ಮಕ್ಕಳ ಬಾಳಿನ ಬೆಳಕಿನ ಪಂಜು ಆಗೋಣ: ನಟರಾಜು ಎಸ್. ಎಂ.

ಒಂದು ಭಾನುವಾರ ಬೆಳಿಗ್ಗೆ ಗೆಳತಿಯೊಡನೆ ಫೋನಿನಲ್ಲಿ ಮಾತನಾಡುತ್ತಿದ್ದಾಗ ಆಕೆ  "  ಇವತ್ತು ಒಂದು ನ್ಯೂಸ್ ನೋಡಿದೆ. ನಾಲ್ಕು ವರ್ಷದ ಹುಡುಗಿಯನ್ನು ಹತ್ತು ವರ್ಷದ ಹುಡುಗ ಅತ್ಯಾಚಾರ ಮಾಡಿದ್ದಾನೆ. ಆ ನ್ಯೂಸ್ ನೆನೆಸಿಕೊಂಡರೆ ಭಯ ಆಗುತ್ತೆ ಜೊತೆಗೆ ನಾವು ಯಾವ ಲೋಕದಲ್ಲಿ ಬದುಕುತ್ತಿದ್ದೇವೆ ಅಂತ ಅನಿಸುತ್ತೆ." ಎಂದು ಹೇಳಿ ಮೌನ ತಾಳಿದಳು. ಅವಳ ಮಾತುಗಳ ಕೇಳಿ ಮನಸ್ಸು ಒಂದು ಶೂನ್ಯ ಭಾವಕ್ಕೆ ಶರಣಾಗಿತ್ತು. ಕಾಕತಳೀಯವೆಂಬಂತೆ ಅಚನಕ್ಕಾಗಿ ಆ ದಿನವೇ ಜಿಲ್ಲಾ ಮಟ್ಟದ "ಮಕ್ಕಳ ಮೇಲಿನ ದೌರ್ಜನ್ಯ ತಡೆ" ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಲು ಕರೆ ಬಂದಿತ್ತು. ನನ್ನ ಸರ್ ಆ ಕಾರ್ಯಾಗಾರದಲ್ಲಿ ಭಾಗವಹಿಸಲಾಗದ ಕಾರಣ ನನ್ನನ್ನು ನಮ್ಮ ಇಲಾಖೆಯ ಪ್ರತಿನಿಧಿಯನ್ನಾಗಿ ಕಳುಹಿಸಿದ್ದರು. ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾನೂನಿನ ಅರಿವು ಒಂಚೂರು ಇರದ ನಾನು ಆ ಕಾರ್ಯಾಗಾರಕ್ಕೆ ಹೋಗುವ ಮೊದಲು ಆ ಕಾನೂನಿನ ಬಗ್ಗೆ ತಿಳಿಯಲು ಮೊರೆ ಹೊಕ್ಕಿದ್ದು ಅಂಜಲಿ ರಾಮಣ್ಣ ಅವರಲ್ಲಿ. ನನ್ನ ಮೊರೆ ಕೇಳಿದ ಅವರು ತಮ್ಮ ಬಳಿ ಇದ್ದ ಅವರ ರೇಡಿಯೋ ಮಾತುಕತೆಯ ಲೇಖನ ರೂಪವನ್ನು ನನಗೆ ಕಳುಹಿಸಿದ್ದರು. ಅದರ ಮೇಲೆ ಒಮ್ಮೆ ಕಣ್ಣಾಡಿಸಿ ಆ ದಿನ ಆ ಕಾರ್ಯಾಗಾರದಲ್ಲಿ ಭಾಗವಹಿಸಿ ಸಂಜೆ ಮನೆಗೆ ಬಂದಿದ್ದೆ. 

