ಭೀಮ: ಗಿರಿಜಾ ಜ್ಞಾನಸುಂದರ್

girija-jnanasundar
ತುಂಬಾ ಸುಸ್ತು, ನಿಶಕ್ತಿ ಅನ್ನಿಸುತ್ತಿತ್ತು. ನನ್ನ ಒಡೆಯನ ಮಾತು ಕೇಳಿಸುತ್ತಿತ್ತು. ಆದರೆ ಬಾಲ ಅಲ್ಲಾಡಿಸಲು ಸಹ ಆಗದಷ್ಟು ನಿತ್ರಾಣ. ಅವನ ಮಾತಿಗೆ ಪ್ರತಿಕ್ರಿಯೆ ಕೊಡಲೇಬೇಕೆಂಬ ಬಯಕೆ. ಅದಕ್ಕೆ ಸ್ವಲ್ಪ ಮಟ್ಟಿಗೆ ಕಣ್ಣು ತೆರೆಯಲು ಪ್ರಯತ್ನಿಸಿದೆ. ಕಣ್ಣ ತುಂಬಾ ನೀರು ತುಂಬಿಕೊಂಡು ನನ್ನನ್ನೇ ನೋಡುತ್ತಿದ್ದ ನನ್ನ ಜನ. ಅವರಿಗೆ ನಾನು ಚಿರಋಣಿ. ನನ್ನ ಜೀವ ಅವರೆಲ್ಲರೂ. 

ನಾನು ತುಂಬಾ ಪುಟ್ಟವನಿದ್ದೆ ಈ ಮನೆಗೆ ಬಂದಾಗ. ನನ್ನ ಅಮ್ಮನಿಗೆ ಯಾವುದೋ ಕಾರ್ ಡಿಕ್ಕಿ ಹೊಡೆದು ಸತ್ತಳಂತೆ. ೨೦ ದಿನದ ಮರಿ ಅಂತ ಹೇಳುತ್ತಿದ್ದರು. ಆಗ ನನ್ನ ಒಡೆಯ ನನ್ನ ಮೇಲೆ ಕರುಣೆ ತೋರಿ ನನ್ನನ್ನು ಅವರ ಮನೆಗೆ ಕರೆತಂದರು. ಆಗಿನಿಂದ ಇದು ನನ್ನ ಮನೆ. ಎಲ್ಲರೂ ಏನು ಹೆಸರಿಡುವುದು ಅಂತ ಯೋಚಿಸುತ್ತಿದ್ದಾಗ ನನ್ನ ಗೆಳೆಯ ಅಭಿಷೇಕ್ ನನ್ನನ್ನು 'ಭೀಮ್' ಅಂತ ಕರೆದು ನಾಮಕರಣ ಮಾಡಿದ. ತುಂಬಾ ಡುಮ್ಮಗಿದ್ದೆನಂತೆ ನಾನು ಅದಕ್ಕೆ ನನ್ನ ಹೆಸರು ಭೀಮ ಆಯಿತು. ಎಷ್ಟು ದಪ್ಪ ಇದ್ದೆ ಎಂದರೆ ಹೆಚ್ಚಾಗಿ ನಡೆಯಲು ಆಗುತ್ತಿರಲಿಲ್ಲ. ಸ್ವಲ್ಪ ದೂರ ನನೆದು ಕೂತುಬಿಡುತ್ತಿದ್ದೆ. ಕೆಂದು ಬಣ್ಣದ ದೇಶೀಯ ತಳಿಯ ನಾಯಿ ಮರಿ ನಾನು. ನಾನೆಷ್ಟು ದಪ್ಪಗಿದ್ದೆನೆಂದರೆ ಮೆಟ್ಟಿಲಿನಿಂದ ಇಳಿಯಲು ನನಗೆ ಕಷ್ಟವಾಗಿ ಉರುಳುತ್ತಾ ಕೆಳಗಿಳಿಯುತ್ತಿದ್ದೆ. ಅದು ಮಕ್ಕಳಿಗೆ ಬಹಳ ತಮಾಷೆ ಅನ್ನಿಸುತ್ತಿತ್ತು, ಅವರು ನಗು ನನಗೆ ಖುಷಿ ಕೊಡುತ್ತಿತ್ತು. ಬಹಳ ಆರೋಗ್ಯವಾಗಿ ಬೆಳೆದೆ. ಇಬ್ಬರು ಮಕ್ಕಳಿದ್ದ ಮನೆಯಲ್ಲಿ ನಾನು ಮೂರನೆಯವನಾಗಿರುವೆ. ಅವರಿಗೆ ತಿಂದು ಸಾಕಾಗಿದ್ದೆಲ್ಲ ನನ್ನ ಪಾಲು.  ಮನೆಯೊಡತಿ ನನ್ನನ್ನು ಅವರ ಮಗು ಎಂದೇ ಭಾವಿಸಿದ್ದಾರೆ. ನನ್ನ ಬೇಕು ಬೇಡಗಳನ್ನು  ನನಗಿಂತ ಚೆನ್ನಾಗಿ ತಿಳಿದಿದ್ದಾರೆ. ಅವರ ಪ್ರೀತಿಗೆ ನಾನೇನು ಕೊಡಬಲ್ಲೆ. ಪ್ರತಿದಿನ ಅಭಿಷೇಕ್  ಮತ್ತು ಅಶ್ವಿನಿ ಶಾಲೆಯಿಂದ ಬರುವುದನ್ನೇ ಕಾಯುತ್ತೇನೆ. ಅವರಿಗೆ ನನ್ನ ಪ್ರೀತಿ ಎಷ್ಟು ಕೊಟ್ಟರೂ ಸಾಲದು ನನಗೆ.  ನನಗೆ ಒಂದು ದಿನವಾದರೂ ನನ್ನ ಅಮ್ಮನ ನೆನಪೇ ಬರಲಿಲ್ಲ. ಇಂತಹ ಅಮೋಘ ದಿನಗಳು ಅವು. ಅಭಿಷೇಕ್ ನ ಹುಟ್ಟು ಹಬ್ಬದ ದಿನಗಳಲ್ಲಿ ನನ್ನದು ಸಹ ಹುಟ್ಟು ಹಬ್ಬ ಮಾಡುತ್ತಿದ್ದರು. ನನಗೆ ಇಷ್ಟವಾದ ತಿನಿಸುಗಳುಗಳನ್ನು ಕೊಡುತ್ತಿದ್ದರು. ಒಹ್! ನಾನೆಂಥ ಅದೃಷ್ಟ ಮಾಡಿದ್ದೇನೆ. ಅಶ್ವಿನಿಯಂತೂ ನನ್ನ ಬಿಟ್ಟು ಎಂದು ವಾಕ್ ಗೆ ಹೋಗೆ ಇಲ್ಲವೇನೋ. ತುಂಬಾ ಪ್ರೀತಿಸುವ ಪರಿವಾರದಲ್ಲಿ ಬೆಳೆಯುತ್ತಿದ್ದೆ ನಾನು. 

