ಅರಳೀ, ಹೊಂಗೆ, ಮಾವು, ಬೇವು, ನೇರಳೆ, ತೆಂಗು, ಹುಣಸೇ, ಸೀಬೆ, ಹೀಗೆ ಸಾಮಾನ್ಯವಾಗಿ ಕಾಣಸಿಗುವ ಕಾಣ ಸಿಗುತ್ತಿದ್ದ ಮರಗಳನ್ನು ಹೆಸರಿಸುತ್ತಾ ಹೋದರೆ ಆ ಮರಗಳ ಬರೀ ಚಿತ್ರಗಳಷ್ಟೇ ನಮ್ಮ ಕಣ್ಣ ಮುಂದೆ ಬರುವುದಿಲ್ಲ. ಬದಲಿಗೆ ಅವುಗಳ ಎಲೆ ಹೂವು ಹಣ್ಣು ನೆರಳು ತಂಪು ಹೀಗೆ ಏನೆಲ್ಲಾ ನಮ್ಮ ಅನುಭವಕ್ಕೆ ಬರುತ್ತದೆ. ಮರಗಳು ನಮ್ಮ ಬಾಲ್ಯದಲ್ಲಿ ನಮ್ಮೊಡನೆ ಬೆರೆತು ಹೋಗಿದ್ದ ಅನನ್ಯ ಜೀವಿಗಳು. ಮರಕೋತಿ ಆಟಗಳಿಂದ ಹಿಡಿದು ದೆವ್ವದ ಕತೆಗಳವರೆಗೆ, ಪಠ್ಯ ಪುಸ್ತಕದ ಪಾಠಗಳಲ್ಲಿ "ಅಶೋಕನು ಸಾಲು ಸಾಲು ಮರಗಳನ್ನು ಬೆಳೆಸಿದ್ದನು" ಎಂಬಂತಹ ಸಾಲುಗಳಿಂದ ಹಿಡಿದು "ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾಯಿತು" ಎಂಬತಹ ಸಾಲುಗಳವರೆಗೆ ಮರಗಳು ನಮ್ಮೊಳಗೆ ಕಂಡೂ ಕಾಣದಂತೆ ವಿಶಿಷ್ಟವಾದ ಸ್ಥಾನ ಪಡೆದಿದ್ದವು.
ಈಗಿನ ಮಕ್ಕಳ ಪುಸ್ತಕಗಳ ತಿರುವಿ ಹಾಕಿದರೆ ಕಣ್ಣಿಗೆ ರಾಚುವ ಚಂದದ ಬಣ್ಣ ಬಣ್ಣದ ಮರಗಳ ಪರಿಸರದ ಚಿತ್ರಗಳೇನೋ ಪುಸ್ತಕಗಳ ತುಂಬಾ ತುಂಬಿರುತ್ತವೆ. ಆದರೆ ನಿಜವಾಗಿ ಆ ಮರಗಳನ್ನು ನೋಡುವ ಭಾಗ್ಯ ಆ ಮಕ್ಕಳಿಗೆ ಸಿಕ್ಕಿರುತ್ತದೋ ಇಲ್ಲವೋ ಗೊತ್ತಿಲ್ಲ. ಖುಷಿಯ ಸಂಗತಿ ಎಂದರೆ ನಮಗೆ ಬಾಲ್ಯದಲ್ಲಿ ಸಿಗುತ್ತಿದ್ದ ರಾಜರು ಸಾಲು ಸಾಲು ಮರಗಳನ್ನು ಬೆಳೆಸಿದ್ದರು ಎಂಬಂತಹ ಇತಿಹಾಸ ತಿಳಿಸುವ ಪಾಠಗಳು ಈಗಿನ ಪಠ್ಯದಲ್ಲಿ ಲಭ್ಯವಿಲ್ಲದಿದ್ದರೂ ಕೆಲವು ಪುಸ್ತಕಗಳಲ್ಲಾದರು ಸಾಲು ಮರದ ತಿಮ್ಮಜ್ಜಿಯ ಕತೆಯಾದರೂ ಇವೆ. ಇತಿಹಾಸವನ್ನು ಎಷ್ಟೇ ತಿರುವಿ ಹಾಕಿ ಓದಿದರೂ ಒಬ್ಬೇ ಒಬ್ಬ ರಾಜಕೀಯ ನಾಯಕ ಸಾಲು ಮರಗಳ ಬೆಳೆಸಿದ ಎಂಬ ಉದಾಹರಣೆಗಳು ಸಿಗುವುದಿಲ್ಲ. ಬದಲಿಗೆ ದಿನಪತ್ರಿಕೆಗಳ ತುಂಬ ಗಂಟು ಕಳ್ಳ ರಾಜಕೀಯ ನಾಯಕರುಗಳು ನೆಲ ಜಲಗಳ ದೋಚುವ ದೋಚುತ್ತಿರುವ ಸುದ್ದಿಗಳೇ ಕಣ್ಣಿಗೆ ರಾಚುತ್ತವೆ.
