ಮಂಗಳನ ಅಂಗಳದಲ್ಲಿ! (ಕೊನೆಯ ಭಾಗ): ಎಸ್.ಜಿ.ಶಿವಶಂಕರ್

 

Shivashankar S G

ಇಲ್ಲಿಯವರೆಗೆ

"ರುಚಿಕಾ, ಮಗಳೆ ಮದುವೆಯ ನಂತರ ಗಂಡನ ಮನೆಗೆ ಹೋಗುವಾಗ ಹೇಳಬೇಕಾದ ವಿದಾಯವನ್ನು ಈಗಲೇ ಹೇಳಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ನನ್ನ ಕಣ್ಣಾಲಿಗಳು ತುಂಬಿವೆ. ಮಾತು ಹೊರಡದಾಗಿದೆ. ಆದರೂ ಮತ್ತೆ ನಿನ್ನೊಂದಿಗೆ ಮಾತಾಡುವ ಸಂದರ್ಭ ಬರಲಾರದು. ಅದಕ್ಕೇ ತಾಯಿಯಾಗಿ ಕೆಲವು ಮಾತುಗಳನ್ನು ಹೇಳಲು ಬಯಸುತ್ತೇನೆ. ನೀನು ಕೊನೆಗೆ ತಲುಪಲಿರುವ ಜಾಗ ಹೇಗಿದೆಯೋ? ಅಲ್ಲಿ ನಮ್ಮಂತ ಜೀವಿಗಳಿರುವರೋ ಗೊತ್ತಿಲ್ಲ. ನಿನ್ನ ಜೊತೆಯಲ್ಲಿ ಬರುತ್ತಿರುವ ಸೃಜನ್ ನನ್ನ ಗೆಳತಿಯ ಮಗ. ನಿನಗೆ ಅನುರೂಪನಾದ ವರನಾಗಬಲ್ಲ. ಅವನನ್ನು ಒಪ್ಪುವುದು, ಬಿಡುವುದೂ ನಿನಗೆ ಸೇರಿದ್ದು. ಅವನಿಗಿಂತ ಒಳ್ಳೆಯ ಬಾಳಸಂಗಾತಿ ನಿನಗೆ ಸಿಗಲಾರ. ಯೋಚಿಸಿ ನೋಡು. ನನ್ನ ಮಾತು ಕೇಳುವ ಸಮಯದಲ್ಲಿ ನೀನು ಪ್ರಬುದ್ಧಳೂ, ವಿಚಾರವಂತಳೂ ಆಗಿರುತ್ತೀಯ. ಆದರೆ ಮಗಳೆ ದಾಂಪತ್ಯವಿಲ್ಲದ, ಜೀವ ಸೃಷ್ಟಿ ಮಾಡದÀ ಹೆಣ್ಣಿನ ಜೀವನ ಅಪೂರ್ಣ. ಇದನ್ನು ಗಮನದಲ್ಲಿರಿಸಿಕೋ. ನಿನ್ನ ಮದುವೆಯನ್ನು, ನಿನ್ನ ಮನೆಯನ್ನು, ನೀನು ಹಡೆಯುವ ಮಗುವನ್ನು ನೋಡುವ ಭಾಗ್ಯ ನನಗಿಲ್ಲ. ಎಲ್ಲಾದರೂ ಇರು ಚೆನ್ನಾಗಿರು ಮಗಳೆ. ಹೆಚ್ಚು ಸಮಯವಿಲ್ಲ. ಮನೆಯ ಕೆಲವೇ ಕಿಲೋಮೀಟರುಗಳ ದೂರದಲ್ಲಿ ಬಾಂಬುಗಳು ಸಿಡಿಯುತ್ತಿವೆ. ಶುಭ ವಿದಾಯ"