ಮನೆಯೊಡತಿಗೆ ಖಾಯಿಲೆ ಬಂದಾಗ ನನ್ನ ಮನಸ್ಸು ಕುಗ್ಗಿ ಹೋಗುತ್ತಿತ್ತು. ಅವರಿಗೆ ಅರೋಗ್ಯ ಸರಿಹೋಗುವ ವರೆಗೂ ನನಗೆ ಊಟ ಸೇರುತ್ತಿರಲಿಲ್ಲ. ಇಂತಹ ಸಹೃದಯಿ ಅವರು, 'ಯಾಕೋ ಭೀಮ ಊಟ ಮಾಡ್ತಿಲ್ಲ? ನನಗೇನು ಆಗಿಲ್ಲ ಕಣೋ… ಊಟ ಮಾಡು ಮರಿ' ಅಂತ ಬಹಳ ಮುದ್ದಾಗಿ ನನ್ನನ್ನು ಸವರಿ ಹಾಲು ಅನ್ನ ಕೊಡುತ್ತಿದ್ದರು. ಆದರೆ ನಾನೋ ಅವರಿಗೆ ಅರೋಗ್ಯ ಸರಿಹೋಗುವುದನ್ನೇ ಕಾಯುತ್ತಿದ್ದೆ. ಇನ್ನು ನನ್ನ ಒಡೆಯ ಸಂಜೆ ಬರುವುದನ್ನೇ ಎದುರು ನೋಡುವುದು ನನ್ನ ನೆಚ್ಚಿನ ಕೆಲಸ. ಅವರು ಮನೆಗೆ ಬಂದು ಅವರ ಪಾಲಿನ ಕಾಫಿಯೋ ಅಥವಾ ಚಹವನ್ನೋ ಸ್ವಲ್ಪ ನನ್ನ ಪಾಲಿಗೆ ಕೊಟ್ಟರೆ ಅದಕ್ಕಿಂತ ಸಿಹಿಯಾದ ವಿಷಯ ಇನ್ನೇನಿರಲು ಸಾಧ್ಯ. 

