ಹಾಗೆ ನೋಡಿದ್ರೆ ಎಲ್ಲಾ ದಿನವೂ ಮಹಿಳೆಯರ ದಿನವೇ ….
ಬೆಳಿಗ್ಗೆ ಎದ್ದು ಬಾಗಿಲಿಗೆ ನೀರು ಬಿಟ್ಟು ರಂಗೋಲಿ ಹಾಕೋದ್ರಿಂದ ಶುರು ಆಗಿ ರಾತ್ರಿ ಅರೆ ಊಟ ಮಾಡಿ ಮಗುವನ್ನು ಮಲಗಿಸಲು ಹೋಗೋ ತನಕ ಅದು ಅವಳಿಗೇ ಮೀಸಲಾದ ದಿನ … ಅವಳದ್ದೇ ದಿನಗಳೇ…
ಬಿಡುವಿಲ್ಲದ ದಿನಚರಿ ….
ಕೆಲವೊಂದಿಷ್ಟು ಕನಸುಗಳು … ಕಣ್ಣ ಮುಂದಿನ ಗುರಿ …. ಹೆಗಲ ಮೇಲೆ ಬೆಟ್ಟದಷ್ಟು ಜವಾಬ್ದಾರಿಗಳು … ಅತ್ತೆ ಮಾವಂದಿರ ಮೇಲಿನ ಕಾಳಜಿ ,ಅಪ್ಪ ಅಮ್ಮನ ಮರೆಯಲಾರದ ವಾತ್ಸಲ್ಯ ,ಮಮತೆಯ ಮಡಿಲಿನ ಸಾರ್ಥಕ್ಯ … ಸದಾ ನಗುವಿನ ಮುಖ 🙂
ಬ್ಯುಸಿ ಆಗಿರುವ ಈ ಮಹಿಳೆ ಯಾವ ಪ್ರಧಾನಿಗೂ ಕಮ್ಮಿ ಇಲ್ಲ …
ತನ್ನ ತನಗಳನ್ನ ಸಂಭಂದಿಗಳಿಗಾಗಿ ಮೀಸಲಿಡೋ ಏಕೈಕ ವ್ಯಕ್ತಿ ಅವಳು …
ಜಾರುವ ಕಣ್ಣ ಹನಿಗಳನ್ನೋರೆಸಿಕೊಳ್ಳುತ್ತಾ ಬಾಲಿಶ ನಗುವನ್ನು ಸೂಸೋ ನಿಷ್ಕಲ್ಮಶ ವ್ಯಕ್ತಿತ್ವ …ಸದಾ ಹಸನ್ಮುಖಿ ….
ಬಾಲ್ಯದಲ್ಲಿ ಅಪ್ಪನ ಮುದ್ದಿನ ಮಗಳು ,ಬೆಳೆಯುತ್ತಾ ಸಮಾಜ ದಿಟ್ಟಿಸೋ ಹುಡುಗಿ ,ಕೆಲವೊಂದಿಷ್ಟು ಮಾತುಗಳನ್ನು ಎದುರಿಸಿಯೂ ಒಳ್ಳೆಯ ಕೆಲಸವನ್ನು ಹಿಡಿಯೋ ಪ್ರೌಡೆ …. ನಂತರ ಮದುವೆಯಾಗೊ ಹುಡುಗನ ಮೇಲೆ ಹರಿಯೋ ಪ್ರೀತಿ … ಅತ್ತೆ ಮಾವಂದಿರ ಮುದ್ದಿನ ಸೊಸೆ … ಅಪ್ಪ ಅಮ್ಮನ ಕಣ್ಮಣಿ …. ಕೆಲವೊಂದಿಷ್ಟು ಜವಾಬ್ದಾರಿಗಳು ….ಕೆಲಸಕ್ಕೆಂದು ಓಡೋ ಧಾವಂತ … ಅಮ್ಮನಾಗೋ ಖುಷಿ …
ತನ್ನದೇ ಅದ ಹೊಸ ಪ್ರಪಂಚದ ರಾಣಿ ….ಪ್ರಧಾನಿಗಿಂತಲೂ ದೊಡ್ಡ ಪಟ್ಟ ನಿನ್ನದು ಎಲ್ಲರನ್ನೂ ಎಲ್ಲವನ್ನೂ ನಗು ನಗುತಾ ನಿಭಾಯಿಸೋ ನಿನ್ನೀ ತಾಳ್ಮೆಗೆ ನನ್ನದೊಂದು ನಮನ ಗೆಳತಿ …
ಓ ಕ್ಷಮಯಾ ಧರಿತ್ರಿ ,
ಪ್ರೀತಿ ಎಂದರೆ ನೀ ….
