ಲೇಖನ

ಭರತ ಮಾತೆಯ ಪುಣ್ಯ ಭೂಮಿಯನ್ನು ರಕ್ತದಿಂದ ತೋಯಿಸದಿರಿ ಸಹೋದರರೆ: ಸಿದ್ದುಯಾದವ್ ಚಿರಿಬಿ…

sidduyadav

ನಿನ್ನೆ ಒಂದು ಕೆಲಸದ ವಿಷಯವಾಗಿ ಕೂಡ್ಲಿಗಿಯ ಸಾರ್ವಜನಿಕ ಅಸ್ಪತ್ರೆಗೆ ಹೋಗಿದ್ದೆ. ನಾನು ಹೋದಾಗ ಡಾಕ್ಟರ್ ಬಂದಿರಲಿಲ್ಲ. ಅದಕ್ಕಾಗಿ ಅಸ್ಪತ್ರೆಯ ಹೊರಗಡೆ ಕುಳಿಯು ಕಾಯ್ತಿದ್ದೆ. ಒಬ್ಬ ವ್ಯೆಕ್ತಿ ಬಂದು "ನೀವು ಸಿದ್ದುಯಾದವ್ ಅಲ್ವಾ?" ಅಂದ. 'ಹೌದು' ಎಂದೆ. ಅವ್ನು ಮರುಮಾತನಾಡದೆ ಯಾರ್ಗೊ ಪೋನ್ ಮಾಡ್ತ ಹೊರಟರಹೋದ. ಸ್ವಲ್ಪ ಸಮಯದ ನಂತರ ಇಬ್ಬರು ಬೈಕ್ ಮೆಲೆ ಬಂದು " ಸಿದ್ದುಯಾದವ್ " ಅಂದ್ರು ಹೌದು ಎಂದೆ. 'ನಿಮ್ಮ ಹತ್ತಿರ ಸ್ವಲ್ಪ ಮಾತಾಡ್ಬೆಕು ಬರ್ತಿರಾ!' ಅಂದ್ರು. ಯಾಕೆ ಎಂದೆ. ಪ್ಲೀಜ್ ಬನ್ನಿ ಅಂದ್ರು. ನಂಗೆ ಆಗ್ಲೆ ಭಯ ಶುರು ಅಯ್ತು. ಮನಸಲ್ಲಿ ಏನೋ ಅನುಮಾನ. ಯಾರ ಬಗ್ಗೇನು ನಾನು ಇತ್ತೀಚೆಗೆ ಬರೆದಿಲ್ಲ. ಲವ್, ಹುಡಿಗಿಯರಿಂದ ದೂರನೆ ಇದ್ದಿನಿ ಯಾಕಪ್ಪ ಅಂತ ಭಯ ಅಯ್ತು. ಭಯದಲ್ಲೆ ಎದ್ದು ಹೋದೆ. ಯಾವ್ದೊ ಒಂದು ಹೋಟಲ್ಗೆ ಕರ್ಕೊಂಡೊದ್ರು. ನಂಗೆ ಭಯ, ಏನಪ್ಪ ಯಾರೂ ಅಂತನೆ ಗೊತ್ತಿಲ್ಲ ಏನ್ ಕಾದಿದೆಯೋ ಅನ್ಕೊಂಡೆ. ಅಲ್ಲಿ ಕುಳಿತು ಟಿಫನ್ ಮಾಡಿ ಅದ್ರು ನಾನು ಬೇಡ ಅಂದೆ. 'ನಿಮ್ಮ ಬಗ್ಗೆ ನಾನು ಕೇಳಲ್ಪಟ್ಟಿದ್ದೀನಿ ನಾನು ಹಿಂದೂ ಜಾಗರಣ ವೇದಿಕೆಯ ತಾಲ್ಲೂಕು ಅಧ್ಯಕ್ಷ' ಅಂತ ಪರಿಚಯಿಸಿಕೊಂಡ್ರು. 

