ಅದೆಲ್ಲೋ ಇದ್ದು ಮುಖವನ್ನೂ ನೋಡದಿರೋರ ಮಧ್ಯ ಸುಂದರ ಸ್ನೇಹವೊಂದು ಹೆಮ್ಮರವಾಗಿ ಬೆಳೆಯೋದು ಸಾಧ್ಯವೇ ಅನ್ನೋ ಅವಳ ಪ್ರಶ್ನೆಗೆ ನೇರಾ ನೇರಾ ಉತ್ತರ ಸಿಕ್ಕಿತ್ತು ಅವತ್ತು …
"ಗೆಳತಿ, ಆತ್ಮೀಯತೆ ಬೆಳೆಯೋಕೆ ಇಂತದ್ದೆ ಸ್ಥಳ ಬೇಕೆಂದಿಲ್ಲ. ನನ್ನ ನಿನ್ನ ಈ ಸ್ನೇಹ ಎದುರು ಕೂತು ಮುಖ ನೋಡಿ ಮಾತಾಡಿಲ್ಲ ! ಗಂಟೆಗಟ್ಟಲೇ ಹರಟಿಲ್ಲ. ತೋಳಲ್ಲಿ ಮುಖ ಹುದುಗಿಸಿ ಅತ್ತಿಲ್ಲ….ಸಾಹಿತ್ಯವನ್ನು ಬಿಟ್ಟು ಬೇರೆ ಯಾವ ವೈಯಕ್ತಿಕ ಮಾತನ್ನೂ ಆಡಿರದ ಸ್ನೇಹ ಇದು! ಆದರೂ ಎದುರು ಬದುರು ಕೂತು ಮಾತಾಡಿದ,ಒಟ್ಟಿಗೆ ಕೂತು ಹರಟಿದ, ಕಣ್ಣಂಚಿನ ಕಣ್ಣೀರ ಒರೆಸಿದ ನನ್ನ ತುದಿಬೆರಳ ಸ್ನೇಹಕ್ಕಿಂತ ಹತ್ತಿರವಾದ ಭಾವ ಇದು ! ಪರಸ್ಪರ ಗೌರವಿಸೋ ಎರಡು ಸುಂದರ ಮನವಿದ್ದರೆ ಸಾಕು ಕಣೇ ಸ್ನೇಹಿತರಾಗೋಕೆ ಅನ್ನೋ ಅವನ ಮಾತಿಗೆ ನಿಜಕ್ಕೂ ತಲೆಯಾಡಿಸಿದ್ದಳು ಅವಳು.
ಅಲ್ಲೊಂದು ಮಧುರ ಸ್ನೇಹ ಅದಾಗಲೇ ಹೆಮ್ಮರವಾಗಿ ಬೆಳೆದಿತ್ತು. ಮುಖ ನೋಡದೇ ಅವಳವನಿಗೆ ಹತ್ತಿರವಾಗಿದ್ದಳು. ಅದೆಷ್ಟೋ ಭಾವಗಳನ್ನ ಸಂಕೋಚವಿಲ್ಲದೇ ಹಂಚಿಕೊಳ್ಳೋ ಅಷ್ಟು ಸಲುಗೆ ಅವರಿಬ್ಬರ ನಡುವೆ ಇತ್ತು. ಮನದಲ್ಲಿ ನಡೆಯೋ ಕೆಲವೊಂದು ಗೊಂದಲಗಳನ್ನ ಇಬ್ಬರೂ ನೇರಾ ನೇರಾ ಹೇಳಿಕೊಂಡು ಬಗೆಹರಿಸಿಕೊಳ್ಳುತ್ತಿದ್ದರು. ಇಬ್ಬರ ಭಾವದಲ್ಲೂ ಪ್ರಾಮಾಣಿಕ ಉತ್ತರ ಸಿಗುತ್ತಿತ್ತು.