ಅಭಿಷೇಕ್ ಮತ್ತು ಅಶ್ವಿನಿ ಬಹಳ ಬೇಗ ಬೆಳೆಯುತ್ತಿದ್ದರು. ನನ್ನ ಜೊತೆ ಓಡುತ್ತ ಆಟವಾಡುತ್ತಿದ್ದ ಗೆಳೆಯ ಅಭಿಷೇಕ್ ಹೈ ಸ್ಕೂಲ್ ಮೆಟ್ಟಿಲೇರುತ್ತ ತುಂಬ ಓದಲು ಶುರು ಮಾಡಿದ. ನನಗೆ ಅವನಿಲ್ಲದೆ ಆಟ ಆಡುವುದು ಬೇಜಾರಾಗುತ್ತಿತ್ತು. ಹಾಗಾಗಿ ಅವನೊಡನೆ ಸುಮ್ಮನೆ ಕೂತಿರುತ್ತಿದ್ದೆ. ಅದು ಒಂಥರಾ ಚೆನ್ನಾಗಿರುತ್ತಿತ್ತು. ಅಶ್ವಿನಿ ತನ್ನ ಗೆಳತಿಯರೊಡನೆ ಆಟವಾಡುವಾಗ ನನ್ನನ್ನು ಕರೆಯುತ್ತಿದ್ದಳು. ಒಮ್ಮೊಮ್ಮೆ ಅವರ ಆಟದ ಬೊಂಬೆ ನಾನಾಗಬೇಕಿತ್ತು. ನನಗೆ ಅದು ತುಂಬ ಖುಷಿ ಕೊಡುತ್ತಿತ್ತು. ನನ್ನನ್ನು ಎಲ್ಲರು ಮುದ್ದಾಡಿ ಆಟವಾಡಿ ಹೋಗುತ್ತಿದ್ದರು. 

ಎಷ್ಟು ಬೇಗ ದೊಡ್ಡವರಾದರು ಎಂದು ತಿಳಿಯಲೇ ಇಲ್ಲ. ಅಭಿಷೇಕ್ ಹೆಚ್ಚಿನ ಓದಿಗೆಂದು ಹಾಸ್ಟೆಲ್ ಗೆ ಹೋಗಬೇಕಾಗಿ ಬಂತು. ಒಹ್! ನನ್ನ ಗೆಳೆಯನನ್ನು ಬಿಟ್ಟು ಹೇಗಿರಲಿ ನಾನು! ಆದರೂ ವಿಧಿಯಿಲ್ಲ ಅವನು ಹೋದಮೇಲೆ ನನಗೆ ತುಂಬಾ ಬೇಸರವಾಗಿ ಒಂದು ವಾರ ಊಟ ಮಾಡಲಿಲ್ಲ. ನನ್ನನ್ನು ನೋಡಿ ಅಶ್ವಿನಿ ಅಳತೊಡಗಿದ್ದಳು. ನನ್ನ ಒಡತಿ ಮತ್ತು ಒಡೆಯ ಸಹ ತುಂಬ ನೊಂದುಕೊಂಡದ್ದನ್ನು ತಿಳಿದು ಊಟ ಮಾಡಲು ಮನಸ್ಸು ಮಾಡಿದೆ. ಅಭಿಷೇಕ್ ನ ಗೆಳೆಯರು ಅಪರೂಪಕ್ಕೆ ಒಮ್ಮೆ ಬಂದು ನನ್ನ ಮಾತನಾಡಿಸುತ್ತಿದ್ದರು. ನನ್ನನ್ನು ವಾಕ್ ಗೆ ಕರೆದುಕೊಂಡು ಹೋಗಿಬರುತ್ತಿದ್ದರು. ಅವರಿಗೆ ಇಷ್ಟವಾದ ತಿಂಡಿಯನ್ನು ನನಗೂ ಕೊಡಿಸಿ ಸಂಭ್ರಮಿಸುತ್ತಿದ್ದರು. 

