ಮಾನಸಪುತ್ರ ನಾಟಕ ಪ್ರದರ್ಶನ

ನಾಟಕದ ಹೆಸರು : ಮಾನಸಪುತ್ರ.

ಆಧಾರ : ಬೀಚಿಯವರ ‘ ನನ್ನ ಭಯಾಗ್ರಫಿ’ ಮತ್ತು ಇತರೆ ಅನುಭವಗಳು

ರಚನೆ – ನಿರ್ದೇಶನ : ಬಸವರಾಜ ಎಮ್ಮಿಯವರ

ಅಭಿನಯಿಸುವ ತಂಡ : ಕಲಾವಿಲಾಸಿ

ದಿನಾಂಕ ಮತ್ತು ಸಮಯ : 13 ಏಪ್ರಿಲ್ 2019, ಶನಿವಾರ. ಸಂಜೆ 7.00 ಕ್ಕೆ

ಸ್ಥಳ :ಸೇವಾಸದನ. 14ನೆ ಅಡ್ಡ ರಸ್ತೆ, ಮಲ್ಲೇಶ್ವರ ಬೆಂಗಳೂರು

ನಾಟಕದ ಅವಧಿ : 80 ನಿಮಿಶಗಳು.

ಪ್ರವೇಶ ದರ : 100/-

ಹೆಚ್ಚಿನ ಮಾಹಿತಿಗೆ : 9663523904

ನಾಟಕದ ಕುರಿತು:

“ಮಾನಸ ಪುತ್ರ” ನಾಟಕವು ಹಾಸ್ಯ ಬರಹಗಾರ ಚಿಂತಕ ಬೀಚಿಯವರ ಜೀವನಾಧಾರಿತ ನಾಟಕವಾಗಿರುತ್ತದೆ. ಪ್ರಮುಖವಾಗಿ ಬೀಚಿಯವರ ಆತ್ಮಚರಿತ್ರೆ ಹಾಗೂ ಅವರ ಇತರೆ ಸಾಹಿತ್ಯವನ್ನು ಆಧರಿಸಿ ಈ ನಾಟಕವನ್ನು ರಚಿಸಲಾಗಿದ್ದು, ಇಡಿಯಾಗಿ ಹಲವು ಭಾವಗಳುಳ್ಳ ನಾಟಕವು ಸಾಹಿತಿಯ ಬದುಕಿನ ಒಳ ನೋಟವನ್ನು ಪ್ರೇಕ್ಷಕರಿಗೆ ಕೊಡುತ್ತದೆ.

ನಾಟಕದ ಪ್ರಮುಖ ಆಕರ ಗ್ರಂಥವಾಗಿರುವ “ನನ್ನ ಭಯಾಗ್ರಫಿ” ಕೃತಿಯು ಸಾಮಾನ್ಯವಾಗಿ ನಮಗೆ ಕಾಣ ಸಿಗುವ ಒಂದು ಕ್ರಮಬದ್ದ ಜೀವನ ಚರಿತ್ರೆಯಂತೆ ಕಂಡು ಬರುವುದಿಲ್ಲ. ಬದಲಿಗೆ ತಮ್ಮ ಅಸಂಖ್ಯ ಅನುಭವಗಳ ಪ್ರಾಮಾಣಿಕ ಸಂಗ್ರಹದಂತೆ ಲೇಖಕರು ಆತ್ಮ ಚರಿತ್ರೆಯನ್ನು ಓದುಗರ ಮುಂದೆ ಇಡುತ್ತಾರೆ. ನಾಟಕವನ್ನೂ ಅದೇ ಆಶಯದಲ್ಲಿ ಕಟ್ಟಿ ಸಾಹಿತಿಯ ಗತ ಜೀವನವನ್ನು ರಂಗದ ಮೇಲಿನ ಬೆಳಕು ಭಾವಗಳ ಮೂಲಕ ಓರೆ ಹಚ್ಚಿ ನೋಡುಗರಿಗೆ ಪುನರ್ ಪರಿಚಯಿಸಲು ಪ್ರಯತ್ನಿಸಲಾಗಿದೆ.

ತಂಡದ ಕುರಿತು:

“ಕಲಾವಿಲಾಸಿ” – ಕಲೆಯಲ್ಲಿ ಸುಖವನ್ನು ಕಾಣುವ ಬಯಕೆಯಲ್ಲಿ ಕಟ್ಟಿರುವ ಕಲಾ ತಂಡ. ವಿವಿಧ ಕ್ಷೇತ್ರಗಳಲ್ಲಿ ವೃತ್ತಿಪರರಾಗಿದ್ದುಕೊಂಡು ಕಲೆಯ ಕಡೆಗೆ ಅಪಾರ ಒಲವುಳ್ಳ, ರಂಗಭೂಮಿ ಮತ್ತು ದೃಶ್ಯ ಮಾಧ್ಯಮದಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ನಾಡಿನ ವಿವಿಧ ಭಾಗದ ಯುವಕರು ಸೇರಿ ಕಟ್ಟಿರುವ ಕಲಾತಂಡ ಇದಾಗಿರುತ್ತದೆ. ಪಿ. ಲಂಕೇಶರ ಸ್ಟೆಲ್ಲಾ ಎಂಬ ಹುಡುಗಿ ನಾಟಕ, ಪಥಿಕ, ಮಂಥನ ಎನ್ನುವ ಕಿರು ಚಿತ್ರಗಳು, ಪಸರಿಸಲಿ ಕನ್ನಡ ಎನ್ನುವ ಹಾಡಿನ ನಿರ್ದೇಶನ ಹಾಗೂ ಕನ್ನಡ ರಂಗಭೂಮಿಯ ಕೆಲವು ಪ್ರಮುಖ ನಾಟಕಗಳಲ್ಲಿ ಕೆಲಸ ಮಾಡಿರುವ ಸಣ್ಣ ಅನುಭವ ತಂಡದ ಸದಸ್ಯರಿಗೆ ಇರುತ್ತದೆ.

ಕನ್ನಡ ಕಲಾ ರಂಗದ ಶ್ರೀಮಂತಿಕೆಗೆ ಪೂರಕವಾಗುವಂತೆ ಕನ್ನಡತನವನ್ನು ಬಿಂಬಿಸುವ ಕೆಲಸವನ್ನು ಮಾಡುವ ಗುರಿಯನ್ನು ಕಲಾವಿಲಾಸಿ ಹೊಂದಿರುತ್ತದೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x