ಮುಖವನ್ನೇ ನೋಡಿರದ ಹುಡುಗನ ಮೇಲೇ ನಿಂಗ್ಯಾಕೆ ಅಷ್ಟೊಂದು ನಂಬಿಕೆ ಗೆಳತಿ ಅನ್ನೋ ಅವನ ಪ್ರಶ್ನೆಗೆ ಉತ್ತರ ನಂಗೂ ತಿಳಿಯದು ಗೆಳೆಯಾ, ಕೆಲವೊಮ್ಮೆ ನಂಗೂ ಇಂತದ್ದೇ ಅಸಂಬದ್ಧ ಪ್ರಶ್ನೆಗಳು ಕಾಡ್ತಾ ಇರುತ್ವೆ, ನಿನ್ನೊಟ್ಟಿಗೆ ನಾ ಮಾತಾಡಿದ ಈ ಕ್ಷಣ ನಂಗೇನೋ ಖುಷಿ. ಹಂಚಿಕೊಳ್ಳೋ ಪ್ರತಿ ಭಾವಕ್ಕೂ ಹೊಸತನದ ರಂಗು. ನನ್ನೆಲ್ಲಾ ಭಾವಕ್ಕೂ ಪ್ರೀತಿಯಿಂದ ಸ್ಪಂದಿಸೊ ನಿನ್ನ ಮನದೊಂದಿಗೆ ನಾನೇ ಸೇರಿ ಹೋದ ಅನುಭವ. ನಿನ್ನ ಗೆಳತಿಯಾಗಿ, ತಂಗಿಯಾಗಿ, ಆತ್ಮೀಯ ಬಂಧುವಾಗಿ ನಿನ್ನೊಟ್ಟಿಗೆ ನನ್ನೆಲ್ಲಾ ಭಾವಗಳನ್ನ ಹೇಳಿಕೊಳ್ಳೋ ,ಹಂಚಿಕೊಳ್ಳೋ ಖುಷಿ ಮಾತ್ರ ನಂದು ಅಂತಷ್ಟೇ ಹೇಳಬಲ್ಲೆ ಅನ್ನೋದು ಅವಳ ಸಿದ್ಧ ಉತ್ತರ. ಇಷ್ಟೊಂದು ನಂಬಿಕೆಗೆ ನಾ ಅರ್ಹನೋ ಅಲ್ವೊ ಅನ್ನೋ ಭಯ ನಂದು ಕಣೇ ಅಂತ ಆ ಭಾವವನ್ನ ಮತ್ತೂ ಗೋಜಲಾಗೇ ಉಳಿಸೋ ಅವನ ಜಾಣತನಕ್ಕೆ ಪದ ಸಿಗದೇ ಅವಳೇ ಸುಮ್ಮನಾಗುತ್ತಿದ್ದಳು.
ಮುಂಜಾನೆಗೊಂದು ಭರವಸೆಯ ಮಾತು, ಮುಸ್ಸಂಜೆಗೊಂದು ತಂಪಾದ ಶುಭಾಶಯ ಅವನ ಪ್ರತಿ ದಿನದ ದಿನಚರಿ. .ಊಟ ಮಾಡೋದನ್ನ ಮರೆತಾನು ಆದರೀ ಶುಭಾಶಯವನ್ನ ಪ್ರತಿ ದಿನವೂ ಉದಯಿಸೋ ಸೂರ್ಯನಷ್ಟೇ ಸತ್ಯವಾಗಿ ಹೇಳುವವ ಅವ. ಪ್ರತಿದಿನದ ಅವನ ಸುಪ್ರಭಾತದ ಶುಭಾಶಯ ಅವಳಿಗೆ ಹೊಸತನ ತರುತ್ತಿತ್ತು .ಏಳೋಕೆ ಸೋಮಾರಿಯಾದ ಗೆಳತಿಯನ್ನ ಅದೆಷ್ಟೋ ದೂರದಿಂದ ಏಳಿಸೋ ಆತ್ಮೀಯತೆಯ ಸಲುಗೆ ಅವನದು…
ಅವಳ ಪ್ರಶ್ನೆಗೆ ಅವನದೊಂದು ಮರು ಪ್ರಶ್ನೆ! ಪ್ರಶ್ನೆಗೆ ಪ್ರಶ್ನೆಯೇ ಉತ್ತರವಾ ಅನ್ನೊದೇ ಅವಳು ತಿಳಿಯದೇ ಕೇಳೋ ಪ್ರಶ್ನೆ 🙂
ಈ ಆತ್ಮೀಯತೆಯ ಭಾವಕ್ಕೆ ಉತ್ತರ ಹುಡುಕ ಹೊರಟರೆ ತಲುಪೋದು ಗೊಂದಲದ ತುದಿಯನ್ನ ಅನ್ನೋದು ತಿಳಿದ ಮೇಲೆ, ಕೆಲವೊಂದಿಷ್ಟು ಪ್ರಶ್ನೆಗಳನ್ನ ಪ್ರಶ್ನೆಗಳನ್ನಾಗಿಸಿಯೇ ಉಳಿಸೋದು ಸೂಕ್ತ ಅನ್ನೋ ಭಾವ ಇಬ್ಬರದೂ ಕೂಡಾ…