ಅಭಿಷೇಕ್ ಮತ್ತು ಅಶ್ವಿನಿ ತಮ್ಮ ಓದು ಮುಗಿಸಿ ಕೆಲ್ಸಕ್ಕೆ ಹೋಗಲಾರಂಭಿಸಿದರು. ನನಗೆ ಯಾಕೋ ಉತ್ಸಹ ಕಡಿಮೆ ಆಯಿತೇನೋ ಅನ್ನಿಸುತ್ತಿತ್ತು. ಬಹುಷಃ ನನ್ನ ಆಯಸ್ಸು ಕಡಿಮೆ ಇರಬಹುದು ಎಂದು ನನಗೆ ತಿಳಿದಿರಲಿಲ್ಲ. ಅಶ್ವಿನಿಗೆ ಮದುವೆ ನಿಶ್ಚಯ ಆಯಿತು. ಮನೆಯಲ್ಲಿನ ಸಂಭ್ರಮ ನೋಡಿ ನನಗೆ ಬಹಳ ಖುಷಿ, ಆದರೆ ಆಮೇಲೆ ತಿಳಿಯಿತು ನನ್ನ ಗೆಳತಿ ನನ್ನನ್ನು ಬಿಟ್ಟು ಹೋಗುತ್ತಾಳೆ ಎಂದು. ಅಶ್ವಿನಿ ಅಪರೂಪದ ಗೆಳತಿಯಾದಳು. ನಾನು ಇನ್ನಷ್ಟು ಒಂಟಿಯಾದೆ. ನನ್ನ ಮನೆಯೊಡತಿ ನನ್ನ ಬಗ್ಗೆ ಕಾಳಜಿ ಹೆಚ್ಚು ಮಾಡಿದ್ದರು. ಕೆಲವು ವರುಷಗಳು ಆಗುತ್ತಿದ್ದಂತೆ ಅಶ್ವಿನಿ ಬಂದಳು. ಜೊತೆಯಲ್ಲಿ ಪುಟ್ಟ ಜೀವ. ಅಬ್ಬಾ! ಎಷ್ಟು ಮುದ್ದಾಗಿದೆ ಆ ಮಗು. ನನಗೆ ನನ್ನ ಕಣ್ಣನ್ನೇ ನಂಬಲಾಗುತ್ತಿಲ್ಲ. ತುಂಬ ಎಳೆಯದಾದ ಚರ್ಮ, ಘಮ ಘಮ ಪರಿಮಳ ಮತ್ತು ನೆಕ್ಕಲು ಮನಸ್ಸಾಗುತ್ತಿದೆ. ಆದರೆ ತುಂಬ ನಾಜೂಕು ಅನ್ನಿಸುವಂತಿತ್ತು. ನನಗೆ ಎಲ್ಲಿಲ್ಲದ ಸಂಭ್ರಮ. ಆದರೆ ನನ್ನ ದೇಹ ಅಷ್ಟು ಸಹಕರಿಸುತ್ತಿರಲಿಲ್ಲ. ಬೇಗ ದಣಿದುಬಿಡುತ್ತಿದ್ದೆ. ಆದರೆ ಆ ಪುಟ್ಟ ಮಗುವನ್ನು ಬಿಟ್ಟು ಎಂದೂ ದೂರ ಹೋಗುತ್ತಿರಲಿಲ್ಲ. ಮನೆಗೆ ಬರುವ ನೆಂಟರೆಲ್ಲರೂ ಅಶ್ವಿನಿಗೆ ಮತ್ತು ನನ್ನ ಒಡತಿಗೆ ಬುದ್ಧಿ ಹೇಳುತ್ತಾ 'ನಾಯಿಯನ್ನು ಅಷ್ಟು ಎಳೆ ಮಗುವಿನ ಹತ್ತಿರ ಬಿಡಬೇಡಿ, ಖಾಯಿಲೆ ಬರುತ್ತದೆ. ಉಸಿರಾಟದ ತೊಂದರೆ ಆದರೆ ಬಹಳ ಕಷ್ಟ' ಅಂತೆಲ್ಲ ಹೇಳುತ್ತಿದ್ದರು. ಆದರೆ ನನ್ನ ಮನೆಯವರು ಯಾರ ಮಾತನ್ನು ಕೇಳದೆ ಮಗುವನ್ನು ನೋಡಿಕೊಳ್ಳುವ ಕೆಲಸ ನನಗೆ ವಹಿಸಿದ್ದರು. ನನಗೆ ಅದನ್ನು ಬಿಟ್ಟರೆ ಬೇರೆ ಯಾವ ಕೆಲಸವೂ ಬೇಕಾಗಿರಲಿಲ್ಲ. ಮಗುವಿಗೆ ಎಚ್ಚರವಾದರೆ, ಅಥವಾ ಹಸಿವಾದರೆ ಅಶ್ವಿನಿಯನ್ನು ಎಚ್ಚರಿಸುತ್ತಿದ್ದೆ. ಮಗು ಮಲಗಿರುವಾಗ ಮನೆಗೆ ಯಾರಾದರೂ ಬಂದರೆ ನನಗೆ ಬಹಳ ಹಿಂಸೆ ಆಗುತ್ತಿತ್ತು. ಬೊಗಳಬೇಕೆಂಬ ಮನಸ್ಸು, ಆದರೆ ಮಗುವಿನ ನಿದ್ದೆಗೆ ತೊಂದರೆ ಆಗುತ್ತದೆ ಎಂದು ಬಹಳ ಕಷ್ಟಪಟ್ಟು ಬೊಗಳದೇ ಸುಮ್ಮನೆ ಶತಪಥ ತಿರುಗುತ್ತಿದ್ದೆ. ಮಗು ಆಟಆಡುತ್ತಾ ನನ್ನನ್ನು ಮುಟ್ಟಿದರೆ ನನಗೆ ಸ್ವರ್ಗವೇ ಸಿಕ್ಕಂತೆ ಆಗುತ್ತಿತ್ತು. ಆದರೂ ಒಂಥರಾ ಭಯ. ಮಗು ನನ್ನ ಕಣ್ಣಿಗೆ ಕೈ ಹಾಕಿ ಆಟ ಆಡುತ್ತಿತ್ತು. ನೋವಾದರೂ ಏನೂ ಮಾಡದೇ ಸುಮ್ಮನಿರುತ್ತಿದ್ದೆ. ಇಂತಹ ಹಿತಕರ ದಿನಗಳು ಬೇಗ ಕಳೆದು ಹೋದವು. ಅಶ್ವಿನಿ ತನ್ನ ಮಗುವಿನೊಡನೆ ಗಂಡನ ಮನೆಗೆ ಹೊರಟುಹೋದಳು. ಮನೆಯೆಲ್ಲ ಖಾಲಿ ಖಾಲಿ!

