ಮತ್ತೆ ವಸಂತ: ಶ್ರೇಯ ಕೆ ಎಂ

ಸ್ಮಿತಾ ಹಾಗೆಯೇ ಚೇರ್ ಗೆ ಒರಗಿದ್ದಾಳೆ. ಕಣ್ಣಂಚಲ್ಲಿ ನೀರಾಡಿದೆ. ಹಾಗೇ ಹಿಂದಿನ ನೆನಪುಗಳತ್ತ ಜಾರುತ್ತಿದೆ ಮನಸು.

ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಸ್ಮಿತಾ ಓದಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ಎಲ್ಲದರಲ್ಲೂ ಮುಂದು. ಮನೆಯಲ್ಲಿ ಮುದ್ದಿನ ಮಗಳು. ಒಡಹುಟ್ಟಿದವರೊಂದಿಗೆ ಬೆಳೆದ ಸ್ಮಿತಾ ಮನೆಯವರೆಲ್ಲರ ಪಾಲಿನ ಅಚ್ಚುಮೆಚ್ಚು. ಮಧ್ಯಮವರ್ಗದ ಕುಟುಂಬವಾದರೂ ಇದ್ದುದರಲ್ಲಿಯೇ ಸುಖವಾಗಿದ್ದ ಸಂಸಾರ. ಪದವಿ ಓದಿನ ಜೊತೆಗೆ ಹಲವಾರು ಕಲೆಗಳನ್ನು ಕಲಿತವಳು. ಹೀಗೆ ಸಾಗುತ್ತಿದ್ದ ಸಂಸಾರದಲ್ಲಿ ಒಮ್ಮೆ ಅದೆಲ್ಲಿಂದಾನೋ ಒಂದು ಗಂಡಾಂತರ ಬಂದು ಸ್ಮಿತಾಳ ಬಾಳೇ ಛಿದ್ರವಾಗಿ ಹೋಯಿತು. ಕಾರಣ ಅಪ್ಪನ ದುರ್ಮರಣ. ಅಪ್ಪ ಕೆಲಸದಿಂದ ಬರುವಾಗ ಎದುರಿಂದ ವೇಗವಾಗಿ ಬರುತ್ತಿರುವ ಲಾರಿ ಡಿಕ್ಕಿ ಹೊಡೆದು ಅಪ್ಪನ ದುರ್ಮರಣ. ಅಣ್ಣನಿಗೆ ಓದು ತಲೆಗೆ ಹತ್ತದೆ ಅರ್ಧಕ್ಕೆ ನಿಲ್ಲಿಸಿ ಯಾವುದೊ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ.. ಅಕ್ಕನ ಮದುವೆ ಫಿಕ್ಸ್ ಆಗಿತ್ತು. ಅದರ ವರೋಪಚಾರದ ದುಡ್ಡನ್ನು ಹೊಂದಿಸಿಕೊಂಡು ಬರುವಾಗ ಅಪ್ಪನ ದುರ್ಮರಣ. ಅಮ್ಮನ ಸ್ಥಿತಿ ನೋಡಲು ಸಾಧ್ಯವಾಗದ ಸ್ಥಿತಿ. ಹಾಗಾಗಿ ಸ್ಮಿತಾಳೆ ಈಗ ಮುಂದೆ ನಿಂತು ಮನೆಯ ಜವಾಬ್ದಾರಿಯನ್ನ ಹೊತ್ತುಕೊಳ್ಳುವ ಪರಿಸ್ಥಿತಿ.. ತನ್ನ ಓದಿಗೆ ತಕ್ಕ ಕೆಲಸ ಇಲ್ಲದಿದ್ದರೂ ತನ್ನ ಗೆಳತಿಯರ ಸಹಾಯದಿಂದ ಒಂದು ಆಫೀಸ್ ಲ್ಲಿ ಕೆಲಸಕ್ಕೆ ಸಿಕ್ಕು ಹ್ಯಾಗೋ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿತು.. ಅಪ್ಪ ಸತ್ತ ಒಂದು ವರುಷದ ಒಳಗೆ ಅಕ್ಕನ ಮದುವೆಯನ್ನು ಮಾಡಿ ಮುಗಿಸಿದ್ದಾಯಿತು.

