ಬ್ಲಾಕ್ ಎಂಡ್ ಲೈಪ್ ಕಲರ್ ಫುಲ್ ಕನಸು ಕಾಣುತ್ತದೆ: ಅಜ್ಜೀಮನೆ ಗಣೇಶ

“Holi is the day to express love with colors. It is a time to show affection. All the colors that are on you are of love!”

ಬಣ್ಣಗಳಲ್ಲೂ ಒಲವಿನ ಒಲುಮೆಯನ್ನೆ ಕಾಣುತ್ತಾನೆ ಕ್ರೇಜಿ ಗುರು ಓಶೋ… ಹೋಳಿ ಬಗ್ಗೆ ಏನಾದ್ರು ಬರೆಯಿರಿ, ಅಂತ ಪಂಜುವಿನ ನಟರಾಜು ಕೇಳಿದಾಗ ನನಗೆ ಮೊದಲು ನೆನಪಾಗಿದ್ದು ಸಹ ಮತ್ತದೆ ..ಓಶೋ..ಕಾರಣ ಸಿಂಪಲ್.. ಕೈಲಿರೋ ಹಿಡಿ ಬಣ್ಣವನ್ನು ಎದುರಿದ್ದವರ ಮುಖಕ್ಕೆ ಎರಚಿ, ಅವರ ನಗುವನ್ನು ಕೆರಳಿಸುವ ಉನ್ಮತ್ತವಲ್ಲದ ನಶೆ ಸಿಗೋದು ಹೋಳಿಯಲ್ಲಿ ಮಾತ್ರ. ಆ ಫೀಲ್ ಹೀಗೀಗೆ ಇದೆ ಅಂತ ಹೇಳೋದಕ್ಕೆ ಹೋದ್ರೆ ಹೇಳುವುದಷ್ಟು ಕೂಡ ಹಾಳಾಗಿಹೋಗುತ್ತದೆ.. ಏಕೆಂದ್ರೆ ಬಣ್ಣದೆರುಚುವಿಕೆಯಲ್ಲಿನ ಆನಂದ, ನಾಲಿಗೆಗೆ ತಾಕಿದ ಒಡೆದ ತೆಂಗಿನಕಾಯಿಯಲ್ಲುಳಿದ ಸಿಹಿ ನೀರಿನ ಕೊನೆ ಗುಟುಕಿದ್ದಂತೆ. ಅತ್ತ ಅನುಭವಕ್ಕೂ ದಕ್ಕದು. ಇತ್ತ ಮತ್ತೆ ಬೇಕೆನಿಸಿದ್ರೂ ಸಿಕ್ಕದು..ನೆನಪಿಗಷ್ಟೆ ತಾಕುವ ಬಣ್ಣಗಳ ಈ ಸ್ಪರ್ಶವನ್ನು ಚೂರು ಬಿಡದಂತೆ ಅನುಭವಿಸಿದವನು ಓಶೋ..ಪ್ರತಿಯೊಂದಕ್ಕೂ ತನ್ನದೇ ವಿಶ್ಲೇಷಣೆ ಕೊಟ್ಟು ಹೀಗಿದ್ರೆ ಈ ಪರಪಂಚ ಹಿಂಗಾಗುತ್ತೆ ಅಂತ ಢೆಪನೇಶನ್ ಕೊಟ್ಟ ಆ ಪೊಲೀಗುರುವಿನ ಮಾತು ಕೇಳ್ತ ಹೋದ್ರೆ.. ಬ್ಲಾಕ್ ಎಂಡ್ ವೈಟ್ ಲೈಪು, ಕಲರ್ ಫುಲ್ ಕನಸ್ಸು ಕಾಣೋದಕ್ಕೆ ಶುರುಮಾಡುತ್ತದೆ.. ಅದಿಲ್ಲಿ ಬೇಡ ಬಿಡಿ.. ಸದ್ಯಕ್ಕೆ ಹೋಳಿಯ ಹೇಳಿಕಯಷ್ಟನ್ನೇ ತಗೆದುಕೊಳ್ಳೋಣ..