ನಂಗೆ ಇನ್ನು ಭಯ ಜಾಸ್ತಿ ಅಯ್ತು ನಾನು ಯಾವ ಹುಡಿಗಿಯರ ಸಹವಾಸಕ್ಕೂ ಹೋಗಿಲ್ಲ ಇವ್ರು ಯಾಕೆ ನನ್ನ ಕರ್ಕೊಂಡು ಬಂದಿದ್ದಾರೆ ಅಂನ್ಕೊಳ್ತಿದ್ದೆ. ಅಗ್ಲೆ ಬೋಧನೆ ಆರಂಭಿಸಿದ್ರು. ಹಿಂದೂ ಧರ್ಮ, ಧರ್ಮದ ಮೇಲೆ ಮುಸ್ಲಿಂ ದಾಳಿ, ಭಯೋತ್ಪಾದನೆ, ಲವ್ ಜಿಹಾದ್, ಮಂಗಳೂರಿನಲ್ಲಾದ ಗಲಭೆ, ಗೋ ಮಾಂಸ ಸೇವನೆ, ಮತ್ತು ಸಾಗಾಣಿಕೆ, ಈಗೆ ಅನೇಕ ವಿಷಯಗಳ ಬಗ್ಗೆ ಮಾತಾಡ್ರು. ಒಂದು ತರಹದಲ್ಲಿ ಬ್ರೈನ್ ವಾಷ್ ಮಾಡ್ತಿದ್ರು. ನಂಗೆ ಒಮ್ಮೆ ಅರ್.ಎಸ್.ಎಸ್. ಸಂಘಟನೆಯವರು ಒಂದು ಸಾರಿ ಭಾರಂತಾಂಭೆಯ  ಪೂಜೆ ಇದೆ ಬನ್ನಿ ಎಂದು ಯಾಮಾರಿಸಿ ಕರ್ಕೊಂಡೊಗಿ ಈಗೆ ಬ್ರೈನ್ ವಾಷ್ ಮಾಡಲು ಪ್ರಯತ್ನಿಸಿ ಮುಖಭಂಗಕ್ಕೆ ಒಳಗಾಗಿದ್ದರು. ಅದ್ರೆ ಅವ್ರು ಹೇಳಿದ್ದನ್ನು ಸಮಾಧಾನದಿಂದ ಕೇಳಿದೆ. ಕೊನೆಗೆ ನಮ್ಮ ಸಂಘದ  ಸದಸ್ಯರಾಗಿ ನಿಮ್ಮ ಅವಶ್ಯಕತೆ ನಮ್ಗೆ ಇದೆ, ನಂಗೆ ಒಳ್ಗೊಳಗೆ ನಗು ಬಟ್ ನಂಗೆ ಯಾವ ಸಂಘಟನೆಗಳ ಮೇಲೆ ನಂಬಿಕೆ ಇಲ್ಲ. ಇಂತಹ ಸಂಘಟನೆಗಳಿಂದ ಶಾಂತಿ ಪ್ರಿಯ ಭಾರತವನ್ನು ಕಟ್ಟಲಾಗದು. ಕನ್ನಡ ರಕ್ಷಣಾ ವೇದಿಕೆಯೊಂದೆ ಇಷ್ಟವಾದ ಸಂಘಟನೆ ಅದ್ರೂ ಸದಸ್ಯನಾಗಿಲ್ಲ. ನಮ್ಮ ಊರಲ್ಲಿ ಅನೇಕ ಸಂಘಟನೆಗಳಿವೆ ಯಾವ ಸಂಘಗಳಲ್ಲು ನಾನು ಕಾಣಿಸಿಕೊಂಡವನಲ್ಲ. ಈ ಸಂಘಟನೆಗೂ ನಾನೂ ಹೋಗೊನಲ್ಲ ಹಾಗಂತ ನಂಗೆ ಯಾವ ಸಂಘಟನೆಯ ಮೇಲು ದ್ವೇಷ ಇಲ್ಲ. ನಾಳೆ ನಿಮ್ಗೆ ಕಾಲ್ ಮಾಡ್ತಿನಿ ಅಂತ ಹೇಳಿ ಹೊರಗೆ ಬಂದೆ ಮತ್ತೆ ಹಿಂಬಾಲಿಸಿಕೊಂಡು ಬಂದು ನನ್ನ ನಂಬರ್ ತಗೊಂಡು ಹೋದ್ರು. ಹಾಗೆ ಯಶವಂತನಗರದ ಕಡೆ  ಪಯಣ ಬೆಳಸಿದೆ.

