ಬೆಳಕು: ರೋಹಿತ್ ಶೆಟ್ಟಿ ಮೇಲಾರಿಕಲ್ಲ್

rohith-shetty

'ಬೆಳಕು' ಅನಂತ. ಅನಿಯಮಿತ. ಅದಕ್ಕೆ ಗಡಿ-ಗೆರೆಗಳಿಲ್ಲಾ. ನಮ್ಮ ಬೇಕುಗಳ ಸರತಿಸಾಲಿನ ಮೊದಲಿನ ಶಬ್ದವೆ ಬೆಳಕು ಎನ್ನಬಹುದು ಅಲ್ವ. ಬೆಳಕು ಏ೦ಧಾಕ್ಷಣ ಯಾರ ಮುಖಾರವಿ೦ದ ಅರಳದು ಹೇಳಿ? ಬೆಳಕ ವರ್ಣಿಸದ ಕವಿಯಿಲ್ಲ, ಬಣ್ಣಸದ ಮಾತುಗಾರನಿಲ್ಲಾ, ಬೆಳಗದ ಮನುಷ್ಯನಿಲ್ಲಾ, ಮನುಕುಲವಿಲ್ಲಾ, ಅದು ಜಗತ್ತಿನ ಚೈತನ್ಯದ ಸ೦ಕೇತ. ಪ್ರಾಣಿಪಕ್ಷಿ, ಸಸ್ಯಸ೦ಕುಲದ ಜೀವಾದಾರ, ಜೀವವು ಹೌದು! ಬೆಳಕು ಗೋಚರ ರೂಪದಲ್ಲಿದ್ದರೂ ಅಗೋಚರ ಸ್ಥಿತಿಯ ಪ್ರತಿಪಾದಕ. ಜಗತ್ತಿನ ಎಲ್ಲಾ ಆಗು ಹೊಗುಗಳಿಗು ಕಾರಣೀಕರ್ತ. ಸುಡುವುದು, ಬೆಳಗುವುದು ಎಲ್ಲವು ಅದೇ. ಕಣ್ಮುಚ್ಚಿದರೂ ಕಣ್ತೆರೆದರೂ ಕಾಣುವುದು ಬೆಳಕೆ. ಅದು ಸರ್ವಾ೦ತರ್ಯಾಮಿ.  ಅದು ಪೂರ್ಣ ಪರಿಪೂರ್ಣ.

ಹಾಗಾದರೆ ನಿಜವಾಗಿಯು ಈ ಬೆಳಕೆಂದರೇನು!? ಬೆಳಕು ಆಲೋಚಿಸಬೇಕಾದ ಶಬ್ದವೆ! ಬೆಳಕನ್ನು ಎರಡರ್ಥದಲ್ಲೂ ಆಲೋಚಿಸಬಹುದು. ಅಂದರೆ ನೆಗೆಟಿವ್ ಹಾಗು ಪಾಸಿಟಿವ್ ದಾರಿಯಲ್ಲಿ. ಬೆಳಕಿಂದ ನಮ್ಮ ನೆಗೆಟಿವ್ ಆಲೋಚನೆಗಳನ್ನ ಸುಡುವುದು ಅಂದರೆ ಪಾಸಿಟಿವ್ ಆಲೋಚನೆಗಳನ್ನು ಬೆಳಗಿಸಿದಂತೆ. ಇನ್ನೊಂದರ್ಥದಲ್ಲಿ "ಯಾವುದು ಕತ್ತಲೆಯನ್ನು ಓಡಿಸುವುದೊ ಅದನ್ನು ಬೆಳಕು" ಅನ್ನಬಹುದು. ಹಾಗೆಯೇ ಎಲ್ಲರ ಸಂತೋಷಕ್ಕೆ ಯಾವುದು ಕಾರಣೀಕರ್ತವಾಗುವುದೊ ಅದನ್ನು ಬೆಳಕು ಎನ್ನಿಸಬಹುದು. .ವಿಜ್ಞಾನದ ಮುಖೇನ ವ್ಯಾಖ್ಯಾನಿಸುವುದಾದರೆ 'ವಿದ್ದ್ಯುದಯಸ್ಕಾಂತೀಯ ವಿಕಿರಣ ' ಎನ್ನಲೂ ಬಹುದಲ್ಲವೇ!?                 ‌                                 

ಅಸತೋ ಮ ಸದ್ಗಮಯ. 