ಹೋಳಿಯನ್ನ ಸಂತುಷ್ಟಿಗಾಗಿ ಆಡಿ..ಬಣ್ಣವೆರಚಿ ಮನ್ಸಸ್ಶಾಂತಿ ಕಂಡ್ಕೊಳ್ಳಿ ಅಂತಾನೆ ಓಶೋ…ಆದ್ರೆ ಇಡೀ ವರ್ಷದಲ್ಲಿ ಸಿಗೋ ಒಂದೇ ಒಂದು ಬಣ್ಣದ ಹಬ್ಬವನ್ನ ದಿನಪೂರ್ತಿ ನಾವು ಆಚರಿಸ್ತೀವಾ..?…ಕನಿಷ್ಟ ಬಣ್ಣದ ಸಂಭ್ರಮದಲ್ಲಾದ್ರೂ ನಮ್ಮೊಳಗಿನ ಇಗೋಗಳನ್ನ ಬಿಟ್ಟಾಡುತ್ತೇವಾ..? ಹೋಗ್ಲಿ ಜಂಜಾಟಗಳನ್ನು ಬದಿಗಿಟ್ಟು ತೀರಾ ಮಕ್ಕಳಂತೆ ಕುಣಿದಾಡಿದ್ದೇವಾ..? ಇಷ್ಟೆಲ್ಲಾ ಯಾಕೆ..ಹೋಳಿ ಆಡುವುದಾದ್ರೂ ಏನಕ್ಕೆ ಅನ್ನೋ ಪ್ರಶ್ನೆ ಯಾರಾದ್ರೂ ಕೇಳಿದ್ರೆ, ಉತ್ತರಿಸೋಕೆ ಒಂದ್ ಕ್ಷಣ ಯೋಚನೆ ಮಾಡ್ತೀವಿ ಅಲ್ವಾ..? ಇನ್ ಫ್ಯಾಕ್ಟ್ ,.ಬದುಕಿನಲ್ಲಿ ಒಮ್ಮೆಯಾದ್ರೂ ಎಲ್ಲರೊಂದಿಗೆ  ಕೂಡಿ ಬೆರೆತು..ನಕ್ಕು ನಲಿದು ಸಂತೃಪ್ತಿಯನ್ನು ಪಡೆಯುತ್ತಾ ಹೋಳಿಯಾಡಿರುತ್ತೆವೆ..ಆದ್ರೆ ಆ ಸಂಭ್ರಮ ಅವತ್ತಿಗೆಷ್ಟೆ ಸೀಮಿತವಾಗಿ ಮತ್ತೆ ಮರುದಿನ ನಾವು ಅಪ್ಪಟ ನಾವಾಗಿ ಉಳಿದಿಬಿಟ್ಟಿದ್ದೇವೆ,. ಬಣ್ಣದ ಹೋಳಿ ನಮ್ಮೊಡಲಿನ ಇಗೋವನ್ನು ಬದಲಾಯಿಸಲು ಎಂದಿಗೂ ಅವಕಾಶವನ್ನೇ ಕೊಡಲಿಲ್ಲ..ಹೀಗಿರುವ ಸ್ಥಿತಿಯಲ್ಲಿ  ಹೋಳಿ ಹಬ್ಬವನ್ನ ಆಚರಿಸಿ, ಬಣ್ನಗಳಲ್ಲಿ ಆಡಿದ್ರೂ ಏನು ಸಾಧಿಸಿದಂತಾಯ್ತು..?

