ಮತ್ತೆ ಮತ್ತೆ ತೇಜಸ್ವಿ

ಗೆಳೆಯ ಪರಮೇಶ್ವರ್ ಮತ್ತು ನನಗೂ ತುಂಬಾ ದಿನಗಳ ನಂಟು. ಈ ನಂಟನ್ನು ನನಗೆ ಕರುಣಿಸಿದ್ದು ಫೇಸ್ ಬುಕ್. ಫೇಸ್ ಬುಕ್ ನಲ್ಲಿ ಪರಿಚಯವಾದ ಈ ಗೆಳೆಯ ತನ್ನ ಕನಸುಗಳನ್ನು ಫೋನಿನಲ್ಲಿ ಎಷ್ಟೋ ಬಾರಿ ಹಂಚಿಕೊಂಡಿದ್ದಾರೆ. ಇವತ್ತು ಅವರ ಬಹುದಿನದ ಕನಸು ಎನ್ನಬಹುದಾದ ತೇಜಸ್ವಿಯವರ ಕುರಿತ ಸಾಕ್ಷ್ಯಚಿತ್ರವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿ ನಮ್ಮೆದುರು ಅದರ ತುಣುಕುಗಳನ್ನು ಯೂ ಟೂಬ್ ನಲ್ಲಿ ಹಾಕುವುದರ ಮೂಲಕ ಹಂಚಿಕೊಂಡಿದ್ದಾರೆ. 'ಮತ್ತೆ ಮತ್ತೆ ತೇಜಸ್ವಿ' ಎಂಬ ಶೀರ್ಷಿಕೆ ಹೊತ್ತ ಸಾಕ್ಷ್ಯಚಿತ್ರದ ಐದು ನಿಮಿಷದ ಪ್ರೊಮೋ ನೋಡಿದ ಗೆಳೆಯರೆಲ್ಲರೂ ಸೂಪರ್ಬ್ ಎಂದು ಹರ್ಷೋಲ್ಲಾಸಗೊಂಡಿದ್ದಾರೆ. ಈ ಸಂದರ್ಭದಲ್ಲಿ ನನಗೆ ಆತ್ಮೀಯನಾದ ಗೆಳೆಯನ ಸಂದರ್ಶನದ ಔಚಿತ್ಯವಿದೆ ಎನಿಸಿ ಪಂಜುವಿನಲ್ಲಿ ನಿಮಗಾಗಿ ವಿಶೇಷ ಸಂದರ್ಶನವನ್ನು ನೀಡುತ್ತಿದ್ದೇನೆ. ನಿಮಗೆ ಇಷ್ಟವಾಗಬಹುದು. 'ಮತ್ತೆ ಮತ್ತೆ ತೇಜಸ್ವಿ' ಸಾಕ್ಷ್ಯಚಿತ್ರದ ನಿರ್ದೇಶಕ ಪರಮೇಶ್ವರ್ ರವರ ಜೊತೆ ನಡೆಸಿದ ಮಾತುಕತೆಗಳು ನಿಮಗಾಗಿ ಫೇಸ್ ಬುಕ್ ಸ್ಟೈಲ್ ನಲ್ಲಿ.. :)))

    • 10:35am

       
       

      Parameshwar K Krishnappa

       

      ರೆಡಿ ಬ್ರದರ್

    • 10:39am

       
       

      Nataraju Seegekote Mariyappa

       

      11 ಗಂಟೆಗೆ ಸಂದರ್ಶನಕ್ಕೆ ಬರ್ತೀನಿ ಅಂದ್ರಲ್ಲಾ ಬ್ರದರ್.. 

      • 10:41am

         
         

        Parameshwar K Krishnappa

         

        ೧೦.೩೦ ಅಂದ ಹಾಗೆ ನೆನೆಪು

        • 10:43am

           
           

          Nataraju Seegekote Mariyappa

           

          ತಮಾಷೆಗೆ ಹಾಗಂದೆ.. ಕಂಗ್ರಾಟ್ಸ್..

           

          ತೇಜಸ್ವಿಯವರ ಕುರಿತ ನಿಮ್ಮ ಸಾಕ್ಷ್ಯಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ..

          • 10:43am

             
             

            Parameshwar K Krishnappa

             

            ಥ್ಯಾಂಕ್ಸ್ ಬ್ರದರ್

            • 10:44am

               
               

              Nataraju Seegekote Mariyappa

               

              ನಿಮ್ಮ ಶ್ರಮಕ್ಕೆ ಹ್ಯಾಟ್ಸ್ ಆಫ್.. ಪಂಜುವಿನ ಸಂದರ್ಶನಕ್ಕಾಗಿ ನಿಮಗೆ ಮೊದಲ ಪ್ರಶ್ನೆ..