ಸಂಜೆ ಮನೆಗೆ ಬಂದಾಗ ಅವತ್ತು ಆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಷ್ಟೂ ಅಧಿಕಾರಿ ವರ್ಗದ ಮಾತುಗಳನ್ನು, ನಡೆದ ಸಮಾಲೋಚನೆಯನ್ನು ಮೆಲುಕು ಹಾಕುತ್ತಾ ಕುಳಿತ್ತಿದ್ದೆ. ಆ ಕಾರ್ಯಾಗಾರದಲ್ಲಿ ಪೋಲೀಸರು, ವಕೀಲರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಎನ್ ಜಿ ಓ ಗಳ ಪ್ರತಿನಿಧಿಗಳು, ಪ್ರೊಫೆಸರ್ ಗಳು, ಟೀಚರ್ ಗಳು, ಹೀಗೆ ವಿವಿಧ  ಇಲಾಖೆಯ ಜನರು ಬಂದಿದ್ದರು. ನನ್ನೊಂದಿಗೆ ಇನ್ನೊಂದಿಬ್ಬರು ಪ್ರತಿನಿಧಿಗಳನ್ನು ಬಿಟ್ಟರೆ ಎಲ್ಲರೂ ವಯಸ್ಸಿನಲ್ಲಿ ಹಿರಿಯರೇ.  ಅವರುಗಳು ಮಾತನಾಡಿದ ಮಾತುಗಳು ನಿಜಕ್ಕೂ ನನ್ನ ಮೇಲೆ ಒಂದು ವಿಶೇಷವಾದ ಪರಿಣಾಮ ಬೀರಿದ್ದವು. ಅವರ ಮಾತುಗಳನ್ನೆಲ್ಲಾ ಕೇಳಿಸಿಕೊಂಡಾಗ ಅನಿಸಿದ್ದೆಂದರೆ ನಮಗೆ ಕಾನೂನಿನ ಅರಿವು ತುಂಬಾ ಕಡಿಮೆ ಇರುವುದರ ಜೊತೆಗೆ ಸಾಮಾಜಿಕ ಕಳಕಳಿಯ ಭಾವ ತುಂಬಾ ಕಡಿಮೆ ಇದೆ ಅಥವಾ ಇಲ್ಲವೇ ಇಲ್ಲವೇನೋ ಎಂದು. ಹಾಗೆ ಅನಿಸಿದ ಮರುಕ್ಷಣ ಅಂಜಲಿ ರಾಮಣ್ಣನವರ ಜೊತೆ ಮಾತನಾಡಿ ಪಂಜುವಿನಲ್ಲಿ ಮಕ್ಕಳ ಹಕ್ಕುಗಳ ಕುರಿತು ಒಂದು ವಿಶೇಷ ಸಂಚಿಕೆ ತರೋಣ ನೀವು ಅದಕ್ಕೆ ಅತಿಥಿ ಸಂಪಾದಕಿಯಾಗಿ ಎಂದು ಕೇಳಿದೆ. ಅವರು ಕೂಡಲೇ ಒಪ್ಪಿಕೊಂಡರು. ಅದರ ಫಲವಾಗಿ ಇವತ್ತು ಹತ್ತಾರು ಲೇಖನಗಳು ನಮಗೆ ಇಲ್ಲಿ ಓದಲು ಲಭ್ಯವಿವೆ. 

