
ಅಲ್ಲಿದ್ದವರೆಲ್ಲರೂ ರೈಲಿಗಾಗಿ ಕಾಯುತ್ತಿದ್ದವರೇ, ಆದರೆ ಅವರಲ್ಲಿ ಯಾರಿಗೂ ಕಛೇರಿಗೆ ತಡವಾಗುತ್ತೆ ಅನ್ನುವವರಿರಲಿಲ್ಲ, ಊರಿಗೆ ಹೋಗಲು ಸಮಯವಾಗುತ್ತೆ ಅನ್ನುವ ಛಾಯೆಯೂ ಅವರ ಮುಖದಮೇಲೆ ಕಾಣಲಿಲ್ಲ, ಆದರೂ ಅದು ರೈಲ್ವೆ ನಿಲ್ದಾಣ, ಅಲ್ಲಿದ್ದ ಪ್ರಯಾಣಿಕರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು. ಚುಕು ಬುಕು ಚುಕು ಬುಕು ಅಂತ ಕೂಗುತ್ತಾ ಬಂದಿದ್ದು ಮಕ್ಕಳ ನೆಚ್ಚಿನ ಪುಟಾಣಿ ಎಕ್ಸಪ್ರೆಸ್ ಇದೆಲ್ಲಾ ಕಂಡು ಬಂದದ್ದು ಬೆಂಗಳೂರಿ ಕಬ್ಬನ್ ಪಾರ್ಕ ನಲ್ಲಿರುವ ಬಾಲಭವನದಲ್ಲಿ. ಇದು ಕೊರೊನಾಗಿಂತ ಮುಂಚೆ
ಇದೀಗ ಬಾಲಭವನದಲ್ಲಿನ ಪುಟಾಣಿ ಎಕ್ಸಪ್ರೆಸ್ ಮಕ್ಕಳನ್ನು ಹೊತ್ತು ತಿರುಗಲು ಕಾಯುತ್ತಿದೆ. ಮಕ್ಕಳಾದರು ಅಷ್ಟೇ ರೈಲನ್ನೇರಲು ಸಜ್ಜಾಗಿದ್ದಾರೆ.
ಲಾಕ್ಡೌನ್ ಆಗಲಿ ಶಟ್ ಡೌನ್
ಬನ್ನಿ ಬನ್ನಿ ಹೋಗೋಣ
ಪುಟಾಣಿ ರೈಲನ್ನೇರೋಣ
ಚುಕು.. ಬುಕು ಅನ್ನುತ ಸಾಗೋಣ
ಲಾಕ್ಡೌನ್ ಲಾಕ್ ಡೌನ್
ಎಲ್ಲೆಲ್ಲೂ ಅದೇ ಲಾಕ್ ಡೌನ್
ಆಗಲಿ ಲಾಕ್ಡೌನ್ ಶಟ್ ಡೌನ್
ಆಗ ಎಲ್ಲರೂ ಕೂಡೋಣ
ದೇವರ ಹೆಸರಲ್ಲಿ ಭಜಿಸೋಣ
ನಲಿಯುತ ಕುಣಿಯೋತ ಆಡೋಣ
ಕೂಗಿ ಕೂಗಿ ಕರೆಯೋಣ
ಕೂಗುತಾ ಚಪ್ಪಾಳೆ ತಟ್ಟೋಣ
ನಮ್ಮವರಿಗಾಗಿ ದುಡಿದವರಿಗೊಂದು
ಕೇಕ್ ಚಾಕ್ಲೆಟ್ ಕೊಡ್ಸೋಣ
–ನಾಗರಾಜನಾಯಕ ಡಿ.ಡೊಳ್ಳಿನ

ಬಿಸಿಲು
ಏನಿದು ಬಿಸಿಲು
ಸುಡು ಸುಡು ಬಿಸಿಲು
ಸಾಕಿದು ಹಗಲು
ಬಿಸಿಲು ಬಿರು ಬಿಸಿಲು ||
ಆಗಸದಲ್ಲಿ ಮೋಡಗಳಿಲ್ಲ
ಗಾಳಿಬೀಸದೆ ನಿಂತಿದೆಯಲ್ಲ
ಬೆಳಗಾದರೆ ಬರಿ ಬಿಸಿಲು
ಎಲ್ಲಿಯೂ ಕಾಣದು ಫಸಲು ||
ಜನರು ಮಾತ್ರ ಮನೆಯೊಳಗೆ
ಬಿಸಿಲಿಗೆ ಕಾದಿದೆ ನಮ್ಮ ಇಳೆ
ಬೇಗನೆ ಬಾರೋ ಮಳೆರಾಯ
ಬಂದೆ ಬಿಡುವನು ಜವರಾಯ ||
ಗಿಡಗಳ ಬೆಳೆಸಲು ನಾವಿಂದು
ನೆರಳು ಸಿಗುವುದು ನಮಗೆಂದೂ
ಕಾಡು ಇದ್ದರೆ ನಮ್ಮಯ ನಾಡು
ಕಾಡು ಇರದಿರೆ ಬದುಕೆ ಬರಡು ||
ಬನ್ನಿರಿ ಪರಿಸರ ಉಳಿಸೋಣ
ನೆಮ್ಮದಿಯಾಗಿ ಬದುಕೋಣ
ಮುಂದಿನ ಪೀಳಿಗೆ ಬದುಕಲಿ
ಮಾನವ ಜನ್ಮ ಉಳಿಯಲಿ ||
–ವೆಂಕಟೇಶ ಚಾಗಿ

,