               

              ತೇಜಸ್ವಿಯವರ ಬಗ್ಗೆ ಯಾಕೆ ಡಾಕ್ಯುಮೆಂಟರಿ ಮಾಡಬೇಕು ಅನಿಸಿತು? (ಮುಕ್ತವಾಗಿ ಬರೆಯಿರಿ… )

            • 10:57am

               
               

              Parameshwar K Krishnappa

               

              ನಾನು ಸಾಹಿತ್ಯದ ಓದುಗ. ಅದರಲ್ಲೂ ಮೊದಲಿಗೆ ಕನ್ನಡ ಸಾಹಿತ್ಯ ಓದೋದಕ್ಕೆ ಪ್ರಾರಂಭ ಮಾಡಿದ್ದೆ ತೇಜಸ್ವಿಯವರ ಕತೆ ಕಾದಂಬರಿಗಳಿಂದ. ಮೊದ ಮೊದಲು ತಮಾಷೆ ಅಂತ ಓದೋಕೆ ಶುರು ಮಾಡಿದ್ದು ಬರ್ತಾ ಬರ್ತಾ ಅದು ಬೇರೆ ಬೇರೆ ಒಳನೋಟಗಳನ್ನ, ಹೊಸ ರೀತಿಯ ಆಲೋಚನೆಗಳನ್ನ ನನ್ನಲ್ಲಿ ಉಂಟು ಮಾಡೋಕೆ ಶುರುವಾಯಿತು. ಆಗ ಯಾಕೆ ತೇಜಸ್ವಿಯವರ ಕುರಿತು ಒಂದು ಸಾಕ್ಷ್ಯಚಿತ್ರ ಮಾಡಬಾರದು ಅಂತ ಅನ್ನಿಸಿತು. ನಿಧಾನವಾಗಿ ಸಾಕ್ಷ್ಯಚಿತ್ರಕ್ಕೆ ಮನಸ್ಸು ಸಿದ್ಧವಾಗತೊಡಗಿತು. ಆಗ ಮುಖ್ಯವಾಗಿ ಒಂದು ವರ್ಷಕ್ಕೆ ಹಿಂದೆ ಬಿಬಿಸಿ'ಯ ಒಂದು ಸಾಕ್ಷ್ಯಚಿತ್ರ ನೋಡಿದ ನಂತರ ನನ್ನ ಆಲೋಚನೆಯ ಶೈಲಿ, ಗ್ರಹಿಸುವ ಕ್ರಮ, ಎಲ್ಲವು ಬದಲಾಯಿತು. ಸಾಹಿತ್ಯದ ಓದುಗ ಅನ್ನೋದರ ಜೊತೆಗೆ, ಸಿನಿಮಾದವನು ಆಗಿರೋದರಿಂದ ಕಡೆಗೆ ನಾನು ನಮ್ಮ ತಂಡ ಎಲ್ಲರೂ ಸೇರಿ ಈ ಸಾಕ್ಷ್ಯಚಿತ್ರ ರೂಪಿಸುವುದಕ್ಕೆ ಸಾಧ್ಯವಾಯಿತು.

              • 11:00am

                 
                 

                Nataraju Seegekote Mariyappa

                 

                ಸಿನಿಮಾದವನು ಅಂತ ಹೇಳಿದ್ದೀರಿ. ಸಿನಿಮಾದ ಹಿನ್ನೆಲೆ ಇರುವ ನೀವು ತೇಜಸ್ವಿಯವರ ಕುರಿತು ಸಾಕ್ಷ್ಯ ಚಿತ್ರ ಮಾಡುವಾಗ ನಿಮಗಾದ ಅನುಭವಗಳೇನು?

                • 11:07am

                   
                   

                  Parameshwar K Krishnappa

                   

                  ನಿಜ ಹೇಳಬೇಕು ಅಂದರೆ ತುಂಬಾ ಅನೂಹ್ಯ ಅನುಭವಗಳು ಅವು. ಮೊದಲನೆಯದಾಗಿ ಒಂದು ಸಿನಿಮಕ್ಕೂ (ಚಲಚಿತ್ರ) ಸಾಕ್ಷ್ಯಚಿತ್ರಕ್ಕೂ ತುಂಬಾ ವ್ಯತ್ಯಾಸ ಇದೆ. ಸಿನಿಮಾದಲ್ಲಾದರೆ ಸ್ಕ್ರಿಪ್ಟ್ ಬರೆಯುವ ಹಂತದಿಂದ ಹಿಡಿದು ಅದರ ಕಡೆಯ ಹಂತದ ಕೆಲಸಗಳವರೆಗೂ (postproduction) ಒಂದು ಸಿದ್ದ ಮಾದರಿಗಳಿವೆ. ಸ್ಕ್ರಿಪ್ಟ್ ಹೇಗೆ ಬರೆಯಬೇಕು, ಯಾವ dialogueಗೆ ಯಾವ shot ತೆಗಿಬೇಕು ಅಂತೆಲ್ಲ ಹಿಂದಿನಿಂದ ಬಂದ ಸಿದ್ದ ಮಾದರಿಗಳಿವೆ. ಆದರೆ Documentary ಪ್ರಾಕಾರಕ್ಕೆ ನನಗೆ ತಿಳಿದಿರುವ ಹಾಗೆ ಆ ರೀತಿ ಸಿದ್ದ ಸೂತ್ರಗಳಾಗಲಿ, ಮಾದರಿಗಳಾಗಲಿ ಇಲ್ಲ. ಹಾಗಾಗಿ ಸ್ಕ್ರಿಪ್ಟ್ ಬರೆಯುವ ಹಂತದಿಂದ ಹಿಡಿದು ಕೊನೆಯ ಹಂತದ ಕೆಲಸ ಮುಗಿಸುವವರೆಗೂ ರಿಸರ್ಚ್ ಮಾಡಿ ಮಾಡಿಯೇ ಕೆಲಸ ಮಾಡಬೇಕಿತ್ತು. ಅದು ತುಂಬಾ ಚಾಲೆಂಜಿಂಗ್ ಅನ್ನಿಸಿದ್ದು.