ಮಮತೆಯ ಪ್ರತಿರೂಪ ನೀ …
ಧನ್ಯತೆಯ ಭಾವ ನೀ …
ಮಾತು -ಧಾತುವಿನ ಸಮ್ಮಿಲನ ನೀ …
ನಿನ್ನೀ ಸುಸಂಸ್ಕೃತ ಬದುಕಿಗೆ ,
ಗೌರವದ ಜೀವನ ಪ್ರೀತಿಗೊಂದು ನಮಸ್ಕಾರ …
ಹೀಗೆಯೇ ಎಲ್ಲರನ್ನು ಪ್ರೀತಿಸೋ ನಿನ್ನ ಗುಣ ಸಮಾಜಕ್ಕೆ ಮಾದರಿಯಾಗಲಿ …. ಎಲ್ಲರೂ ನಮ್ಮವರೇ ತಾನೇ … ಆದರಿಸೋ ಗೌರವಿಸೋ 'ನೀನು ನನ್ನಮ್ಮ ….
ನನ್ನ ಪ್ರೀತಿಯ ಅಕ್ಕ ….
ನಗುವನ್ನು ಹಂಚಿಕೊಳ್ಳೋ ಆತ್ಮೇಯೆ ….
ದುಃಖವನ್ನೂ ನಗುವಾಗಿ ಮಾರ್ಪಡಿಸೋ ಗೆಳತಿ …. ಶುದ್ಧ ತರಲೆ ಮಾಡೋ ತಂಗಿ .
.ಮುಗ್ಧ ಮನಸ್ಸಿನ ಸ್ವಚ್ಚಂದ ಕೂಸು ..
ಸಮಾಜದ ಹುಳುಕುಗಳನ್ನ ನಾಶ ಮಾಡೋ ಶಕ್ತಿ ಉಳ್ಳ ಜಗದ್ಮಾತೆ ….
ನೀ ಒಬ್ಬ ಹೆಣ್ಣು ….
ಕಡಲ ತೀರದ ಮುತ್ತು ..
ಭಾವದೊಳಗಿನ ಗಮ್ಮತ್ತು ….
ಮಾತೃ ವಾತ್ಸಲ್ಯದ ತುತ್ತು ….
ಇವೆಲ್ಲಕ್ಕೂ ಮೀರಿದ ಸಂಪತ್ತು ನೀ ….
ಹೆಮ್ಮೆ ಪಡು ಗೆಳತಿ ನೀ ಹೆಣ್ಣೆಂದು ….
ನಿನ್ನ ಸಮಾಜ ನಿಂತಿರೋದು ನಿನ್ನ ಮೇಲೆ …
ಸಮಾಜಕ್ಕೊಂದು ದಾರಿ ದೀಪವಾಗು …
ನಿನ್ನ ಆದರ್ಶಗಳು ವಿಚಾರಗಳು ಮಾರ್ಗದರ್ಶನವಾಗಲಿ
ಮಹಿಳೆ …. ಪ್ರೀತಿ …. ಒಲುಮೆ …. ಕರುಣೆ … ಕ್ಷಮೆ ….
ಎಲ್ಲದ್ದಕ್ಕೂ ಅರ್ಥ ಒಂದೇ …. ಹೆಣ್ಣು 🙂
ಈ ವಿಶೇಷ ದಿನದಂದು ಎಲ್ಲಾ ಮಹಿಳೆಯರಿಗೆ ಈ ಪುಟ್ಟ ಲೇಖನವನ್ನು ಅರ್ಪಣೆ ಮಾಡುತ್ತಿದ್ದೇನೆ. ಬನ್ನಿ ಹೆಣ್ಣಿನ ಭಾವನೆಗಳನ್ನು ಚಿಂತನೆಗಳನ್ನು ಗೌರವಿಸೋಣ..
-ಭಾಗ್ಯ ಭಟ್
olleya sandesha…..
