ಅರ್ಥವಾಗುವವರಿಗೆ ಮಾತ್ರ! ಎಲ್ಲರಿಗಲ್ಲ..
ಅಡಿಗೆ ಮನೆಯಲ್ಲಿ
ಫ್ಲಾಪಿಬಾಯ್ ಅಡಿಗೆ ಮನೆಯಲ್ಲಿ ಹೊಸರುಚಿ ಕಂಡು ಹಿಡಿಯಲು ಪ್ರಯೋಗ ನಿರತನಾಗಿದ್ದ. ಲಗೋರಿಬಾಬಾ ಚುಟ್ಟಾ ಹೊಡಿತಾ ಇವ ಮಾಡೋದನ್ನ ನೋಡ್ತಾ ಇದ್ದ. ಆಗ ಫ್ಲಾಪಿಬಾಯ್ “ಬಾಬಾ ಲೈಫಲ್ಲಿ ಹೆಂಗಿರ್ಬೇಕು ಅಂತಾನೇ ಗೊತ್ತಾಗ್ತಿಲ್ಲ ನಂಗೆ! ಹಂಗಿದ್ರೆ ಹಿಂಗಿರು ಅಂತಾರೆ, ಹಿಂಗಿದ್ರೆ ಹಂಗಿರು ಅಂತಾರೆ! ಏನ್ ಮಾಡೋದಂತಾನೇ ತಿಳಿತಿಲ್ಲ ಥತ್!!” ಅಂದ ನಿರಾಸಕ್ತಿಯಿಂದ.
“ಸಿಂಪಲ್ಲು ಕಣೋ, ಅದೇನು? ಅಂದ ಲಗೋರಿಬಾಬಾ ಕೈತೋರಿಸ್ತಾ. “ಕ್ಯಾರೆಟ್ಟು” ಅಂದ ಫ್ಲಾಪಿಬಾಯ್.
“ಮತ್ತೆ ಅದು?”- “ಅಷ್ಟೂ ಗೊತ್ತಿಲ್ವಾ ಮೊಟ್ಟೆ, ಎಗ್ ಚಿಲ್ಲಿ ಮಾಡೋಕೆ ತಂದಿರೋದು.”
“ಹಾಗಿದ್ರೆ ಇದ್ನೂ ತಗಾ” ಅಂತ ತನ್ನ ಕೈಲಿದ್ದ ನಾಲ್ಕಾರು ಹುರಿದ ಕಾಫಿ ಬೀಜಗಳನ್ನು ಫ್ಲಾಪಿ ಕೈಗಿತ್ತ ಬಾಬಾ.
“ಇದೆಲ್ಲಾ ಯಾಕೆ ಬಾಬಾ?” ಅಂದ ಫ್ಲಾಪಿ. ಮಾತಾಡಬೇಡ ನಾ ಹೇಳಿದಂಗೆ ಮಾಡು “ಒಲೆ ಮೇಲೆ ಮೂರು ಪಾತ್ರೆಲಿ ನೀರಿಡು.” ಇಟ್ಟೆ ಬಾಬಾ ಮುಂದೆ?
“ಮೊದಲ ಪಾತ್ರೇಲಿ ಕ್ಯಾರೇಟ್ ಹಾಕು, ಇನ್ನೊಂದ್ರಲ್ಲಿ ಮೊಟ್ಟೆ ಹಾಕು, ಮತ್ತೊಂದ್ರಲ್ಲಿ ಹುರಿದ ಕಾಫಿ ಬೀಜ ಹಾಕು.”