                  • 11:08am

                     
                     

                    Nataraju Seegekote Mariyappa

                     

                    ಇಂತಹ ಚಾಲೆಂಜಿಂಗ್ ಕೆಲಸ ಮಾಡುವಾಗ ನಿಮಗೆ ಎದುರಾದ ಅಡೆ ತಡೆಗಳೇನು?

                    • 11:11am

                       
                       

                      Parameshwar K Krishnappa

                       

                      One thing ಏನು ಅಂದ್ರೆ Documentary ಮಾಡೋವಾಗ ಸದಾ ಆ ಕ್ಷಣಕ್ಕೆ ಆಗುವ ಬದಲಾವನೆಗಳಿಗೆ ಕಣ್ಣು, ಬುದ್ದಿ, ಮನಸ್ಸು, ಎಲ್ಲವನ್ನ ತೆರಕೊಂಡು ನೋಡುವ ಕಲೆಗಾರಿಕೆ, ಹಾಗೂ ಮುಖ್ಯವಾಗಿ ಅಸಾಧಾರಣ ತಾಳ್ಮೆ ಬೇಕು. ಸ್ವಲ್ಪ ಯಾಮಾರಿ ರಿಲಾಕ್ಸ್ ಆದರೂ ಅದು ಒಟ್ಟಾರೆ ಚಿತ್ರದ ಮೇಲೆ ತುಂಬಾ ಅಪಾಯಕಾರಿ ಪರಿಣಾಮಗಳನ್ನ ಬೀರುತ್ತೆ. ಸಾಕ್ಷ್ಯಚಿತ್ರ ಮಾಡೋವಾಗ ಹೆಚ್ಚಿನ ಅಂಶಗಳು ನಮ್ಮ ಹಿಡಿತದಲ್ಲೇ ಇರೋದಿಲ್ಲ.

                    • 11:17am

                       
                       

                      Parameshwar K Krishnappa

                       

                      ಉದಾಹರಣೆಗೆ nature, ನಾವು ಇನ್ನೇನು ಶೂಟ್ ಮಾಡಬೇಕು ಅಂತ ಹೊರಡೋವಾಗ್ಲೆ ಕೈ ಕೊಡಬಹುದು, ಅಥವಾ ಮತನಾಡಿಸಬೇಕಾದ ಸಂಪನ್ಮೂಲ ವ್ಯಕ್ತಿಗಳು ಬೇರೆ ಕೆಲಸ ಅಂತ ಹೇಳಿ ಸಿಗದೇ ಹೋಗಬಹುದು. ಇತ್ಯಾದಿ ಇತ್ಯಾದಿ. ನಾವು ಈ ಸಾಕ್ಷ್ಯಚಿತ್ರವನ್ನ ಸುಮಾರು ೧೧ ದಿನಗಳ ಕಾಲ ಮಲೆನಾಡಿನ ಮಳೆಯಲ್ಲಿ ಚಿತ್ರೀಕರಿಸಿದ್ದೇವೆ. ನಮಗೂ ಮಳೆ ಬೇಕಿತ್ತು. ಆದರೆ ಅಷ್ಟು ಮಳೆ ಖಂಡಿತ ಬೇಕಿರಲಿಲ್ಲ. ೧೧ ದಿನ ಧಾರಾಕಾರ ಮಳೆ ಪಶ್ಚಿಮ ಘಟ್ಟಗಳಲ್ಲಿ, ಮಲೆನಾಡಿನಲ್ಲಿ. ಒಂದು ದಿನ ಅಂತು ಶೂಟ್ ಮಾಡೋವಾಗ ಕ್ಯಾಮೆರಾಗೆ ಬಸ್ಸು ಹಾರಿಸಿದ ನೀರಿನಿಂದಾಗಿ ಕ್ಯಾಮೆರ ಹಾಳಾಗಿ ಅದಕ್ಕೆ ಕೊನೆಗೆ ದೊಡ್ಡ ಮೊತ್ತದ ದಂಡ ತೆರಬೇಕಾಯ್ತು. ನಮ್ಮ ಇಡೀ ತಂಡ ಒಂದೊಂದು ಫ್ರೇಂ ಅನ್ನು ಅತ್ತ್ಯುತ್ತಮವಾಗಿಸೋದಕ್ಕೆ ಹಗಲು ರಾತ್ರಿ ಶ್ರಮ ಪಟ್ಟಿದ್ದಾರೆ.