ಅಭಿಷೇಕ್ ಕೆಲಸದಲ್ಲಿ ತುಂಬ ಸಮಯ ಕಳೆಯುತ್ತಿದ್ದ. ಬರುಬರುತ್ತಾ ಮನೆಗೆ ತುಂಬ ತಡವಾಗಿ ಬರುತ್ತಿದ್ದ. ನನಗೆ ಅವನಿಗಾಗಿ ಕಾಯುವ ಕೆಲಸ ಕಷ್ಟ ಎನಿಸತೊಡಗುತ್ತಿತು. ಇತ್ತೀಚಿಗೆ ನನಗೆ ಅಷ್ಟಾಗಿ ಊಟ ಸೇರುತ್ತಿಲ್ಲ. ಬಹಳ ಮಂಕಾಗಿರುತ್ತಿದ್ದೆ. ನನ್ನ ಒಡೆಯ ನನ್ನನ್ನು ಡಾಕ್ಟರ್ ಬಳಿ ಹೆಚ್ಚಾಗಿ ಕರೆದುಕೊಂಡು ಹೋಗುತ್ತಿದ್ದರು. ಚಿಕಿತ್ಸೆನಂತರ ಸ್ವಲ್ಪ ಚೇತರಿಸಿ ಕೊಳ್ಳುತ್ತಿದ್ದೆ. ಆದರೆ ಅದು ಹೆಚ್ಚು ಸಮಯ ಉಳಿಯುತ್ತಿರಲಿಲ್ಲ. ಮತ್ತೆ ಅದೇ ನಿಶ್ಶ್ಯಕ್ತಿ. ಒಂದು ದಿನವಂತೂ ಒಡತಿ ನನ್ನನ್ನು ಕರೆಯುತ್ತಿರುವುದು ಕೇಳಿಸುತ್ತಿತ್ತು ಆದರೆ ಏಳಲು ಆಗುತ್ತಲೇ ಇಲ್ಲ. ಆಮೇಲೆ ತುಂಬ ಹೊತ್ತಿನ ನಂತರ ಎಚ್ಚರವಾಯಿತು. ಡಾಕ್ಟರ್ ನನ್ನನ್ನು ಅವರಲ್ಲಿ ಇರಿಸಿಕೊಂಡು ಚಿಕಿತ್ಸೆ ಮಾಡುತ್ತಿದ್ದರು. ನನ್ನ ಮನೆಯವರು ನನ್ನನ್ನು ಅಲ್ಲೇ ಬಿಟ್ಟು ಹೋಗಿದ್ದರು. 

