ಶಿಕ್ಷಣ ಎಂಬ ಪದಕ್ಕೆ ವ್ಯಾಪಕವಾದ ಅರ್ಥವಿದೆ. ಆ ಅರ್ಥವನ್ನು ಹಿಡಿದಿಡುವ ಒಂದು ಸಮರ್ಥ ವ್ಯಾಖ್ಯೆಯನ್ನು ಅಥವಾ ನಿರ್ದಿಷ್ಟ್ಟವಾಗಿ ಇದೇ ಶಿಕ್ಷಣ ಎಂಬ ವ್ಯಾಖ್ಯೆಯನ್ನು ಕೊಡುವುದು ಕಷ್ಟ್ಟ .ತತ್ವಜ್ಞಾನಿಗಳು ಶಿಕ್ಷಣತಜ್ಞರು ,ರಾಜಕಾರಣಿಗಳು ಮತ್ತು ಸಾಧುಸಂತರು ಇನ್ನು ಮುಂತಾದವರೆಲ್ಲರೂ ತಮ್ಮ ತಮ್ಮ ದೃಷ್ಟಿ ಕೋನಗಳಿಗನುಗುಣವಾಗಿ ಶಿಕ್ಷಣವನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಯೊಂದು ಸಂಪೂರ್ಣವಲ್ಲದಿದ್ದರು ಶಿಕ್ಷಣದ ಬಗ್ಗೆ ಪರಿಗಣಿಸಬೇಕಾದ ಒಂದಲ್ಲ ಒಂದಂಶವನ್ನು ಎತ್ತಿ ಹಿಡಿಯುವದರಿಂದ ಶಿಕ್ಷಣದ ಯಾವುದೇ ವ್ಯಾಖ್ಯೆಯನ್ನು ತಳ್ಳಿಹಾಕುವಂತಿಲ್ಲ. ಇದರಿಂದ ಶಿಕ್ಷಣದ ಪರಿಕಲ್ಪನೆಯು ಸಂಕೀರ್ಣವಾದುದು ಹಾಗೂ ಸಕ್ರಿಯವಾದುದು ಎಂದು ಹೇಳಬಹುದಾಗಿದೆ. ನಿರಂತರವಾಗಿ ಪ್ರಗತಿ ಹೊಂದುತ್ತಿರುವ ಸಮಜದಲ್ಲಿ ಬೆಳೆಯುತ್ತಿರುವ ಮಾನವನಿಗೆ ಸಂಬಂಧಿಸಿರುವದರಿಂದ ಶಿಕ್ಷಣದ ಪರಿಕಲ್ಪನೆಯೂ ಬದಲಾಗುತ್ತಿರುತ್ತದೆ. ಅಂತೆಯೇ ಶಿಕ್ಷಣದ ಬಗೆಗೆ ಅಂತಿಮ ಹೇಳಿಕೆ ಸಾಧ್ಯವೆ ಇಲ್ಲ ವೆನ್ನಬಹುದಾಗಿದೆ. ನಾನಿಲ್ಲಿ ಚರ್ಚಿಸಿ ಬಯಸುವ ವಿಷಯವೆಂದರೆ ಇಂದಿನ ಕೇಂದ್ರ ಸರ್ಕಾರವು ಏಕರೂಪ ನಾಗರಿಕ ಸಂಹಿತೆಯ ಕಾಯ್ದೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಅದರ ಸಫಲ ಮತ್ತು ವಿಫಲ ಪ್ರಯತ್ತವೂ ಜಾರಿಯಾದ ನಂತರವೇ ತಿಳಿವುದು. ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯ ತಾರತಮ್ಯಗಳ ಬಗ್ಗೆ ಗಮನ ಹರಿಸಬೇಕಾದ ಮಹಾನ್ ಸಂಗತಿ ನಮ್ಮ ಮುಂದೆ ಇದೆ.