                      • 11:19am

                         
                         

                        Nataraju Seegekote Mariyappa

                         

                        ಮಲೆನಾಡ ಮಳೆಯಲ್ಲಿ ನಾನಂತೂ ನೆನದಿಲ್ಲ.. ಪ್ರಕೃತಿಯ ಸೊಬಗನ್ನು ಅನುಭವಿಸಿದ ನೀವು ಪುಣ್ಯವಂತರು 🙂 ಈ ಸಾಕ್ಷ್ಯ ಚಿತ್ರ ತಯಾರಿ ಮಾಡಲು ನೀವು ತೆಗೆದುಕೊಂಡ ಒಟ್ಟು ಸಮಯವೆಷ್ಟು? ಹಾಗೆಯೇ ನಿಮ್ಮ ಕಿರು ಪರಿಚಯದ ಜೊತೆ ನಿಮ್ಮ ತಂಡವನ್ನು ನಮಗೆ ಪರಿಚಯಿಸಿ ಪ್ಲೀಸ್… 

                        • 11:21am

                           
                           

                          Parameshwar K Krishnappa

                           

                          ಮೊದಲಿಗೆ ಈ ಸಾಕ್ಷ್ಯಚಿತ್ರದ ಆಲೋಚನೆ ಬಂದದ್ದು ೨೦೧೨ ರ ಮೇ ನಲ್ಲಿ. ಸ್ಕ್ರಿಪ್ಟ್ ಎಲ್ಲ ಆಗಿದ್ದು ಜುಲೈ ನಲ್ಲಿ. ಶೂಟಿಂಗ್ ಪ್ರಾರಂಭವಾಗಿದ್ದು ಆಗಸ್ಟ್ ನಲ್ಲಿ. ಎಡಿಟಿಂಗ್, ಸಂಗಿತ, Color Correction, Dubbing ಎಲ್ಲ ಮುಗಿದಿದ್ದು ಒಂದು ಮೂರ್ನಾಲ್ಕು ದಿನಗಳ ಹಿಂದೆ. ಒಟ್ಟು ೮ ತಿಂಗಳ ಕೆಲಸ. ಅಷ್ಟು ಸಮಯ ತೆಗೆದುಕೊಂಡಿದ್ದು ಈಗ ಸಾಕ್ಷ್ಯಚಿತ್ರ ನೋಡಿದ ನಂತರ, ಚಿತ್ರದ ಪ್ರೋಮೋಗೆ ಬರುತ್ತಿರುವ ಪ್ರತಿಕ್ರಿಯೆಗಳನ್ನ ನೋಡಿದರೆ ಸಾರ್ಥಕ ಅನ್ನಿಸುತ್ತೆ.

                          • 11:25am

                             
                             

                            Parameshwar K Krishnappa

                             

                            ಹಾಹ. ಬೆಂಗಳೂರು ವಿಶ್ವವಿದ್ಯಾನಿಲಯದ ಎಂ.ಕಾಂ ಪದವಿ. ಮೂಲತಃ ರಂಗಭೂಮಿ ಹಿನ್ನೆಲೆಯಿಂದ ಬಂದವನು. 
                            ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಅಧ್ಯಾಯದಿಂದ ೨೦೧೧ ರಲ್ಲಿ ರಂಗಭೂಮಿ ತರಬೇತಿ. 
                            ಸುಮಾರು ೮ ವರ್ಷಗಳಿಂದ ರಂಗಭೂಮಿಯಲ್ಲಿ ನಟನೆ, ಬೆಳಕಿನ ವಿನ್ಯಾಸ, ರಂಗಸಜ್ಜಿಕೆ, ಹೀಗೆ ರಂಗಭೂಮಿಯ ಹಲವಾರು ವಿಭಾಗಗಳಲ್ಲಿ ದುಡಿಮೆ. 
                            ಕಳೆದ ಮೂರು ವರ್ಷಗಳಿಂದ ಚಲನಚಿತ್ರ ನಿರ್ದೇಶನದಲ್ಲಿ ತೀವ್ರ ಆಸಕ್ತಿ.
                            ಪ್ರಾರಂಭದಲ್ಲಿ ಕಿರುಚಿತ್ರವೊಂದರ ನಿರ್ದೇಶನ. ೨೦೧೧ ರಲ್ಲಿ ರಷ್ಯದ ಸಾಹಿತಿ ಆಂಟನ್ ಚೆಕ್ಹೊವ್ ನ ಸಣ್ಣ ಕಥೆಯೊಂದನ್ನು ಕಿರುಚಿತ್ರವಾಗಿ ನಿರ್ದೇಶಿಸಿದ್ದೆ. 
                            ಪೋಲಿಸ್ ಇಲಾಖೆಗೆ ಹಾಗೂ ಹಲವು ಕಾರ್ಪೊರೇಟ್ ಸಂಸ್ಥೆಗಳಿಗೆ ಜಾಹಿರಾತುಗಳನ್ನು ಸಹ ನಿರ್ದೇಶಿಸಿದ್ದೇನೆ. 
                            ಚಲನಚಿತ್ರ ನಿರ್ದೇಶನವನ್ನು ಕಲಿಯುವ ಉದ್ದೇಶದಿಂದ ಒಲವೇ ಮಂದಾರ ಚಿತ್ರದ ನಿರ್ದೇಶಕರಾದ ಶ್ರೀ. ಜಯತೀರ್ಥರವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಾಹಿತ್ಯದ ಗಂಭೀರ ಓದುಗ.

