ಹಾಸ್ಯ

ಮಳೆಗಾಲ ನಮ್ಮದೂ ಒಂದು ಕತೆ: ಭಾರ್ಗವಿ ಜೋಶಿ

ಅಂದೊಂದು ಸುಂದರ ಸಂಜೆ.. ಸೂರ್ಯನು ಭಾರತದ ಸೌಂದರ್ಯವನ್ನು ಮಿಂಚಿಸಿ ಈಗ ಬೇರೆ ದೇಶಗಳಲ್ಲಿ ಕಣ್ಣುತೆರೆಸುವ ಸರದಿ.. ಸೂರ್ಯ ನಿಧಾನವಾಗಿ ಹೆಜ್ಜೆಯಿಟ್ಟು ದಾಟುತ್ತಿದ್ದ.. ಚಂದ್ರನು ನಾನಿಲ್ಲೇ ಇದ್ದೀನಿ ಅಂತಾ ಮೋಡದ ಮರೆಯಿಂದ ಇಣುಕಿ ಇಣುಕಿ ನೋಡುತ್ತಿದ್ದ. ಅವನ ಬರುವಿಕೆಯನ್ನು ತಡೆಯಲು ಸಫಲವಾದ ಮೋಡಗಳು ಈಗ ನಮ್ಮ ಸಮಯ ಎಂದು ಮಳೆಸುರಿಸಲು ಸಿದ್ಧವಾಗಿದ್ದವು..

ಸಂಧ್ಯಾಕಾಲ, ತಂಪಾದಗಾಳಿ, ಮಸಕು ಬೆಳಕು, ತುಂತುರು ಮಳೆ… ಮನೆಯ ಅಟ್ಟದಮೇಲೆ ಈ ಅಂದವನ್ನು ಅನುಭವಿಸುತ್ತ ನಿಂತಿದ್ದಳು ನಮ್ಮ ಅರುಂದತಿ… (ಭಾಳ್ ದಿವಸದ ಮೇಲೆ ಕರ್ಕೊಂಡು ಬಂದೆ ಅಕಿನ್ನ ). ತಂಪಾದ ಗಾಳಿ ಇವಳನ್ನೇ ಅಪ್ಪಿದಂತೆ, ಆಗಾಗ ಸುಳಿವ ಮಿಂಚು ಇವಳಿಗೆ ಕಣ್ಣು ಹೊಡೆದಹಂಗೆ… ಏನೇನೋ ಕಲ್ಪನೆಗಳಲ್ಲಿ ಮುಳುಗಿದ್ದಳು. ಈ ಸುಂದರ ಸಮಯದಲ್ಲಿ ನನ್ನವರು ನನ್ನ ಪಕ್ಕದಲ್ಲಿ ಇದ್ದಿದ್ದರೆ ಎಂದು ಮನದಲ್ಲೇ ನೆನೆದು ನಾಚಿ ನೀರಾಗಿದ್ದಳು… ಅಷ್ಟರಲ್ಲಿ ನೆನೆದವರ ಮನದಲ್ಲಿ ಅನ್ನೋಹಾಗೆ ಅವಳ ಪತಿ ಸುಮೀತ್ ಅವಳು ಇರುವಲ್ಲಿ ಅವಳನ್ನೇ ಹುಡುಕುತ್ತ ಬಂದರು..

ಅರು….. ಅರು….. ಎಲ್ಲಿದ್ದೀಯೆ????

ಅವಳು ಒಂದುಕ್ಷಣ ದಂಗಾದಳು. ರಾತ್ರೀ late ಆಗಿ ಬರೋವ್ರು ಏನು ಇವತ್ತು ಇಷ್ಟು ಬೇಗ ಬಂದಿದ್ದಾರೆ, ನನ್ ಮನಸಿನ ಮಾತು ಅವರಿಗೆ ಕೇಳಿತಾ?? ಕೇಳಿರಬಹುದು ಎಷ್ಟೇ ಆದ್ರೂ ನಾವು ಆದರ್ಶ ದಂಪತಿಗಳು ಎಂದು ಮನದಲ್ಲೇ ಸಂಭ್ರಮಿಸುತ್ತ ಅವರು ಸಮೀಪ ಬರುವುದನ್ನ ನೆನೆಯುತ್ತ ಏನೇನೋ ಕನಸು ಕಾಣುತ್ತ ನಿಂತಳು.