ಮಾರನೆಯ ದಿನ ಬಂದ ನನ್ನ ಮನೆಯವರು ನನ್ನನ್ನು ನೋಡಿ ಸಂತೋಷಪಟ್ಟು ಕರೆದುಕೊಂಡು ಹೋಗಲು ಮಾತಾಡುತ್ತಿದ್ದರು. ಆದರೆ ಅಭಿಷೇಕ್ ನ ಮಾತು ನನಗೆ ಜೀವ ಹೋದಷ್ಟು ನೋವಾಯಿತು. 'ಅಪ್ಪ, ಇನ್ನು ಭೀಮನನ್ನು ನೋಡಿಕೊಳ್ಳುವುದು ಕಷ್ಟ. ಯೋಚನೆ ಮಾಡಿ ನಿರ್ಧಾರಕ್ಕೆ ಬನ್ನಿ. ಅಮ್ಮನಿಗೂ ಬೇರೆ ಕೆಲಸ ಇರುತ್ತದೆ. ಇವನಿಗೋ ಮಲಗಿದ ಕಡೆಯೇ ಎಲ್ಲ, ಎಷ್ಟು ದಿನ ಹೀಗೆ ನಡೆಯುತ್ತದೆ ಅಪ್ಪ. ಇಲ್ಲೇ ಇರಲಿ, ಡಾಕ್ಟರ್ ಇರುತ್ತಾರೆ. ಇವನಂತೆ ಎಷ್ಟೊಂದ್ ನಾಯಿಗಳು ಇವೆ. ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳುತ್ತಾರೆ' ನನ್ನ ಕಣ್ಣು ತುಂಬಿ ನೀರ ಹನಿಗಳು ಕೆಳಗಿಳಿಯುತ್ತಿದ್ದವು. ನನ್ನನ್ನು ಇಲ್ಲೇ ಬಿಟ್ಟು ಹೋಗುತ್ತಾರೆ. ಹೇಗಿರಲಿ ನಾನು ಇವರನ್ನೆಲ್ಲ ಬಿಟ್ಟು? ನನ್ನ ಒಡತಿ ನನ್ನನ್ನು ಸವರುತ್ತಾ ಕಣ್ಣೀರು ಹಾಕುತ್ತಾ 'ಇಲ್ಲ ಅಭಿಷೇಕ್, ನಿಮ್ಮಂತೆ ಇವನು ನನ್ನ ಮಗ ಕಣೋ. ಅವನಿಗಾಗಿ ನಾನು ಇಷ್ಟು ಮಾಡಲು ಸಾಧ್ಯವಿಲ್ಲವಾ? ಇರಲಿ, ನಾನು ನೋಡಿಕೊಳ್ಳುತ್ತೇನೆ'. ಮನೆಗೆ ಬಂದೆ. ಸಂತೋಷಕ್ಕಿಂತ ದುಖ್ಖವೇ ಹೆಚ್ಚಾಗಿತ್ತು ನನ್ನಲ್ಲಿ. ನನ್ನ ಅಭಿಷೇಕ್ ಗೆ ನಾನು ಬೇಡವಾಗಿದ್ದೇನೆ ಅನ್ನುವ ನೋವು. ಮಾನಸಿಕ ಯಾತನೆ ಹೆಚ್ಚಾಗಿ ಶರೀರ ಕುಗ್ಗುತ್ತಿತ್ತು. 