ನಿಜಕ್ಕೂ..ಕಾಮದ ಹುಣ್ಣಿಮೆಯ ಬಣ್ಣ ರುಚಿ ಹಾಗೂ ಶಕ್ತಿಯನ್ನು ಪಡೆಯೋದು ಮಕ್ಕಳು ಮಾತ್ರ. ಯಾರೇ, ಏನೇ  ಅಂದ್ರೂ ಸರಿ, ಮನೆಯವರೇ ಬಡಿದ್ರೂ ಸರಿ.. ಕೈಯಲ್ಲೊಂದಿಷ್ಟು ಕಲರ್ ಸಿಕ್ಕಬಿಟ್ಟರೆ ಸಾಕು..ಅವರದ್ದೇ ಒಂದು ಲೋಕವನ್ನು ಸೃಷ್ಟಿಸುತ್ತಾರೆ ಮಕ್ಕಳು…ಸಿಕ್ಕವರನ್ನೇ ಗೆಳೆಯರನ್ನಾಗಿಸ್ಕೊಳ್ತಾರೆ..ಅಳ್ತಾರೆ…ನಗ್ತಾರೆ..ಯಾರು ಸಿಗಲಿಲ್ಲ ಅಂತ ನೊಂದ್ಕೊಳ್ಳಲ್ಲಾ.. ತಮ್ಮಷ್ಟಕ್ಕೆ ತಾವೇ ಬಣ್ಣ ಹಚ್ಚಕೊಂಡು ಕುಣಿತ್ತಾರೆ.. ಜಗತ್ತಿನ ಯಾವ ಕಟ್ಟುಪಾಡುಗಳು ಆ ಮಕ್ಕಳನ್ನ ಏನೂ ಮಾಡೋದಕ್ಕಾಗಲ್ಲ.. ಬೆಳಿತಾ ಬೆಳಿತಾ ನಮಗೆ ನಾವೇ ಪ್ರಬುದ್ಧರಾಗಿದ್ದೇವೆ ಅಂತಾ ಸರ್ಟಿಫಿಕೆಟ್ ಕೊಟ್ಕೊಂಡು ಬಿಟ್ಟಿರೋ ನಾವು ಆ ಮಕ್ಕಳ ಕಾಲಡಿಯಲ್ಲಿ ಒಂದ್ ಸಲ ನುಸಳಬೇಕು.. ಆಗಲಾಗದ್ರೂ ಮಕ್ಕಳ ಬಣ್ಣದಾಟವನ್ನು ನೊಡ್ತಾ ನಿಂತಿರೋ ಬದಲು ಅವುಗಳ ಜೊತೆ ನಾವು ಮಕ್ಕಳಾಗ್ತಿವೋ ಏನೋ..?
ನಮ್ಮಂಥವರಿಗೆ ಒಂಥರಾ ಬಿಗುಮಾನ ಇರುತ್ತೆ….ಅದರಿಂದಲೇ ಯಾರಾದ್ರೂ ಬಣ್ಣ ಹಾಕ್ತೀನಿ ಅಂತಂದ್ರೆ ಬೇಡ ಪ್ಲೀಸ್ ಅಂದ್ ಬಿಡ್ತೀವಿ.. ನಾಗರಿಕತೆಯ ಸಂತಾನಾವಾದ್ರೂ ಮನಸ್ಸು ಮಾತ್ರ ಥೇಟು ಮಂಗನಂತದ್ದೇ ಅಲ್ವಾ.. ನೋಡಿ ಬೇಕಾದ್ರೆ ಬಾಯಲ್ಲಿ ಬಣ್ಣ ಬೇಡ ಅನ್ನೊ ಮಾತು ಹೊರಡುತ್ತಿರುವಾಗಲೇ,  ಮನಸ್ಸು,  ಹಚ್ಚೋ ಬಣ್ಣವನ್ನಾ ಅಂಥ ಎದುರಿದ್ದವನನ್ನಾ ಕೂಗ್ತಾ ಕರೆಯುತ್ತಿರುತ್ತೆ.,.ಏನ್ ಮಾಡೋದ್ರಿ ನಂಗಿದ್ರಲೆಲ್ಲಾ ಇಂಟರಸ್ಟ್ ಇಲ್ಲ..ಆದ್ರೂ ಬಲವಂಥ ಮಾಡಿ ಬಣ್ಣ ಹಚ್ಚಿದ್ರು ಇನ್ನೇನು ಮಾಡೋದು ಅಂಥ ನಾನು ಆಟವಾಡ್ತಿದ್ದೇನೆ ಅಂತ ಒನ್ ಲೈನ್ ಸಮಾಜಾಯಿಷಿಕೊಟ್ಟಾದ್ರೂ ಹೋಳಿಯಲ್ಲಿ ತೋಯ್ದಾಡಿದ್ದು ನಿಮಗೂ  ನನೆಪಿರಬಹುದು. ಇದನ್ನ ಓಶೋ ಮನಸ್ಸಿಲ್ಲಿ ಅಡಗಿಸಿಟ್ಟಕೊಂಡಿರೋ ಗಿಲ್ಟಿನೆಸ್ ಅಂತನ್ನುತ್ತಾನೆ..ಅಷ್ಟೆ ಅಲ್ಲದೇ ಗಿಲ್ಟಿನೆಸ್ ನ್ನ ಕಳೆದುಕೊಳ್ಳೋಕೆ ಕಾಮನಹಬ್ಬ ಒಂದೊಳ್ಳೆ ದಾರಿ.. ಈ ಹಬ್ಬ ತಿಂಗಳಿಗೆರಡು ಬಾರಿಯಾದ್ರೂ ನಡಯಬೇಕು ಅನ್ನೋದು ಓಶೋ ಅಭಿಪ್ರಾಯ..