ನಂಗೆ ಲವ್ ಜಿಹಾದ್ ಮೇಲೆ ದ್ವೇಷ ಇದೆ ಆದರೆ ಅಂತರ್ ಧರ್ಮದ ಸ್ವಚ್ಛ ಪ್ರೇಮಕ್ಕೆ ಯಾವುದೆ ತಕರಾರಿಲ್ಲ. ಭಯೋತ್ಪಾದನೆ ನಮ್ಮ ದೇಶವನ್ನು ಕಾಡುತ್ತಿರುಮ ಮಹಾ ಪಾಪಿ, ಕ್ರೂರ ಕೃತ್ಯ. ಇದು ಇವತ್ತಿನದಲ್ಲ ನಮ್ಮ ದೇಶದ ಮೇಲೆ ಮುಸ್ಲಿಮ್ ದಾಳಿ ಆರಂಭದಿಂದಲು ಕಾಡುತ್ತಿದೆ. ಮಹಮದ್ ಘಜ್ನಿಯಿಂದ ಔರಂಗಜೇಬ್ ನ ವರೆಗೆ ಇನ್ನೊಂದು ಕಡೆ ಕ್ರಿಶ್ಚಿಯನ್ ದಾಳಿ, ಬ್ರೀಟಿಷರ ಆಗಮನ ಸ್ವತಂತ್ರ ಭಾರತದ ಜೋತೆ ಜೋತೆಗೆ ಮುಸ್ಲಿಮ್ ಲೀಗ್ ನ ಕುತಂತ್ರದಿಂದ ಭಾರತವನ್ನು ಹಿಬ್ಬಾಗ ಮಾಡಿದರು ಭಯೋತ್ಪಾದನೆಯ ಪಿಡುಗು ನಮ್ಮನ್ನ ಕಾಡತ್ತಲೆ ಇದೆ. ಅತ್ತ ಪಾಕಿಸ್ತಾನ ಇತ್ತ ಚೀನಾ. ಸ್ವಾಮಿ ವಿವೇಕಾನಂದರು ಒಂದು ಮಾತನ್ನ ಹೇಳಿದ್ದಾರೆ "ಹರಿಯುವ ನದಿಯ ವೇಗವನ್ನ ತಿಳಿಯಬೇಕೆಂದರೆ ಬಂಡೆ, ಕಲ್ಲುಗಳು ಅಡ್ಡವಿರಬೇಕು" ಎಂದು. ಜಗದ್ಗುರು ಭಾರತದ ವೇಗವನ್ನರಿಯಲು ಇಂತವರು ಇರಬೇಕು ಅನಿಸುತ್ತದೆ. ಭಯೋತ್ಪಾದನೆ ನಿರ್ಮೂಲನೆಯ ಕಠಿಣ ನಿರ್ಧಾರಕ್ಕೆ ಮತ್ತು ಭಾರತದ ಈ ನಿಲುವಿಗೆ ಅಲವು ದೇಶಗಳು ಕೈ ಜೋಡಿಸಿರುವುದು ಸಂತಸದ ಸಂಗತಿ. ನಮ್ಮ ದೇಶದ ಮುಸ್ಲಿಮರು ಕೆಟ್ಟವರೆ ಆದರೆ ಎಲ್ಲಾ ಮುಸ್ಲಿಂರು ಕೆಟ್ಟವರಲ್ಲ. ಸಂಡೂರಿನ ಬಳಿ ಇರುವ ಯಶವಂತ ನಗರದಲ್ಲಿ ೫೦% ಮುಸ್ಲಿಂಮರೆ ಇದ್ದಾರೆ ಇವತ್ತು ರಾತ್ರಿ ಒಂದು ಹಬ್ಬ ಆಚರಿಸುತ್ತಾರೆ ಮುಸ್ಲಿಮ್ ಯಾರು ಹಿಂದೂ ಯಾರೊ ಗೊತ್ತೆ ಹಾಗೊದಿಲ್ಲ ಹಾಗಿ ಹಿಂದೂ ಮುಸ್ಲಿಮ್ ರ ಭಾವೈಕ್ಯತೆ ಇದೆ. ಇದು ಎಲ್ಲಾ ಕಡೆ ಇರುತ್ತೆ ಆದರೆ ಹಿಂದೂ ಪರ ಮತ್ತುಸ ಮುಸ್ಲಿಮ್ ಪರ ಸಂಘಟನೆಗಳೆ ಗಲಭೆಗೆ ಕಾರಣವಾಗಿಬಿಡುತ್ತವೆ. ಇಂತಹ ಸಂಘಟನೆಗಳಲ್ಲಿ ಯುವ ಸಮುದಾಯವನ್ನೆ ದಾಳವನ್ನಾಗಿಸಿಕೊಂಡು ಅವರಲ್ಲಿ ದ್ವೇಷದ ಬೀಜ ಬಿತ್ತಿ ರಕ್ತಸಿಕ್ತ ಇತಿಹಾಸಕ್ಕೆ ನಾಂದಿ ಹಾಡಿಬಿಡುತ್ತಾರೆ. ಕೊನೆಗೆ ಬಲಿಯಾಗುವವರೆ ಈ ಯುವ ಸಮುದಾಯ.