ಮುಸ್ಸಂಜೆಯಲ್ಲಿ ಸುರಿವ ಮಳೆಗೆ ಮುಖವೊಡ್ದಿ ಖುಷಿಸಿ ಬಂದ ಅವಳು ಇವತ್ತಿನ ಮಳೆಗೆ ನಿನ್ನ ನೆನಪಾಯ್ತು ಗೆಳೆಯಾ, ನೆಲ ತಾಕಿದ ಹನಿಯಲ್ಲಿ ನಾ ನಿನ್ನ ಕಂಡೆ ಅಂದಾಗ ಸುಮ್ಮನೆ ಹನಿಗಳಿಗೆ ಕೈಯೊಡ್ಡು ನೀ ನನ್ನ ತಾಕಿದ ಅನುಭವ ನನ್ನದಾದೀತು ಅಂತ ಕಣ್ಣು ಮಿಟುಕಿಸೋ ಅವನು. ವಿಷಯವೊಂದು ಸಿಕ್ಕಾಗ ಗಂಟೆಗಟ್ಟಲೇ ವಿಮರ್ಶಿಸೋ ಆ ಎರಡು ಮನವನ್ನ ನೋಡಿದಾಗ ನಿಜಕ್ಕೂ ಒಂದು ಖುಷಿಯ ಅನುಭವ ಆಗೋದು ಸತ್ಯ. ಚಿಕ್ಕ ಚಿಕ್ಕ ಖುಷಿಗಳನ್ನೂ ಪ್ರೀತಿಯಿಂದ ಅನುಭವಿಸೋ ಮನಗಳು ಅವು.
ಅಷ್ಟೊಂದಾಗಿ ಪ್ರಪಂಚ ನೋಡಿರದ ಅವಳಿಗೆ ಅವನ ಜೀವನ ಅನುಭವವೇ ದಿನ ದಿನಕ್ಕೂ ಹೊಸ ಪ್ರಪಂಚ ನೋಡುತ್ತಿರೋ ತರ ಭಾಸ ಮಾಡಿದ ತರಲೆಗಳೆಷ್ಟೋ, ಭಾವುಕರಾಗಿ ಮಾತಾಡಿದ ದಿನಗಳೆಷ್ಟೋ, ಕಾಲೆಳೆದು /ಎಳೆಸಿಕೊಂಡು ತೋರಿರೋ ಹುಸಿ ಮುನಿಸುಗಳೆಷ್ಟೋ…
ಹೇಳಲಾಗದ ಅವೆಷ್ಟೋ ಗಳ ನಡುವೆ ಇರೋ ಒಂದೇ ಒಂದು ಭಾವ ಮಾತ್ರ…
ಅವನವಳ ಸ್ನೇಹಿತ.
ಬದುಕು ಕರುಣಿಸಿದ ಅಪರೂಪದ ಗೆಳೆತನದ ಖುಷಿ ಅದು. ಆಶ್ಚರ್ಯ ಆಗೋದು ಇಲ್ಲೆ
ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳದ ಅವಳು ಅದ್ಯಾವತ್ತೋ ಅವನ ಸ್ವಚ್ಚ ನಗುವಿಗೆ ಸೋತಿದ್ದಳು… ಸ್ನೇಹಕ್ಕೆ ಜೊತೆಯಾಗಿ, ಜವಾಬ್ದಾರಿಗಳಿಗೆ ಬೆನ್ನು ಮಾಡದೆ, ನಿನ್ನೆಲ್ಲಾ ನೋವುಗಳು ನನ್ನವೂ ಕೂಡಾ ಅನ್ನುತ್ತಾ ನೋವಿಗೆ ನಾ ಜೊತೆ ಇರುವೆ ಅನ್ನೋ ಸೂಕ್ಷ್ಮಗಳ ತಿಳಿ ಹೇಳುತ್ತಾ, ಆತ್ಮೀಯತೆಗೆ ಎರಡರಷ್ಟು ಆತ್ಮೀಯತೆ ತೋರುತ್ತಾ, ಭಾವಗಳನ್ನ ಬಿಡಿ ಬಿಡಿಯಾಗಿ ತಿಳಿಸೋ ಅವನನ್ನ ತುಂಬಾನೇ ಹಚ್ಚಿಕೊಟ್ಟ ಭಾವ ಅವಳದು.