ಹೀಗೆ ಸಾಗುತ್ತಿರುವಾಗ ಜೀವನ ಆಫೀಸ್ನಲ್ಲಿ ಪ್ರಣವ್ ಎನ್ನುವ ಹುಡುಗ ಇವಳ ಕಡೆ ಆಕರ್ಷಿತನಾದ.. ಇವಳನ್ನು ಪ್ರೊಪೋಸ್ ಕೂಡ ಮಾಡಿದ.. ಆದರೆ ಇವಳು ನನಗೆ ಸಂಸಾರದ ಜವಾಬ್ದಾರಿ ಇದೆ ಅದೆಲ್ಲಾ ಮುಗಿದ ಮೇಲೆ ನೋಡುವ ಎಂದು ನಿರಾಕರಿಸಿದಳು.. ಆದರೆ ಪ್ರಣವ್ ಗೆ ಹುಚ್ಚು ಬಯಕೆ ಅವಳನ್ನು ಪಡೆದೆ ಪಡೆಯಬೇಕೆಂಬ ಹಠ. ಪ್ರಣವ್ ಮನೆಯಲ್ಲಿ ತುಂಬಾ ಶ್ರೀಮಂತರಾದರು ತುಂಬಾ ಸೊಕ್ಕಿನ ಜನ. ಅವರ ಮನೆಗೆ ಸೊಸೆಗಿಂತ ಕೆಲಸದ ಅಳು ಬೇಕಾಗಿತ್ತು. ಪ್ರಣವ್ ಕೂಡ ಇದರಿಂದ ಹೊರತಲ್ಲ. ಅವರ ಮನೆಯ ಕೆಲಸಕ್ಕೆ ಸ್ಮಿತಾನೆ ಸರಿ ಹೊಂದುತ್ತಾಳೆಂದು ತಿಳಿದು ಅಪ್ಪ ಅಮ್ಮನಿಗೆ ತಿಳಿಸಿ ಅವರ ಮನೆಗೆ ಬಂದು ಹೆಣ್ಣು ಕೇಳುವ ಶಾಸ್ತ್ರ ಮಾಡಿದರು. ಅಮ್ಮ ಅಣ್ಣನಿಗೆ ಖುಷಿಯೋ ಖುಷಿ. ನಾವು ಹುಡುಕಿದರೂ ಇಷ್ಟು ದೊಡ್ಡ ಶ್ರೀಮಂತರ ಮನೆ ಸಿಗುವುದಿಲ್ಲವೆಂದು ತಿಳಿದು ಸ್ಮಿತಾಳನ್ನು ಕಾಡಿ ಬೇಡಿ ಒಪ್ಪಿಸಿದರು.. ಸ್ಮಿತಾ ಮೊದಮೊದಲು ಒಪ್ಪಲಿಲ್ಲ ಆದರೂ ಆಫೀಸ್ನಲ್ಲಿ ಪ್ರಣವ್ ಎಲ್ಲರೊಂದಿಗೂ ಚೆನ್ನಾಗಿ ಇರುವುದನ್ನು ಗಮನಿಸಿ ಒಪ್ಪಿದಳು. ಸರಳವಾಗಿ ವಿವಾಹವು ಆಯಿತು.

ಈಗ ಸ್ಮಿತಾಳ ಸ್ಥಿತಿ ಬಾಣಲೆಯಿಂದ ಬೆಂಕಿಗೆ.. ಮದುವೆ ಆಗಿಬಂದ ಒಂದು ವಾರದವರೆಗೂ ಅವಳಿಗೆ ಏನು ತಿಳಿಯಲಿಲ್ಲ. ತನ್ನ ಸಂಸಾರದ ಬಗ್ಗೆ ಅಭಿಮಾನ ಮೂಡಿತು. ಆದರೆ ವಾರದ ನಂತರ ಅವರ ವರಸೆ ಗೊತ್ತಾಗ್ತಾ ಹೋಯಿತು. ಕೂತರು ತಪ್ಪು ನಿಂತರು ತಪ್ಪು, ಗಂಡ ಕೂಡ ಒಂದು ವಾರದಲ್ಲಿ ಅವಳನ್ನ ಹಿಂಡಿ ಹಿಪ್ಪೆ ಮಾಡಿ ಸುಖಿಸಿದ. ಅತ್ತೆ ಮಾವ ಕಷ್ಟದ ಮೇಲೆ ಕಷ್ಟ ಕೊಡುತ್ತಿದ್ದರು, ಪ್ರಣವ್ ಕೂಡ ಹೊರತಲ್ಲ. ಒಮ್ಮೆ‌ ಅವರಣ್ಣ ಅವಳಮ್ಮ ಬಂದಾಗ ಸ್ಮಿತಾಳನ್ನು ದೂರಿದ್ದೇ ದೂರಿದ್ದು. ಆಗ ಅವಳಮ್ಮ ಛೆ ಮಗಳ ಬಾಳನ್ನು ನಾನೇ ಹಾಳು ಮಾಡಿದೆ ಎಂದು ತಿಳಿದು ತುಂಬಾ ನೊಂದುಕೊಂಡರು..