“ಅರೆ ಈ ಲೇಖನಗಳನ್ನು ಇಲ್ಲಿ ಪಬ್ಲಿಷ್ ಮಾಡೋದರಿಂದ ಏನು ಉಪಯೋಗ ದೊಡ್ಡ ದೊಡ್ಡ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡರೆ ಜನ ಓದ್ತಾರೆ” ಅಂತ ಕೆಲವರು ಅಭಿಪ್ರಾಯಿಸಬಹುದು. ಟಿವಿಯಲ್ಲಿ ಇಂಟರ್ ನೆಟ್ ನಲ್ಲಿ ಮೊಬೈಲ್ ಗಳಲ್ಲಿ ಅಶ್ಲೀಲ ಚಿತ್ರವನ್ನೋ ವಿಡಿಯೋವನ್ನೋ ನೋಡಿ ಹುಡುಗರು ಹಾಳಾಗ್ತಾ ಇದ್ದಾರೆ ಎನ್ನುವ ಜನರ ಅಭಿಪ್ರಾಯವನ್ನು ನೀವು ಕೇಳಿರುತ್ತೀರಿ ಅಲ್ಲವೇ? ಮಾಧ್ಯಮಗಳಲ್ಲಿ ಓದಲು ನೋಡಲು ಕೇಳಲು ಸಿಕ್ಕುವ ಅಶ್ಲೀಲ ಲೇಖನಗಳ ಚಿತ್ರಗಳ ವಿಡಿಯೋಗಳ ಪ್ರಮಾಣಕ್ಕೆ ಹೋಲಿಸಿದರೆ ಸಮಾಜದ ಸ್ವಾಸ್ಥ್ಯವನ್ನು ಉತ್ತಮಗೊಳಿಸುವ ಮೆಟೀರಿಯಲ್ ಗಳು ನಮಗೆ ಓದಲು ಕೇಳಲು ನೋಡಲು ಸಿಗುವುದು ಅಪರೂಪ. ಕೆಲವೊಮ್ಮೆ ಅಂತಹ ಅಪರೂಪಕ್ಕೆ ನಮ್ಮ ಕಣ್ಣ ಮುಂದೆ ಸುಳಿಯುವ ಕೆಲವು ಪುಟ್ಟ ಕಂಟೆಂಟ್ ಗಳು ನಮ್ಮ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಆ ಕಾರಣಕ್ಕಾದರೂ ದೊಡ್ಡ ದೊಡ್ಡ ಮಟ್ಟದಲ್ಲಾಗದಿದ್ದರೂ ಪುಟ್ಟ ಪುಟ್ಟ ಮಟ್ಟದಲ್ಲಿ ಒಳ್ಳೆಯ ಲೇಖನಗಳನ್ನೋ ಒಳ್ಳೆಯ ಕಂಟೆಂಟ್ ಗಳನ್ನೋ ಮಾಧ್ಯಮಗಳಲ್ಲಿ ಅದರಲ್ಲೂ ಇಂಟರ್ ನೆಟ್ ನಂತಹ ಮಾಧ್ಯಮದಲ್ಲಿ ಪ್ರಕಟಿಸುವುದು ಈ ದಿನಗಳಲ್ಲಿ ತುಂಬಾ ಅವಶ್ಯಕತೆ ಇದೆ. ಜೊತೆಗೆ ಕನ್ನಡ ಭಾಷೆಯಲ್ಲಿ ಗಹನ ವಿಷಯಗಳು ಆನ್ಲೈನ್ನಲ್ಲಿ ಸಿಗಬೇಕಿರುವುದು ಹೆಚ್ಚಬೇಕಿದೆ. ಇಂತಹ  ಅವಶ್ಯಕತೆಯ ಅನೇಕ ಪ್ರಯತ್ನಗಳಲ್ಲಿ ನಮ್ಮದೂ ಒಂದು ಪುಟ್ಟ ಪ್ರಯತ್ನ ಎಂಬುದು ಎಂಬುದು ನನ್ನ ಅಭಿಪ್ರಾಯ. 