ಅವಳ ಹತ್ತಿರ ಬಂದು ಸುಮೀತ್, ಹೇ ಅರು… ಅಂತಾ ಕಿವಿಯಲ್ಲೇ ಕೂಗಿದರು.. ಆಗ ವಾಸ್ತವಕ್ಕೆ ಬಂದ ನಮ್ಮ ಅರುಂದತಿ, ಹಾ… ಹೇಳ್ರಿ.. ಏನ್ರಿ ಇವತ್ತು ಇಷ್ಟು ಲಗು ಬಂದಿರಿ, ಅದು ಬಂದ ಬಂದ ಕೂಡಲೇ ನನ್ನೇ ಹುಡುಕಲಿಕತ್ತಿರಿ.. ಏನ್ ಸಮಾಚಾರ??? ಅಂತಾ ನುಲಿತಾ ಕೇಳಿದಳು.. ಅದಕ್ಕೆ ಸುಮೀತ್ “ಅಲ್ಲಾ ಕಣೆ, ಇಷ್ಟು ತಂಪುಗಾಳಿ, ಮಳೆ ಎಲ್ಲಾ ಇದೆ, ಇಂಥ time ಅಲ್ಲಿ ನಿನ್ನ ಬಿಟ್ಟು ಯಾರನ್ನ ಹುಡುಕಲಿ” ಅಂದಾಗ, ಅವಳ ಮನಸ್ಸು ನೂರಾರು nitrogen ಬಲೂನ್ ಹಿಡ್ಕೊಂಡು ಒಮ್ಮೆ ಮೇಲೆ ಹಾರಿ ಹೋಗ್ತಾ ಇದ್ದಹಾಗೆ ಆಗ್ತಾಯಿತ್ತು…

ಅವನು ಅವಳ ಹತ್ತಿರ ಬಂದು ಕಿವಿಯಲ್ಲಿ ಜೋರಾಗಿ ಅಲ್ಲಾ ಕಣೆ ಈ ತಂಪಲ್ಲಿ ಇಲ್ಲಿ ನಿಂತುಕೊಂಡು ಏನು ಮಾಡ್ತಾಇದ್ದೀಯ.. ಮತ್ತೆ, ಕೆಮ್ಮು, ನೆಗಡಿ, ಜ್ವರ ಅಂತಾ start ಆದ್ರೆ ನಾನೆ ನಿನ್ ಸೇವೆ ಮಾಡಬೇಕು, ನಡಿ ಒಳಗೆ ಸುಮ್ಮನೆ, ಅಂತಾ ಜೋರಾಗಿ ಹೇಳಿದಾಗ ಅವಳ ಬಲೂನ್ ಎಲ್ಲಾ ಒಮ್ಮೆ t
ಟುಸ್……. ಅಂದು ತೆಳಗೆ ಧೊಪ್ಪ್ ಅಂತಾ ಬಿದ್ದಹಾಗೆ ಆಯಿತು. ಅವಾಗ ಅವಳ ಕೋಪ ನೆತ್ತಿಗೆ ಏರಿ ಸುಡು ಕಣ್ಣಿಂದ ಅವನನ್ನ ನೋಡೋಕೆ ಶುರು ಮಾಡಿದ್ಲು.. ಅಯ್ಯೋ ಇರೋದನ್ನ ಹೇಳಿದ್ರೆ ಅಷ್ಟು ಕೋಪಾಯಾಕೆ ನಡಿ ನಡಿ…

ಅವಳು ಉರಿ ಉರಿ ಕೋಪಕ್ಕೆ ಕಣ್ಣೆಲ್ಲ ಕೆಂಪಾದವು. ಗಂಡನಮೇಲೆ ಕೋಪ ಮಾಡ್ಕೊಂಡು ಹೋಗ್ತಾ ಇದ್ಲು.