ಹಿಂದೆ ಏಕರೂಪದ ಶಾಲೆಗಳು ಅಸ್ತಿತ್ವದಲ್ಲಿದ್ದವು. ಗುರುಕುಲದಲ್ಲಿ ಮೇಲು ಕೀಳುಗಳ ತಾರಮ್ಯವಿಲ್ಲದೆ ರಾಜನ ಮಗುಗು ಸೇವಕನ ಮಕ್ಕಳು, ಪಟೇಲ, ಪೊಲೀಸ್, ಗುಮಾಸ್ತ ಎಲ್ಲಾ ವರ್ಗದ ಮಕ್ಕಳು ಒಂದಾಗಿ ಕಲಿಯುವಂತ ಪದ್ದಂತಿ ವೇದಗಳ ಕಾಲದಿಂದಲು ನಡೆದು ಬಂದಿದೆ. ಆದರೆ ಭಾರತಕ್ಕೆ ಬ್ರೀಟಿಸರ ಆಮನದ ನಂತರ ಶಿಕ್ಷಣ ಪದ್ದತಿ ಬದಲಾಗಿ ತನ್ನದೆ ರೂಪು-ರೇಷಗಳನ್ನು ಜಾರಿಗೆ ತಂದರು. ಮೇಕಾಲೆ ವರದಿಯು ಭಾರತದ ವೇದ, ಪುರಾಣ, ಮತ್ತು ನಮ್ಮ ಸಂಸ್ಕೃತಿಯನ್ನೆ ಬದಲಾಯುಸುವಂತ ಪ್ರಯತ್ನಕ್ಕೆ ಕೈ ಹಾಕಿ ಸಫಲವಾಯಿತು. ಜೋತೆಗೆ ಇಂಗ್ಲಿಷ್ ಭಾಷೆಯು ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಥಮ ಭಾಷಭೋಧನ ವಿಷಯವಾಗಿ ಮಾರ್ಪಟ್ಟಿತು. ಅದು ಸ್ವತಂತ್ರನಂತರು ಬದಲಾಗದೆ ಮುಂದುವರಿದಿರುವುದೆ ಮಹಾ ದುರಂತದ ಸಂಗತಿ. ಇಂದಿಗೂ ಶಿಕ್ಷಣ ಪದ್ಧತಿ ಬದಲಾಗಿಲ್ಲ ಬ್ರಿಟಿಷ್ ಅಧಿಕಾರ ಮೇಕಾಲೆ ವರದಿ ಜಾರಿಯಲ್ಲಿದೆ.
ಅಂದು ಮೇಲ್ವರ್ಗ, ಕೆಳವರ್ಗದ ಮಕ್ಕಳಲ್ಲಿ ಸಾಮಾಜಿಕ ಸಂಬಂಧ ಏರ್ಪಡುತ್ತಿತ್ತು. ಈ ಸಂಬಂಧವೇ ಮಕ್ಕಳು ಕಲಿಯಬೇಕಾದ ದೊಡ್ಡ ವಿದ್ಯೆ. ಆದರೆ, ಇಂದು ಬಣ್ಣ ಬಣ್ಣದ ಕಟ್ಟಡಗಳಲ್ಲಿ, ಹಲವು ಸ್ತರದ ಶಿಕ್ಷಣ ಪದ್ಧತಿ ಜಾರಿಯಲ್ಲಿದೆ. ಇಂತ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಸಾಮಾಜಿಕ ಸಂಬಂಧಗಳ ಮಹತ್ವದ ಅರಿವು ಬೆಳೆಯುವುದಾರು ಹೇಗೆ?. ಈ ಶಾಲೆಯಲ್ಲಿ ಕಲಿತವರು ಸಂವಿಧಾನ ವಿರೋಧಿ ಭಾರತದ ನಿರ್ಮಾತೃಗಳಾಗುತ್ತಾರೆ ಎಂದು ಆತಂಕ ಪಡಬೇಕಾಗಿದೆ. ಮಕ್ಕಳ ಮಧ್ಯೆ ಸ್ನೇಹ ಸಂಭಂದಗಳು ಮುರಿದು ಬಿದ್ದಿವೆ. ಮೇಲು ಕೀಳು ಎಂಬ ಬೇದಭಾವ ತಾಂಡವ ಆಡುತಿದೆ. ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳು ಭಯೋತ್ಪಾದಕರನ್ನು ಹುಟ್ಟುಹಾಕುವ ಕಾರ್ಕಾನೆಗಳಾಗುತ್ತಿವೆ.
ನಮ್ಮ ಪ್ರಾಥಮಿಕ ಶಿಕ್ಷಣ ಪದ್ಧತಿ ತಾರತಮ್ಯದಿಂದ ಕೂಡಿದೆ ಎಂದು ಒಪ್ಪಿಕೊಳ್ಳಲೆ ಬೇಕು. ಬಡವರಿಗೆ ಒಂದು ಶಾಲೆ, ಶ್ರೀಮಂತರಿಗೆ ಮತ್ತೊಂದು ಶಾಲೆ ಎಂದು ವಿಭಜಿಸಲಾಗಿದೆ. ಬಡವರ ಶಾಲೆಯಲ್ಲಿ ಶಿಕ್ಷಕರಿರುವುದಿಲ್ಲ. ಆದರೆ ಮಕ್ಕಳು ಹೆಚ್ಚಾಗಿ ಇರುತ್ತಾರೆ. ಇಲ್ಲಿ ಶಿಕ್ಷಣಕ್ಕೆ ಬೆಲೆ ಕೊಟ್ಟರೂ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿ ಸರ್ಕಾರಿ ಶಾಲೆಗಳು ಬಡವಾಗುತ್ತಿವೆ. ಶ್ರೀಮಂತರ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇಲ್ಲಬಿಡಿ ಆದರೆ ಇಲ್ಲಿ ಭೂಧನೆಗೆ ಪ್ರಮುಖ್ಯತೆ ಇಲ್ಲ. ಹಣ ಮಾಡುವು ಹುನ್ನಾರಕ್ಕೆ ಕೈ ಹಾಕಿ ಶಿಕ್ಷಣವನ್ನು ಹಣ ಗಳಿಸುವ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಇಲ್ಲಿ ಮಕ್ಕಳಿಗೆ ಮಾನಿವಿಯ ಕೌಶಲ್ಯಗಳು ಮತ್ತು ಸಮಾಜಿಕ ಸಮಾನತೆಯ ಶಿಕ್ಷಣ ಭೋದನೆ ಇಲ್ಲವೆ ಇಲ್ಲ. ಮಕ್ಕಳು ಶಾಲೆಯನ್ನು ತಲುಪಲು ಶಾಲಾ ಬಸ್ಸುಗಳನ್ನು ಅವಲಂಬಿಸಿವೆ. ಇಂತಹ ತಾರತಮ್ಯ ಎಸಗುವ ಶಾಲೆಗಳು ದೇಶಕ್ಕೆ ಶಾಪವಾಗಿವೆ. ಅದರಲ್ಲು ಕ್ರೈಸ್ತ ಧರ್ಮಕ್ಕೆ ಒಳಪಡುವ ಶಿಕ್ಷಣ ಸಂಸ್ಥೆಗಳು ಭಾತರದ ಸಂಮಿಧಾನದ ನೀತಿಯನ್ನೇ ಧಿಕ್ಕರಿಸಿ ತಮ್ಮದೇ ಆದ ನೀತಿಗಳನ್ನು ಜಾರಿಗೆ ತಂದಿದೆ. ಕಳೆದ ತಿಂಗಳಲ್ಲಿ ಹಿಂದೂ ಧರ್ಮದ ಬ್ರಾಹ್ಮಣ ಮಗು ತನ್ನ ಧರ್ಮದ ನೀತಿಗೊಳಪಟ್ಟು ತಲೆಯಲ್ಲಿ ಜುಟ್ಟು ಬಿಟ್ಟಿದೆ ಎಂಬ ಕಾರಣಕ್ಕೆ ಒಂದು ಶಿಕ್ಷಣ ಸಂಸ್ಥೆ ಆ ಮಗುವನ್ನು ಸಂಸ್ಥೆಯಿಂದ ಹೋರಹಾಕಲ್ಪಟ್ಟಿತು. ಮಕ್ಕಳಿಗೆ ಸ್ವತಂತ್ರವಿಲ್ಲದ ಶಿಕ್ಷಣ ಬೆಳೆಯುವ ಮನಸುಗಳಿಗೆ ಮಾರಕವಾಗಿ ಪರಿಣಮಿಸಿದೆ. ಈ ಮಾದರಿಯ ಶಿಕ್ಷಣ ಪದ್ಧತಿ ವಿರುದ್ಧ ನಾವೆಲ್ಲರೂ ಹೋರಾಟದ ದಾರಿ ತುಳಿಯಬೇಕಾಗಿದೆ.
