ಭವಿಷ್ಯ ಭಾರತದಲ್ಲಿ ವಿಜ್ಞಾನದ ಏಳಿಗೆ: ಪ್ರಸನ್ನ ಗೌಡ

ಪ್ರೊ. ಸಿ. ಎನ್. ಆರ್. ರಾವ್ ಭಾಷಣ ಆಧಾರಿತ ಲೇಖನ 

ವೈಜ್ಞಾನಿಕ ಕ್ಷೇತ್ರದಲ್ಲಿ ಉತ್ತಮ ನಾಯಕರನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯ ವಾದುದ್ದು. ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ವೈಜ್ಞಾನಿಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ದೇಶದ ಭವಿಷ್ಯ ನಿಂತಿದೆ. ನಮ್ಮ ನೆರೆಯ ರಾಷ್ಟ್ರ ಚೀನಾದ ಜೊತೆ ನಮ್ಮ ದೇಶವನ್ನು ಹೋಲಿಸಿ ನೋಡಿದರೆ ನಮ್ಮ ದೇಶದ ವೈಜ್ಞಾನಿಕ ಬೆಳವಣಿಗೆ ತುಂಬಾ ಕಡಿಮೆ ಇದೆ. ದಿನೆ ದಿನೆ ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಹೆಚ್ಚಿದಂತೆಲ್ಲ ದೇಶದ ಅಭಿವೃದ್ದಿ ತನಗೆ ತಾನೆ ಮುಂದೆ ಸಾಗುತ್ತದೆ. ಇಂದು ಮಕ್ಕಳಲ್ಲಿ  ವೈಜ್ಞಾನಿಕ ಪ್ರಜ್ಞೆ  ಬೆಳೆಸುವಲ್ಲಿ ಅವರ ಪೋಷಕರ ಪಾತ್ರವು ಅತ್ಯಮೂಲ್ಯವಾದುದ್ದು. ಇತ್ತಿಚ್ಚಿನ ದಿನಗಳಲ್ಲಿ ನಾವು ನೋಡುತ್ತಿರುವ ಟಿ.ವಿ & ಸಿನಿಮಾ ಮಾದ್ಯಮಗಳು ಮಕ್ಕಳಿಗೆ ವೈಜ್ಞಾನಿಕ ಪ್ರಜ್ಞೆ ಬೆಳೆಸುವಲ್ಲಿ ಹೆಚ್ಚಿನ ಕೆಲಸ ಮಾಡುತ್ತಿಲ್ಲ.  ಇತ್ತಿಚೆಗೆ ಬಿಡುಗಡೆಯಾಗುತ್ತಿರುವ ಸಿನಿಮಾಗಳು ಮಕ್ಕಳನ್ನು ದಾರಿತಪ್ಪಿಸುತ್ತಿವೆ. ವಾಣಿಜ್ಯಾತ್ಮಕ ಚಿತ್ರಗಳು ಲಾಭಗಳಿಸುವ ನಿಟ್ಟಿನಲ್ಲಿ ಅಶ್ಲೀಲತೆಯನ್ನು ವೈಭವಿಕರಿಸುತ್ತಿವೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಉಂಟಾಗುವ ಕೆಟ್ಟ ಪರಿಣಾಮಗಳನ್ನು ಮಾದ್ಯಮಗಳು ಗಮನಿಸುತ್ತಿಲ್ಲ. ಮಕ್ಕಳಿಗೆ ವೈಜ್ಞಾನಿಕ ಪ್ರಜ್ಞೆ ಮೂಡಿಸುವಂತಹ ಯಾವ ಕಾರ್ಯಕ್ರಮಗಳು ಸಹ ಟಿ.ವಿ. ಯಲ್ಲಾಗಲಿ ಅಥವಾ ವೃತ್ತ ಪತ್ರಿಕೆಂಯಲ್ಲಾಗಲಿ ಸರಿಯಾಗಿ ಬರುತ್ತಿಲ್ಲ.   ಸಿನಿಮಾದಲ್ಲೂ ಕೂಡ ಮನರಂಜನೆಯ ಜೊತೆಗೆ ವೈಜ್ಞಾನಿಕ ಅಂಶವನ್ನು ಕೂಡಿಸುವ ಪ್ರಯತ್ನ ನೆಡೆದಿಲ್ಲ. 

