ಮಹದಾನಂದ: ಉಮೇಶ ಕ. ಪಾಟೀಲ

                  

ಭೂಮಿಯ ಮೇಲೆ ಸಹಸ್ರ ಕೋಟಿ ಜೀವರಾಶಿಗಳು ಇವೆ. ಇವೆಲ್ಲ ಜೀವಿಗಳಿಗೆ ಸುಖ, ದು:ಖ, ಸಂತೋಷ, ಆನಂದ ಇರಲೇಬೇಕು. ಅದರಲ್ಲಿಯೂ ಮನುಷ್ಯನು ಪ್ರತಿಯೊಂದು ಕೆಲಸದಲ್ಲಿ ಆನಂದವನ್ನು ಕಂಡುಕೊಳ್ಳಲು ಬಯಸುತ್ತಾನೆ. ಆನಂದ ಅಥವಾ ಮಹದಾನಂದ ಅಂದರೆ ವಿಶೇಷ ಆನಂದ, ಅತಿಶಯ ಆನಂದ, ದೊಡ್ಡ ಆನಂದ, ಈ ಆನಂದವು ಯಾವಾಗ ಯಾರಿಗೆ, ಯಾವ ಕಾರಣದಿಂದ ಬರುತ್ತದೆ ಎನ್ನುವದನ್ನು ನಿಶ್ಚಿತವಾಗಿ ಹೇಳಲು ಬರುವದಿಲ್ಲ. ಉದಾಹರಣೆಗೆ-ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸುವುದರಿಂದ  ಆನಂದ ಹೊಂದಿದರೆ. ಚಿಕ್ಕಮಕ್ಕಳು ನೀರಿನಲ್ಲಿ , ಮಣ್ಣಿನಲ್ಲಿ ಆಟ ಆಡುವದರಲ್ಲಿ ಮಹದಾನಂದ ಪಡೆಯುತ್ತಾರೆ. ರಾಜಕಾರಣಿಯು ಹಣ ಗಳಿಸುವದರಿಂದ ಆನಂದ ಹೊಂದುತ್ತಾನೆ. ಶ್ರೀಮಂತನಾದವನು ಊಟ, ವಾಹನ, ಮನೆ, ಐಷಾರಾಮಿ ಹೊಟೇಲ್ ನಲ್ಲಿ ತಂಗುವುದರ ಮೂಲಕ ಅನಂದ ಪಡೆಯುತ್ತಾನೆ. ತ್ಯಾಗಿಯಾದವನು ಎಲ್ಲವನ್ನು ತ್ಯಜಿಸಿ. ಎಲ್ಲಿ ಯಾವುದು ದೊರಕಲಾರದೋ ಅಂಥ ಅಡವಿಯಲ್ಲಿ ವಾಸ ಮಾಡುವದರಲ್ಲಿ ಪರಮಾನಂದವನ್ನು ಕಾಣುತ್ತಾನೆ. ಕಳ್ಳ -ಪಾಪಿ ಅಥವಾ ಮೋಸಗಾರ ಜೀವ ಹಿಂಸೆಯಲ್ಲಿ ಮತ್ತು ಪರರನ್ನು ಪೀಡಿಸುವದರಲ್ಲಿ ಮಹಾ ಆನಂದ ಪಡೆಯುತ್ತಾನೆ. ಪೋಕರಿ ಹುಡುಗ-ಹುಡುಗಿಯರು ತಮ್ಮ ಕಾಲೇಜು ಅಥವಾ ಹೊರಗೆ ಹುಡುಗ ಹುಡುಗಿಯರನ್ನು ಕಾಡಿಸುವದರ ಮೂಲಕ ಆನಂದ ಹೊಂದುತ್ತಾರೆ. ದೇಶದ ಗಡಿಕಾಯುವ ಸೈನಿಕ ವಿರೋಧಿಯನ್ನು ಕೊಂದರೆ ಅದರಲ್ಲಿ ಆನಂದ ಪಡೆಯುತ್ತಾನೆ. ಪುಣ್ಯವಂತನು ಜೀವದಯೆ ಮಾಡುವುದರಲ್ಲಿ ಮತ್ತು ಪರೋಪಕಾರದಲ್ಲಿ ಆನಂದವನ್ನು ಕಾಣುತ್ತಾನೆ. ಮಳೆಗಾಲದಲ್ಲಿ ಮಳೆಯಾಗುವದನ್ನು ಕಂಡು ರೈತನು ಆನಂದಭರಿತನಾಗುತ್ತಾನೆ. ಆದರೆ ವ್ಯಾಪಾರಿಯು ಆ ಮಳೆಯಿಂದಾಗಿ ಧಾನ್ಯಗಳ ಬೆಲೆ ಇಳಿಯಬಹುದು ಎಂದು ದು:ಖಿಯಾಗುತ್ತಾನೆ. ಮಳೆಯಾಗಿ ಅಧಿಕವಾಗಿ ನೀರು ಸಂಗ್ರಹವಾದರೆ ರೈತರು ಹಾಗೂ ಕುರಿಕಾಯುವರು ಸಂತೋಷ ಪಡುತ್ತಾರೆ. ಮೀನುಗಾರನಿಗೆ ಕೆರೆಯ ನೀರು ಕಡಿಮೆಯಾದರೆ  ಅದರಲ್ಲಿ ಆನಂದ ಪಡೆಯುತ್ತಾರೆ. ಈ ಸಂಬಂಧ ಜಾನಪದ ಕಥೆ ಹೀಗೆದೆ.