ತಮಸೋ ಮ ಜೋತಿರ್ಗಮಯ. 

ಮ್ರತ್ಯೋರ್ಮ ಅಮೃತಂ ಗಮಯ ಅಂದಿದ್ದಾರೆ ಹಿರಿಯರು.  

ಇದನ್ನು ಯಾರು ಉಚ್ಛಾರ ಮಾಡಿಲ್ಲಾ ಹೇಳಿ. ಈಗ೦ತು 'ಜೋತಿಪೋಮ ತಮೋಗಮಯ' ಅಂದರೆ 'ಕೊ೦ಡಯ್ಯು ನನ್ನನ್ನು ಕೆಡುಕೆಂಬ ಕತ್ತಲಿ೦ದ ಊದ್ದಾರವೆಂಬ ಬೆಳಕಿನೆಡೆಗೆ, ಸಾವೆಂಬ ಸಾವಿರದ ನೆಲೆಗೆ'. ಎನ್ನುವವರೆ ಹೆಚ್ಚು. ಚಿದಂಬರ ರಹಸ್ಯದ ಈ ಜಗತ್ತಿನ ಎಲ್ಲಾ ದರ್ಮದ ಸಾಮಾನ್ಯರಿಂದ ಅಸಮಾನ್ಯರವರೆಗೂ ಬೆಳಕನ್ನು ಹಚ್ಚಿ ಪ್ರಾರ್ಥಿಸುವವರೇ. ಬೆಳಕಿಗೆ ದರ್ಮದ ಬೇಧವಿಲ್ಲಾ ಎಲ್ಲರು ಹುಡುಕುವುದು ಕತ್ತಲಿಂದ ಬೆಳಕನ್ನು. ಕತ್ತಲಿನಲ್ಲಿಯೂ ಬೆಳಕನ್ನು. ಕಗ್ಗತ್ತಲಲ್ಲಿಯೂ ಬೆಳಕಿನ ಕಿಡಿಯೊಂದನ್ನು ಹೌದಲ್ಲವೇ? 

ಹಾಗಾದರೆ ಕತ್ತಲಿನ ಅವಷ್ಯಕತೆ ಯಾರಿಗೂ ಇಲ್ಲವೇ? ಕತ್ತಲನ್ನು ಯಾರು ಪ್ರೀತಿಸುವುದಿಲ್ಲವೇ. .!? ಖಂಡಿತ ಇದೆ!  ಪ್ರಪಂಚದಲ್ಲಿ ವಾಸಿಸುವ ಪ್ರತಿಯೊಂದು ಜೀವಿಗೂ ಕತ್ತಲೆ ಬೇಕೇ ಬೇಕು. ವ್ಯಾಪಾರಿಗೆ ತಪ್ಪು ಲೆಕ್ಕ ಬರೆದಿಡಲು, "ಕಳ್ಳಸಂತೆಯ ಕಳ್ಳವ್ಯವಹಾರ" ನಡೆಸಲು, ತ್ಯಾಗಮಯಿ ತಾಯಿಗೆ ಕತ್ತಲು ಬೇಕು ತನ್ನ ಕಂದಮ್ಮನಿಗೆ ಏದೆಹಾಲುಣಿಸಿ ಮಲಗಿಸಲು. ಧರ್ಮ ಪೀಠಗಳ ಮುಖ್ಯಸ್ಥರಿಗೆ ಕತ್ತಲೆ ಬೇಕೆ ಬೇಕು. ಅದರ್ಮವನ್ನು ಮುಚ್ಚಿಡಲು. ಯೌವ್ವನದ ಪ್ರಣಯಿಗಳು ಕತ್ತಲೆಗಾಗಿ ಹಾತೊರೆಯುವರು. ಮುದುಕರಿಗಂತು ಕತ್ತಲಾಗದೆ ಕಣ್ಣು ಕೂರದು. ಇನ್ನು ಶ್ರಮಜೀವಿಗಳಿಗಳಂತು ಸೂರ್ಯ ಪಶ್ಚಿಮದಿ ಪವಡಿಸುವುದನ್ನೆ ಕಾಯುವರು. "ಅರಾಜಕೀಯ ರಾಜಕಾರಣಿಗಳಿಗೆ ತಪ್ಪು ಮುಚ್ಚಿಡಲು, ಕುಡುಕರಂತು ಕತ್ತಲಿಗಾಗಿಯೇ ಕಾಯುವವರೇ ಹೆಚ್ಚು! ಹಾಗಾದರೆ ಕತ್ತಲಿಗೆ ಬೆಳಕಿಗಿಂತ ಹೆಚ್ಚು ಬೇಡಿಕೆಯೋ!