ನೀವು ಕಣ್ಣಾಡಿಸಿದಂತೆ ಈ ವಿಶೇಷ ಸಂಚಿಕೆಯಲ್ಲಿ ಹತ್ತಾರು ಲೇಖಕರು ಹತ್ತಾರು ಬಗೆಯ ಲೇಖನಗಳನ್ನು ಬರೆದಿದ್ದಾರೆ. ಈ ಎಲ್ಲಾ ಟಾಪಿಕ್ ಗಳನ್ನು ಫಿಕ್ಸ್ ಮಾಡಿದ್ದು ನಮ್ಮ ಅತಿಥಿ ಸಂಪಾದಕರು. ಅವರು ಎಲ್ಲರಿಗೂ ಒಂದು ಟಾಪಿಕ್ ಕೊಟ್ಟು ನನಗೂ ಒಂದು ಟಾಪಿಕ್ ನೀಡಿ ಬರೆಯಲು ಹೇಳಿದ್ದರು. ಅದಕ್ಕಾಗಿ, ಒಂದು ದಿನ "ಆಹಾರ ಆರೋಗ್ಯ ಅಕ್ಷರ ಈ ಮೂರು ಮಕ್ಕಳ ಮೂಲಭೂತ ಅವಶ್ಯಕತೆಗಳು. ಮಕ್ಕಳನ್ನು ಪ್ರಪಂಚಕ್ಕೆ ದಯಪಾಲಿಸುವ ಎಷ್ಟೋ ಅಪ್ಪ ಅಮ್ಮ ಮಕ್ಕಳ ಈ ಮೂರು ಅವಶ್ಯಕತೆಗಳನ್ನು ಪೂರೈಸಲು ವಿಫಲರಾಗುತ್ತಿದ್ದಾರೆ. ಆ ವಿಫಲತೆಯ ಅಡ್ಡಪರಿಣಾಮಗಳು ಇಂದು ಸಮಾಜದ ಸ್ವಾಸ್ಥ್ಯವನ್ನು ಒಂದು ಮಟ್ಟಿಗೆ ಹಾಳು ಮಾಡಿದೆ. ಹಾಗೆ ಹಾಳಾದ ಸಮಾಜದ ಸ್ವಾಸ್ಥ್ಯ ಎಲ್ಲರ ಕಣ್ಣಿಗೂ ಸುಲಭವಾಗಿ ಕಾಣಸಿಗುವುದಿಲ್ಲ. ನಾವು ಒಂಚೂರು ಕಣ್ಣರಳಿಸಿ ನೋಡಿದರೆ ಮಕ್ಕಳ ಸಮಸ್ಯೆಗಳ ವ್ಯಾಪಕತೆ ನಮಗೆ ತಿಳಿಯುತ್ತದೆ. ಎಷ್ಟೋ ಸಮಸ್ಯೆಗಳು ನಮ್ಮ ಸಮಸ್ಯೆಗಳಾಗಿರದಿದ್ದಾಗ ನಾವು ಕೇವಲ ನೋಡುಗರಾಗಿಯೇ ಇರುತ್ತೇವೆ. ಒಂದು ಸಮಾಜದ ಪ್ರಜೆಯಾಗಿ ಸಾಮಾಜಿಕ ಕಳಕಳಿಯನ್ನು ಒಂಚೂರಾದರೂ ಬೆಳಿಸಿಕೊಂಡರೆ ಸಮಾಜದ ಒಂದಿಷ್ಟು ಹುಳುಕುಗಳನ್ನು ನಾವು ತೊಡೆದು ಹಾಕಬಹುದು." ಹೀಗೆಲ್ಲಾ ಬರೆಯಲು ಕುಳಿತ್ತಿದ್ದೆ. ಯಾಕೋ ಗೊತ್ತಿಲ್ಲದ ವಿಷಯ ಕುರಿತು ಪಾಠ ಮಾಡ್ತಾ ಇದ್ದೇನೆ ಅನಿಸಿ ಲೇಖನವನ್ನು ಅರ್ಧಕ್ಕೆ ನಿಲ್ಲಿಸಿ ಸುಮ್ಮನಾಗಿದ್ದೆ. 

ಅಂದ ಹಾಗೆ ಅವರು ನನಗೆ ಬರೆಯಲು ನೀಡಿದ್ದ ವಿಷಯ "ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಇಂದಿನ ಯುವಕರ ಜವಾಬ್ದಾರಿ". 
ಈ ವಿಷಯದ ಬಗ್ಗೆ ನಿಮ್ಮ ಮಾತಿನಲ್ಲಿ ನಿಮ್ಮ ಅಭಿಪ್ರಾಯವನ್ನು ನೀವೂ ಹೇಳಿ. ಹಸಿವೆಯಿಂದ ನರಳುವ ಮಕ್ಕಳ ಹಸಿವು ಹೊಡೆದೋಡಿಸುವ ಕುರಿತು, ಆರೋಗ್ಯ ಭಾಗ್ಯ ಕಾಣದ ಹಸುಳೆಯರಿಗೆ ಆರೋಗ್ಯ ಸೇವೆ ದೊರಕಿಸುವ ಕುರಿತು, ಪುಟ್ಟ ಕಂದಮ್ಮಗಳ ಮೇಲೆ ನಡೆಯುವ ಲೈಂಗಿಕ ಅತ್ಯಾಚಾರಗಳ ತಡೆ ಕುರಿತು, ಅನಾಥರ ಕುರಿತು, ಮಕ್ಕಳ ಶಿಕ್ಷಣ ಕುರಿತು, ಅಸ್ಪೃಶ್ಯತೆ ಹಾಗು ಮಕ್ಕಳ ಮೇಲೆ ಅದರ ಪರಿಣಾಮ ಕುರಿತು, ಬಾಲ ಕಾರ್ಮಿಕತೆ ಕುರಿತು, ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರ, ಎನ್ ಜಿ ಓ ಮತ್ತು ವಿಧ ವಿಧದ ಇಲಾಖೆಗಳ ಪಾತ್ರ ಕುರಿತು, ಅಲ್ಲಿನ ಹಣದ ದುರುಪಯೋಗಗಳ ತಡೆ ಕುರಿತು, ಬಾಲಾಫರಾದಗಳ ಕಾರಣ ಮತ್ತು ತಡೆಯುವ ಬಗೆಯ ಕುರಿತು, ಬಾಲ್ಯ ವಿವಾಹ, ಸಾಹಿತ್ಯ ಸಿನಿಮಾ ಕಿರುಚಿತ್ರ ಗಳ ಮೂಲಕ ಮಕ್ಕಳ ಹಕ್ಕುಗಳ ರಕ್ಷಿಸುವ ಕುರಿತು,…. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಬರೀ ಯುವಕರಷ್ಟೇ ಅಲ್ಲ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ತುಂಬಾ ದೊಡ್ಡದಿದೆ. ಆ ಜವಾಬ್ದಾರಿಯನ್ನು ನಾವು ಹೇಗೆ ನಿಭಾಯಿಸುತ್ತೇವೆ ಎನ್ನುವುದರ ಮೇಲೆ ಮಕ್ಕಳ ಭವಿಷ್ಯ ನಿಂತಿದೆ. 