ಒಮ್ಮೆ ಒಬ್ಬ ರಾಜನಿಗೆ ವಯಸ್ಸಾದರೂ ಮಕ್ಕಳಾಗಿರಲಿಲ್ಲ. ಆತನಿಗೆ ತನ್ನ ಮುಪ್ಪಿನ ಕಾಲದಲ್ಲಿ ಒಂದು ಗಂಡು ಮಗು ಜನಿಸಿತ್ತು. ಅವನಿಗೆ ಮತ್ತು ರಾಜ್ಯದಲ್ಲಿರುವ ಎಲ್ಲಾ ಪ್ರಜೆಗಳಿಗೆ ಅತ್ಯಾನಂದವಾಗಿತ್ತು. ಈ ಆನಂದದ ಪ್ರದರ್ಶನಕ್ಕಾಗಿ ರಾಜನು ಪ್ರಧಾನ ಮಂತ್ರಿಯನ್ನು ಕರೆಯಿಸಿ ಆನಂದ ಪ್ರದರ್ಶನಕ್ಕಾಗಿ ರಾಜಸಭೆಯನ್ನು ಏರ್ಪಡಿಸುವಂತೆ ಆದೇಶಿಸಿದ್ದನು. ಹಾಗೆ ಮಂತ್ರಿಯು ರಾಜಸಭೆಯನ್ನು ಏರ್ಪಡಿಸಿದನು, ಆ ಸಭೆಯಲ್ಲಿ ರಾಜನ ಸಂಬಂಧಿಕರು ಪ್ರಜೆಗಳು ಪ್ರತಿಯೊಬ್ಬರು ತಮಗೆ ಎಷ್ಟು ಆನಂದವಾಗಿದೆ ಎಂಬುವದನ್ನು ಪ್ರದರ್ಶಿಸಹತ್ತಿದ್ದರು, ಕೊನೆಗೆ ಬುದ್ದವಂತ ಪ್ರಧಾನ ಮಂತ್ರಿಯ ಸರದಿ ಬಂದಿತು ಅವನು ಅಂದನು ’ಹೇ ಪ್ರಭು ಇಲ್ಲಿಯವರೆಗೆ ಪ್ರತಿಯೊಬ್ಬರು ತಮಗೆ ಹೇಗೆ ಎಷ್ಟು ಆನಂದವಾಗಿದೆ ಎಂಬುವದನ್ನು ತಾವು ಕೇಳಿರುವಿರಿ ಈಗ ನನ್ನದನ್ನ ಕೇಳಿರಿ ! ನನಗೆ ರಾಜಕುಮಾರನ ಜನನದಿಂದ ಎಷ್ಟೊಂದು ಆನಂದವಾಗಿದೆ ಎಂದರೆ ಶೌಚವು ಸ್ವಚ್ಚವಾಗಿ ಆಗುವುದರಿಂದ ಆಗುವಷ್ಟು ಆನಂದವಾಗಿದೆ ಎಂದು ಹೇಳಿದ. ರಾಜಸಭೆಯಲ್ಲಿದವರಿಗೆ ಇದು ಒಂದು ಅವಹೇಳನ ಅಥವಾ ಕೆಟ್ಟ ಶದ್ದವೆಂದು ಭಾವಿಸಿದರು. ರಾಜಸಭೆಯೇ ಒಂದು ಕ್ಷಣ ಸ್ತಬ್ಧವಾಯಿತು. ಆನಂದದಲ್ಲಿ ಓಲಾಡುತ್ತಿದ್ದ ಸಭೆಯು ಮಂತ್ರಿಯನ್ನು ತುಚ್ಛತೆಯಿಂದ ಕಾಣಹತ್ತಿದ್ದರು. ಆದರೆ ಪ್ರಧಾನ ಮಂತ್ರಿಯು ಅದನ್ನು ಉಚ್ಚವೆಂದು ಮಂಡಿಸಹತ್ತಿದನು.