'ಬೆಳಕು' ಅವರೆಂದರು ಅದು 'ಕತ್ತಲೆ'ಯ ವಿರೋಧಿ ಅಜ್ಞಾನಾಂಧಕಾರದ ಶತ್ರು!!
ಇವರೆಂದರು. .ಕತ್ತಲೆಯಿಲ್ಲದೆ? ಬೆಳಕಿಗೆಲ್ಲಿಯ ಬೆಲೆ
ಬೆಳಕಿಗಿಲ್ಲಾ ನೆಲೆ.  ಬೆಳಕಿನ ಋಣಕ್ಕೆ, ಹಠಕ್ಕೆ. .ಕ್ರೌರ್ಯಕ್ಕೆ ಕಟ್ಟುಬೀಳಲಿಲ್ಲವೆ?
ಬದುಕೆ ಭೆತ್ತಲಾದಾಗ ಮಾನ ಉಳಿಸಿಕೊಳ್ಳಲು ಕತ್ತಲೆ ಬೇಕಲ್ಲವೇ.!
ಬೆಳಕೋ. .ಸುಡುವುದು. .ಕಾಡುವುದು. ಒಮ್ಮೊಮ್ಮೆ . .
ಕತ್ತಲೆಗೊ ಒಂದೇ ಮುಖ, ಬಣ್ಣ. .ಬೆಳಕಿಗೆಷ್ಟು ಮುಖ, ಬಣ್ಣ, ಕೆಲವೊಮ್ಮೆ!?
ಕಣ್ತೆರೆದು ನೋಡಾ 'ಅಧಮ'. ಬೆಳಕನ್ನು ಅಂದರು  ಅವರು.
ಕಣ್ಮುಚ್ಚಿದ್ದರು ಕಾಣುವುದು ಬೆಳಗು  ಕತ್ತಲೆಯಲ್ಲೂ. ! ಎಂದರು ಕೆಲವರು.
ನಿಜವಾದ ಬೆಳಕ ಕಂಡವರು ಯಾರು. ಇರಬಹುದು 'ಕತ್ತಲೆ'. ಯಾಕಾಗಬಾರದು. . ??                 