ಚಳಿಗಾಲವನ್ನು ಒಂಚೂರಾದರೂ ಅನುಭವಿಸಿ ಈಗಷ್ಟೇ ಬೇಸಿಗೆಯತ್ತ ಕಾಲಿಡುತ್ತಿರುವ ನಮಗೆ ನಮ್ಮದೇ ಬೆವರಿನ ವಾಸನೆ, ಬಿಸಿಲಿನ ಝಳ, ನಮ್ಮಲ್ಲಿ ಇನ್ನಿಲ್ಲದ ಬೇಸರ ಮೂಡಿಸುವ ದಿನಗಳು ಹೆಚ್ಚು ದೂರವೇನಿಲ್ಲ. ಓದಿ ತಿಳಿದವರಾದ ನಮಗೆ ಅರಣ್ಯ ನಾಶದಿಂದಾಗುವ ಹಸಿರು ಮನೆ ಪರಿಣಾಮ, ಭೂಮಿಯ ಉಷ್ಣಾಂಶದಲ್ಲಿಯ ಏರಿಕೆ ಎಲ್ಲದರ ಅರಿವಿದೆ. ನಿತ್ಯವೂ "ಏನ್ ಗುರು ಇಷ್ಟೊಂದು ಸೆಖೆ, ಮಳೆಯಿಲ್ಲ, ಬೆಳೆಯಿಲ್ಲ." ಎಂದು ಗೊಣಗುತ್ತಲೇ ದಿನ ಕಳೆದುಬಿಡುತ್ತೇವೆ. ಎಷ್ಟು ಸಾಧ್ಯವೋ ಅಷ್ಟು ಮರಗಳ ಬೆಳೆಸಿದರೆ ಈ ಸಮಸ್ಯೆಗೆಲ್ಲಾ ಪರಿಹಾರ ದೊರೆಯುತ್ತದೆ ಎಂದು ನಮಗೆ ಗೊತ್ತಿದೆ. ನಮ್ಮ ಹಿರಿಯರಾದರೂ ತಮ್ಮ ಕಾಲದಲ್ಲಿ ಗಿಡ ಮರಗಳ ಬೆಳೆಸಿ ನಮಗೆ ಮರಗಳೊಡನೆ ನಂಟು ಬೆಳೆಯಲು ಸಹಕರಿಸಿದ್ದರು. ನಾವು ನಮ್ಮ ಮುಂದಿನ ಪೀಳಿಗೆಗಾಗಿ ಒಂದೇ ಒಂದು ಗಿಡವನ್ನಾದರು ನೆಟ್ಟು ಆರೈಕೆ ಮಾಡಿ ಅದನ್ನು ಮರವನ್ನಾಗಿ ಮಾಡಿದ್ದೇವಾ ಎಂದರೆ, ಖಂಡಿತಾ ನಮ್ಮಲ್ಲಿ ಹೆಚ್ಚು ಜನ ಒಂದು ಗಿಡವನ್ನು ನೆಟ್ಟಿರುವುದಿಲ್ಲ.
ಊರು ಬಿಟ್ಟು ಪೇಟೆಗೆ ಬಂದು ಬಾಡಿಗೆ ಮನೆಗಳಂತಹ ಗೂಡುಗಳಲ್ಲಿ ನಾವು ಬಂಧಿಯಾಗಿದ್ದರೆ ಮರಗಳನ್ನು ಬೆಳೆಸುವುದಾದರು ಎಲ್ಲಿ ಎಂಬ ದೊಡ್ಡ ಪ್ರಶ್ನೆ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ. ನಮಗೆ ನಮ್ಮದೇ ಆದ ಊರುಗಳಿವೆ. ಅಲ್ಲಿ ಹೊಲಗಳೂ ಇವೆ. ಹೊಲಗಳಿಲ್ಲದಿದ್ದರೂ ಹಿತ್ತಲುಗಳಾದರು ಇವೆ. ಒಂದು ಮಗು ಹುಟ್ಟಿದ ಖುಷಿಗೋ, ಸತ್ತವರ ನೆನಪಿಗೋ ಒಂದೊಂದು ಗಿಡ ನೆಡುತ್ತಾ ಬಂದರೆ ಅದೆಷ್ಟು ಮರಗಳನ್ನು ನಾವು ಬೆಳೆಸಿಬಿಡಬಹುದಲ್ಲಾ ಎನಿಸುತ್ತೆ. ಬೆಂಗಳೂರು ನಗರಗಳಂತಹ ಜಾಗಗಳಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೆಲವು ಎನ್ ಜಿ ಓ ಗಳು ಮರ ನೆಡುವ ಅಭಿಯಾನಗಳ ನಡೆಸುತ್ತಲೇ ಇರುತ್ತವೆ. ಅಂತಹ ಅಭಿಯಾನಗಳ ಜೊತೆ ಕೈ ಜೋಡಿಸಿದರೆ ಮುಂದಿನ ದಿನಗಳಲ್ಲಾದರೂ ಬೇಸಿಗೆಯ ಬಿಸಿಯನ್ನು ಒಂಚೂರು ಕಡಿಮೆ ಮಾಡಬಹುದೇನೋ..