                          • 11:27am

                             
                             

                            Parameshwar K Krishnappa

                             

                            ನಮ್ಮ ತಂಡ ಬಗ್ಗೆ

                            ದರ್ಶನ್ ಹೆಬ್ಬಾಳ್ – ಛಾಯಾಗ್ರಹಣ
                            ದರ್ಶನ್ ಹೆಬ್ಬಾಳ್ ರವರು ೨೦೧೧ರಲ್ಲಿ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ತರಬೇತಿ ಕೇಂದ್ರದಲ್ಲಿ ಮೂರು ವರ್ಷಗಳ ಛಾಯಾಗ್ರಹಣ ಡಿಪ್ಲೋಮ ಪಡೆದಿದ್ದಾರೆ. ಇವರು ಕರ್ನಾಟಕ ಪೋಲಿಸ್ ಇಲಾಖೆಗಾಗಿ ನಿರ್ಮಿಸಿದ ಸಾರ್ವಜನಿಕ ಜಾಗ್ರತಿ ಚಿತ್ರಕ್ಕೆ ಸ್ವತಂತ್ರ ಛಾಯಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 

                             

                            ಹೇಮಂತ್ ಕುಮಾರ್ – ನಿರ್ದೇಶನ ಸಹಾಯಕರು 
                            ಇವರು ಚಿತ್ರ ನಿರ್ದೇಶನದಲ್ಲಿ ಆಸಕ್ತಿ ಇರುವ ಉತ್ಸಾಹಿ ಯುವಕರು. ಇವರು “ಸೃಷ್ಟಿ ಫಿಲಂ ಸ್ಕೂಲ್” ನಿಂದ ಡಿಪ್ಲೋಮ ಪಡೆದಿದ್ದಾರೆ.
                            ಇವರು ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ ಅರಿವು ಎಂಬ ಕಿರು ಚಿತ್ರ ಹಲವು ಕಡೆ ಪ್ರದರ್ಶನಗೊಂಡು ಆಸಕ್ತರ ಮೆಚ್ಚುಗೆ ಗಳಿಸಿದೆ. ಇವರೊಬ್ಬ ಕಥೆಗಾರರು ಸಹ.

                            • 11:27am

                               
                               

                              Parameshwar K Krishnappa

                               

                              ರಾಜೇಶ್.ಕೆ – ಸಂಕಲನ
                              ಸಂಕಲನ ಕಾರ್ಯದಲ್ಲಿ ಸುಮಾರು ೮ ವರ್ಷಗಳ ಅನುಭವ ಪಡೆದಿರುವ ಇವರು ಈವರೆಗೆ ಹಲವು ಧಾರಾವಾಹಿಗಳು, ರಿಯಾಲಿಟಿ ಶೋಗಳು, ಸಾಕ್ಷಚಿತ್ರಗಳನ್ನು ಸಂಕಲನ ಮಾಡಿದ ಅನುಭವ ಪಡೆದಿದ್ದಾರೆ.

                               

                              ಸೆಂಥಿಲ್. ಕೆ – ನಿರ್ದೇಶನ ಸಹಾಯಕರು 
                              ಇವರು ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಅಧ್ಯಾಯದಿಂದ ರಂಗಭೂಮಿ ಡಿಪ್ಲೋಮಾ ಪಡೆದಿದ್ದಾರೆ. 
                              ಆಸಕ್ತ ಗೆಳೆಯರ ತಂಡ ಕಟ್ಟಿಕೊಂಡು ಭಾರತದಾದ್ಯಂತ ಬೀದಿ ನಾಟಕಗಳನ್ನು ಮಾಡಿರುವ ಇವರು ಸಿನಿಮಾ ನಿರ್ದೇಶಕನಾಗುವ ಹೆಬ್ಬಯಕೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.

                              • 11:29am

                                 
                                 

                                Nataraju Seegekote Mariyappa

                                 

                                ಅಧ್ಬುತವಾದ ತಂತ್ರಜ್ಞರ ತಂಡ ನಿಮ್ಮದು.

                                ಇಂತಹುದೊಂದು ಚಂದದ ಡಾಕ್ಯುಮೆಂಟರಿ ಮಾಡಿ ಅದನ್ನು ಜನಗಳಿಗೆ ತಲುಪಿಸಲು ನೀವು ಕೈಗೊಂಡಿರುವ ಯೋಜನೆಗಳೇನು?

                                • 11:34am

                                   
                                   

                                  Parameshwar K Krishnappa

                                   

                                  ಈ ಸಾಕ್ಷ್ಯಚಿತ್ರ ಸದ್ಯದಲ್ಲೇ ಕನ್ನಡದ ಪ್ರಮುಖ ಚಾನೆಲ್ ಒಂದರಲ್ಲಿ ಪ್ರಸಾರವಾಗಲಿದೆ. ಮಾತು ಕತೆಗಳು ಮುಗಿಯುವ ಹಂತದಲ್ಲಿವೆ. ನಂತರ ಟೋಟಲ್ ಕನ್ನಡದ ಸಹಯೋಗದೊಂದಿಗೆ ಈ ಸಾಕ್ಷ್ಯಚಿತ್ರದ ಡಿವಿಡಿ ಯನ್ನೂ ಕರ್ನಾಟಕದಾದ್ಯಂತ ಕನ್ನಡಿಗರು, ತೇಜಸ್ವಿಯ ಓದುಗರು, ಅಭಿಮಾನಿಗಳಿಗೆ ತಲುಪಿಸುವ ಯೋಜನೆ ಈಗಾಗಲೇ ಸಿದ್ದವಿದೆ. ಮಾತುಕತೆಗಳು ಮುಗಿದಿವೆ. ಜೊತೆಗೆ ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ಸಾಕ್ಷ್ಯಚಿತರದ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸುವ ಆಲೋಚನೆಗಳು ಸಹ ನಡೆದಿವೆ. 