"ಮಗೂ ಸೃಜನ್, ನೆರೆಯಲ್ಲಿಯೇ ಬಾಂಬುಗಳು ಸಿಡಿಯುತ್ತಿವೆ. ಆದರೂ ನಿನಗೆ ಕೊನೆಯದಾಗಿ ಕೆಲವು ಮಾತು ಹೇಳಲು ಈ ತಾಯಿ ಹೃದಯ ಬಯಸುತ್ತಿದೆ. ಈ ಕ್ಷಣದಲ್ಲಿ ನಿನ್ನನ್ನು ಈ ಸ್ಪೇಸ್‍ಕ್ರಾಫ್ಟಿನಲ್ಲಿ ಕಳಿಸುತ್ತಿರುವುದಕ್ಕೆ ನನ್ನ ಮನಸ್ಸು ಖಂಡಿತಾ ಒಪ್ಪುತ್ತಿಲ್ಲ. ಆದರೆ ಬೇರೆ ದಾರಿಯೇ ಇಲ್ಲ. ಮನುಕುಲದ ಅಳಿವು-ಉಳಿವು ನಿಮ್ಮಿಂದ ಮಾತ್ರ ಸಾಧ್ಯವಾಗುತ್ತಿದೆ. ಅಂದರೆ ನೀನು ಮತ್ತು ರುಚಿಕಾ ಎಲ್ಲ ಸರಿಯಾಗಿ ನಡೆದರೆ ಮಾನವ ಜನಾಂಗದ ಆದ್ಯರಾಗುತ್ತೀರಿ. ನೀವು ಹೋಗುವ ನೆಲೆಯಲ್ಲಿ ಜೀವನ ಮಾಡಲು ಸಹ್ಯವಾದ ವಾತಾವರಣ ಇರಲಿ ಎಂಬುದೇ ನಮ್ಮ ಹಾರೈಕೆ. ಕೆಲವೇ ವರ್ಷಗಳ ಹಿಂದೆ ಮಂಗಳಕ್ಕೆ ಹೋಗಿದ್ದ ಗಗನ ಯಾತ್ರಿಗಳು ಅಲ್ಲಿ ಯಶಸ್ವಿಯಾಗಿ ಸಸ್ಯ ಬೆಳೆಯುವುದು ಎಂದು ಪ್ರಮಾಣಿಸಿ ಹಿಂತಿರುಗಿದ್ದಾರೆ. ಈಗ ನಿಮ್ಮ ಜೊತೆಯಲ್ಲಿ ಭೂಮಿಯಲ್ಲಿ ಬೆಳೆಯುತ್ತಿದ್ದ ಎಲ್ಲಾ ಸಸ್ಯಗಳ ಬೀಜಗಳನ್ನೂ ಮಂಗಳನ ವಾತಾವರಣಕ್ಕೆ ಸೂಕ್ತವಾಗಿ ಸಂಸ್ಕರಿಸಿ ಸಂರಕ್ಷಿಸಲಾಗಿದೆ. ಅವುಗಳನ್ನು ಬೆಳೆದು ಉಪಯೋಗಿಸುವುದು ಮತ್ತು ನಂತರದಲ್ಲಿ ಭೂಮಿಯನ್ನು ಸಂಪರ್ಕಿಸುವುದು ನಿಮಗೆ ಸಾಧ್ಯವಾಗಬಹುದು. ಆದರೆ ಇಲ್ಲಿ ಯಾರು ಇರುತ್ತಾರೋ ಯಾರು ಇರುವುದಿಲ್ಲವೋ ಗೊತ್ತಿಲ್ಲ. ಬಹುಶಃ ನಮ್ಮಂತೆಯೇ ಇನ್ನೂ ಯಾರಾದರೂ ಪ್ರಯತ್ನಿಸಿದ್ದರೆ, ಅಥವಾ ಯಾರದರೂ ಮಂಗಳ ಗ್ರಹದಲ್ಲೇ ಉಳಿದಿದ್ದರೆ ಅವರ ಸಂಪರ್ಕ ನಿಮಗಾಗಬಹುದು. ಅಥವಾ ಇನ್ನೂ ಮುಂದುವರಿದು ಹೇಳುವುದಾದರೆ ಭವಿಷ್ಯದಲ್ಲಿ ವಿಶ್ವದ ಇನ್ನಾವುದೋ ಮೂಲೆಯಲ್ಲಿರುವ ಜೀವಿಗಳ ಸಂಪರ್ಕವಾದರೂ ಆಗಬಹುದು. ನನ್ನ ಕೊನೆಯ ಆಸೆಯೊಂದಿದೆ ಅದನ್ನು ನೀನು ನೆರವೇರಿಸಿ ಕೊಡಬೇಕು. ನಿನಗೆ ಎಚ್ಚರವಾದ ಗಳಿಗೆ ಭೂಮಿಯನ್ನು ಸಂಪರ್ಕಿಸು. ನಿನ್ನ ಮಾತನ್ನು ಕೇಳಲು ನನ್ನ ಮನಸ್ಸು ಚಡಪಡಿಸುತ್ತಿರುತ್ತದೆ. ನಿನ್ನ ಯೋಗಕ್ಷೇಮದ ಬಗೆಗೆ ಕಾಳಜಿ ವಹಿಸು. ರುಚಿಕಾಳನ್ನು ಚೆನ್ನಾಗಿ ನೋಡಿಕೋ. ಯಾವುದೇ ಕಾರಣಕ್ಕೆ ಮನಸ್ಸುಗಳು ಕೆಟ್ಟರೂ ತಕ್ಷಣ ತಿದ್ದಿಕ್ಕೊಳ್ಳಬೇಕು. ಗೊತ್ತಿದ್ದೇ ಸೋಲುವವರು ಹೇಡಿಗಳಲ್ಲ ಬದಲಿಗೆ ಶೂರರು. ನಿಮ್ಮ ಮನಸ್ತಾಪಗಳಲ್ಲಿ ನೀನೇ ಸೋಲಬೇಕು. ಇದು ನನ್ನ ಕಿವಿಮಾತು. ಶುಭ ವಿದಾಯ ಮಗನೆ"
ಸೃಜನನ ಕಣ್ಣಿಂದ ನೀರು ಧಾರಾಕಾರವಾಗಿ ಹರಿದುವು. ತಾಯಿಯನ್ನು ನೆನಸಿ ದುಃಖ ಉಮ್ಮಳಿಸಿತು. 

ಸೃಜನನ ತಾಯಿಯದೇ ಕಡೆಯ ಮಾತಾಗಿತ್ತು. ನಂತರದಲ್ಲಿ ಮೌನವೇ ಮೌನ. ಪಕ್ಕದಲ್ಲಿ ಚಲಿಸುವ ಯಂತ್ರಗಳ ಶಬ್ದ ಬಿಟ್ಟರೆ ಸೃಜನ್ ಮತ್ತು ರುಚಿಕಾರ ಅಳು ಮಾತ್ರ ಅಲ್ಲಿ ತುಂಬಿತ್ತು.
ನಿಧಾನಕ್ಕೆ ಇಬ್ಬರಿಗೂ ಪರಿಸ್ಥಿತಿ ಅರ್ಥವಾಗಿತ್ತು. ತಮ್ಮ ತಂದೆ-ತಾಯಿಯರ ಆಶೋತ್ತರಗಳೂ ಅರಿವಾಗಿದ್ದವು. ಪರಿಸ್ಥಿಯನ್ನು ಒಪ್ಪಿಕ್ಕೊಳ್ಳದೆ ಬೇರೆ ಮಾರ್ಗವಿರಲಿಲ್ಲ. 
ಇಬ್ಬರೂ ಪರಸ್ಪರ ಮುಖ ನೋಡಿಕೊಂಡರು. ಕೆಲವು ನಿಮಿಷಗಳ ನಂತರ ತಮ್ಮ ಉಡುಪುಗಳನ್ನು ನೋಡಿಕೊಂಡರು. ಅವು ಬಿಗಿಯುತ್ತಿದ್ದವು. ಈ ಪ್ರಮಾಣಕ್ಕೆ ಬೆಳೆಯಬಹುದು ಎಂದು ಅಂದಾಜಿಸಿ ತೊಡಿಸಿದ್ದ ಉಡುಪುಗಳು. ಹವಾನಿಯಂತ್ರಿತ, ಒತ್ತಡ ನಿಯಂತ್ರಿತ ವಾತಾವರಣದಲ್ಲಿ ನೌಕೆ ಇದ್ದುದ್ದರಿಂದ ಸ್ವಚ್ಛತೆ ಇತ್ತು. 
ಇಬ್ಬರೂ ತಮ್ಮ ಕೈಗಳಿಗೆ ಜೋಡಿಸಿದ್ದ ನಳಿಕೆಗಳನ್ನು ತೆಗೆದರು. ತಾವು ಮಲಗಿದ್ದ ಜಾಗದಿಂದ ಎದ್ದು ನೌಕೆಯಲ್ಲಿ ಕಾಲಿಟ್ಟರು. ಒಮ್ಮೆಲೇ ಆಯತಪ್ಪಿದಂತಾಗಿ ತಾವು ಕುಳಿತಿದ್ದ ಮಂಚವನ್ನು ಆಸರೆಗಾಗಿ ಹಿಡಿದುಕೊಂಡರು.