ಇನ್ನೇಕೆ ತಡ. ಮಕ್ಕಳು ಮೊಮ್ಮಕ್ಕಳ ಪುಟ್ಟ ಕೈಗಳಲ್ಲಿ ಗಿಡಗಳ ಹಿಡಿಸಿ ಗಿಡ ನೆಡುವ ಅಭಿಯಾನ ಶುರು ಮಾಡಿ ಈ ಪೃಥ್ವಿಯನ್ನು ಒಂಚೂರು ಹಸಿರಾಗಿಸಿ..
ಸಹೃಯಿಗಳೇ,
ಮರಗಳ ಕುರಿತು ಹೀಗೆ ಬರೆಯುತ್ತಾ ಆರನೇ ಸಂಚಿಕೆಯನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ಈ ವಾರ ಹಿರಿಯರಾದ ಗೋಪಾಲ ವಾಜಪೇಯಿಯವರ ಕವನ, ಜೋಗಿಯವರ ಪತ್ರ, ಮತ್ತು ಗೆಳೆಯನಾದ ವಿ ಆರ್ ಕಾರ್ಪೆಂಟರ್ ರವರ ಒಂದು ಲೇಖನದ ಜೊತೆ ಎಂದಿನಂತೆ ನಮ್ಮ ಯುವ ಬರಹಗಾರರ ಚಂದದ ಲೇಖನಗಳನ್ನು ಹೊತ್ತು ಪಂಜು ನಿಮ್ಮ ಮುಂದೆ ನಿಂತಿದೆ. ನೀವು ಓದಿ ಖುಷಿಗೊಳ್ಳುವಿರಿ ಎಂದು ನಂಬುತ್ತೇನೆ. ಪಂಜುವಿನ ಮೇಲೆ ನಿಮ್ಮ ಪ್ರೀತಿ ಹೀಗೆಯೇ ಇರಲಿ..
ಮತ್ತೆ ಸಿಗೋಣ..
ನಿಮ್ಮ ಪ್ರೀತಿಯ
ನಟರಾಜು.. :))
sir,panju onduhosa belakanne taruttide…adu nammalliya kattalannu odisuva dikkinalli saaguttide…hrudaya purvaka shubhaashayagalu…..
Very nicely expressed sir. Nangoo hangey annisuthe…….premigalu avara premigalige giftu kodoke saviraru roopayee karchu mado badlu….beledu hemmaravago antha ondu putta sasi kottu….."neenu nanna nijavagloo preethisodadre ee gidana nettu mara madu……….adestu doddadagutto nanu ashte preethi belestheeni antha sharathu haka beku"!……. I am sure aga……ella Nagaragaloo…………Lalbhag agey beleyuthave! Garden city galu multiply aguttave! Alwe ? 🙂
'ಪಂಜು' ಪತ್ರಿಕೆಯ ಆರನೇ ಸಂಚಿಕೆಯ ಸಂಪಾದಕೀಯ ಹಸಿರು ಹಸಿರಾಗಿದೆ. . ನಿಮ್ಮೀ ಪಯಣ ನಿರಂತರವಾಗಿ ಸಾಗಲಿ….. ಶುಭವಾಗಲಿ….
good
Good Call For Plantation At Right Time…………..All The Very Best Panju……..!
ಶುಭವಾಗಲೀ ಸರ್.
Hasiru usiragali panju hesaragali
Nimagu shubhavagali
ತುಂಬಾ ಸಾಮಾಜಿಕ ಕಳಕಳಿ ಹೊತ್ತ ಲೇಖನ..
ಧನ್ಯವಾದಗಳು…
olleya chintane natanna.. 🙂
ಒಂದು ಒಳ್ಳೆಯ ಆಶಾದಾಯಕ ಚಿಂತನೆ 🙂 ಹೀಗೆ ಮುಂದುವರೆಯಲಿ !!!
ನಮ್ಮಂಥಾ ಯುವ ಮನಸ್ಸುಗಳನ್ನ ಬರವಣಿಗೆಯತ್ತ ಮುಖ ಮಾಡುವಂತೆ ಮಾಡಿದ ಪಂಜು ಹಾಗು ಅದರ ತಂಡಕ್ಕೆ ಧನ್ಯವಾದಗಳು……
ondanondu kaaladalli ettala manaeyavaru bhelaesidda gidagaligae neerunisidda kshanagalu nenapadavu……
True!!