ನಿನ್ನೊಲವಿನ ಹಸಿ ಮಳೆಗೆ, ನೆನಪುಗಳ ಅಭ್ಯುಂಜನಕೆ ಈಗ ಕೇದಿಗೆಯ ಘಮ ನಲ್ಲೆ. ಮುಂಗಾರಿನ ಮೊದಲ ಮಳೆಯ ಹನಿ ಸಿಂಚನದಿ ಇಳೆಯು ಮೆದುವಾದಂತೆ ಈ ಹೃದಯ ನಿನ್ನ ಒಲವಿ ಝಡಿ ಮಳೆಗೆ ಮೆದುವಾಗಿ ಘಮ್ಮೆನ್ನುತಿದೆ. ಪ್ರೀತಿಯ ಸಿಂಚನದ ಮಂಪರಿನಲಿ ಮನಸು ತೂಗುಯ್ಯಾಲೆಯಾಡುತಿದೆ. ಈ ಪ್ರೀತಿ ಎಲ್ಲಿ, ಯಾವಾಗ, ಹೇಗೆ ಉದ್ಬವಿಸಿಬಿಡುತ್ತದೋ ತಿಳಿಯದು. ನಯನಗಳ ಮಹಲಿನಲಿ ಹೊಕ್ಕು ಗೆಜ್ಜೆಕಟ್ಟಿ ಭರತ ನಾಟ್ಯವಾಡಿಬಿಡುತ್ತದೆ. ಅದೇಷ್ಟೋ ಮೋಹಕ ನಿನ್ನಾ ನಗೆ ಮೊಗ, ಗಲ್ಲದ ಮೇಲಿನ ಆ ಹೂ ದಳ, ಪದಗಳೆ ಇಲ್ಲದೆ ಪಾದಗಳು ಬರೆಯುವ ಒಲವಿನ ಪ್ರೇಮ ಪತ್ರ, ಅದರೊಳಗೆ ಉದುಗಿದೆ ನವಿರು ಭಾವನೆ, ಝಲ್ಲನೆ ಚಿಮ್ಮುವ ಒಲವಿನ ಘಮ. ಸವಿಯುವ ನನ್ನಿ ಮನವೆ ಧನ್ಯ.
ಮಳೆಯು ಇಳೆಯ ಚುಂಬಿಸುತಿರಲು
ಬಾನು ಭುವಿಯು ಒಂದಾಗುತಿರಲು
ಮಿಲನ ಮಹೋತ್ಸವ ಸಂಭ್ರಮ
ಪ್ರೇಮಿಗಳಿಗೆ ಉಲ್ಲಾಸದ ಉತ್ಸವ
ಕನಕಾಂಬರಿ ಕಣ್ಣಿನವಳೆ, ನಿನ್ನೊಲವಿನ ಮಡಿಲಿನಲಿ ನಾ ತಲೆಯೂರಿ ಮಲಗಿರಲು ನೋಡಲ್ಲಿ ಆ ನವಿಲು ಅದೆಷ್ಟು ಚಂದದಿಂದ ನರ್ತಿಸುತಿದೆ. ಅದು ಮಳೆಬರುವ ಮುನ್ಸೂಚನೆ ಇರಬೇಕೆಂದು ನೀ ಹೇಳುವಷ್ಟರಲ್ಲೆ ಆರಂಭವಾಯಿತಲ್ಲ ಆ ಝಡಿ ಮಳೆ. ಹನಿ ಹನಿಯು ಇಳೆಯು ಚುಂಬಿಸುವಾಗ ಬಾನೆ ಕಣ್ಣೀರುಡುತಿದೆಯೇನೋ ಎಂಬಂತೆ ಭಾಸವಾಯಿತಲ್ಲವೇ, ಇವರಿಬ್ಬರ ಮಿಲನಕೆ ದಣಿದ ದೇಹದಿಂದ ಬೆವರು ಜಾರಿದಂತೆ ಅದೆಂತದೊ ಅನುಭವ, ಅದೇ ಒಲವಿನ ಸಿಂಚನ ನಲ್ಲೆ. ನೀಲಾಕಾಶಕ್ಕೂ ಇಳೆಗೂ ಮಧ್ಯೆ ಮಳೆಯ ನರ್ತನ, ಮೇಘದೂತದ ಒಲವಿನ ಕಾಂಚನ, ಆ ನೀಲಿ ಕೊಳದ ದಡದಲಿ ಮರದ ಬುಡದಲಿ ನಾನು ನೀನು ಅವೆತು ಕುಳಿತಿರಲು ಮಳೆಯು ಮೈ ತೊಳೆಯಲು ಆರಂಭಿಸದ್ದೇ ಗೊತ್ತಾಗಲಿಲ್ಲ. ಮೈ ಪೂರ ನೆನೆದು ಬಟ್ಟೆಯು ಹೊದ್ದೆಯಾಗಿ ನಮ್ಮನ್ನ ನಮಗೆ ಕಾಣುವಂತೆ ಮಾಡಿತಲ್ಲ, ಹಾಗಲೆ ನಾನು ನಿನ್ನನ್ನು ಇನ್ನೊಷ್ಟು ಬಾಚುವಂತೆ ಮಾಡಿತು. ಚಳಿಯ ಚುಂಬನಗೆ ಬಾವು ಬಂಧನದ ಆಲಿಂಗನಕೆ ದೇಹಗಳೇರಡು ಒಂದಾಗಿ ಇಳೆಯು ಮಳೆಯ ಮಿಲನದಂತೆ ಒಂದಾಂದ ನಾವು ಜಗತ್ತನ್ನೆ ಮರೆತು ಸಾವು ಹತ್ತಿರ ನಿಂತರು ದೂರ ದೂಡಿ ಮಿಲನ ಸಗ್ಗ ಸುಖವನ್ನು ಪಡೆದು ಬಿಟ್ಟವು ಮನಗಳೆರೆಡು. ಆ ನೀಲಿ ಕೊಳವೆ ನಮ್ಮನ್ನ ಆವರಿಸಿಬಿಟ್ಟಿತು. ಆ ಅದಿರು ಕೆಂದುಟಿಯಲಿ ಮೆಲ್ಲನೆ ನೀ “ಹಣಿದು ಬೀಡು ಗೆಳೆಯ” ಎಂದು ಅದೆಂತಹ ಆಸೆಗೆ ಹೇಳಿದೆಯೋ ಆ ಮಾತಿಗಾಗಿ ಕಾಯುತ್ತಿದ್ದ ಹುಚ್ಚು ಮನಸು ಮಗುವಿನಂತೆ ರಚ್ಚೆ ಇಡಿದು ನಿನ್ನಲ್ಲಿ ಸಂಪೂರ್ಣವಾಗಿ ಲೀನವಾಗಿ ಹೊರಬಂದಾಗಲೆ ನಮ್ಮಿಬ್ಬರ ಮಹಾ ಅಪರಾಧದ ಘೋರ ಮಹಾ ಯುದ್ಧ ಘಟಿಸಿಯೇ ಬಿಟ್ಟಿತ್ತು.
ಮನಸು ಮನಸು ಸೇರಿತಲ್ಲಿ
ದೇಹಗಳೆರಡರ ಬೇಸುಗೆಯಲ್ಲಿ
ಕಾಮ ಪ್ರೇಮ ಜೊತೆಗೂ ಸೇರಿ
ಮಿಲನ ಉತ್ಸವ ಜರಿಗಿತಲ್ಲಿ
ಅದಾದ ಮೇಲೆ ನಾನು ನೀನು ಎನ್ನುವ ಹಮ್ಮು ಅದ್ಯಾವಾಗ ನಮ್ಮನ್ನು ಆವರಿಸಿಕೊಂಡಿತೋ ತಿಳಿಯದು. ಒಬ್ಬರನ್ನೊಬ್ಬರು ದೂರಲು ಆರಂಭಿಸಿದೆವು. ಮೊದಲು ಸೇರಿದಂತೆ ಸೇರಲಾಗಲಿಲ್ಲ. ಸೇರಿದ ಸಮಯ ಎಂದು ಸಂತೋಷವಿರಲಿಲ್ಲ. ಮೊದಲು ಇದ್ದ ನಂಬಿಕೆ ಚೂರು ಚೂರು ಸವೆಯುತ್ತಲೇ ಇತ್ತು. ಪ್ರೀತಿಗೆ ನಂಬಿಕೆಯೇ ಬುನಾದಿ ಅದೆ ಕೊಚ್ಚಿ ಹೋಗಿತ್ತು. ಅನುಮಾನವೆಂಬ ಪಿಶಾಚಿ ಮೈದೂರಿ ನಮ್ಮನ್ನ ಆಳುಲು ಆರಂಭಿಸಿಯಾಗಿತ್ತು. ಆಪನಂಭಿಕೆಯ ಹೋಗೆಯಾಡುತಲೆ ಆಲವು ಮಾಸಗಳು ಹಾಗೂ ಈಗೂ ಕುಂಟುತ್ತಲೆ ಸಾಗಿದವು. ಆದೊಂದು ದೀನ ನಾನು ನನ್ನ ಗೆಳತಿಯೊಂದಿಗೆ ಇದ್ದಾಗ ನೀ ನೋಡಿ ಅದನ್ನೆ ಅನುಮಾನವಾಗಿಸಿಕೊಂಡೆ, ಪ್ರೀತಿ ಜೊಳ್ಳಾಗಲು ಆರಂಭಿಸಿದ್ದೆ ಆವಾಗ, ಅವಳ ನೋವು, ಅವಳ ಸೋತ ಪ್ರೀತಿ, ಪ್ರೀತಿಸಿದವನಿಂದ ಒಡಲಿನಲ್ಲಿ ಬೆಳೆಯುತಿದ್ದ ಬ್ರೂಣದ ವಿಷಯ ಹೇಳಿದಾಗ ಸ್ನೇಹಿತನಾಗಿ ನಾನು ಯಾಗೆ ಸುಮ್ಮನಿರಲಿ ಹೇಳು? ಅವರಿಬ್ಬರನ್ನು ಒಂದು ಮಾಡಬೇಕಾದದ್ದು ಗೆಳೆಯನಾದ ನನ್ನ ಕರ್ತವ್ಯವಾಗಿತ್ತು. ಅದನ್ನೆ ನೀನು ತಪ್ಪಾಗಿ ಭಾವಿಸಿದೆ.
ಅದೊಂದು ದಿನ ಮುಂಜಾವಿನ ನವಿರು ಕಿರಣಗಳು ಭುವಿ ಚುಂಬಿಸುತಿದ್ದವು, ನಾನಿದ್ದ ವನ ಮಂಜಿನ ಹನಿಗಳ ಅಭ್ಯುಂಜನದಿ ಮಲಗಿತ್ತು. ಹಕ್ಕಿ ಪಕ್ಷಿಗಳು ಮೈ ಮುರಿದು ಹೇಳುವ ಸಮಯ, ನೀ ಬರುವ ಸುಳಿವನ್ನೊತ್ತು ಮುಂಜಾವಿನ ತುಂತುರು ಮಳೆ ಸುರಿಯಲಾರಂಭಿಸಿತು. ಅದೇ ಮೂದಲ ಬಾರಿ ನಾನು ನೀನು ಬೇಟಿಯಾದ ದಿನ ಸುರಿದ ಮಳೆಯಂತೆ ಅಂದು ಸುರಿಯಿತು. ಅದೇಲ್ಲೊ ನಿನ್ನ ಘಲಿರು ಗೆಜ್ಜೆಯ ನಾದದ ಸದ್ದು ಕಿವಿಗೆ ಇಂಪು ನಿಡಿದಾಗಲೆ ಆ ಹಸಿರು ನೆಲದ ಮೇಲೆ ನೀಲಿ ಸೀರೆಯ ನೆರಿಗೆಯನೊದೆಯುತ್ತ ಗಂಧರ್ವ ಲೋಕದ ಸುರ ಕನ್ಯೆ ನಡೆದು ಬರುವಂತೆ ನೀ ಎನ್ನೆಡೆಗೆ ಬರುವಾಗ ನನ್ನೆದೆಯ ಅಂಗಳಕೆ ಅದೆಂತದ್ದೊ ಹಿಗ್ಗು. ಆ ಝಡಿ ಮಳೆಯಲ್ಲಿ ನೆನೆದು ತೊಪ್ಪೆಯಾಗಿದ್ದ ನನಗೆ ಅದೆಂತದ್ದೊ ಖುಷಿ, ಬಳಿ ಬಂದ ಚೆಲುವೆ ಸುಮ್ಮನೆ ನಿಂತೆ, ನಾನು ಮಾತನಾಡಿಸುವ ಮೋದಲೆ ಮಳೆ ಜೋರಾಯಿತು, ಮರದಡಿ ನಿಂತ ನಮ್ಮಿಬ್ಬರಿರೂ ಅದರರಿವು ಹಾಗುವ ಮುನ್ನವೇ “ಮರೆತು ಬೀಡು ನನ್ನನ್ನು, ನಾವು ಎಂದು ಒಂದಾಗಲಾರೆವು” ಎಂದು ನುಡಿದು ತಿರುಗಿಯೂ ನೋಡದೆ ನಡೆದುಬಿಟ್ಟೆ ನೀ, ನನಗರಿವಿಲ್ಲದೆ ಕಣ್ಣಿರು ಮಳೆಯ ಹಣಿ ಜೋತೆಗೂಡಿ ಧರಣಿ ಮಡಿಲ ಸೇರಿದವು.
ನೀಜ ಪ್ರೀತಿಯಲ್ಲಿ ಕಾಮ ಮೈದೋರಿದರೆ ಅದು ತೆಳುವಾಗಿ ನಸಿಸಿಹೋಗುತ್ತದೆ. ನೀ ಹೋದ ದಿಕ್ಕಿಗೆ ಮಳೆಯು ನಿನ್ನ ಜೋತೆ ಸಾಗಿ ಬಂದು, ಒಬ್ಬಂಟಿಯಾದೆ ನಾ ಅಂದಿನಿಂದ ನಿನ್ನ ನೆನಪಿನ ಗುಂಗಿಲಿ ಸಾಗಿ ಬಂದಿರುವೆ ಇಷ್ಟು ದಿನ, ನೀ ತೋರೆದೊದ ಮೇಲೆ ಆ ರಮ್ಯೋಧ್ಯಾನ ಭಿಮ್ಮೆನ್ನುತ್ತಿದೆ, ಅಂತಿನಿಂದ ನಾ ಆತ್ತಕಡೆ ತಿರಿಗಿಯು ನೋಡಲಿಲ್ಲ. ನಲ್ಲೆ ನಾ ಎಂದು ಅದೇಷ್ಟು ಪರಿಪರಿಯಾಗಿ ಬೇಡಿಕೊಂಡರು ಕನಿಕರಿಸದೆ ನೀ ದೂಡಿ ಹೋದೆ, ಆದರೆ ಅಂದು ಇಂದ ನನ್ನ ಒಲವಿನ ಪ್ರೇಮ ಸುಧೆ ಇಂದಿಗೂ ನಿನಗಾಗಿ ಹಂಬಲಿಸುತಿದೆ. ಕಾರಣವಿಲ್ಲದೆ ತೋರೆದು ಹೋದವಳ ಕಾರಣ ಕೇಳಲೆಂದು ಬದುಕಿರುವೇನೇನೊ ನಾನು ಎನ್ನುತಿದೆ. ನೋಂದು ಬೆಂದು ಬದುಕಿರುವ ಫಕೀರನ ಬದುಕು, ಆ ನೋವು ನನಗೆ ಇರಲಿ ಬೀಡು ಎಷ್ಟಾದರು ನಾನು ಪಾಪಿಯಲ್ಲವೇ? ಮಲ್ಲಿಗೆ ಮುಡಿದು ನೀ ಸುಖದಿಂದಿರು ಗೆಳತಿ..,
-ಸಿದ್ದುಯಾದವ್ ಚಿರಿಬಿ