"ಪ್ರಭುಗಳೇ ಮತ್ತು ಸಭೆಯಲ್ಲಿ ನೆರೆದಿದ್ದ ಸಾಮಾನ್ಯ ಜನಗಳೇ ಈಗ ಸ್ವಲ್ಪ ಹೆಚ್ಚಿನ ಗಮನವಿಟ್ಟು ಕೇಳಿರಿ ಯಾಕೆ ಹೀಗೆ ಹೇಳಿದೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿರಿ ಮತ್ತು ಆನಂತರ ತೀರ್ಮಾಣಕ್ಕೆ ಬನ್ನಿರಿ. ಮನುಷ್ಯನ ಶರೀರದಲ್ಲಿ ಆನೇಕ ಇಂದ್ರಿಯಗಳಿವೆ. ಒಮ್ಮೆ ಇಂದ್ರಿಯಗಳಲ್ಲಿ ನಾನು ಮೇಲು-ಕೀಳು ಎಂಬ ಭಾವನೆ ಉದ್ಭಯಿಸಿತು. (ಕನಕದಾಸರ ರಾಮದಾನ್ಯ ಚರಿತೆ ನೆನಪಿಗೆ ತರುತ್ತದೆ ಧಾನ್ಯಗಳಲ್ಲಿ ಶ್ರೀಮಂತ  ಬಡವ ಎಂಬ ಭಾವನೆ ಬೆಳೆದಿದ್ದವು) ಇಲ್ಲಿ ಮಾನವನ ಶರೀರದ ಮೂಲಕ ಪ್ರಾರಂಭವಾಗಿ,  ಹಲ್ಲು ನಾಲಿಗೆಯಿಂದ ಪ್ರಾರಂಭವಾದ ವಿಷಯ ಕೈ, ಕಾಲು, ತಲೆ, ಮೂಗು, ಕಿವಿ ಈ ಮೊದಲಾದರೆಲ್ಲರೂ ತಮ್ಮ ಸ್ವಂತದ ಮಹತ್ವವನ್ನು ಹಾಡಿ ಹೊಗಳಿಕೊಂಡರು ಬೇರೆಯವರನ್ನು ನಿಂದಿಸಿದರು. ಜಗಳವು ವಿಕೋಪಕ್ಕೆ ತಲುಪಿತು. ಈ ಎಲ್ಲ ಸಂಗತಿಯನ್ನು ಗಮನಿಸುತ್ತಿದ್ದ ಮಲ ವಿಸರ್ಜನ ಕೇಂದ್ರವು ದೂರದಿಂದಲೇ ಇವರೆಲ್ಲರು ಇಷ್ಟು ದಡ್ಡರಿದ್ದಾರೆ. ಅದು ಇವರನ್ನು ಸ್ವಲ್ಪ ಮಜಾ ಮಾಡಿ ನೋಡಿ ನನ್ನ ಕೈಯನ್ನು ಇವರಿಗೆ ತೋರಿಸುತ್ತೇನೆ  ಎಂದು ತನ್ನೂಳಗೆ ವಿಚಾರ ಮಾಡಿತು. ಒಂದು ದಿನ ತನ್ನ ನಿತ್ಯ ಕೆಲಸವನ್ನು ಮಾಡಲ್ಲಿಲ್ಲ ಈಗ ಜನರಿಗೆ ಹೊಟ್ಟೆ, ಕೈಕಾಲು, ಎಲ್ಲವುಗಳಲ್ಲಿ ನೋವು ಪ್ರಾರಂಭವಾಯಿತ್ತು ಜೀವ ಬೇಡವಾಗಿ ಬಂದಿತ್ತು. ಹೀಗೆ ಏಕೆ ? ಆಯಿತು ಎಂಬುವದನ್ನು ಇಂದ್ರಿಯಗಳು ವಿಚಾರಮಾಡಲು ಅಥವಾ ಚಿಂತಿಸುತ್ತಿರುವಾಗ ಆಗ ಇಂದ್ರಿಗಳ ತಲೆಯಲ್ಲಿ ಹೊಳೆಯಿತು. ತಮ್ಮ ಎಲ್ಲ ದುರಭಿಮಾನವನ್ನು ದೂರಸರಿಸಿ ಎಲ್ಲ ಇಂದ್ರಿಯಗಳು ಆ ಆಂಗಕ್ಕೆ ಶರಣಾಗತವಾದವು. ಮಾನವನ ದೇಹದಲ್ಲಿ ಮಲ ವಿಸರ್ಜನ ಕೇಂದ್ರವು ದೊಡ್ಡದು ಹಾಗೂ ಮಹತ್ವದ ಅಂಗವೆಂದು ಲೋಕಕ್ಕೆ ತೋರಿಸಿ ಕೊಟ್ಟಿತ್ತು."

ಈ ಮೇಲಿನ ನಿರ್ಣಯವನ್ನು ನೋಡಿ ಸಭಿಕರ ಮನಸ್ಸು ಸ್ವಚ್ಛತೆ ಸಂತೋಷ ಮತ್ತು ಶಾಂತಿಯ ಕಡೆಗೆ ಹೊರಳಿದ್ದವು. ಎಲ್ಲರೂ ಮಂತ್ರಿಯ ಹೇಳಿಕೆಯನ್ನು ಒಪ್ಪಿಕೊಂಡರು. ಆನಂದವು ಸಾಪೇಕ್ಷವಾಗಿದೆ ಅದೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಎಂದು ಈ ಒಂದು ಸಣ್ಣ ಲೇಖನದಿಂದ್ದ  ಹೇಳಲಾಗಿದೆ.                                                           *****                                                      

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x