                                  • 11:37am

                                     
                                     

                                    Nataraju Seegekote Mariyappa

                                     

                                    ಇವತ್ತಿನ ದಿನಗಳಲ್ಲಿ ಹಣವೇ ಮುಖ್ಯ ಎಂದು ಹಪಹಪಿಸುವವರ ಮಧ್ಯೆ  ಆತ್ಮ ತೃಪ್ತಿಗಾಗಿ ಹೀಗೊಂದು ಒಂದು ಒಳ್ಳೆಯ ಕೆಲಸ ಮಾಡಿದ್ದೀರಿ.. ನೀವು ಈ ಕುರಿತು ಏನಾದರು ಹೇಳಲು ಬಯಸುತ್ತೀರ?

                                    • 11:43am

                                       
                                       

                                      Parameshwar K Krishnappa

                                       

                                      ಹಹಹ…ನೀವೇ ಹೇಳಿದ್ದರೆ ಗೆಳೆಯರೇ ಆತ್ಮ ತೃಪ್ತಿ ಅಂತ. ಅದರ ಮುಂದೆ ಯಾವುದು ನಿಲ್ಲೊಲ್ಲ ಬಿಡಿ. ಈ ಸಾಕ್ಷ್ಯಚಿತ್ರ ತೇಜಸ್ವಿಯ ಅಭಿಮಾನಿಯಾಗಿ ನಾನು ಅವರಿಗೆ ಸಲ್ಲಿಸಿರುವ ಗೌರವ ನಮನ ಅಂತ ಭಾವಿಸಿ ಮಾಡಿದೆ. ನನ್ನ ಸಿನಿಮಾ ವೃತ್ತಿ ಬದುಕು ತೇಜಸ್ವಿಯವರ ಸಾಕ್ಷ್ಯಚಿತ್ರದಿಂದ ಪ್ರಾರಂಭವಾಗಿದ್ದು ಅತಿವವಾದ ತೃಪ್ತಿ ಹಾಗೂ ಸಂತೋಷ ತಂದಿದೆ. ನಾನು ನಮ್ಮ ತಂಡ ಮುಂದೆ ಇನ್ನು ಯಾವ ಪ್ರಾಜೆಕ್ಟ್ ಮಾಡಿದರೂ ನಮ್ಮ ಚೊಚ್ಚಲ ಸಿನಿಮ ಪ್ರಯತ್ನವಾಗಿ ತೇಜಸ್ವಿಯವರ ಸಾಕ್ಷ್ಯಚಿತ್ರ ಉಳಿಯುತ್ತದೆ ಎಂಬುದೇ ನಮಗೆಲ್ಲ ಹೆಮ್ಮೆಯ ವಿಷಯ.

                                      • 11:45am

                                         
                                         

                                        Nataraju Seegekote Mariyappa

                                         

                                        ನಿಮ್ಮ ಈ ಚಂದದ ಸಂದರ್ಶನದ ಮೂಲಕ ಪಂಜುವಿನಲ್ಲಿ ಸಂದರ್ಶನಗಳ ಸಂಸ್ಕೃತಿಗೆ ನಾಂದಿ ಹಾಡುತ್ತಿದ್ದೇವೆ.. ಈ ಕುರಿತು ನಿಮ್ಮ ಒಂದೆರಡು ಮಾತು.. ಒಂಚೂರು ಸ್ವಾರ್ಥದಿಂದ ಕೇಳ್ತಾ ಇರೋ ಪ್ರಶ್ನೆ.. 

                                        • 11:49am

                                           
                                           

                                          Parameshwar K Krishnappa

                                           

                                          ನೀವೇ ಹೇಳಿದ ಹಾಗೆ ಬಹುಪಾಲು ಮಂದಿ ಹಣದ ಹಿಂದೆ ಓಡುತ್ತಿರುವ ಇವತ್ತಿನ ದಿನಗಳಲ್ಲಿ, ಬದುಕನ್ನು ಬದುಕುವುದಕ್ಕೆ ಮರೆತಿರುವ ಜನಗಳ ಮಧ್ಯೆ ನಿಮ್ಮ "ಪಂಜು"ವಿನ ಪ್ರಯತ್ನ ಅಭಿನಂದನಾರ್ಹ. ಪಂಜು ಧೀರ್ಘ ಕಾಲ ನಿರಂತರವಾಗಿ ಸಾಹಿತ್ಯಾಸಕ್ತರ ಮನಗಳಲ್ಲಿ ಬೆಳಗಲಿ…

                                          • 11:51am

                                             
                                             

                                            Nataraju Seegekote Mariyappa

                                             

                                            ಥ್ಯಾಂಕ್ ಯೂ ನಿಮ್ಮ ಸಹಕಾರ ಹೀಗೆಯೇ ಇರಲಿ.. 

                                            ಕೊನೆಯದಾಗಿ, ನಿಮ್ಮ ಸಂದರ್ಶನ ಓದುತ್ತಿರುವ ಸಹೃದಯಿ ಓದುಗರಲ್ಲಿ ನಿಮ್ಮ ವಿನಂತಿಗಳೇನಾದರು ಇದ್ದಲ್ಲಿ ದಯವಿಟ್ಟು ತಿಳಿಸಿ..