ಹಾಗೇ ಹೀಗೆ ಒಂದು ಒಂದಾರು ತಿಂಗಳು ಕಳೆದಿರಬಹುದು. ಸ್ಮಿತಾಗೆ 6 ತಿಂಗಳು 60 ವರುಷದಂತೆ.. ಎಷ್ಟೇ ರೋಸಿ ಹೋದರು ಅಪ್ಪ ಅಮ್ಮ ಕಲಿಸಿದ ಸಂಸ್ಕಾರಕ್ಕೆ ಎದುರು ವಾದಿಸದೆ. ಸುಮ್ಮನಿದ್ದಳು. ಪ್ರಣವ್ ನಾ ದುಶ್ಚಟಗಳಿಂದ ರೋಸಿ ಹೋಗಿದ್ದಳು. ಆದರೂ ತಿರುಗಿಸಿ ಮಾತನಾಡಿದರೆ ತವರಿನವರು ಕಷ್ಟ ಎಂದು ಎಲ್ಲವನ್ನು ಸಹಿಸಿಕೊಂಡಿದ್ದಳು. ಹೀಗೆ ಸಾಗುತ್ತಿರುವಾಗ ಸ್ಮಿತಾ ಗರ್ಭಿಣಿ ಆದಳು. ಇನ್ನಾದರೂ ಅವಳಿಗೆ ಕಷ್ಟದಿಂದ ಪಾರಾಗಬಹುದು ಎಂಬ ಯೋಚನೆಗೆ ಅಡ್ಡಿ ಆಗಿದ್ದು ಅತ್ತೆ ಹಾಗೂ ಪ್ರಣವ್ ಕುಡಿಯುವ ಹಾಲಿನಲ್ಲಿ ಅಬಾರ್ಷನ್ ಆಗುವ ಮಾತ್ರೆ ಕೊಟ್ಟು ಅಬಾರ್ಶನ್ ಮಾಡಿಸಿಯೇ ಬಿಟ್ಟರು. ಇಲ್ಲಿಯವರೆಗೂ ಎಲ್ಲವನ್ನು ಸಹಿಸಿಕೊಂಡಿದ್ದ ಸ್ಮಿತಾ ಕೆಂಡಾಮಂಡಲವಾಗಿ ತಿರುಗಿ ಬಿದ್ದಳು. ತನ್ನ ಕಾಲೇಜಿನ ಗೆಳತಿ ಸಂಧ್ಯಾಳ ಸಹಾಯದಿಂದ ಇದಕ್ಕೆಲ್ಲಾ ಉಪಾಯ ಹೇಳು ಎಂದು ಗೋಗೆರೆದಳು. ಆ ಮನೆಯನ್ನು ಬಿಟ್ಟು ಬರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಯಾಕೆಂದರೆ ಸಮಾಜದಲ್ಲಿ ಹೆಸರು ಮಾಡಿದ ಮನೆತನ, ಪೊಲೀಸ್ ಲಾಯರ್ ಎಲ್ಲರೂ ಇವರ ಕೈ ಕೆಳಗೆ. ಸ್ಮಿತಾ ತುಂಬಾ ಯೋಚಿಸಿದಳು ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕೆಂದು ನಿರ್ಧಾರ ಮಾಡಿ ಅತ್ತೆ ಮಾವ ಗಂಡನನ್ನು ಬದಲಾಯಿಸುವ ಮನಸ್ಥಿತಿಗೆ ಬಂದಳು. ಆದರೆ ಅವಳ0ದುಕೊಂಡಷ್ಟು ಸುಲಭವಲ್ಲದ ಕೆಲಸ. ಹೇಗಾದರೂ ನಾ ಏನನ್ನಾದರೂ ಸಾಧಿಸಿಯೇ ಸಾಧಿಸುತ್ತೇನೆಂದು ಪಣ ತೊಟ್ಟಳು.