ಈ ನಿಟ್ಟಿನಲ್ಲಿ ಭವಿಷ್ಯದ ವಿಜ್ಞಾನಿಗಳನ್ನು ಸೃಷ್ಠಿಸುವ ಹೆಚ್ಚಿನ ಹೊಣೆಗಾರಿಕೆ ಇರುವುದು ನಮ್ಮ ಶಾಲಾ ಶಿಕ್ಷಕರಲ್ಲಿ ಮಾತ್ರ. ಯಾವುದೇ ಒಂದು ಸಮಸ್ಯೆ ಎದುರಾದಾಗ ಅದನ್ನು ಬಗೆಹರಿಸುವಲ್ಲಿ ವೈಜ್ಞಾನಿಕವಾಗಿ ಚಿಂತನೆಗಳನ್ನು ನಡೆಸಬೇಕಾಗುತ್ತದೆ. ವಿಜ್ಞಾನ ವಿಷಯಗಳಲ್ಲಿನ ಆಳ ಮಕ್ಕಳ ವಿಚಾರದಾರೆಯನ್ನು ಎತ್ತರಕ್ಕೆ ಕೊಂಡೊಯುವಂತೆ ಮಾಡುತ್ತದೆ. ಚಿಕ್ಕಂದಿನಲ್ಲಿ ಮಕ್ಕಳಿಗೆ ವಿಜ್ಞಾನ ವಿಷಯದ ಬಗ್ಗೆ ಅಸಕ್ತಿ ಮೂಡಿಸುವುದರಿಂದ ಆ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಹೋಗಲು ಪ್ರೇರಣೆಯಾಗುತ್ತದೆ. ಭಾರತ ದೇಶದ ಹಲವಾರು ವಿಜ್ಞಾನಿಗಳು ತಿಳಿಸುವ ಅಭಿಪ್ರಾಯದಂತೆ ಸರ್ಕಾರದ ಶಿಕ್ಷಣ ನೀತಿಯನ್ನು ಹಾಗೂ ಪಠ್ಯಕ್ರಮಗಳ ರಚನೆಯಲ್ಲಿ ಕಾಲಕಾಲಕ್ಕೆ ಬದಲಾವಣೆಗಳನ್ನು ತರಬೇಕು. 

ಭಾರತದಲ್ಲಿ ಬಹು ಸಂಖ್ಯಾ ಬಡವರ ಏಳಿಗೆಗೆ ಮತ್ತು ದೇಶದ ಅಭಿವೃದ್ದಿಗೆ ಯಾವ ರೀತಿಯಲ್ಲಿ ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬಹುದು ಎಂಬ ವಿಚಾರಣೆಯನ್ನು ಮಕ್ಕಳ ಮುಂದೆ ಚರ್ಚಿಸಬೇಕು. ನಮ್ಮ ಶಿಕ್ಷಕರ ಜೊತೆ ವಿಜ್ಞಾನಿಗಳು ಕೈಗೂಡಿಸಿ ಕೆಲಸಮಾಡುವಂತ ವಾತವರಣ ನಿರ್ಮಿಸಬೇಕಾಗುತ್ತದೆ. ಇದರಿಂದ  ದೇಶದ ಏಳಿಗೆ ಸಾಧ್ಯತೆಯೊಂದಿಗೆ ವಿಜ್ಞಾನ ಭವಿಷ್ಯದಲ್ಲಿ ಮುಂದುವರಿಯುತ್ತ ಬರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಕೆಲಸ ನೆಡೆಯುತ್ತಿದೆ. ನೊಬೆಲ್ ಪ್ರಶಸ್ತಿ ಪಡೆದಂತ ವಿಜ್ಞಾನಿಗಳು ಅಲ್ಲಿನ ಶಾಲೆಗಳಿಗೆ ಹೋಗಿ ಬೆರೆತು ವಿಜ್ಞಾನ ವಿಷಯಗಳನ್ನು ಮನದಟ್ಟಾಗುವ ರೀತಿಯಲ್ಲಿ ತಿಳಿಸುತ್ತಾರೆ. ಇದರ ಜೊತೆಗೆ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ತಮ್ಮ ಸಂಶೋಧನೆಯ ಬಗ್ಗೆ ತಿಳಿ ಹೇಳುತ್ತಾರೆ. ಮಕ್ಕಳ ಪ್ರಶ್ನೆಗಳಿಗೆ ಸರಳವಾಗಿ ಹಾಗು ಅವರಿಗೆ ಇಷ್ಟವಾಗೊ ರೀತಿಯಲ್ಲಿ  ವಿಜ್ಞಾನಿಗಳು ಉತ್ತರಿಸುತ್ತಾರೆ. ಈಗಾಗಿ ಆ ದೇಶಗಳಲ್ಲಿ ವಿಜ್ಞಾನ ಆಕಾಶದೆತ್ತರಕ್ಕೆ ಬೆಳೆಯುತ್ತಿದೆ.