ಕೊನೆಯ ಪಂಚ್: ಒಂದು ಮಗುವಿನ ಮೇಲಾಗುವ ಅತ್ಯಾಚಾರದ ವಿಷ್ಯ ಕಿವಿಗೆ ಬಿದ್ದಾಗಲೋ, ಟಿವಿಯಲ್ಲಿ ನೋಡಿದಾಗಲೋ ಪೇಪರ್ ನಲ್ಲಿ ಓದಿಕೊಂಡಾಗಲೋ  ತಕ್ಷಣಕ್ಕೆ ನಮ್ಮೆಲ್ಲರ ಪ್ರತಿಕ್ರಿಯೆ ಹೇಗಿರುತ್ತೆ ಎಂದರೆ "ನನ್ ಮಕ್ಕಳನ್ನು ಕೊಚ್ ಹಾಕಬೇಕು. ಗನ್ ತಗೊಂಡು ಸುಟ್ ಹಾಕಬೇಕು." ತಮಾಷೆ ಎಂದರೆ ಕೊಚ್ ಹಾಕಬೇಕು ಸುಟ್ ಹಾಕಬೇಕು ಅನ್ನೋ ಪದ ಉಪಯೋಗಿಸೋದು ನಮಗೆ ಗೊತ್ತೇ ಹೊರತು ಎಲ್ಲಿ ಯಾವಾಗ ಹೇಗೆ ಯಾವ ರೀತಿ ಯಾರ ಜೊತೆ ಸೇರಿ ಕೊಚ್ಚಾಗಬೇಕು ಅಥವಾ ಸುಟ್ ಹಾಕಬೇಕು ಅನ್ನೋ ಡಿಟೈಲ್ ಪ್ಲಾನ್ ಖಂಡಿತಾ ನಮ್ಮ ಬಳಿ ಇಲ್ಲ.  ಪ್ಲಾನ್ ಗಳೇ ಇಲ್ಲ ಅಂದ್ರೆ ಬರೀ ಮಾತಿನಿಂದ ಯಾವ ಸಮಸ್ಯೆಗಳೂ ಬಗೆ ಹರಿಯಲ್ಲ. ಆದ ಕಾರಣ ಪ್ರತಿಯೊಂದು ಸಮಸ್ಯೆಯನ್ನು ಎಲ್ಲಿ ಯಾವಾಗ ಹೇಗೆ ಯಾವ ರೀತಿ ಯಾರ ಜೊತೆ ಸೇರಿ ಬಗೆ ಹರಿಸಬೇಕು ಎನ್ನೋದನ್ನು  ನಾವು ಕಲಿಯಬೇಕಿದೆ. ಅದನ್ನು ಕಲಿಸಲು ಅನುಭವವಿರುವ ಲೀಡರ್ಗಳ ಮತ್ತು ಪ್ಲಾನರ್ಗಳ ಅವಶ್ಯಕತೆ ತುಂಬಾ ಇದೆ. ಹಾಗೆ ಒಂದು ಒಳ್ಳೆಯ ರೂಪು ರೇಷೆ ರೆಡಿಯಾದರೆ ಅದರಂತೆ ಕೆಲಸ ಮುಗಿಸಲು ಜನ ಸುಲಭವಾಗಿ ದೊರೆಯುತ್ತಾರೆ. ಆದ ಕಾರಣ ಮಕ್ಕಳ ವಿಷಯ ಕುರಿತು ಹೇಳಬೇಕೆಂದರೆ ಅವರ ಸಮಸ್ಯೆಗಳನ್ನು ಮೊದಲಿಗೆ ಕಂಡು ಹಿಡಿದು ಅದರಂತೆ ರೂಪು ರೇಷೆ ರಚಿಸಿ ಕಾರ್ಯಗತರಾದರೆ ಅವರ ಎಷ್ಟೋ ಸಮಸ್ಯೆಗಳಿಗೆ ಒಂದಷ್ಟು ಸಮಾಧಾನ ಸಿಗುತ್ತದೆ. 