ಮಹಿಳಾ ದಿನಕ್ಕೆ ಅರ್ಪಣೆ ಮಾಡಿದ ಲೇಖನ ಚೆನ್ನಾಗಿದೆ.. ಹೆಣ್ಣಿನ ವಿವಿಧ ರೂಪಗಳನ್ನು ಹೇಳಿದ್ದಿಯಾ…
ನೈಸ್ ಒನ್ ಪುಟ್ಟಕ್ಕಾ…
ನಿನಗೂ ಸಹ ವಿಶ್ವ ಮಹಿಳಾ ದಿನದ ಶುಭಾಶಯಗಳು…
ಚೆಂಡನ್ನು ಮಹಡಿಯ ಮೆಟ್ಟಿಲ ಮೇಲಿಂದ ಬಿಟ್ಟಾಗ ಪುಟ್ಟ ಪುಟ್ಟ ಪುಟ ಬಿದ್ದು ಕೆಳಗೆ ನೆಗೆಯುತ್ತದೆ. ಲೇಖನದ ಹರವು ಕೂಡ ಹಾಗೆಯೇ ಪುಟ್ಟ ಪುಟ್ಟದಾಗಿ ಬೀಳುತ್ತಲೇ ಸುಂದರ ಸಂದೇಶವನ್ನು ಹೊತ್ತು ಸಾರುತ್ತದೆ. ಸುಂದರವಾಗಿದೆ ಲೇಖನ ಭಾಗ್ಯ
ಹೆಣ್ಣೆಂದರೆ ಏನೆಲ್ಲಾ ಎಂಬುದನ್ನು ಪುಟ್ಟ ಪುಟ್ಟ ವಾಕ್ಯಗಳಲ್ಲಿ ತಿಲಿಸಿದ್ದೀಯ ಪುಟ್ಟಿ .. ಚೆನ್ನಾಗಿದೆ
ಮಹಿಳಾ ದಿನಾಚರಣೆಯ ಶುಭಾಷಯಗಳೊಂದಿಗೆ
–ಸಂಧ್ಯಾ ಭಟ್
🙂
ಹೆಣ್ಣಿನ ಜೀವನದ ಹಂತವನ್ನ ಚಿಕ್ಕದಾಗಿ, ಸುಂದರವಾಗಿ ವರ್ಣಿಸಿದ್ದೀರ.
"ನೀ ಒಬ್ಬ ಹೆಣ್ಣು,
ಕಡಲ ತೀರದ ಮುತ್ತು,
ಭಾವದೊಳಗಿನ ಗಮ್ಮತ್ತು,
ಮಾತೃ ವಾತ್ಸಲ್ಯದ ತುತ್ತು ,
ಇವೆಲ್ಲಕ್ಕೂ ಮೀರಿದ ಸಂಪತ್ತು ನೀ,
ಹೆಮ್ಮೆ ಪಡು ಗೆಳತಿ ನೀ ಹೆಣ್ಣೆಂದು " ಸಾಲುಗಳು ತುಂಬಾ ಹಿಡಿಸಿದವು.
ಹೆತ್ತು ಹೊತ್ತು , ಸಾಕಿದ ತಾಯಿಗೆ ನಮನ.
ಮಾ ತುಜೇ ಸಲಾಂ…
Good dedication to all the wonme
ಅವಳಿಲ್ಲದೇ ಜಗವಿಲ್ಲ ಎನ್ನುವುದನ್ನು ತುಂಬಾ ಮಾರ್ಮಿಕವಾಗಿ ನಿರೂಪಿಸಿದ್ದೀರಾ. ಆಕೆಯ ಶ್ರಮ ಕೆಲವೊಮ್ಮೆ ಗುರುತಿಸಲ್ಪಡದಿದ್ದರೂ ಆಕೆ ಕೊರಗುವುದೇ ಇಲ್ಲ. ಸಿಕ್ಕ ಪುಟ್ಟ ಶೋಷಣೆಗಳಿಗೂ ಹಾಕೆ ಸೊಪ್ಪು ಹಾಕುವುದೇ ಇಲ್ಲ.
ಒಳ್ಳೆಯ ಲೇಖನ.
Very well written Bhagya. Your mom would be very proud to read this
ಹೆಣ್ಣು ಮಮತಾಮಯಿ….
ಸಹನೆಗೆ ಇನ್ನೊಂದು ಹೆಸರು…
ಯುದ್ಧ ಆಗೋದೂ ಹೆಣ್ಣಿಂದ
ಸಂಧಾನಾನೂ ಅವಳಿಂದ…
ಪ್ರಧಾನಿಗಿಂತಲೂ ಬ್ಯೂಸಿ.. ನಿಜ
ಅವಳೊಂದು ಮಾಯೆ….
ಈಗಿದ್ದ ರೂಪ ಈಗಿಲ್ಲ….
ಗೌರವದ ಹೆಣ್ಣು……
ಒಳ್ಳೆಯ ಲೇಖನ….
ಭಾಗ್ಯ …ಮನಮುಟ್ಟುವ ಚಂದದ ಬರವಣಿಗೆ … :))
ಚಂದದ ಬರಹ, ಹೀಗೆ ಒಳ್ಳೋಳ್ಳೆ ಬರಹಗಳು ನಿನ್ನಿಂದ ಮೂಡಿ ಬರುತ್ತಿರಲಿ, ಮಹಿಳಾ ದಿನದ ಶುಭಾಷಯಗಳು ತಡವಾಗಿ…