ಪ್ರತಿದಿನ ಅತ್ತೆ ಮಾವ ಮನೆಯಲ್ಲಿರುತ್ತಿದ್ದಿದ್ದದ್ದೇ ಕಡಿಮೆ ಆ ಪಾರ್ಟಿ ಈ ಪಾರ್ಟಿ ಎಂದು ಹೊರಗಡೆಯೇ ಹೆಚ್ಚಿರುತ್ತಿದ್ದರು. ಹಾಗಾಗಿ ಸ್ಮಿತಾ ತಾನು ಕಲಿತ ವಿದ್ಯೆಯನ್ನು ಸದುಪಯೋಗಪಡಿಸಿಕೊಳ್ಳಲು ಆರಂಭಿಸಿದಳು. ತನ್ನ ಗೆಳತಿಯರ ಸಹಾಯದಿಂದ ಹಲವಾರು ಕರಕುಶಲ ವಸ್ತುಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದಳು. ಪತ್ರಿಕೆಯಲ್ಲಿ ಬೇರೆ ಹೆಸರಿನಿಂದ ಹಲವಾರು ಲೇಖನಗಳನ್ನು ಬರೆದಳು. ಸ್ತ್ರಿ ಸ್ವಾತಂತ್ರ್ಯದ ಬಗ್ಗೆ ಸ್ತ್ರಿಯರ ಕಷ್ಟಗಳ ಬಗ್ಗೆ ಬರೆದು ಜನಸಾಮಾನ್ಯರಿಗೆ ಹೆಚ್ಚು ಆಪ್ತವಾಗುತ್ತ ಹೋದಳು

ಪತ್ರಿಕೆಯಲ್ಲೇ ಸ್ತ್ರೀಯರು ಯಾವೆಲ್ಲ ರೀತಿ ಸ್ವಾವಲಂಬನೆಯಿಂದ ಬದುಕಬೇಕು ಎಂಬಿತ್ಯಾದಿ ವಿಷಯಗಳನ್ನು ಬರೆದು, ಜನಸಾಮಾನ್ಯರು ತಮ್ಮಲ್ಲಿಯೇ ಚರ್ಚೆ ನಡೆಯುವು ವಂತೆ ಮಾಡುತ್ತಿದ್ದಳು.. ಅವಳ ವ್ಯಾಪಾರ ಕೂಡ ಗೆಳತಿಯರ ಸಹಾಯದಿಂದ ಎಲ್ಲಾ ಕಡೆ ಪ್ರಸಿದ್ದಿ ಪಡೆಯಿತು. ಇತ್ತ ಪ್ರಣವ್ ನಾ ದುಂದುವೆಚ್ಚ ಹಾಗೂ ಸ್ತ್ರೀ ವ್ಯಾಮೋಹದಿಂದ ದಿನ ದಿನ ಮನೆಯ ಪರಿಸ್ಥಿತಿಯೇ ಹಾಳಾಗ್ತಾ ಬಂತು. ಕೂತು ತಿಂದರೆ ಕುಡಿಕೆ ಹೊನ್ನು ಸಾಲದ ಅನ್ನುವ ಪರಿಸ್ಥಿತಿ ಹಾಗೇ ಆಗಿತ್ತು. ಇಷ್ಟಾದರೂ ಯಾರಿಗೂ ಸ್ಮಿತಾಳ ಕೆಲಸದ ಬಗ್ಗೆ ಲೇಖನಗಳ ಬಗ್ಗೆ ಮನೆಯಲ್ಲಿ ಒಂದು ಸುಳಿವು ಕೂಡ ಸಿಗುತ್ತಿರಲಿಲ್ಲ.. ಹೀಗೆ ಒಮ್ಮೆ ಪತ್ರಿಕೆಯವರು ಜನರ ಒತ್ತಾಯದ ಮೇರೆಗೆ ಸ್ಮಿತಾಳ ಸಂದರ್ಶನ ಏರ್ಪಡಿಸಿದಾಗ ಮನೆಯಲ್ಲಿ ಗೊತ್ತಾಗಿ ರಣರಂಗವೇ ಅಗೋಯ್ತು. ಆದರೆ ಇದಕ್ಕೆ ದೃತಿಗೆಡದೆ ಸ್ಮಿತಾ ಪತ್ರಿಕೆಯವರ ಸಹಾಯದಿಂದ ಮನೆಯಿಂದ ಹೊರನಡೆದು ಪಿಜಿಲಿ ಉಳಿದುಕೊಂಡು ತನ್ನ ಕಾರ್ಯವ್ಯಾಪ್ತಿಯನ್ನು ದೇಶ ವಿದೇಶಗಳಿಗೆ ಹರಡಿ ಉತ್ತಮ ಉದ್ಯಮಿಯಾಗಿ ಹೊರಹೊಮ್ಮಿದಳು.