ಬಹುಷಃ ನನ್ನ ಕೊನೆಯ ಘಳಿಗೆ ಅನ್ನಿಸುತ್ತದ್ದೆ. ಖುಷಿಯ ವಿಷಯವೆಂದರೆ ನಾನು ನನ್ನ ಮನೆಯಲ್ಲಿ ನನ್ನವರೊಡನೆ ಇದ್ದೇನೆ. ಅಶ್ವಿನಿ, ಅವಳ ಪುಟ್ಟ ಮಗು, ಅವಳ ಗಂಡ, ಅಭಿಷೇಕ್ ಮತ್ತು ಅವನ ಗೆಳೆಯರು, ನನ್ನ ಒಡೆಯ ಮತ್ತು ಒಡತಿ, ನಮ್ಮ ಬೀದಿಯ ಮಕ್ಕಳು ಎಲ್ಲರೂ ನನ್ನನ್ನು ಸುತ್ತುವರೆದಿದ್ದರೆ ಅನ್ನಿಸುತ್ತಿದೆ. ದೇವರಲ್ಲಿ ಬೇಡಿಕೊಳ್ಳುತ್ತಿದ್ದೇನೆ ಇವರನ್ನೆಲ್ಲ ಕೊನೆಯಬಾರಿಗೆ ನೋಡಲು ಶಕ್ತಿ ಕೊಡು ಎಂದು. ಒಂದು ನಿಮಿಷ ಕಣ್ಣು ತೆರೆಯಲು ಸಾಧ್ಯವಾಯಿತು. ಎಲ್ಲರನ್ನೂ ನೋಡಿ ಸಂತೃಪ್ತಿಗೊಂಡೆ. ಮನಸ್ಸು ನಿರಾಳ, ಎಲ್ಲ ಹಿತಕರ. ನನ್ನ ಮನೆ ಮತ್ತು ನನ್ನ ಜನ ಎಲ್ಲರು ಸುಖವಾಗಿರಲಿ ಅನ್ನುವುದು ದೇವರಲ್ಲಿ ನನ್ನ ಬೇಡಿಕೆ.
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Umashankar Huskur
Umashankar Huskur
7 years ago

Real good indepth Story of Bheema ( A Dog) really I too had a Lab ( Rusty) once upon a all time Fav Dog of my house. After Five years he became too big & Fat which my mother & Father decided to give him off . He was taken away by our Carpenter to Puttur to a Farm (Poor rusty didn't know he is going away from us) later he left the food & water . our Carpentar left him freely in the farm so his mind get diverted and shall eat some fruits in the Farm house but was attacked brutally by Wild Dogs and was killed away..I can to know this after 2 years later .Carpentar didn't have futs tell this to me..Really I Cried a lot thing of my Rusty how much pain he would have observed the Faith & Trust he had on us ( We taking care of him safely when he was with us) we broke his Trust & Faith …Really till today also Tears rolls down thinking of him……

Suresh
7 years ago

Dear Ms. Girija,,

   Superb story, nice to read such stories in this days, keep writing more n more,, all the very best

 

Regards

Suresh

GIRIJA JNANASUNDAR
GIRIJA JNANASUNDAR
7 years ago
Reply to  Suresh

Thank you very much Suresh 

Umashankar Huskur
Umashankar Huskur
7 years ago

Thumbs Chennagide Madam.. We Pray to  God  to bless you with More Knowledge, Strength, to succeed in you future …

GIRIJA JNANASUNDAR
GIRIJA JNANASUNDAR
7 years ago

Thank you very much for your kind words sir

Ravi kumar H
Ravi kumar H
7 years ago

Sumitravara Radhe…..kavana…uttamavagide

 

Mohan M
Mohan M
5 years ago

It’s really nice..You have described the story in the angle of a DOG (Bhima) in his point of view on his Old age.. recalling the sweet memories spent with the Family..
Keep writing Madam!!😊

Santhosh
Santhosh
4 years ago

Giri this is something next level..

8
0
Would love your thoughts, please comment.x
()
x