ಮೊದಲ ಮಾತಿಗೆ ಅತೀ ಆತ್ಮೀಯ ಅನ್ನಿಸೋ ಅವನಂತದ್ದೇ ಸ್ನೇಹ ಎಲ್ಲರಿಗೂ ಸಿಗಲಿ….
"ಭಾವ ನೀನಾದರೆ ….ಭಾವನೆ ನಾನು "ಅನ್ನೋ ಸಲುಗೆಯ ಆ ಸ್ನೇಹ ಚಿರಾಯುವಾಗಲಿ ಅನ್ನೋ ಆಶಯವನ್ನು ಹೊತ್ತು …
ಆತ್ಮೀಯತೆಯ ಸೋಂಕೂ ಇಲ್ಲದೇ ಬರಿಯ ಹಣ, ಒಣ ಪ್ರತಿಷ್ಟೆಗಳ ಹಿಂದೆ ಬಿದ್ದಿರೋ ಸಮಾಜಕ್ಕೊಂದು ಧಿಕ್ಕಾರವೀಯುತ್ತಾ…
ರಕ್ತ ಸಂಬಂಧವಿಲ್ಲದೇ, ಸ್ನೇಹಿತರಲ್ಲದೇ, ಪರಸ್ಪರ ಪರಿಚಿತರಲ್ಲದೇ, ಅದೆಲ್ಲೋ ಒಂದು ಸಣ್ಣ ಸ್ನೇಹವಾಗಿ, ಸ್ನೇಹ ಸಂಬಂಧವಾಗಿ ,ರಕ್ತ ಸಂಬಂಧಕ್ಕೂ ಮೀರಿದ ಆತ್ಮೀಯತೆ ಮೂಡಿ, ಭಾವಕ್ಕೆ ಭಾವ ಧಾರೆಯೆರೆಯೋ, ಪ್ರೀತಿಗೆ ಸಹಸ್ರ ಪ್ರೀತಿ ನೀಡೋ ಇಂತಹ ಅದೆಷ್ಟೋ ಪಕ್ವ ಸ್ನೇಹಗಳ ಮಾತಾಗಿ, ಇಂತದ್ದೇ ಸ್ನೇಹ ಎಲ್ಲರಿಗೂ ಸಿಗಲಿ…ಎಲ್ಲರದೂ ಆಗಲಿ.
ತುಂಬಾ ಚನ್ನಾಗಿದೆ….ಇಂತವರ ಲಿಸ್ಟ್ ನಲ್ಲಿ ನನ್ನದು ಒಂದು ಹೆಸರಿದೆ …:)
ಧನ್ಯವಾದ ..
ನೀವಿಷ್ಟ ಪಟ್ಟಿದ್ದು ಖುಷಿ ಆಯ್ತು
ಚೆಂದದ ನಿರೂಪಣೆ….
ಧನ್ಯವಾದ
ee Bhavagala barahada bagge enoo helalu naanantu nirupaaya… 🙂 bhaavada holeyalli mindedda sukhavide… Snehada kadala vishaalateye heege… heege iddu bidali..:)
ಥಾಂಕ್ಸ್ ಸಂಧ್ಯಕ್ಕ …
ಸ್ನೇಹದ ಭಾವವೇ ಹಾಗೇನೋ ಅಲ್ವಾ …ಎಲ್ಲರಿಗೂ ಇಷ್ಟವಾಗಿ ಬಿಡೋ ಮಧುರ ಭಾವ 🙂
ಮೊದಲ ಮಾತಿಗೆ ಅತೀ ಆತ್ಮೀಯ ಅನ್ನಿಸೋ ಅವನಂತದ್ದೇ ಸ್ನೇಹ ಎಲ್ಲರಿಗೂ ಸಿಗಲಿ…. ಎಂಬ ನಿಮ್ಮ ಆಶಯ ನೆಚ್ಚಿಗೆಯಾಯಿತು. ಪರಿಚಯವೇ ಇಲ್ಲದ ಅದೆಷ್ಟೋ ಸ್ನೇಹಗಳು ನನಗೆ ಈ ಮುಖ ಪುಟ ಬ್ಲಾಗ್ ಲೋಕದಿಂದ ಸಿಕ್ಕಿವೆ. ನನಗೆ ಅದೇ ಆನಂದ. ಒಳ್ಳೆಯ ಲೇಖನ ಭಾಗ್ಯ ಅವರೇ,
ಥಾಂಕ್ಸ್ ಬದರಿ ಸರ್ ….
