ಸಿಗುವುದು. ಹಾಗಾಗಿ ನಾವು ಯಾರನ್ನು ಅಷ್ಟು ಸುಲಭವಾಗಿ ಅಳೆಯಬಾರದು. ಅವರವರ ವ್ಯಕ್ತಿತ್ವ ಅವರವರ ಬೆಲೆಯನ್ನು ನಿರ್ಧರಿಸುತ್ತದೆ. 

ಇತ್ತೀಚಿನ ದಿನಗಳಲ್ಲಿ ನಾನೇನೆಂಬುದನ್ನು ಅರಿಯದೆ ಇತರರ ಮೇಲೆ ಗೂಬೆ ಕೂರಿಸುವ ಕೆಲಸ ಹೆಚ್ಚಾಗಿ ನಡೆಯುತ್ತಿದೆ. ಅಲ್ಲದೆ ನಾನೇ ಹೆಚ್ಚು ತಿಳಿದುಕೊಂಡಿದ್ದೇನೆ,ನನಗೆ ಎಲ್ಲಾ ಗೊತ್ತಿದೆ, ನಾನೇ ಬುದ್ದಿವಂತ, ನನಗೇ  ಈ ಸಮಾಜಕದ ಬಗ್ಗೆ ಕಾಳಜಿ  ಇದೆ ಎಂದು ಹೇಳಿಕೊಂಡು ಇತರರಿಗೆ  ಆ ಬಗ್ಗೆ  ಏನೆಂದರೆ ಏನೂ ಇಲ್ಲ  ಎಂಬ ಹುಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಅವರಿಗಿಂತಲೂ ಹೆಚ್ಚು ಕಾಳಜಿ ವಾಸ್ತವತೆಯ  ಅರಿವು ನಮಗಿದ್ದರೂ ಅವರೇ ಈ ನಾಡನ್ನು ಕಟ್ಟುವ ಮಹಾಪೋಷಕರೆಂಬಂತೆ ಮೆರೆಯುತ್ತಾರೆ. ಇನ್ನೂ ಕೆಲವರು  ಇನ್ನೊಬ್ಬರ ಹೇಳಿಕೆಯನ್ನೇ ಅನುಮಾನದಿಂದ ನೋಡಿ ಅವಮಾನಿಸುವ  ಆ ಮೂಲಕ  ಅವರ ತೇಜೋವಧೆ ಮಾಡಿ ತಾವೇ ದೊಡ್ಡವರಂತೆ ಬೀಗುತ್ತಿರುತ್ತಾರೆ. ಆದರೆ ವಾಸ್ತವದಲ್ಲಿ ಅವರು  ಖಂಡಿತವಾಗಿಯೂ ಇತರರನ್ನು ನಂಬದ  ಆಶಾಡಭೂತಿಗಳಾಗಿರುತ್ತಾರೆ.

ಪ್ರತಿಯೊಬ್ಬ ವ್ಯಕ್ತಿ ಹಾಗೂ ವ್ಯಕ್ತಿತ್ವ  ಬೇರೆಯವರಿಗೆ ಮಾದರಿಯಾಗಿರಬೇಕೆಂದು ಬಯಸುತ್ತಾರೆ .ಆ ನಿಟ್ಟಿನಲ್ಲಿ ತಮ್ಮ ಬದುಕಿಗೆ ತಾವೇ ಒಂದು ಕಡಿವಾಣ ಹಾಕಿಕೊಂಡಿರುತ್ತಾರೆ. ಇಂತಹವರು ಬೇರೆಯವರ ವ್ಯಕ್ತಿತ್ವವೇನಂದರಿಯದೇ ಅವರನ್ನು  ಅವಮಾನಿಸುವ, ಅವರ ಬಗ್ಗೆ  ಇಲ್ಲಸಲ್ಲದ ಗಾಳಿಸುದ್ದಿ ಹಬ್ಬಿಸಿ ಖುಷಿ ಪಡುತ್ತಾರೆ. ಬೆಳೆಯುವವನು ಎಲ್ಲಿದ್ದರೂ ಬೆಳೆದುಳಿಯುತ್ತಾನೆ. ಅವಕಾಶ ಕಿತ್ತಕೊಂಡವನೆದುರಲ್ಲೇ ಇವನು ಸನ್ಮಾನಿತನಾಗುತ್ತಾನೆ. ಸದ್ವಿನಯ ತೋರುತ್ತಾನೆ.ತನ್ನ ಸಮಾಜಸಮಾಜಕ್ಕೆ ನಿಜವಾಗಲೂ ತನ್ನ ಸೇವೆಯನ್ನು ಸಲ್ಲಿಸುತ್ತಾನೆ. ಆಗ ಮುಖವಾಡ ಕಳಿಚಿದವನ ವ್ಯಕ್ತಿತ್ವ ಜಗತ್ತಿಗೇ ಗೊತ್ತಾಗುತ್ತದೆ.

ಮನುಷ್ಯನೆಂದ ಮೇಲೆ ರಾಗದ್ವೇಶಗಳು ಸಹಜ. ಹಾಗಂತ ಮುಖವಾಡವನ್ನು ಧರಿಸಿ ನಾನೇ ಶ್ರೇಷ್ಠ  ಎಂದು ಬೀಗುವ ಯಾರನ್ನೂ ಈ ಸಮಾಜ ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ.ಪರಿಶುದ್ಧ ಮನಸ್ಸು ಶುದ್ಧ ವ್ಯಕ್ತಿತ್ವದ ಮನುಷ್ಯನನ್ನು ಸಮಾಜ ತಾನೇ ಹುಡಿಕಿಕೊಂಡು ಗೌರವಿಸುತ್ತದೆ. ಹಾಗಾಗಿ ನಾವು ಮುಖವಾಡವನ್ನು ಧರಿಸದೇ ನಮ್ಮದೇ ಸಾಧನೆಯತ್ತ ಗಮನಹರಿಸಿ ಜಗತ್ತನ್ನು ಗೆಲ್ಲಬೇಕು. ಧರ್ಮದ ಹಾದಿಯಲ್ಲಿ ನಡೆದು ಸತ್ಯದ ಅನ್ವೇಷಣೆಯಲ್ಲಿ ಪರೀಕ್ಷೆಗಳಿಗೆ ತೆರೆದುಕೊಂಡು ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸಬೇಕು.  ಆವಾಗಲೇ ವ್ಯಕ್ತಿಗೆ ಸಿಗಬೇಕಾದ ಗೌರವ ತಾನಾಗಿಯೇ ಹುಡುಕಿ ಬರುತ್ತದೆ. ಸಮಾಜ  ಅಂತಹವರನ್ನು ಅಪ್ಪಿ ಒಪ್ಪಿಕೊಳ್ಳುತ್ತದೆ.

*ಅಮುಭಾವಜೀವಿ* 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x