                                            • 11:55am

                                               
                                               

                                              Parameshwar K Krishnappa

                                               

                                              ಸಾಕ್ಷ್ಯಚಿತ್ರ ಸಾದ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತೇಜಸ್ವಿಯವರ ಅಭಿಮಾನಿಗಳಿಗೆ ತಲುಪಲಿ ಎಂಬುದು ನಮ್ಮ ಆಶಯ. ಅದು ಒಬ್ಬರ ಬಾಯಿಂದ ಬಾಯಿಗೆ ಹರಡಿದರೆ ಮಾತ್ರ ಇದು ಸಾಧ್ಯ. ಜೊತೆಗೆ ಎಲ್ಲರ ಮುಕ್ತ ಅಭಿಪ್ರಾಯಗಳು ನಮಗೆ ತಲುಪಿದರೆ ನಮ್ಮ ತಪ್ಪುಗಳನ್ನೂ ತಿದ್ದಿಕೊಳ್ಳುವುದಕ್ಕೆ ಆಗುತ್ತೆ.

                                            Nataraju Seegekote Mariyappa

                                             

                                            ಧನ್ಯವಾದಗಳು ಗೆಳೆಯ… ಒಂದಿಷ್ಟು ಕನಸುಗಳು ಜೊತೆಗೆ ತಾಳ್ಮೆ ಇದ್ದರೆ ಏನೆಲ್ಲಾ ಮಾಡಿ ತೋರಿಸಬಹುದು ಎಂಬುದಕ್ಕೆ ನಿಮ್ಮ ಈ ಶ್ರಮ ಒಂದು ತಾಜಾ ಉದಾಹರಣೆ.. ನಿಮಗೆ ಮತ್ತು ನಿಮ್ಮ ತಂಡಕ್ಕೆ ಪಂಜು ತಂಡದ ಹೃತ್ಪೂರ್ವಕ ಅಭಿನಂದನೆಗಳು.. ನಿಮ್ಮಿಂದ ಇನ್ನು ಉತ್ತಮ ಚಿತ್ರಗಳು ಮೂಡಿ ಬರಲಿ.. ಶುಭವಾಗಲಿ..

                                            • 12:04pm

                                               
                                               

                                              Parameshwar K Krishnappa

                                               

                                              ನಾನು ನಿಮಗೆ ವೈಯುಕ್ತಿಕವಾಗಿ ಅಭಾರಿ ಗೆಳೆಯರೇ. ಥ್ಯಾಂಕ್ ಯೂ..

                                            ಸಹೃದಯಿ ಗೆಳೆಯರೇ, ಪಂಜು ಸಂದರ್ಶನದ ಚೊಚ್ಚಲ ಪ್ರಯತ್ನ ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಶ್ರೀ ಕಾಂತರಾಜು ರವರು ನಿರ್ಮಿಸಿ ಪರಮೇಶ್ವರ್ ರವರು ನಿರ್ದೇಶಿಸಿರುವ 'ಮತ್ತೆ ಮತ್ತೆ ತೇಜಸ್ವಿ' ಸಾಕ್ಷ್ಯಚಿತ್ರದ ಪ್ರೊಮೋ ಇಗೋ ನಿಮಗಾಗಿ.. 

                                            ಮತ್ತೆ ಮತ್ತೆ ತೇಜಸ್ವಿ

                                            ಮತ್ತೆ ಸಿಗೋಣ 

                                            ನಿಮ್ಮ ಪ್ರೀತಿಯ 

                                            ನಟರಾಜು :))

                                            ಕನ್ನಡದ ಬರಹಗಳನ್ನು ಹಂಚಿ ಹರಡಿ
                                            0 0 votes
                                            Article Rating
                                            Subscribe
                                            Notify of
                                            guest

                                            8 Comments
                                            Oldest
                                            Newest Most Voted
                                            Inline Feedbacks
                                            View all comments
                                            Santhoshkumar LM
                                            11 years ago

                                            ನಾನೂ ಕೂಡ ಪರಮೇಶ್ವರ್ ರವರೊಂದಿಗೆ ಮಾತನಾಡಿದೆ.
                                            ಬಹಳ ಖುಷಿಯಾಯಿತು. ಚಲನಚಿತ್ರದ ಹಿನ್ನೆಲೆಯಿದ್ದರೂ ಸಾಹಿತ್ಯವನ್ನೇ ಅಡಿಪಾಯವನ್ನಾಗಿಟ್ಟು ನನ್ನ ನೆಚ್ಚಿನ ಸಾಹಿತಿ ತೇಜಸ್ವಿಯವರ ಬಗ್ಗೆ ತೆಗೆದ ಸಾಕ್ಷ್ಯಚಿತ್ರದ ತುಣುಕು ಅದ್ಭುತವಾಗಿ ಮೂಡಿಬಂದಿದೆ. ಸಾಹಿತ್ಯದಲ್ಲಿರುವ ಅವರ ಪ್ರೀತಿಯೂ ಇದರಲ್ಲಿ ಎದ್ದು ಕಾಣುತ್ತದೆ.
                                            ಅವರ ಶ್ರಮ ಬರೇ ಆ ಐದು ನಿಮಿಷದ ತುಣುಕಲ್ಲೇ ಎದ್ದು ಕಾಣುತ್ತದೆ.
                                            ಪೂರ್ತಿ ಸಾಕ್ಷ್ಯಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದೇನೆ.