ಅಮೇರಿಕನ್ ಅಕಾಡಮಿ ಆಫ್ ಸೈನ್ಸ್ ತನ್ನ ಶೇಕಡ ೫೦ಕ್ಕಿಂತಲೂ ಹೆಚ್ಚು ಚರ್ಚೆಗಳನ್ನು ಅಲ್ಲಿನ ಶಾಲಾ ವಿಜ್ಞಾನವನ್ನು ಹೇಗೆ ಉತ್ತಮಪಡಿಸಬಹುದು ಎಂಬ ನಿಟ್ಟಿನಲ್ಲಿ ಚರ್ಚಿಸುತ್ತದೆ. ನಮ್ಮ ಇಂಡಿಯನ್ ಅಕಾಡಮಿ ಆಫ್ ಸೈನ್ಸ್‌ನಲ್ಲಿ ಈ ರೀತಿ ಚರ್ಚೆಗಳು ನೆಡೆಯುವುದು ಬಹಳ ಕಡಿಮೆ. ನಮ್ಮ ವೃತ್ತಿ ನಿರತ ವಿಜ್ಞಾನಿಗಳು ಹಾಗೂ ಪ್ರೊಪೆಸರ್‌ಗಳು ಈ ವಿಚಾರದ ಬಗ್ಗೆ ಹೆಚ್ಚಿನ ಗಮನಹರಿಸುವಲ್ಲಿ ಮುಂದಾಗಬೇಕು. ನಮ್ಮ ವಿಜ್ಞಾನಿಗಳ ಪ್ರಮುಖ ದೌರ್ಬಲ್ಯವೆನೆಂದರೆ ವಿಜ್ಞಾನವನ್ನು ಸಾಮಾನ್ಯ ಜನತೆಗೆ ಅರ್ಥವಾಗುವಹಾಗೆ ಸಂವಹನ ಮಾಡುವುದು. ವಿಜ್ಞಾನ ಕಬ್ಬಿಣದ ಕಡಲೆಯಾಗಬಾರದು, ಒಬ್ಬ ಹತ್ತನೆ ತರಗತಿಯ ವಿದ್ಯಾರ್ಥಿಗೂ ಸಹ ಅರ್ಥವಾಗುವ ರೀತಿಯಲ್ಲಿ ಇತ್ತಿಚಿನ ವೈಜ್ಞಾನಿಕ ಪ್ರಚಲಿತ ವಿದ್ಯಮಾನಗಳು ಸರಳವಾಗಿ ಸಂವಹನವಾಗಬೇಕು. ವಿಜ್ಞಾನವನ್ನು ಪ್ರತಿಸಾಮಾನ್ಯನಿಗೂ ತಲುಪಿಸುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳು ಪ್ರಮುಖ ಪಾತ್ರವಹಿಸುತ್ತವೆ. ವಿಜ್ಞಾನ ವಿಷಯವನ್ನು ಸಂವಹನ ಮಾಡುವಲ್ಲಿ ನಮ್ಮ ವಿಜ್ಞಾನಿಗಳು, ಪ್ರೊಪೆಸರ್‌ಗಳು ಮತ್ತು ಸಂಶೋಧನ ವಿದ್ಯಾರ್ಥಿಗಳು ನಿಪುಣರಾಗಬೇಕು ಅದನ್ನೆ ವೃತ್ತಿಯಾಗಿಸಿಕೊಂಡ ಮನಃಶಾಸ್ತ್ರಜ್ಞರ ಅಥವಾ ಮಾದ್ಯಮದವರ ಜೊತೆ ಕೆಲಸಮಾಡುವುದು ಅಗತ್ಯ.

