ಬಟ್ಟ ಬಯಲ ನಟ್ಟ ನಡವ ಒಂದು ಬೇಲಿಯು…
ಬೇಲಿ ಮ್ಯಾಲೆ ನಗುವ ಹೂವು
ಬೇಲಿ ಒಳಗ ಚಿಣಿಗಿ ಹಾವು –
ಬೇಲಿ ಆಚಿ ನನ್ನ ಕರೆಯೋ ಚೆಲುವಿ ಬಾಲಿಯು II೧II
ಬಾಲಿ ಹಿಂದ ಬಲಿತು ನಿಂತ ಕೆಟ್ಟ ರಾಕ್ಷಸ
ಹಲ್ಲುಹಲ್ಲು ಮಸಿಯುತಾನ
ಕಲ್ಲಿ ಮೀಸಿ ತಿರುವುತಾನ –
ಕೊಲ್ಲತೀನಿ ಅಂತ ಅಟ್ಟಹಾಸ ಮೆರೆಯುತ II೨II
“ಬಿಡಿಸು ಬಾರೋ ನನ್ನ ಉಳಸು ಬಾರೋ,” ಅಂತಾಳ
ಹೆದರಿ ಹರಿಣದ್ಹಾಂಗ ನಡುಗಿ
ಮದರಂಗಿ ಬಣ್ಣದ್ಹುಡುಗಿ
ಒದರಿ ಗಂಟಲಾರಿ ಹವ್ವಹಾರಿ ಕುಂತಾಳ II೩II
ಅಲೆಲೆ, ಅಕಾ ಒಬ್ಬ ದೇವಪುರುಸ ಬಂದಾನ !
ಬೇಲಿ ಮ್ಯಾಲಿನ್ಹೂವ ಹರಿ
ಬೇಲಿ ಚಿಣಗಿ ಹಾವ ವರಿ
ಹರಿದ ಹೂವ ಅವಳ ಮುಡಿಗೆ ಇಡಿಸು,” ಅಂದಾನ II೪II
ಕೈಯ ಮುಗಿದು, ಅಡಿಯ ಮುಂದೆ ಮುಂದೆ ಇಟ್ಟೆನು
ಬೇಲಿ ಮ್ಯಾಲ ಹೂವು ಇಲ್ಲ
ಹರಿವ ಚಿಣಗಿ ಹಾವು ಇಲ್ಲ
ಬೇಲಿ ಇಲ್ಲ, ಬಾಲಿ ಇಲ್ಲ –
ಬರೀ ಬಯಲೇ ಬಯಲು ಎಲ್ಲ !
ಮಳ್ಳೋ ಮಬ್ಬೋ ಕನಸೋ ಹುಚ್ಚೋ ಎಂದು ನಕ್ಕೆನು… II೫II
ಗೋಪಾಲ ವಾಜಪೇಯಿ
ತುಂಬಾ ಚೆನ್ನಾಗಿದೆ…
ಚೆನ್ನಾಗಿದೆ ಸರ್… ಮಾತು, ಲೇಖನ, ಕವಿತೆಗಳಲ್ಲಿ ನಿಮ್ಮದು ಆಪ್ತವಾದ ಶೈಲಿ. ಈ ಕವಿತೆಯಲ್ಲಿನ ಬೇಲಿ, ಬೇಲಿ ಮೇಲಿನ ಹೂ, ರಾಕ್ಷಸ, ದೇವರನ್ನು ಪ್ರತಿಮೆಯಾಗಿ ಸ್ವೀಕರಿಸಿದರೆ ಕವಿತೆ ತನ್ನ ಬಾಹುಗಳನ್ನು ವಿಶಾಲವಾಗಿ ಚಾಚುತ್ತದೆ. ಅನುಭವದ ಮೂಲಕ ಈ ಕವಿತೆ ಬೆಳೆದಿರಬಹುದೇನೋ… ಕೆಲವೊಮ್ಮೆ ಪ್ರೇಮ ಚಡಪಡಿಕೆಗಳು ಈ ರೀತಿ ಕನಸ್ಸಾಗಿ ಕಾಡುವುದು ಹೆಚ್ಚು… ಆದರೆ ನೀವು ಪ್ರಶ್ನೆಯಾಗಿ ಇಟ್ಟಿದ್ದೀರಿ 🙂
ತುಂಬಾ ಚೆನ್ನಾಗಿದೆ…
ಕವನದಲ್ಲಿ ಪದಗಳನ್ನು ದುಡಿಸಿಕೊಂಡಿರುವ ರೀತಿ ಚೆನ್ನಾಗಿದೆ
ಗೋಪಾಲ ಸರ್, ನಾಟಕಗಳಲ್ಲಿ ಬಳಸುವ ಶೈಲಿ ಅಲ್ಲವೇ… ತುಂಬಾ ಚೆನ್ನಾಗಿದೆ
ಕವಿತೆಯ ಕೊನೆಯಲ್ಲಿನ ತಿರುವು ಚೆಂದ ಅನ್ನಿಸಿತು ಸರ್. ಇನ್ನೊಂದು ಮಾತು. ಒದರು, ಅಂತಾಳ,ಬಂದಾನ ಎಂಬಿತ್ಯಾದಿ ಪದಗಳು ನಮ್ಮ ಉತ್ತರ ಕರ್ಣಾಟಕದ ಭಾಷಾ ಸೊಗಡನ್ನು ಬಿಂಬಿಸಿವೆ. ಈ ಪದಗಳ ಬಳಕೆ ತುಂಬಾ ಹಿಡಿಸಿತು.
ಚೆನ್ನಾಗಿದೆ ಸರ್. ಧನ್ಯವಾದಗಳು.
ಪ್ರತಿಮೆ,ಬಾಷೇ, ಪದ ಸಂಯೊಜನೆ, ಮತ್ತು ವಿಷಯ ಇವುಗಳನ್ನೋಗ್ಗೊಡಿಸಿ ಕಾವ್ಯ ಕಟ್ಟುವುದನ್ನು ಈ ಹಿರಿಯರಿಂದ ಕಲಿಯಬೇಕು..
tuMbaa sogasaada kavana…..
ಚೆನ್ನಾಗಿದೆ ಸರ್
ಬಿಡಸ ಬಾರೋ ಉಳಸ ಬಾರೋ ನನ್ನ .. ಕವನ ಚೆನ್ನಾಗಿದೆ ಗುರುಗಳೇ.
Superb!!
ಎಲ್ಲವೂ ನನ್ನ ಮನಸ್ಸಿನ ಸೃಷ್ಟಿಗಳೇ!
"ಚಿಣಗಿ ಹಾವ ವರಿ" ಅಂದ್ರೇನು, ತಿಳೀಲಿಲ್ಲ ಸರ್.
ಸುಪರ್…..ಸರ್…..