ಗೊತ್ತಿಲ್ಲದ ಕಾಲದಲ್ಲಿ ತಾರಕಾಸುರ ಅನ್ನೋ ಉಗ್ರಗಾಮಿಯಿದ್ದನಂತೆ.. ವರ್ಲ್ಡ್ ನಲ್ಲಿ ಆಗ ನಡಿತಿದ್ದ  ಭಯೋತ್ಪಾದನೆಗೆ ಅವನೇ ಕಾರಣವಾಗಿದ್ದನಂತೆ.. ಅವನಿಗೆ ತನ್ನ ಸಾವಿನ ಬಗ್ಗೆ ನಮಗಿದ್ದ ಹಾಗೆ ಭಯವಿತ್ತಂತೆ. ಅದಕ್ಕೆ ಒಂದಿನ ಚಕ್ಕಳಮಕ್ಕಳ ಹಾಕ್ಕೊಂಡು ವರ್ಷಗಳಷ್ಟು ಕಾಲ ಹಾರ್ಡ್ ಕೋರ್ ತಪಸ್ಸು ಮಾಡಿ ಬಹ್ಮನನ್ನ ಒಲಿಸಿಕೊಂಡನಂತೆ. ಸಾವಿಲ್ಲದ ವರ ಬೇಡಿ ಕೊನೆಗೆ ಚೌಕಾಸಿ ನಡೆದು ಶಿವಪ್ಪನ ಏಳ್ ದಿನದ ಮಗಿನಿಂದ ಸಾವ್ ಬರಲಿ ಅಂತ ಬ್ರಹ್ಮನತ್ರ ಕೇಳ್ಕೊಂಡವನೇ ಊರೆಲೆಲ್ಲಾ  ಬಾಂಬ್ ಹಾಕೋಕೆ ಶುರುಮಾಡಿದ್ನಂತೆ. ಆ ಕಡೆ ಶಿವಪ್ಪ ಇದ್ಯಾವುದು ಗೊತ್ತಿಲ್ಲದಂತೆ ತಪಸ್ಸು ಮಾಡ್ತಿದನಂತೆ.. ಹಿಂಗಾಗಿ ಸಮಸ್ಯೆ ಸರಿಯಾದ್ ಟೈಂನಲ್ಲಿ ಬಗೆ ಹರಿಯೋಲ್ಲ ಅಂತ ಗೊತ್ತಾಗಿ ದೇವಲೋಕದಲ್ಲಿ ಇಮಿಡಿಯೇಟ್ ಮೀಟಿಂಗ್ ನಡೆದು, ಶಿವನೆಬ್ಬಿಸೋ ಕೆಲಸ ಮನ್ಮಥನಂಗೆ ವಹಿಸಲಾಯ್ತಂತೆ. ಈ ಮನ್ಮಥನೋ ದೇವತೆಗಳ ಬಣ್ಣದ ಮಾತ್ ಕೇಳಿ ಶಿವನ ಎದೆಗೆ ಹೂವಿನ ಬುಲೆಟ್ ನಿಂದ ಶೂಟ್ ಮಾಡಿದ್ದನಂತೆ..ಇವರ್ ಪಿತೂರಿ ಗೊತ್ತಿಲ್ಲದ ಮುಕ್ಕಣೇಶ್ವರ ಕಣ್ಣಂಗೆ ಮನ್ಮಥನನ್ನ ಸುಟ್ಟಬಿಟ್ಟನಂತೆ..ಕೊನೆಗೆ ಮನ್ಮಥನ ಹೆಂಡ್ತಿ ರತಿ ಬೇಡ್ಕೊಂಡಿದಕ್ಕೆ, ಮತ್ತೆ ಮನ್ಮಥನಿಗೆ ರತಿ ಜೊತೆ ಇರೋಕೆ ಅವಕಾಶ ಮಾಡ್ಕೊಟ್ಟನಂಥೆ. 