ಇಂದಿನ ಜಾಗತಿಕರಣದ  ಪ್ರಭಾವದಿಂದ ಪಧವಿಧರರಾದ ಯುವ ಪೀಳಗೆ ತನ್ನ ವೃತ್ತಿ ಬದುಕನ್ನು ಹಣಗಳಿಸುವ ನಿಟ್ಟಿನಲ್ಲಿ ಆಯ್ಕೆ ಮಾಡುಕೊಳ್ಳುತ್ತಿದ್ದಾರೆ. ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸಮಾಡಬಯಸುವರ ಸಂಖ್ಯೆ ದಿನೆ ದಿನೆ ಕ್ಷಿಣಿಸುತ್ತಿದೆ. ಉದಾಹರಣೆಗೆ ಬೆಂಗಳೂರೆಂಬ ನಗರವನ್ನು ತೆಗೆದುಕೊಂಡರೆ ಅಲ್ಲಿನ ಯುವ ಪೀಳಿಗೆ ಐ.ಟಿ ಜಗತ್ತಿಗೆ ಮಾರು ಹೋಗಿದ್ದಾರೆ. ಅಲ್ಲಿರುವ ವೈಜ್ಞಾನಿಕ ಸಂಸ್ಥೆ ಮತ್ತು ಪ್ರಯೋಗಾಲಯಗಳ ಕಡೆ ಗಮನಹರಿಸುತ್ತಿಲ್ಲ. ಐ.ಟಿ ಕಂಪನಿಗಳು ನೀಡುವ ಆರು ಅಂಕಿ ಮತ್ತು ಏಳು ಅಂಕಿ ಸಂಬಳಕ್ಕೆ ಹಾತೂರೆಯುತ್ತಿದ್ದಾರೆಯೆ ಹೊರತು ವೈಜ್ಞಾನಿಕ ಕ್ಷೇತ್ರದ ಉನ್ನತಿಕರಣದತ್ತ ಮುಖಮಾಡುತ್ತಿಲ್ಲ. ಜನರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗುವ ಫಲ ಬೇಕು ಆದರೆ ವಿಜ್ಞಾನ ವಿಷಯದ ಬಗ್ಗೆ ತುಡಿತ ಮತ್ತು ಅರಿವು ಯಾರಿಗೂ ಬೇಕಾಗಿಲ್ಲ ಅನ್ನುವ ಹಾಗಿದೆ. ಮೂಲ ವಿಜ್ಞಾನದ ಕಡೆ ಸಂಶೋಧನೆ ಮಾಡುವ ಆಸಕ್ತಿ ತುಂಬಾ ಕಡಿಮೆಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಮತ್ತಷ್ಟು ವೈಜ್ಞಾನಿಕ ಚಿಂತನೆಗಳ ಅಗತ್ಯವಿದೆ.