ಅವಾಗ ಹಿಂದಿಂದ ಸುಮೀತ್ ಒಮ್ಮೆ ಜೋರಾಗಿ ಅವಳ ಕೈ ಹಿಡಿದು ಎಳೆದ. ಕಿವಿಯಲ್ಲಿ ಏನೋ ಹೇಳೋಕೆ ಸಮೀಪ ಕರ್ಕೊಂಡ. ಅವಾಗ ಅವಳ ಕೋಪದ
ಜಾಗದಲ್ಲಿ ಸ್ವಲ್ಪ ನಗು, ನಾಚಿಕೆ..

ಅವನು ಅವಳ ಕಿವಿಯಲ್ಲಿ “ಈ ಮಳೆ, ಗಾಳಿ, climate ಚನ್ನಾಗಿದೆ ಕಣೆ, ನೀನು ಬೇಜಾರು ಮಾಡ್ಕೊಳಲ್ಲ ಅಂದ್ರೆ ಒಂದು ಮಾತು ಕೇಳಲಾ “, ಎಂದಾಗ ಅವಳು ನಾಚಿಕೆ ಇಂದ ಮಾತು ಬರದೇ ಬರಿ ಹೂ ಗುಟ್ಟಿದಳು.. ಆವಾಗ್ಲೇ ಠುಸ್ಸ್ ಆಗಿರೋ ಬಲೂನ್ ಅಲ್ಲಿ ಒಂದೆರೆಡು ಎಲ್ಲೋ ಇನ್ನು ಮೇಲೆ ಕರ್ಕೊಂಡು ಹೋಗ್ತಾ ಇದ್ದಹಾಂಗೆ ಆಯಿತು.

ಅವನು ಅವಳ ಕಿವಿಯಲ್ಲಿ please ಕಣೆ, ಈ climate ಅಲ್ಲಿ ಥ್ರಿಲ್ ಸಿಗಬೇಕು ಅಂದ್ರೆ ಬಿಸಿ ಬಿಸಿ ಮಿರ್ಚಿ, ಚಹಾ ಮಾಡಿಕೊಂಡು ಬಾ. ಅಂತಾ ಅವಳ ಕಿವಿಯಲ್ಲಿ ಹೇಳಿದಾಗ ಅಯ್ಯೋ…… ಠುಸ್ಸ್ಸ್ಸ್ಸ್ಸ್ಸ್………

ಕಣ್ಣುಗಳಲ್ಲಿ ಒಮ್ಮೆ ಜ್ವಾಲೆ ಹೊರಬಿಡುವ ಅವಳ ರುದ್ರ ರೂಪ, ನೋಡಿ ಪಾಪ ಸುಮೀತ್ ಗಾಬರಿ ಆದ…. ಅಯ್ಯೋ ಬಿಡೆ, ಇಷ್ಟಕ್ಕೆ ಯಾಕೆ ಕೋಪ ಮಾಡ್ಕೊತೀಯ, ಮಿರ್ಚಿ ಮಾಡೋಕೆ ಆಗಲ್ಲ ಅಂದ್ರೆ ಆಗಲ್ಲ ಅಂತಾ ಹೇಳು ಅದಕ್ಕೆ ಯಾಕೆ ಕೋಪ.. ಅಷ್ಟರಲ್ಲಿ ಕೈ ಕೊಸರಿಕೊಂಡು ವಟ ವಟ ಅಂತಾ ಗಂಡನಿಗೆ ಬೈತಾ ತೆಳಗೆ
ಇಳಿದು ಹೋದಳು ನಮ್ಮ ಅರು..
ಪಾಪ ಸುಮೀತ್ ಏನು ತಿಳಿದೇ ನಿಂತಿದ್ದ.
ಇಲ್ಲಿ ಪಾಪ ಸುಮೀತ್ ಆ? ಅಥವಾ ಅರು ನಾ??
ಒಟ್ಟಿನಲ್ಲಿ ಪಾಪ….

ಈ ಕಥೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ. ಎಲ್ಲರಿಗೂ ಇಂಥ experience ಆಗಿದ್ರೆ ನಾವು ಜವಾಬ್ದಾರರು ಅಲ್ಲಾ..
ಹಾ ಹಾ ಹಾ…
ಭಾರ್ಗವಿ ಜೋಶಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *