ಪ್ರಥಮ್ ಬುಕ್ಸ್ ಸ್ಟೋರಿವೀವರ್ ನ (https://storyweaver.org.in) ಮತ್ತೆ ಹೇಳಿ, ಮರು ಜೋಡಿಸಿ, ನಲಿದಾಡಿ ಅಭಿಯಾನ ವು (Retell, Remix, Rejoice) ಮಾ.20 ರಿಂದ ಶುರುವಾಗಲಿದೆ. ಈ ಮೂಲಕ ಪ್ರಥಮ್ ಬುಕ್ಸ್ ನ ವಾರ್ಷಿಕ ಕತೆ ಹೇಳುವ ಸ್ಪರ್ಧೆಗೆ ಚಾಲನೆ ಸಿಗಲಿದೆ.
ಪ್ರತಿ ವರ್ಷ ಮಾ.20ಕ್ಕೆ ನಮಗಾಗಿ ಕತೆಗಳನ್ನು ಬರೆದ ಲೇಖಕರು, ಓದುಗರಿಂದ ಆಯ್ದ ಕೆಲವು ವಿಷಯಗಳ ಮೂಲ ಎಳೆಯೊಂದಿಗೆ ಕತೆಗಳನ್ನು ಬರೆಯಲು ಆಹ್ವಾನಿಸುತ್ತೇವೆ. ಈ ಎಲ್ಲಾ ವಿಷಯಗಳು ಪ್ರಥಮ್ ಬುಕ್ಸ್ ಸಂಪಾದಕೀಯ ಬಳಗದ ಆಯ್ಕೆಯೇ ಆಗಿರುತ್ತದೆ.
2019ರ ಅಭಿಯಾನದ ಮುಖ್ಯ ಉದ್ದೇಶ ಕನ್ನಡ, ಹಿಂದಿ, ಬಂಗಾಳಿ, ಮರಾಠಿ, ತಮಿಳು , ಉರ್ದು ಮತ್ತು ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಶ್ ಭಾಷೆಗಳಲ್ಲಿ ಹೊಚ್ಚ ಹೊಸ ಕತೆಗಳನ್ನು ಬರೆಸುವುದು ಮತ್ತು ಈ ಭಾಷೆಗಳ ಕತೆಗಳಿಗೆ ಓದುಗರನ್ನು ಹೆಚ್ಚಿಸುವುದು. ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಉದಯೋನ್ಮುಖ ಬರಹಗಾರರನ್ನು ಗುರುತಿಸಿ, ವೇದಿಕೆ ಒದಗಿಸುವುದು ಈ ಅಭಿಯಾನದ ಧ್ಯೇಯೋದ್ದೇಶ.
ಹಂತ 1, 2 ರಂತಹ ಸರಳ, ಓದಲು ಸುಲಭ ಕತೆಗಳನ್ನು ಬರೆದು, ಸ್ಟೋರಿವೀವರ್ ನಲ್ಲಿ ಪ್ರಕಟಿಸುವುದು ಇದರ ಪ್ರಮುಖ ಕಾರ್ಯ ಚಟುವಟಿಕೆ.
* (ಹಂತ 1 : 1- 4 ವರ್ಷದ ಮಕ್ಕಳು ಓದಬಲ್ಲ, ಹಂತ 2: 4-8 ವರ್ಷದ ಮಕ್ಕಳು ಓದಬಲ್ಲ)
2019ರ ವಿಷಯಗಳು
ಕುಟುಂಬ, ಸ್ನೇಹಿತರು ಮತ್ತು ನೆರೆಹೊರೆಯವರನ್ನು ಕುರಿತಾದ ಕತೆಗಳು: ತಂದೆ-ತಾಯಿ, ಸೋದರರು, ಚಿಕ್ಕಪ್ಪ- ಚಿಕ್ಕಮ್ಮಂದಿರು, ಅಜ್ಜ-ಅಜ್ಜಿಯರು… ಕುಟುಂಬ, ಪರಿವಾರದ ಪರಿಕಲ್ಪನೆ, ಗೆಳೆಯರು ಮತ್ತು ಸಮುದಾಯ ಕುರಿತಾದ ಯಾವುದೇ ವಸ್ತು ಕತೆಯಾಗಬಹುದು.
ಮುದ ನೀಡುವ ಕತೆಗಳು: ಹಾಸ್ಯದ ಮೂಲಕ ವಿಷಯ ತಿಳಿಸುವ ಯಾವುದಾದರೂ ಕತೆ.
ಆಟಗಳನ್ನು ಕುರಿತ ಕತೆ: ಫುಟ್ ಬಾಲ್, ಕ್ರಿಕೆಟ್, ಗಿಲ್ಲಿ-ದಾಂಡು, ಕೂಡಿ ಆಡುವ ಯಾವುದೇ ಆಟ, ಸಮುದಾಯ ಕುರಿತ ಕತೆಗಳು. ಕ್ರೀಡಾ ಸಾಧಕರ ಸ್ಫೂರ್ತಿದಾಯಕ ಕತೆಗಳು.
ಶಾಲಾ ಕತೆಗಳು: ಶಾಲಾ ದಿನಗಳು, ಗೆಳೆತನ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಶಾಲಾದಿನಗಳ ಮಧುರ ಮೆಲುಕುಗಳು, ಅಷ್ಟೇ ಏಕೆ ಊಟದ ಸಮಯ ಇತ್ಯಾದಿ. ವಿಷಯಗಳಿರುವ ಕತೆಗಳು.
ಪದ ಮಿತಿ: 300 – 400
ಕತೆಗಳನ್ನು https://storyweaver. org.in ನಲ್ಲಿ ಪ್ರಕಟಿಸಬೇಕು. ಕತೆಗೆ ಚಿತ್ರಗಳ ಆಯ್ಕೆ, ಟೈಪಿಸುವ ಬಗ್ಗೆ, ವಿನ್ಯಾಸದ ಬಗ್ಗೆ ಸಂದೇಹಗಳಿದ್ದಲ್ಲಿ video tutorial ಇಲ್ಲಿ ಕ್ಲಿಕ್ ಮಾಡಿ. ಚಿತ್ರ ಸಂಗ್ರಹಗಳ ಆಯ್ಕೆ ಮತ್ತು ಕತೆ ಪ್ರಕಟಣೆಗೆ here ಇಲ್ಲಿ ಕ್ಲಿಕ್ ಮಾಡಿ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನೀವು ಸ್ಟೋರಿವೀವರ್ ನಲ್ಲಿ ಖಾತೆ ತೆರೆಯಬೇಕು (ಸುಲಭ ಮತ್ತು 30 ಸೆಕೆಂಡುಗಳಲ್ಲಿ ಮುಗಿವ ಪ್ರಕ್ರಿಯೆ ಇದು)
==
ಸಹಕಾರದ ನಿರೀಕ್ಷೆ
ಸಹಕಾರದ ನಿರೀಕ್ಷೆ
ಲೇಖಕರು, ಸಮಾನಾಸಕ್ತರು ನಿರ್ದಿಷ್ಟ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕುರಿತ ಪ್ರಥಮ್ ಬುಕ್ಸ್ ನ ಇ-ಪೋಸ್ಟರು ಗಳನ್ನು ಪ್ರಕಟಿಸುವ ಮೂಲಕ ಮಾಹಿತಿ ಹಂಚಿಕೊಳ್ಳಬೇಕು.
ಕನ್ನಡದಲ್ಲಿ ಅತ್ಯುತ್ತಮ ಕತೆ ಬರೆದ ಒಬ್ಬ ವಿಜೇತರಿಗೆ ವಿಶೇಷ ಬಹುಮಾನ ಸಿಗಲಿದೆ.
==