ಜ್ಞಾನವನ್ನು ಎಲ್ಲರಿಗೂ ಕೂಡಬೇಕು, ವಿಜ್ಞಾನ ಸೃಷ್ಠಿಯಾಗುತ್ತಿರುವುದು, ಸ್ಪ್ಯಾನಿಷ್, ಇಂಗ್ಲೀಷ್, ಪ್ರೆಂಚ್ ಮತ್ತು ಜಪಾನ್ ಹಾಗೂ ಇನ್ನಿತರೆ ಪಾಶ್ಚಿಮಾತ್ಯ ಭಾಷೆಗಳಲ್ಲಿ ಮಾತ್ರ. ಇದನ್ನು ಅರ್ಥಮಾಡಿಕೂಳ್ಳಲು ಇಂಗ್ಲೀಷ್ ಬೇಕೆ ಬೇಕು. ಇದನ್ನು ಮನ ಮುಟ್ಟುವ ಹಾಗೆ ವಿವರಿಸಲು ಮಾತೃಭಾಷೆ ಬೇಕು. ಮಾತೃಭಾಷೆಯಲ್ಲಿ ವೈಜ್ಞಾನಿಕ ಬರವಣಿಗೆ ಬರೆಯುವ ಲೇಖಕರು ಸಂಖ್ಯೆ ಸಮಗ್ರವಾಗಿ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ವಿಜ್ಞಾನದ ಪ್ರಭಾವ ಜಾಸ್ತಿ ಹಾಗುತ್ತಹೊದಂತೆಲ್ಲ ಅದನ್ನು ಮಾತೃಭಾಷೆಯಲ್ಲಿ ಹೇಳುವವರ ಸಂಖ್ಯೆಯು ಕಡಿಮೆಯಾಗುತ್ತ ಬರುತ್ತಿದೆ. ಸಿನಿಮಾ ಮತ್ತು ಕ್ರೀಡೆಯಲ್ಲಿ ಈಗ ಏನು ನಡೆಯುತ್ತಿದೆ ಎಂಬುದನ್ನು ರೋಚಕವಾಗಿ ಮಾದ್ಯಮ ತಿಳಿಸುತ್ತಿದೆ. ಆದರೆ ವಿಜ್ಞಾನ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಸುವಲ್ಲಿ ಕಷ್ಟ ಸಾದ್ಯವಾಗಿದೆ.

ಈ ಮೇಲಿನ ಎಲ್ಲ್ಲಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಸಮಾಜದ ನೈತಿಕ ಪ್ರೋತ್ಸಹಗಳು ಬಹುಮುಖ್ಯ ಪಾತ್ರವಹಿಸುತ್ತವೆ.  ಈ ಮೇಲಿನ ಎಲ್ಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ್ದಲ್ಲಿ ಮುಂದೊಂದು ದಿನ ಭಾರತದಲ್ಲಿ ಜಾಗತಿಕ ಮಟ್ಟದ ವಿಜ್ಞಾನಿಗಳನ್ನು ಹುಟ್ಟುಹಾಕುವ ಪ್ರಯತ್ನದಲ್ಲಿ ಯಾವುದೇ ಅಡೆ ತಡೆ ಬರುವುದಿಲ್ಲ. 

ಭಾರತದ ಮುಂಚೂಣಿ ವಿಜ್ಞಾನಿಗಳಾದಂತಹ ಜೆ.ಸಿ ಬೋಸ್, ಎಸ್.ಎನ್ ಬೋಷ್, ಮೇಗನಾಥ ಷಾಹ, ಸರ್.ಸಿ.ವಿ ರಾಮನ್, ಅಬ್ದುಲ್ ಕಲಾಂ ಮತ್ತು ಸಿ. ಎನ್. ಆರ್. ರಾವ್ ಇವರು ಜಾಗತಿಕ ಮಟ್ಟದಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಕೂಟ್ಟ ಕೂಡುಗೆ ಅಪಾರ. ಇವರು ನಮ್ಮ ಯುವ ಪೀಳಿಗೆಗೆ ಆದರ್ಶ ಪ್ರಾಯವಾಗಲಿ.

-ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ್ 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
sajjan
sajjan
10 years ago

ಒಲ್ಲೆಯ ಬರಹ

amith
amith
10 years ago

Hi Prasanna,

Good one you have mentioned. Yes we need to improve the interests of childrens for scientific education.

All the best for your future artcles.

Regards

Amith MG

prasanna
prasanna
10 years ago
Reply to  amith

thanks Amit

v c chandra shekara
v c chandra shekara
10 years ago

Very good and Thanks Prasanna.

Lokeshgouda
10 years ago

ಮೆಚ್ಚುಗೆಯ ಬರವಣಿಗೆ

 

5
0
Would love your thoughts, please comment.x
()
x