ಸರಿ ಬಿಡಿ. ಸತ್ಯವಾಗ್ಲು ಬೆಳಕಿಗಿಂತ ಕತ್ತಲಿಗೆ ಬೇಡಿಕೆ ಇರಬಹುದು. ಆದರೆ ಬೆಲೆ ಬೇಕಲ್ಲವೇ? ಕತ್ತಲೆ ಆಜ್ಞಾನದ, ಆ೦ದಕಾರದ ಸಂಕೇತ, ಬೆಳಕು ಜ್ಞಾನದ ಬಂಡಾರ. ಊದ್ದಾರದ ಮೂಲ ಮೂಲಾದಾರ. ಆದರೂ. .ಅಜ್ಞಾನ ಅಂದಕಾರದಿಂದ ಹೊರಬಂದ ಮೇಲೆನೆ ಬೆಳಕು ಸಿಗೋದು ಅಂದರೆ ಜ್ಞಾನವೃದ್ದಿಯಾಗೋದು. ಕತ್ತಲಿಲ್ಲದೆ  ಭೆಳಕಿಲ್ಲ  'ಕತ್ತಲು ಬೆಳಕಿನ ತಾಯಿ' ಕತ್ತಲಿ೦ದಲೇ ಬೆಳಕಿಗೆ ಅರ್ಥಬ೦ದಿದ್ದು ಹೌದಲ್ಲವೆ, ಅಮವಾಸ್ಯವಿಲ್ಲದೆ ಹುಣ್ಣಿಮೆ ಹೇಗೆ ಬರುತ್ತದೆ? 

'ಕಪ್ಪು ಹಣತೆಯಲ್ಲವೇ' ಬೆಳ್ಳಂಬೆಳಕು ನೀಡುವುದು. ಕಗ್ಗತ್ತಲ ಮೊಟ್ಟೆಯೊಳಗಿಂದ ಹೊರ ಬಂದ ಮೇಲೆ ತಾನೆ ಮರಿ ಬೆಳಕು ಕಾಣೋದು. ಹಾಗೆಯೇ ಕತ್ತಲಿಂದ ನಾವುಗಳು ಹೊರ ಬರಬೇಕಾಗಿದೆ. ಕತ್ತಲೆಯೇ ಜೀವನವಾಗಬಾರದು.

'ಕತ್ತಲೆ ಕೋಟೆಯ' ರಾಜ ನರಕಾಸುರನ ಸಂಹಾರವೇ 'ದೀಪಗಳ ಹಾವಳಿ' ಯಾಗಿದೆ, ಜ್ಙಾನಿ ಕೃಷ್ಣನ ಜ್ಙಾನದ ಬೆಳಕೇ ಬೆಳಕುಗಳ ಹಬ್ಬವೆನ್ನಬಹುದು. ಆ ಹಬ್ಬವನ್ನು ಅನುಸರಿಸಿ ಆಚರಿಸಬೆಕಾದವರು ನಾವುಗಳು. ಈಗ ನಮ್ಮೊಳಗಿನ ಬೆಳಕನ್ನು ಬೆಳಗುವ ಕಾಲ  ನಿರ್ಮಿಸಿಕೊಳ್ಳೊಣ. ಬೆಳಕನ್ನು ಬಿತ್ತೋಣ ಬೆಳಕನ್ನು ಬೆಳೆಯೋಣ. ಕತ್ತಲೆಗೆ ನಮಿಸಿ ಕತ್ತಲಿಂದ ಬೆಳಕನ್ನು ಕಾಣುವ ಸುಖ ಅನುಭವಿಸೋಣ. ಅಜ್ಞಾನಿಯಾಗಿ ಜ್ಞಾನದ ಲೋಕದಲ್ಲಿ ಯೋಚಿಸೋಣ. ಕಗ್ಗತ್ತಲ್ಲನ್ನು ಸೀಳಿ ಯಾರೂ ನೋಡಿರದ ಬೆಳಕಿನ ಬಂಡಾರವನ್ನು ಕೊಳ್ಳೆ ಹೊಡೆಯೋಣ. ಬೆಳಕಿನ ಕಿಡಿಯೊ೦ದನ್ನು ಹೊತ್ತಿಸಿ ಊರಿಸೋಣ. ಬೆಳಕನ್ನು ಜಗತ್ತಿಗೆ ನೀಡೋಣ. ಚಿಕ್ಕ ತಾರೆಯ೦ತೆ.

-ರೋಹಿತ್ ಶೆಟ್ಟಿ ಮೇಲಾರಿಕಲ್ಲ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x