                                            ಪರಮೇಶ್ವರ್ ಹಾಗೂ ಅವರ ತಂಡಕ್ಕೆ ಶುಭವಾಗಲಿ.
                                             

                                            N Krishnamurthy Bhadravathi
                                            N Krishnamurthy Bhadravathi
                                            11 years ago

                                            ತೇಜಸ್ವಿಯವರನ್ನು ಸಾಕ್ಷ್ಯಚಿತ್ರವಾಗಿಸುವುದೆಂದರೆ ವಿಸ್ಮಯವನ್ನು ಚಿತ್ರೀಕರಿಸಿದಂತೆ…ಮೊಗೆದಷ್ಟು ಮತ್ತಷ್ಟು…..ಗೆಳೆಯರೆ ಶುಭವಾಗಲಿ…ನಿಮ್ಮ ಚಿತ್ರ ನೋಡುವ ಸೌಭಾಗ್ಯ ನಮ್ಮದಾಗಲಿ…ಪಂಜು ಧನ್ಯವಾದಗಳು ಸಂದರ್ಶನಕ್ಕಾಗಿ…

                                            ಸುಮತಿ ದೀಪ ಹೆಗ್ಡೆ

                                            ಉತ್ತಮ ಪ್ರಯತ್ನ. ಯಶಸ್ಸು ನಿಮ್ಮದಾಗಲಿ ಪರಮೇಶ್ವರ್…

                                            ಪ್ರವೀಣ ಚಂದ್ರ

                                            ಫೇಸ್ಬುಕ್ ಸ್ಟೈಲ್ ನಲ್ಲಿರುವ ವಿನೂತನ ಸಂದರ್ಶನ ಇಷ್ಟವಾಯಿತು. ಡಾಕ್ಯುಮೆಂಟರಿಯಲ್ಲಿ ತೇಜಸ್ವಿ ಕುರಿತು ನನ್ನ ಮೇಸ್ಟ್ರು ನರೇಂದ್ರ ರೈ ದೇರ್ಲ ಸಹ ಮಾತನಾಡಿದ್ದರಿಂದ ಖುಷಿ ಡಬಲ್ ಆಯ್ತು 🙂

                                            Prasad V Murthy
                                            11 years ago

                                            ಚೆಂದದ ಸಂದರ್ಶನ. ತೇಜಸ್ವಿ ಸಾಕ್ಷ್ಯಚಿತ್ರವಾದದ್ದು ಸಂತಸದ ವಿಚಾರ, ಕರ್ವಾಲೊದೊಂದಿಗೆ ಕೈಬೀಸಿ ನನ್ನ ಕರೆದ ತೇಜಸ್ವಿ, ನನ್ನನ್ನು ಸಂಪೂರ್ಣ ಆವರಿಸಿದ್ದಾರೆ. ಈಗ ಅಬಚೂರಿನ ಪೋಸ್ಟ್ ಆಫೀಸು, ಚಿದಂಬರ ರಹಸ್ಯ, ಪರಿಸರದ ಕಥೆ, ಹೀಗೆ ಒಂದಾದ ಮೇಲೊಂದರಂತೆ ಓದಿಸಿಕೊಂಡು ಹೋಗುತ್ತಿದ್ದಾರೆ! ಅವರ ಸಾಕ್ಷ್ಯಚಿತ್ರವನ್ನು ನಮಗಿತ್ತ ಪರಮೇಶ್ವರ್ ರವರಿಗೆ ವಂದನೆಗಳು.
                                            – ಪ್ರಸಾದ್.ಡಿ.ವಿ.

                                            ರಾಜೇಂದ್ರ ಬಿ. ಶೆಟ್ಟಿ
                                            ರಾಜೇಂದ್ರ ಬಿ. ಶೆಟ್ಟಿ
                                            11 years ago

                                            ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ. ಡಿ ವಿ ಡಿ ಯ ಬಿಡುಗಡೆಗೆ ಕಾಯುತ್ತೀದ್ದೇನೆ.

                                            Upendra
                                            Upendra
                                            11 years ago

                                            ಅಚ್ಚುಕಟ್ಟಾದ ಸಂದರ್ಶನ. ಇಬ್ಬರಿಗೂ ಶುಭಹಾರೈಕೆಗಳು.

                                            Shashidhara
                                            Shashidhara
                                            11 years ago

                                            ಪಕ್ಕಾ ಪಸಿರವಾದಿಯಾಗಿದ್ದ ತೇಜಸ್ವಿಯವರನ್ನ ಮತ್ತೆ ಜೀವಂತ ನೋಡಿದಂತೆ ಭಾಸವಾಯಿತು. ಡಾಕ್ಯುಮೆಂಟರಿ ತುಂಬ ಚೆನ್ನಾಗಿದೆ. ಪರಮೇಶ್ವರ್ ರವರ ಪರಿಶ್ರಮ ನಿಜಕ್ಕೂ ಸಾರ್ಥಕ. ಇನ್ನೂ ಹಲವು ಮಹಾನ್ ವ್ಯಕ್ತಿಗಳ ಸಾಕ್ಷ್ಯಚಿತ್ರಗಳು ಮೂಡಿಬರಲಿ.

                                            8
                                            0
                                            Would love your thoughts, please comment.x
                                            ()
                                            x