ಮತ್ತೆ ಸಿಗೋಣ.. .
ನಿಮ್ಮ ಪ್ರೀತಿಯ
ನಟರಾಜು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Roopa Satish
Roopa Satish
10 years ago

Nija Nataraj,
nimma maathu aksharashaha nija…. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಬರೀ ಯುವಕರಷ್ಟೇ ಅಲ್ಲ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ತುಂಬಾ ದೊಡ್ಡದಿದೆ. ಆ ಜವಾಬ್ದಾರಿಯನ್ನು ನಾವು ಹೇಗೆ ನಿಭಾಯಿಸುತ್ತೇವೆ ಎನ್ನುವುದರ ಮೇಲೆ ಮಕ್ಕಳ ಭವಿಷ್ಯ ನಿಂತಿದೆ. idanna khanditha optheeni. 

Gaviswamy
10 years ago

Good article boss

amardeep.p.s.
amardeep.p.s.
10 years ago

very good…..naseema…….ji

prashasti.p
10 years ago

ಲೇಖನದ ವಸ್ತು ಚೆನ್ನಾಗಿದೆ ಅನ್ನಲೋ ಅಥವಾ ಪ್ರಸ್ತುತ ಪರಿಸ್ಥಿತಿಗೆ ಮರುಗಲೋ ಗೊತ್ತಾಗ್ತಿಲ್ಲ 🙁
ಅಂತರ್ಜಾಲದಲ್ಲಿ ತಡಕಿದರೆ ಒಳ್ಳೇ ವಸ್ತುಗಳು ಕಮ್ಮಿ ಅನ್ನೋ ಮಾತಿಗೆ ಒಂದು ಪ್ರಸಂಗ ನೆನಪಾಗುತ್ತೆ ನಟ್ಟು ಭಾಯ್.
ಈ ಅಂತರ್ಜಾಲವನ್ನೇ ಒಂದು ಸಮುದ್ರ ಅಂದ್ಕೊಂಡು ಅದ್ರಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಮಂಥನ/ಕಡೆಯೋದು , ಹುಡುಕೋದು ಮಾಡ್ತಾ ಇದೀವಿ ಅಂದ್ರೆ ಅದ್ರಲ್ಲಿ ಮೊದ್ಲು ಸಿಕ್ಕೋದು ವಿಷನೇ ಅಲ್ವೇ ? ಅದೇ ತರ ನೆಟ್ಟಲ್ಲಿ ಮೊದ್ಲು ಕಣ್ಣಿಗೆ ಬೀಳೋದು ಕೆಟ್ಟದ್ದೇ ಅಂದ್ಕೋಬೇಕು ಅಷ್ಟೇ.ಒಳ್ಳೇ ಮಾಹಿತಿಯನ್ನು ಕಲೆಹಾಕೋಕೆ, ಒಳ್ಳೇದ್ರ ಬಗ್ಗೆ ಬರೆಯೋಕೆ ಮಾಡಿರೋ ಈ  ಪ್ರಯತ್ನ ಖುಷಿಯಾಯ್ತು 🙂

Utham danihalli
10 years ago

Natanna oleaya lekana
Nimma e putta praythna dodd matadali yasasu kannali

5
0
Would love your thoughts, please comment.x
()
x