ಯುವಕರು ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ. ನಮ್ಮ ದೇಶ ಜಗತ್ತಿಗೆ ವೇದ-ಉಪನಿಷತ್ತುಗಳನ್ನು ಭೋದಿಸಿದೆ. ಮಹಾಭಾರತ ಮತ್ತು ರಾಮಾಯಣದಂತ ಎರಡು ಮಾಹಾನ್ ಗ್ರಂಥಗಳನ್ನ ಕೊಡುಗೆಯಾಗಿ ನೀಡಿದೆ. ಇಂತಹ ದೇಶದ ಪ್ರಜೆಗಳಾದ ನಾವೇ ತಪ್ಪು ದಾರಿಯನ್ನು ತುಳಿದರೆ ಹೇಗೆ? ಮನುಷ್ಯನ ಜೀವನ ಯಾಗೆ ಇರಬೇಕು ಎಂಬುದನ್ನು ಸ್ಪಷ್ಟ ಮತ್ತು ನೀಕರವಾಗಿ ಹೇಳಿವೆ. ಹಿರಿಯರ ಹಾಕಿಕೊಟ್ಟ ಮಾರ್ಗದ ದಾರಿಯಲ್ಲಿ ಸ್ನೇಹ ಸಹ ಬಾಳ್ವೆಯ ಮೂಲಕ ನಡೆಯುವದನ್ನು ಬಿಟ್ಟು ಇಂತಹ ಸಂಘಟನೆಗಳ ಹಿಂದೆ ಬಿದ್ದು ಭಾರತ ಮಾತೆಯ ಪುಣ್ಯಭೂಮಿಯನ್ನು ರಕ್ತದಿಂದ ತೋಯಿಸದಿರಿ ಸಹೋದರರೆ…
-ಸಿದ್ದುಯಾದವ್ ಚಿರಿಬಿ…


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *