ಬದುಕು ಸ್ನೇಹಮಯವಾಗಿರಲಿ ಬದುಕು ಸುಂದರ!!: ಗೂಳೂರು ಚಂದ್ರು

ಸ್ನೇಹ ಅಂದ ತಕ್ಷಣ ಮನಸ್ಸಿಗೆ ಬರೋದು ಒಂದು ಆಗಾದವಾದ ಸಂಬಂಧ, ಸಂಬಂಧಗಳ ಬಗ್ಗೆ ಗೊತ್ತಿಲ್ಲದವರಿಗೆ ನಿಜವಾಗಿಯೂ ಸ್ನೇಹದ ಮೌಲ್ಯ ಗೊತ್ತಿರಲಿಕ್ಕೆ ಸಾಧ್ಯವೇ ಇಲ್ಲ. ಅದು ಪಕ್ಕಕಿರಲಿ ಬಿಡಿ. ನಮ್ಮನ್ನ ಆಳವಾಗಿ ಅಧ್ಯಯನ ಮಾಡಿ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕನಾಗಿ ಸ್ಬಂದಿಸಿಕೊಂಡು ಸರಿದೂಗಿಸುವವರು ನಿಜವಾದ ಸ್ನೇಹಿತರು. ಈಗಿನ ಜಮಾನದಲ್ಲಿ ನಮ್ಮನ್ನ ಅರ್ಥ ಮಾಡಿಕೊಂಡವರು ಎಷ್ಟು ಜನ ಅಂತ ಯೋಚನೆ ಮಾಡಿದರೆ ಸಿಗವವರು ಬೆರಳೆಣಿಕೆಗಿಂತ ಕಡಿಮೆ. ಇಲ್ಲಿ ಎಲ್ಲಾ ನಿರೀಕ್ಷೆಗಳನ್ನ ಇಟ್ಟುಕೊಂಡು ಬರುವವರು ಹೆಚ್ಚು. ಮೊನ್ನೆ ನನ್ನ ಸ್ನೇಹಿತ ಫೋನ್ ಮಾಡಿ ಹತ್ತು ಸಾವಿರ ಹಣ ಕೇಳ್ದ ನಾನು ನನ್ನವೇ ನೂರಾರು ಸಮಸ್ಯೆಗಳನ್ನ ಹೇಳಿಕೊಂಡೆ. ಸರಿ ಆಯ್ತು ಮತ್ತೇ ಫೋನ್ ಮಾಡ್ತೀನಿ ಅಂತ ಫೋನ್ ಇಟ್ಟ. ಹೇಗಿದ್ದೀಯಾ ಏನ್ ನಿನ್ನ ಕಷ್ಟ ಅಂತ ಕೇಳೋ ಸೌಜನ್ಯವು ಕೂಡ ಇರಲಿಲ್ಲ. ಇವರೆಲ್ಲ ಸ್ನೇಹಿತರು ಅಂತ consider ಮಾಡೋಕೆ ಆಗುತ್ತಾ?? ತಮ್ಮ ಅವಶ್ಯಕತೆಗಳಿಗಷ್ಟೆ ಉಪಯೋಗಿಸಿಕೊಂಡು ನಂತರ ಕ್ಯಾರೆ ಅನ್ನದ ಮಹಾನುಭಾವರುಗಳು. ಇಲ್ಲಿ ಸ್ನೇಹ ಅನ್ನೋದು ಒಂದು ತರಹದ tissue paper, ಒರೆಸಿ ಬಿಸಾಕೋದಷ್ಟೇ ಗೊತ್ತು.

ಬದುಕಿನ ಮೌಲ್ಯ ತಿಳಿದಿದ್ದವರು ಸ್ನೇಹ ಪ್ರೀತಿ ವಿಶ್ವಾಸ ಅಂತ ಒದ್ದಾಡುತ್ತಾರೆಯೇ ಹೊರತು ಸ್ವಾರ್ಥಕ್ಕಾಗಿ ಬದುಕುವವರಲ್ಲ. ಹಣವೇ ಬದುಕಿನ ಸಾರ್ಥಕತೆ ಎಂದು ಭ್ರಮೆಯ ಬದುಕಿನಲ್ಲಿ ಬದುಕುವವರಿಗೆ ಬದುಕಿನ ಮೌಲ್ಯ ತಿಳಿಯದು.

ಕೆಲ ದಿನಗಳ ಹಿಂದೆ ಟಿ ವಿ ಚಾನೆಲ್ಲಿನಲ್ಲಿ ಕಾಶಿನಾಥ್ ರ ಒಂದು ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಅವರು ಒಂದು ಮಾತು ಹೇಳಿದ್ರು a friend in need is a friend indeed ಎಲ್ಲಾ ಪುಸ್ತಕದ ಬದನೆಕಾಯಿ ರಿಯಾಲಿಟಿಲ್ಲಿ ಎಲ್ಲಾ ಸುಳ್ಳು ಅಂತ, ಬದುಕಿನ ಅಷ್ಟು ಆಳವಾಗಿ ನೋಡಿರುವ ಮನುಷ್ಯ ಹಾಗೆ ಹೇಳ್ದ ಅಂದ್ರೆ ಸ್ನೇಹ ಅನ್ನೋ ಸಂಬಂಧವನ್ನ ಮನುಷ್ಯ ಎಲ್ಲಿಗೆ ತಂದು ನಿಲ್ಲಿಸಿದ್ದಾನೆ ಅಂತ ಅಂದುಕೊಂಡೆ.

ನೀವು ಮಹಾಭಾರತವನ್ನ ಎಷ್ಟು ಬಾರಿ ಓದಿದ್ದೀರಾ ಕುರುಕ್ಷೇತ್ರ ನಾಟಕವನ್ನ ಎಷ್ಟು ಬಾರಿ ನೋಡಿದ್ದೀರಾ, ಈಗಿನ ಬ್ಯುಸಿ ಲೈಫ್ ಬದುಕಿನ ಜಂಜಾಟದಲ್ಲಿ ಬರೆದರೆ ನಮ್ಮದೇ ಒಂದು ಮಹಾಭಾರತದಂತ ಗ್ರಂಥವಾಗುತ್ತದೆ ಅದರೂ ನೋಡಿಲ್ಲ ಅಂದ್ರೆ ಒಮ್ಮೆ ನೋಡಿ. ಕರ್ಣ ಹಾಗೂ ದುರ್ಯೋಧನನ ಸ್ನೇಹವನ್ನ ಒಮ್ಮೆ ನೆನಪು ಮಾಡಿಕೊಳ್ಳಿ. ನಾ ಆಗಲೇ ಹೇಳಿದಂತೆ ನಮ್ಮ ಬದುಕು ಕೂಡ ಬರೆದರೆ ಒಂದು ಗ್ರಂಥ ಆ ಗ್ರಂಥದಲ್ಲಿ ಕೇವಲ ಸ್ವಾರ್ಥ, ಅಸೂಯೆ, ದ್ವೇಷ ಇದ್ದರೆ ಹೇಗೆ? ಸ್ವಲ್ಪವಾದರೂ ಸ್ವಚ್ಛಂದ ಸ್ನೇಹ ಬಾಂಧವ್ಯ ಚೂರು ಪ್ರೀತಿ ವಿಶ್ವಾಸದ ಕತೆಗಳು ಬದುಕಿನ ಗ್ರಂಥದಲ್ಲಿ ಇಲ್ಲದಿದ್ದರೆ ಹೇಗೆ ಹೇಳಿ? ನಮ್ಮ ಬದುಕಿನ ಗ್ರಂಥ ಓದುವವರಿಗೆ ಕೇಳುವವರಿಗೆ ಮಾದರಿಯಲ್ಲಿ ಇರಬೇಕು, ಮಾದರಿಯಲ್ಲಿ ಇರಬೇಕೆಂದರೆ ಮೊದಲು ಬದುಕಿನ ಮೌಲ್ಯಗಳನ್ನ ಅರಿಯಬೇಕು.

ಸಂಬಂಧಗಳಲ್ಲೆ ಅತಿ ಶ್ರೇಷ್ಠವಾದ ಸಂಬಂಧ “ಸ್ನೇಹ ಸಂಬಂಧ” ಯಾಕೆಂದರೆ ಅದು ಎಂದಿಗೂ ಮೋಸ ಮಾಡದು ಅನ್ನೋ ನಂಬಿಕೆ, ನೀವು ಸಿನಿಮಾಗಳಲ್ಲಿ ಕೇಳಿರಬಹುದು ಲವರ್ ಕೈ ಕೊಟ್ಟರು ಫ್ರೆಂಡ್ಸ್ ಕೈ ಕೊಡಲ್ಲ ಅಂತನೋ ಅಥವಾ ಪ್ರೀತಿಗಿಂತ ನನಗೆ ಸ್ನೇಹಾನೇ ಮುಖ್ಯ ಅನ್ನೋ ಸಿನಿಮಾ ನಾಯಕನಿಗೆ(ಚಿತ್ರದ ಸಂಭಾಷಣೆಕಾರನಿಗೆ) ಸ್ನೇಹದಮೇಲಿರುವ ನಂಬಿಕೆಯ ಮಾತುಗಳನ್ನ ನಂಬಿ ತಿಳಿದು ತಿಳಿದು ತಪ್ಪು ಮಾಡುವುದು ಮನುಕುಲದ ದೊಡ್ಡ ದುರಂತ. ಆದರ್ಶಗಳು ಕೇವಲ ಪುಸ್ತಕದಲ್ಲಿಯೋ, ಬಾಷಣಗಳಲ್ಲಿಯೋ ಅಡಗಿ ಕೂರಬಾರದು ಅಳವಡಿಸಿಕೊಳ್ಳಬೇಕು ಆಗ ಮಾತ್ರ ಬದುಕಿಗೊಂದು ಸಾರ್ಥಕತೆ. ಬದುಕನ್ನ ಸ್ನೇಹಮಯವನ್ನಾಗಿಸಿ ಆಗ ಬದುಕು ತನ್ನತಾನೆ ಸುಂದರವಾಗುತ್ತದೆ.

-ಗೂಳೂರು ಚಂದ್ರು


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x