ಮುಂದೆ ಉಗ್ರ ತಾರಕಾಸುರ ಸತ್ತೋದ್ನಂತೆ. ಮನ್ಮಥನ ಸುಟ್ಟಿದ ಖುಷಿಗೆ ಹೋಳಿ ಆಟ ಶುರುವಾಯ್ತತಂತೆ.,. ಹೋಳಿಯ ಕಥೆಯೊಂಧು ಹೀಗೆ ಸಾಗುತ್ತೆ..ಇದಕ್ಕೆ ಹೊರತಾದ ಕಥೆಯೊಂದನ್ನು ಒಶೋ ಹೇಳ್ತಾನೆ…. ಹೋಳಿ ರಾಧಾಕೃಷ್ಣರ ನಡುವಿನ ಶುದ್ಧ ಪ್ರೇಮಕ್ಕೆ ಹೋಲಿಸೋ ಪೊಲೀಗುರು ಹಿಂದೆ ದರ್ಮದ ಹಿಡಿತದಲ್ಲಿ ಸಮಾಜವಿತ್ತು..ಹೀಗಾಗಿ ಸಮಾಜದ ಹಬ್ಬಗಳು ಸಹ ಧರ್ಮದೊಂದಿಗೆ ತಳಕು ಹಾಕಿಕೊಂಡಿತ್ತು ..ಅದೇ ರೀತಿ ಈ ಹೋಳಿ ಕೂಡ ತಾರಕಾಸುರನ ಕಥೆಯೊಂದಿಗೆ ಸೇರಿಕೊಂಡಿದೆ ಅಂತಾನೆ ಓಶೋ.. ಅವನ ಪ್ರಕಾರ ಹೋಳಿ ಅಂದ್ರೆ ಯಾವ ಅಡೆತಡೆಗಳಿಲ್ಲದೇ ಬಣ್ಣಗಳೆನ್ನು ಎರೆಚುವುದು ಆ ಮೂಲಕ ಸ್ವಚ್ಚಗೊಳ್ಳುವುದು. ತಮ್ಮೊಂದಿಗೆ ಬದುಕಿನ ಬಾರಗಳನ್ನೆಲ್ಲಾ ಹೊತ್ತು ಕೊಂಡೇ ಬರುವ ನಾವುಗಳು ಅದನ್ನೇಲ್ಲಾ ಬಣ್ಣದ ಹಬ್ಬದ ದಿನ ಕಾಮದಹನದ ವೇಳೆ ಸುಡಬೇಕು. ಇಗೋ ಹಾಗು ಇಸಂಗಳನ್ನ ತೊರೆದು ಶುದ್ಧ ಮನುಷ್ಯರಾಗಿ ಬಣ್ಣಗಳನ್ನ ಏರೆಚಿ ಅದರಲ್ಲಿ ಸಿಗುವ ಆನಂದ ಅನುಭವಿಸೋದೇ ಹೋಳಿ ಹುಣ್ಣಿಮೆ, ಇದು ಓಶೋ ಅರ್ಥೈಸುವ ರೀತಿ..ವಿಚಿತ್ರ ಅಂದ್ರೆ ಇವರೆಡಕ್ಕೂ ಭಿನ್ನವಾಗಿ ನಾವು ಹೋಳಿಯನ್ನ ಆಚರಿಸುತ್ತೇವೆ.. ನಂಬಿಕೆ ಬೇಸಿಸ್ ಮೇಲೆ ಹಿಂದಿನವರು ಈಗಿನ ಕಾಲದವರಿಗೆ ದಾಟಿಸಿದ ಆಚಾರವಿಚಾರಗಳನ್ನು ನಾವು ನಂಬೋದಿಲ್ಲ.. ಇತ್ತ ಓಶೋ ಹೇಳಿದಂತೆ  ನಿರ್ಲಿಪ್ತನಾಗಿ ಬಣ್ಣವಾಡಿ ನೆಮ್ಮದಿಯನ್ನೂ ಕಂಡುಕೊಳ್ಳೋದಿಲ್ಲ. ಬದಲಾಗಿ  ಬಣ್ಣದಲ್ಲಿಯೇ ಮುಳುಗೆದ್ದರೂ ನಮ್ಮದೇ ನಿಲವನ್ನು ಅಲ್ಲಿಯು ಪ್ರದರ್ಶಿಸುತ್ತಿರುತ್ತೇವೆ.. ಬಣ್ಣಗಳನ್ನ ಹಚ್ಚುವಾಗ ಅದರೊಂದಿಗೆ ಪ್ರೀತಿಯನ್ನು ಹಂಚಿಕೊಳ್ಳಬೇಕು ಅನ್ನೋದನ್ನು ಮರೆತುಬಿಟ್ಟಿದ್ದೇವೆ ಅದಕ್ಕೆ ಹೋಳಿ ಬರಿ ಬಣ್ಣಗಳ ಕಲರವವಾಗಿ ಉಳಿಯುತ್ತಿದೆ..

Let the colors of Holi spread the message of peace and happiness.

Happy Holi in advance…

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
shashibhushan
shashibhushan
9 years ago

Anna thumba chanagide nivvu use madiro words nice…….

ajjimaneganesh
ajjimaneganesh
9 years ago
Reply to  shashibhushan

thank you brother

 

2
0
Would love your thoughts, please comment.x
()
x