"ರುಚಿಕಾ, ಎಲ್ಲಾ ಸಾವಕಾಶವಾಗಿ ಮಾಡಬೇಕು. ನಾವು ನಡೆದೇ ಎಷ್ಟೋ ಕಾಲವಾಗಿದೆ. ಅದನ್ನು ಕಲಿಯಬೇಕು. ಬಹುಶಃ ನಮಗೆ ಬ್ಯಾಲೆನ್ಸ್ ಮಾಡಲು ಕೂಡ ಕಲಿಯಬೇಕಾಗಬಹುದು. ಅಲ್ಲಿಯವರೆಗೆ ಸಾವಕಾಶವಾಗಿ ಎಲ್ಲವನ್ನೂ ಮಾಡಬೇಕಾಗುತ್ತದೆ" ಸೃಜನ್ ಎಚ್ಚರಿಸಿದ.
"ಹೌದು. ಆದರೆ ಇಂತಾ ಸ್ಥಿತಿಗೆ ನಮ್ಮನ್ನೇಕೆ ತಳ್ಳಬೇಕಿತ್ತು. ಎಲ್ಲರಿಗೂ ಏನಾಗುವುದೋ ನಮಗೂ ಅದೇ ಆಗುತ್ತಿತ್ತು. ಹೀಗೆ ನಮ್ಮನ್ನು ಏಕಾಂಗಿಯಾಗಿ ಮಾಡಬಾರದಿತ್ತು" ರುಚಿಕಾ ಮಾತಿನಲ್ಲಿ ಅತೀವ ಹತಾಶೆಯಿತ್ತು.

"ಬೇರೆ ದಾರಿಯಿಲ್ಲ ರುಚಿಕಾ. ಅವರು ನಮ್ಮ ಒಳಿತಿಗಾಗಿ ಈ ಕೆಲಸ ಮಾಡಿದ್ದಾರೆ. ಅವರಿಟ್ಟಿರುವ ಅಪಾರ ಆಸೆಯನ್ನು ನಾವು ಈಡೇರಿಸಬೇಕಾಗಿದೆ. ಅದು ನಂತರದ ಮಾತು. ಬಾ ಈಗ ಪಕ್ಕದ ಚೇಂಬರಿನಲ್ಲಿ ಏನು ವ್ಯವಸ್ಥೆಯಿದೆಯೋ ನೋಡೋಣ. ಹೀಗೆ ಬದುಕುವುದನ್ನು ನಾವು ಕಲಿಯಲೇಬೇಕು"
ಸೃಜನ್ ಸಾವರಿಸಿಕೊಳ್ಳುತ್ತಿದ್ದ. ಮುಂದಿನ ಬದುಕಿನ ಬಗೆಗೆ ಅವನಿಗೆ ಕಲ್ಪನೆ ಇರಲಿಲ್ಲ. ಆದರೆ ರುಚಿಕಾಳ ಸ್ಥಿತಿಯೇ ಬೇರೆ. ಅವಳಿಗೆ ತಂದೆ-ತಾಯಿಯರು ಹೀಗೆ ಮಾಡದಿದ್ದರೆ ಚೆನ್ನಾಗಿತ್ತು. ಬದುಕಿದ್ದರೂ, ಸಾವು ಬಂದಿದ್ದರೂ ಅವರೊಡನೇ ಇರಬೇಕಿತ್ತು ಎಂಬ ಭಾವನೆಯಲ್ಲಿದ್ದಳು.
"ಸೃಜನ್, ನಾನು ಅಪ್ಪ-ಅಮ್ಮನೊಂದಿಗೆ ಮಾತಾಡಾಬೇಕು..ಪ್ಲೀಸ್ ನನಗೆ ಹೆಲ್ಪ್ ಮಾಡು.." ಅವಳ ಕಣ್ಣುಗಳಿಂದ ನೀರು ಇನ್ನೂ ಆರಿರಲಿಲ್ಲ.
"ಅದೆಲ್ಲವನ್ನೂ ನಾವು ಕಲಿಯಬೇಕು ರುಚಿಕಾ..ಈಗ ನಾವು ಈ ಸ್ಪೇಸ್ ಷಟಲ್‍ಗೆ ಅಪರಿಚಿತರು. ಇಲ್ಲಿ ನಾವು  ಹೆಚ್ಚು ಕಮ್ಮಿ ವರ್ಷದಿಂದ ವಾಸಿಸಿದ್ದರೂ ಇದರ ಬಗೆಗೆ ಏನೇನೂ ಗೊತ್ತಿಲ್ಲ. ಇಲ್ಲಿಯವರೆಗಿನ ಇದರ ಎಲ್ಲಾ ಪ್ರಯಾಣವೂ ಪೆÇ್ರೀಗ್ರಾಮ್ ಮಾಡಿತ್ತು. ಇನ್ನು ಮುಂದಿನದು ಗೊತ್ತಿಲ್ಲ. ಏನೇನಿದೆಯೋ.? ಏನೇನು ಮಾಡಬೇಕೋ..? ಸಧ್ಯಕ್ಕೆ ಏನೇನೂ ಗೊತ್ತಿಲ್ಲ. ಬಾ ನೋಡೋಣ.."
ರುಚಿಕಾ ತಲೆಯಾಡಿಸಿದರು. ಇಬ್ಬರೂ ತಮ್ಮ ಕೈಕಾಲುಗಳನ್ನು ಆಡಿಸಿ ಅವುಗಳ ಬಿಗಿಯನ್ನು ಸಡಿಲಗೊಳಿಸಿಕೊಂಡರು. ಮೆಲ್ಲಗೆ ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತಾ ತಾವು ಮಲಗಿದ್ದ ಚೇಂಬರಿನ ಬಾಗಿಲಲ್ಲಿ ನಿಂತು ಆಚೆ ನೋಡಿದರು. ಇದ್ದಕ್ಕಿದ್ದಂತೆ ಆ ನೌಕೆಯ ವಿಶಾಲವಾಗಿತ್ತು. ಅದು ಕಂಟೋಲ್ ರೂಮು. ಅದರಲ್ಲಿ ಇಬ್ಬರು ಕೂರಲು ಆಸನದ ವ್ಯವಸ್ಥೆಯಿತ್ತು. ಎದುರಿಗೆ ಪಾರದರ್ಶಕ ಪರದೆ. ಅಲ್ಲಿಂದಾಚೆ ನೋಡಿದರೆ ಅಪ್ರತಿಮ ಬೆಳಕು! ಮಂಗಳ ಗ್ರಹದ ಭೂಮಿಯ ಮೇಲೆ ಬಟಾಬಟಾ ಬಯಲು ಕಂಡಿತು. ಆ ಅಪ್ರತಿಮ ಬೆಳಕಿಗೆ ಕಾರಣವಾಗಿದ್ದುದು ಸೂರ್ಯನಷ್ಟೇ ಪ್ರಕರವಾಗಿದ್ದ ಗ್ರಹ.

"ಇದೇ ಮಂಗಳ ಗ್ರಹ ಇರಬೇಕು" ಸೃಜನ್ ಹೇಳಿದ.
"ಇಲ್ಲೇನಿದೆ ಮಣ್ಣು?" ರುಚಿಕಾ ಬೆದರಿದ್ದಳು.
"ಎಲ್ಲಾ ಗ್ರಹದಲ್ಲೂ ಇರುವುದೇ ಮಣ್ಣು! ಆ ಮಣ್ಣು ಫಲವತ್ತಾಗಿದ್ದರೆ, ನೀರಿನ ಆಸರೆಯಿದ್ದರೆ ಆಹಾರ ಬೆಳೆಯಬಹುದು. ಜೀವಿಗಳೂ ಬದುಕಬಹುದು"
"ಇಲ್ಲಿ ನಮ್ಮನ್ನು ಬಿಟ್ಟರೆ ಇನ್ಯಾರೂ ಇಲ್ಲವೇನು..?"
"ಗೊತ್ತಿಲ್ಲ ರುಚಿಕಾ..? ಅದೆಲ್ಲವನ್ನೂ ನಾವು ಪರಿಶೀಲಿಸಬೇಕು"
ಅವರು ಮಾತಾಡುತ್ತಾ ಎದುರು ನೋಡಿದರು. ಅಲ್ಲೊಂದು ನೆರಳು ಕಂಡಿತು! ಅದು ಮನುಷ್ಯರ ನೆರಳಿಗಿಂತಾ ಭಿನ್ನವಾಗಿತ್ತು. ಅಂದರೆ ಅದು ಮನುಷ್ಯರಿಗಿಂತ ಭಿನ್ನವಾದ ಜೀವಿಯ ನೆರಳೆ..? ಅದು ಮಂಗಳ ಗ್ರಹದ ಜೀವಿಯೆ..? ಇಬ್ಬರೂ ಉಸಿರು ಬಿಗಿ ಹಿಡಿದು ಗಾಬರಿಯಿಂದ ಅದನ್ನು ನೋಡಿದರು! ಬಾಯಿಯ ಪಸೆ ಆರಿತು!! ಏನು ಮಾಡಬೇಕೆಂದು ಸೃಜನ್ ಯೋಚಿಸಲು ಪ್ರಯತ್ನಿಸಿದ. ಆದರೆ ಗಾಬರಿಯಲ್ಲಿ ಯೋಚನಾಶಕ್ತಿಯೇ ಕುಂಟಿತವಾಗಿತ್ತು!! 
ಆ ನೆರಳು ಪ್ರಮಾಣದಲ್ಲಿ ದೊಡ್ಡದಾಗಿದ್ದಿದು ಕ್ರಮೇಣ ಸಣ್ಣದಾಗುತ್ತಾ ಆ ಆಕೃತಿ ಇವರಿದ್ದ ನೌಕೆಯತ್ತ ಬರುತ್ತಿರುವಂತೆ ತೋರಿತು. 
ರುಚಿಕಾ ಹೆದರಿಕೆಯಿಂದ ಚಿಟ್ಟನೆ ಚೀರಿ ಸೃಜನನಿಗೆ ತೆಕ್ಕೆ ಬಿದ್ದಳು. 

"ರುಚಿಕಾ ಹೆದರಬೇಡ. ನಾವು ಈ ನೌಕೆಯಲ್ಲಿರುವವರೆಗೂ ಸುರಕ್ಷಿತರು! ಯಾವುದೇ ರೀತಿಯ ಆಕ್ರಮಣವನ್ನೂ ಇದು ತಡೆಯಬಲ್ಲದು. ಈವರೆಗೆ ಇರುವ ಮಾಹಿತಿಯ ಪ್ರಕಾರ ಈವರೆಗೆ ಈ ಗ್ರಹದಲ್ಲಿ ಜೀವಿಗಳಿರುವ ಸೂಚನೆ ದೊರಕಿಲ್ಲ. ನಮಗಿಂತ ಮೊದಲು ಇಲ್ಲಿ ಯಾರಾದರೂ ಬಂದು ವಾಸಿಸುತ್ತಿರುವ ಮಾಹಿತಿಯೂ ಇಲ್ಲ. ಹೆದರಬೇಡ. ಅದೇನೆಂದು ನೋಡೋಣ. ಇದೇ ನಮ್ಮ ನೆಲೆ. ಇಲ್ಲೇ ನಮ್ಮ ಜೀವನ. ಎದುರಾಗಬಹುದಾದ ಎಲ್ಲ ಅಪಾಯಗಳನ್ನೂ ನಾವು ಹೆದರಿಸಲೇ ಬೇಕು" 
ಸೃಜನ್ ತನಗೆ ಬಳ್ಳಿಯಂತೆ ಸುತ್ತಿಕೊಂಡ ರುಚಿಕಾಳ ಬೆನ್ನು ತಟ್ಟುತ್ತಾ ನೇವರಿಸಿ ಧೈರ್ಯ ತುಂಬುತ್ತ ಆ ಆಕೃತಿ ಏನಿರಬಹುದು? ಅದನ್ನು ಹೇಗೆ ಎದುರಿಸಬಹುದು ಎಂದು ಯೋಚಿಸತೊಡಗಿದ. ಮತ್ತೆ ನಾವು ಭೂಮಿಗೆ ಎಂದಾದರೂ ಹೋಗಲು ಸಾಧ್ಯವೇ? ಎಂಬ ಯೋಚನೆ ನೌಕೆಯ ಆಚೆಗಿರುವ ಆಕೃತಿಗಿಂತ ದೊಡ್ಡದಾಗಿ ಕಂಡಿತು.

ತಾನೂ ಧೈರ್ಯ ತಂದುಕೊಂಡ. ಕಂಟ್ರೋಲ್ ಪೇನೆಲ್ ನೋಡಿದ. ಅಲ್ಲಿನ ನಿಯಂತ್ರಣ ಸ್ವಿಚ್ಚುಗಳನ್ನು ಅರ್ಥಮಾಡಿಕ್ಕೊಳ್ಳಲು ಪ್ರಯತ್ನಿಸಿದ. ನೌಕೆಯ ಹೊರಗಿನ ವಸ್ತುಗಳನ್ನು ಕೂಲಂಕುಶವಾಗಿ ಪರೀಕ್ಷಿಸಲು ಕ್ಯಾಮರ ಇರುವುದು ಕಂಡಿತು. ಅದನ್ನು ಸುತ್ತಲೂ ತಿರುಗಿಸಬಹುದು ಎನ್ನುವುದನ್ನು ಕಂಡುಕೊಂಡ. ಕ್ಯಾಮೆರಾವನ್ನು ಸುತ್ತ ತಿರುಗಿಸುತ್ತಾ ಸ್ಕ್ರೀನಿನ ಮೇಲೆ ಅದು ಮೂಡುವ ಚಿತ್ರವನ್ನು ಪರೀಕ್ಷಿಸತೊಡಗಿದ. ರುಚಿಕಾ ಭಯದಿಂದ ಸ್ಕ್ರೀನನ್ನು ನೋಡತೊಡಗಿದಳು.  ಕ್ಯಾಮರಾವನ್ನು ಸುತ್ತ ತಿರುಗಿಸುತ್ತಾ ಆ ನೆರಳು ಯಾವುದು..ಎಂದು ಪರೀಕ್ಷಿಸತೊಡಗಿದ. 
ಇದ್ದಕ್ಕಿದ್ದಂತೆ ಸೃಜನ್ ನಗತೊಡಗಿದ. ಅವನ ನಗು ಆ ನೌಕೆಯನ್ನು ತುಂಬಿತು. ಅವನ ನಗುವಿಗೆ ಕಾರಣ ತಿಳಿಯದೆ ರುಚಿಕಾಳಿಗೆ ಗಲಿಬಿಲಿಯಾಯಿತು.

"ಏನಾಯಿತು..? ಯಾಕೆ ಹುಚ್ಚನಂತೆ ನಗುತ್ತಿರುವೆ..?" ರುಚಿಕಾ ಅವನ ಭುಜ ಅಲುಗಿಸಿ ಕೇಳಿದಳು.
"ಅಲ್ಲಿ ನೋಡು.." ನಗುವಿನ ನಡುವೆ ಸೃಜನ್ ಸ್ಕ್ರೀನಿನತ್ತ ಕೈತೋರಿಸಿದ.
"ಏನದು..?" ಅಲ್ಲಿ ಕಂಡ ವಿಚಿತ್ರ ವಸ್ತುವನ್ನು ನೋಡಿ ರುಚಿಕಾ ಅರ್ಥವಾಗದೆ ಕೇಳಿದಳು
"ನೋಡು.." ಸೃಜನ್ ಕ್ಯಾಮರಾವನ್ನು ಜೂಮ್ ಮಾಡಿದ. 
"ಏನದು..?" ಅರ್ಥವಾಗದೆ ಕೇಳಿದಳು ರುಚಿಕಾ.
"ಯಾವುದೋ ದೇಶದವರು ಈ ಗ್ರಹಕ್ಕೆಕಳಿಸಿರುವ ರೋಬೋ. ಅದರಿಂದ ನಮಗೆ ಸಹಾಯವಾದರೂ ಆಗಬಹುದು. ಅದನ್ನು ರಿಮೋಟಿನಿಂದ ಯಾರಾದರೂ ನಿಯಂತ್ರಿಸುತ್ತಿರುವರಾ ನೋಡಬೇಕು. ಯಾರದೂ ನಿಯಂತ್ರಣವಿಲ್ಲದಿದ್ದರೆ ನಾನು ಅದರ ಪೆÇ್ರೀಗ್ರಾಮು ಬದಲಾಯಿಸಿ ನಮಗೆ ಸಹಾಯವಾಗುವಂತೆ ಮಾಡಿಕ್ಕೊಳ್ಳಬಲ್ಲೆ"
ಈಗ ಮಾಡಬಲ್ಲ ರೋಬೋ"
ಕಂಡಿದ್ದನ್ನು ನೋಡಿ 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x