ನಾಳೆಗೆ ಏನನ್ನೂ ಉಳಿಸಬಾರದು, ಇರುವುದೆಲ್ಲವನ್ನು ಇಂದೇ ಅನುಭವಿಸಬೇಕು ಎಂಬ ಧಾವಂತದಲ್ಲಿ ಬದುಕು ಸಾಗುತ್ತಿದೆ. ತಮ್ಮ ದೇಹದ ತೂಕಕ್ಕಿಂತಲು ಬಾರವಾದ ಬ್ಯಾಗನ್ನು ಹೊರುವಂತ ಸ್ಥಿತಿಗೆ ಶಿಕ್ಷಣವನ್ನುವತಂದಿಟ್ಟುಕೊಂಡಿದ್ದೆವೆ. ಲಭ್ಯವಿರುವ ಸಂಪನ್ಮೂಲ ಖಾಲಿ ಮಾಡುವ ತೀವ್ರತೆ ಎಲ್ಲೆಡೆ ಮನೆಮಾಡಿದೆ. ಈ ಪ್ರವೃತ್ತಿ ಮಕ್ಕಳಲ್ಮತ್ತು ಪೋಷಕರಲ್ಲಿ ಆತಂಕ ಮೂಡಿಸಿದೆ. ನಾಳಿನ ಬದುಕು ಹೇಗಿರುತ್ತದೆ ಎಂಬ ತಳಮಳ ಹುಟ್ಟುಹಾಕುತ್ತ ಮಕ್ಕಳ ಮನೂಸ್ಥಿತಿಯ ಮೇಲೆ ವಯಸ್ಸಿಗಿಂತ ಮಿರಿದ ಜವಬ್ದಾರಿಗಳನ್ನು ಹೇರಲಾಗುತ್ತಿದ್ದು, ಬೆಳೆಯುವ ಪರಿಯನು ಮಾನಸಿಕವಾಗಿ ಚಿಗುಟುವ ಪ್ರವೃತ್ತಿಗೆ ಎಡೆಮಾಡಿಬಿಟ್ಟಿವೆ. ಜಗತ್ತು ಬದಲಾಯಿಸುವ ಶಕ್ತಿ ವಿದ್ಯಾರ್ಥಿ ಸಮೂಹದಲ್ಲಿದೆ. ಸಮಸ್ಯೆಗಳಿಗೆ ಬೆನ್ನು ತೋರಿಸದೆ, ಕಷ್ಟಗಳಿಗೆ ಮುಖಾಮುಖಿಯಾಗಿ. ಆತ್ಮವಿಶ್ವಾಸ, ಸವಾಲಿಗೆ ಎದೆಯೊಡ್ಡಿದರೆ ನಿಮ್ಮೊಳಗಿಂದ ಮೇಧಾವಿ ಹುಟ್ಟಿಬರುತ್ತಾನೆ. ಇದಕ್ಕೆ ನಾವೆಲ್ಲರು ಕೈ ಜೋಡಿಸಿ ಮೋದಲು ಮೇಕಾಲೆ ವದಿಯನ್ನು ತಿರಸ್ಕರಿಸಿ ನಮ್ಮದೆ ಆದಾ ಭಾರತಿಯ ಶಿಕ್ಷಣ ಪದ್ಧತಿಯನ್ನು ಏಕರೂಪ ನಾಗರಿಕ ಸಂಹಿತೆಯಡಿಯಲ್ಲಿ ಎಲ್ಲಾ ಧರ್ಮದ ಮಕ್ಕಳು ಸಹೂದರರಂತೆ ಒಂದೆ ಸ್ಥಳದಲ್ಲಿ ಕಲಿಯುವ ವ್ಯೆವಸ್ಥೆಯನ್ನು ಜಾರಿಗೆ ತರಬೇಕಾಗಿದೆ.
ನಮ್ಮದೇ ದೇಶದ ಹಿರಿಯ ಮತ್ತು ಸ್ವತಂತ್ರನಂತರದ ಕೇಲುವು ರಾಜಕೀಯ ಮುಸ್ಸದ್ದಿಗಳು ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ನಮ್ಮ ಇತಿಹಾಸವನ್ನೆ ಆದಾರಗಳಿಲ್ಲದೆ ತಿರುಚಿ ಬರೆದು ಜಗತ್ತಿನ ಮುಂದೆ ಭಾರತವನ್ನು ತಲೆ ತಗ್ಗಿಸುವಂತೆ ಮಾಡಿ ಭಾತರದ ಏಳಿಗೆಗೆ ಕೊಡಲಿ ಪೆಟ್ಟನ್ನು ಹಾಕಿ ಕುಗ್ಗುವಂತೆ ಮಾಡಿದರು. ಇನ್ನೆಷ್ಟು ದೀನ ಪರಕೀಯರು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕು ನೀವೆ ಯೋಚಿಸಿ ಒಮ್ಮೆ. ನಮಗೂ ನಮ್ಮದೇ ಆದ ಒಂದು ವ್ಯವಸ್ಥೆ ಬೇಕಲ್ಲವೇ. ನಮ್ಮದೇ ದಾರಿಯಲ್ಲಿ ನಡೆಯಲು ನಾವು ಇನ್ನು ಸಮರ್ಥರಾಗಿಲ್ಲವೆ? ಮಹಾ ಮಾನವತಾವಾದಿ ಬುದ್ಧನ ನೀತಿ ಮರೆತ ಭಾರತ ಶಾಪಗ್ರಸ್ತವಾಗಿದೆ. ಮಂಕು ಕವಿದು ಕತ್ತಲು ದಾರಿಯಲ್ಲಿ ತಡಕಾಡುತಿದೆ. ಈ ಶಾಪಕ್ಕೆ ವಿಮೋಚನೆ ಸಿಗಬೇಕು. ಜಾತಿ-ಜಾತಿಗಳ ನಡುವಿನ ಕಂದಕ ನಾಶವಾಗಬೇಕು. ಮೇಲ್ವರ್ಗ–ಕೆಳವರ್ಗ ಎಂಬ ಕಲ್ಪನೆಯೇ ಅರ್ಥಹೀನ. ಧರ್ಮ-ಧರ್ಮಗಳು ಬಡಿದಾಡಿಕೊಳ್ಳುವಂತಾಗಿದೆ. ಏಕಾರೂಪ ನಾಗರಿಕತೆಯ ಅಡಿಯಲ್ಲಿ ಇಂತಹ ಸಮಾಜ ಕಟ್ಟುವ ಹೊಣೆಗಾರಿಕೆ ನಮ್ಮ ಮೇಲಿದೆ. ಇವರಿಂದ ಮಾತ್ರ ಭಾರತಕ್ಕೆ ಉಳಿಗಾಲ, ಇಲ್ಕವೆಂದರೆ ಮುಂದೊಂದು ದೀನ ಭಾರತ ರಕ್ತದ ಮಡುವಿನಲ್ಲಿ ಮರಳಬೇಕು ಅಂತಹ ಪರಿಸ್ಥಿತಿ ಬಂದೊದಗುತದೆ.
ಭ್ರಷ್ಟರನ್ನು ಆಧಿಕಾರದ ಕುರ್ಚಿಯಲ್ಲಿ ಕುಳ್ಳಿರಿಸಿ ಶಿಕ್ಷಣವನ್ನು ಕೇಳಿ ಪಡೆಯುವ ಆಧಿಕಾರವನ್ನೆ ಕಳೆದುಕೊಂಡಿದ್ದಿವಿ. ಇದು ಭಾರತದ ಏಳಿಗೆಗೆ ಮಾರಕವಾಗಿದೆ. ಇಂದಾದರೂ ಹೆಚ್ಚೆತ್ತುಕೊಂಡು ಭಾರತಿಯ ಶಿಕ್ಷ ವ್ಯವಸ್ಥೆಯನ್ನು ಏಕರೂಪತೆಯಡಿ ಜಾರಿಗೆ ತರಲು ಪ್ರಯತ್ನಿಸೋಣ…
-ಸಿದ್ದುಯಾದವ್ ಚಿರಿಬಿ..,