ಇತ್ತ ಸ್ಮಿತಾ ಬಂದಮೇಲೆ ಮನೆಯ ವಾತಾವರಣ ಇನ್ನೂ ಹದಗೆಟ್ಟಿತು. ಮನೆಯಲ್ಲಿರುವ ಕೆಲಸಗಾರರೇ ಮೋಸ ಮಾಡಿ ಮನೆಯನ್ನು ಹರಾಜು ಹಾಕುವ ಹಂತಕ್ಕೆ ತಂದು ನಿಲ್ಲಿಸಿದಾಗ ಸ್ಮಿತಾಳೆ ಕೋಟಿಗಟ್ಟಲೆ ಹಣ ಕೊಟ್ಟು ಆ ಮನೆಯನ್ನು ಖರೀದಿಸಿ ಅತ್ತೆ ಮಾವನಿಗೆ ಕೊಟ್ಟಳು. ಹೀಗೆ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ. ಹೆಣ್ಣು ಮನಸ್ಸು ಮಾಡಿದರೆ ಎನನ್ನು ಬೇಕಾದರೂ ಸಾದಿಸಬಹುದು ಎಂಬದನ್ನು ಸ್ಮಿತಾ ತೋರಿಸಿದ್ದಳು.. ಸೊಸೆಯ ಈ ಗುಣದಿಂದ ಅತ್ತೆ ಮಾವ ಕೂಡ ಸರಿಯಾಗಿ, ಪ್ರಣವ್ ಕೂಡ ಸರಿಯಾದ.. ಅನೇಕ ಸಂಘಸಂಸ್ಥೆಗಳು ಮಾದರಿ ಉದ್ಯಮಿ ಅಂತ ಸ್ಮಿತಾಳಿಗೆ ಹಲವಾರು ಪ್ರಶಸ್ತಿ ಕೊಟ್ಟು ಗೌರವಿಸಿದರು. ಆ ಸಮಯದಲ್ಲೇ ಹಿಂದಿನದೆಲ್ಲ ನೆನಪು ಮಾಡಿಕೊಂಡ ಸ್ಮಿತಾಳಿಗೆ ಜನರ ಕರತಾಡನದಿಂದ ತನ್ನ ಕನಸಿನ ಲೋಕದಿಂದ ಹೊರಬಂದಳು. ಎದುರಿನ ಸೀಟಲ್ಲಿ ಅತ್ತೆ ಮಾವ ಪ್ರಣವ್ ಅಣ್ಣ ಅತ್ತಿಗೆ ಅಮ್ಮ ಎಲ್ಲರೂ ಖುಷಿಯಿಂದ ಚಪ್ಪಾಳೆ ತಟ್ಟುವುದನ್ನ ನೋಡಿ ಹಾಗೇ ತಲೆ ತಿರುಗಿ ಬಿದ್ದಳು. ಅಲ್ಲಿಯೇ ಇದ್ದ ಲೇಡಿ ಡಾಕ್ಟರ್ ಪರೀಕ್ಷಿಸಿಸಿದಾಗ ಸ್ಮಿತಾ ಗರ್ಭಿಣಿ ಆಗಿರುವ ವಿಷಯ ತಿಳಿಸಿದಾಗ ಎಲ್ಲರ ಮುಖದಲ್ಲೂ ಸಂತೋಷದ ಮುಗುಳುನಗು. ಇಷ್ಟುವರುಷ ಕಷ್ಟಪಟ್ಟಿದ್ದಕ್ಕೂ ಸಾರ್ಥಕ ಬದುಕಾಯಿತು ಸ್ಮಿತಾದು.
ಅದಕ್ಕೆ ಹೇಳುವುದು ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಂದು.

-ಶ್ರೇಯ ಕೆ ಎಂ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x