ನಿಜ ನನ್ನದೂ ಈ ಭಾವಕ್ಕೆ ಹೊರತಾಗಿಲ್ಲ …
ಈ ಬ್ಲಾಗ್ ಮುಖ ಪುಟದಲ್ಲೇ ನನ್ನ ಅದೆಷ್ಟೋ ಆತ್ಮೀಯರಿದ್ದಾರೆ ..ನನ್ನವರಾಗಿ ..ನನ್ನೆಲ್ಲಾ ಭಾವಕ್ಕೂ ಜೊತೆಯಾಗಿ ..ಬರಹಕ್ಕೆ ಪ್ರೋತ್ಸಾಹಕರಾಗಿ..
ನೀವಿಷ್ಟಪಟ್ಟಿದ್ದು ನನಗೂ ಖುಷಿ
ಏನು ಹೇಳಲಿ ನಿನ್ನ ಭಾವಗಳ ಗೊಂಚಲಿಗೆ………
ಅದರೊಳ ಭಾವಕ್ಕೆ…..
ಹೀಗೇ ಇದ್ದುಬಿಡಲಿ…
ಚಂದದ ಬರಹ…. ಪ್ರಾಮಾಣಿಕವಾಗಿದೆ ಭಾವ………
ಥಾಂಕ್ಸ್ ಜಿ …
ಪ್ರಾಮಾಣಿಕ ಭಾವಗಳೇ ಅಲ್ವಾ ಮನಸ್ಸು ಮುಟ್ಟೋದು …ಆ ಮನದಲ್ಲೊಂದು ನೆನಪು ಉಳಿಸೋದು 🙂
ಮನೋ ವ್ಯಾಪಾರದಲ್ಲಿ ಅದೆಷ್ಟೋ ಭಾವಗಳು ಹರಾಜಿಗಿವೆ 🙂
ಸ್ನೇಹಭಾವ ನಿರೂಪಣೆ ಚೆನ್ನಾಗಿದೆ. ಧನ್ಯವಾದಗಳು,,,
ಥಾಂಕ್ಸ್ …
ಖುಷಿ ಆಯ್ತು
ಮಲ್ಲಿಗೆ ಹೂ ಪೋಣಿಸಿದಂತೆ ಪದಗಳನ್ನು ಪೋಣಿಸುತ್ತಾ ಹೋಗಿದ್ದೀರಿ.
ಮಲ್ಲಿಗೆ ಹಾರದಲ್ಲಿ ಸ್ನೇಹದ್ದೇ ಪರಿಮಳ. very nice article.
ಧನ್ಯವಾದ ಸರ್ ..
ಇಂತದ್ದೇ ಎಲ್ಲರೂ ಇಷ್ಟಪಡೋ ಮಲ್ಲಿಗೆಯ ಪರಿಮಳದ ಸ್ನೇಹ ಎಲ್ಲರದೂ ಆಗಲಿ ಅನ್ನೋದೇ ಇಲ್ಲಿನ ಆಶಯ 🙂
ಮಲ್ಲಿಗೆಯನ್ನು ಪೋಣಿಸಿದಂತಹ ಬರಹ.
ಸ್ನೇಹದ್ದೇ ಪರಿಮಳ.
very nicely written.
ಬದುಕು ಖುಷಿಪಡುವುದು ಇಂತಹ ಅನಿರೀಕ್ಷಿತ ಭಾವ ಬಂಧಗಳಿಂದಲೇ… ಚಂದನೆಯ ಬರಹ…
ಧನ್ಯವಾದ …
ಇಂತಹ ಅನಿರೀಕ್ಷಿತ ಖುಷಿಗಳೇ ಬದುಕ ಪ್ರೀತಿಯನ್ನ ಜೀವಂತವಾಗಿರಿಸೋದು ಅಲ್ವಾ
ಭಾಗ್ಯ
ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ನನ್ನ ಹಳೆಯ ದಿನಗಳನ್ನು ನೆನಪಿಸಿತು.
ನನ್ನವಳೊಂದಿದೆ ಸ್ನೇಹ ಶುರು ಆಗಿದ್ದೆ..ಒಬ್ಬರನ್ನೊಬ್ರು ನೋಡದೇನೆ..!
ತುಂಬಾ ಚೆಂದ ಆ ದಿನಗಳು..!
-ರಾಘವೇಂದ್ರ
ಧನ್ಯವಾದಗಳು
ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಥಾಂಕ್ಸ್
nimma snehalokada lekhana nanna manavannu chumbisithu bhagya avare… 🙂 tumba khushi ayithu odi.. houdu rakta sambandhakkinta sneha sambandha doddadu shubhavaagali