ಮಕ್ಕಳ ಕವನ: ವರದೇಂದ್ರ ಕೆ

ಪ್ರಾರ್ಥನೆ

ನಾವೆಲ್ಲ ಮಕ್ಕಳು
ನಿನ್ನ ಚರಣ ಪುಷ್ಪಗಳು|
ಜ್ಞಾನ ಅರಸಿ ಬಂದಿಹೆವು
ವಿದ್ಯೆ ಬುದ್ಧಿ ನೀಡಮ್ಮ, ಹೇ ಮಾತೆ ಶಾರದಾಂಬೆ||
ನಾವೆಲ್ಲ ಮಕ್ಕಳೂ….

ವಿದ್ಯಾದಾಯಿನಿ ವೀಣಾಪಾಣಿ|
ರಾಗ ತಾಳ ಎಲ್ಲ ನಾವೆ
ಜ್ಞಾನ ವೀಣೆ ನುಡಿಸು ತಾಯೆ|೧|
ನಾವೆಲ್ಲ ಮಕ್ಕಳೂ…

ನಿತ್ಯವೂ ನಿನ್ನ ಸ್ಮರಣೆ
ಮಾಡುವೆವು ಭಕ್ತಿಯಿಂದ|
ಕರುಣೆ ತೋರಿ ಒಲಿಯಮ್ಮ
ಸತ್ಯವನ್ನೆ ನುಡಿಸು ತಾಯೆ|೨|
ನಾವೆಲ್ಲ ಮಕ್ಕಳೂ….

ಜ್ಞಾನ ದೀಪ ಹಚ್ಚುವೆವು
ನಿನ್ನ ಚರಣ ಕಮಲಕ್ಕೆ|
ಜ್ಯೋತಿ ಆಗಿ ಬಾರಮ್ಮ
ನಮ್ಮ ಬಾಳ ಬೆಳಗು ತಾಯೆ|೩|
ನಾವೆಲ್ಲ ಮಕ್ಕಳೂ…

ಶಿರಬಾಗಿ ಬೇಡುವೆವು
ತಪ್ಪುಗಳನು ಮನ್ನಿಸಮ್ಮ|
ಬಾಲ ಮನಸು ಒಪ್ಪಿಕೊಂಡು
ಹರಸಿ ಇಲ್ಲೆ ನೆಲೆಸು ತಾಯೆ|೪|
ನಾವೆಲ್ಲ ಮಕ್ಕಳೂ….

-ವರದೇಂದ್ರ ಕೆ

 

 

 

 


 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x