ವ್ಹಾವ್ ಬಾಬಾನೂ ನನ್ನ ತರಾನೇ ಹೊಸ ಹೊಸ ಪ್ರಯೋಗಕ್ಕೆ ಕೈ ಹಾಕಿದಾರೆ ಅಂತ ಒಳಗೊಳಗೇ ಖುಷಿಯಾದ ಫ್ಲಾಪಿಬಾಯ್, “ಬಾಬಾ ಮುಂದೆ ಮುಂದೆ ಎನ್ಮಾಡ್ಲಿ?” “ತಡ್ಕೊಳ್ಳೋ ಆತುರಗೆಟ್ಟವ್ನೇ, 15 ನಿಮಿಷ ಬಾಯಿ ಬಿಡದೇ ಅದನ್ನೇ ನೋಡ್ತಾ ಇರು. ಆಮೇಲೆ ಆರಿಸಿ ಅದರ ಸ್ಟೇಟಸ್ ಹೇಗಿದೆ ಹೇಳು” ಅಂತ ಮತ್ತೊಂದು ಚುಟ್ಟಾಗೆ ಬೆಂಕಿ ಗೀರಿದ ಲಗೋರಿಬಾಬಾ.
“ಬಾಬಾ ಹದಿನೈದು ನಿಮಿಷ ಆಯ್ತು. ಎಲ್ಲಾನೂ ಬೆಂದಿದೆ. ಇದ್ರಲ್ಲೇನು ವಿಶೇಷ?”- ಕ್ವಶ್ಚನಿಸಿದ ಫ್ಲಾಪಿಬಾಯ್.
“ಇಲ್ಲಿ ನೋಡೋ ಫ್ಲಾಪಿ ಕಂದಾ ಮೊದ್ಲು ಕ್ಯಾರೆಟ್ ಗಟ್ಟಿ ಇತ್ತು. ಈಗ ಮೆದುವಾಗಿದೆ. ಮೊಟ್ಟೆ ಮೊದಲು ಒಳಗೆ ಮೆದುವಿತ್ತು. ಈಗ ಒಳಗೆ ಗಟ್ಟಿಯಾಗಿದೆ. ಕಾಫಿ ಬೀಜ ನೋಡೋ ಕರಗಿ ಕಾಣೆಯಾಗಿದೆ. ಗೊತ್ತಾಯ್ತಾ?”
“ಅಯ್ಯೋ ಬಾಬಾ ಇದೆಲ್ಲಾ ನಂಗೆ ಗೊತ್ತಿಲ್ಲದ ವಿಷಯವಾ? ನಾನೇನು ಅಷ್ಟ ದಡ್ಡನಾ?” ಫ್ಲಾಪಿ ಅಲವತ್ತುಕೊಂಡ.
“ಇಲ್ಲೇ ನೀನು ತಿಳ್ಕೋಬೇಕಾಗಿರೋದು. ಈಗ ಜೀವನದ ಬಗ್ಗೆ ಯೋಚಿಸು. ಜೀವನ ಯಾವಾಗಲೂ ಸಿಂಪಲ್ ಅಲ್ಲ. ಯಾವಾಗಲೂ ಕಂಫರ್ಟ್ ಅನಿಸೊಲ್ಲ. ಸಮ್ ಟೈಮು ತುಂಬಾ ಕಷ್ಟ ಜೀವ್ನ. ನಾವ್ ಅಂದ್ಕಂಡಂಗೆ ಏನೂ ಆಗಲ್ಲ ಇಲ್ಲಿ. ನಾವು ತಿಳ್ಕಂಡಂಗೆ ಜನ್ರು ನಡ್ಕೊಳಲ್ಲ. ನಾವು ಪಟ್ಟ ಕಷ್ಟಕ್ಕೆಲ್ಲಾ ರಿಜಲ್ಟು ಬರ್ಲೇ ಬೇಕಂತಿಲ್ಲ! ಕಷ್ಟಗಳು ಬಂದಾಗ ನಾವೇನ್ ಮಾಡ್ತೀವಿ? ಇಲ್ಲಿ ಪಾತ್ರೇಲಿರೋ ಬಿಸಿ ನೀರಿನ ತರ ಜೀವನದ ಕಷ್ಟಗಳು. ನಾವು ಕ್ಯಾರೇಟ್ ತರ ಇದ್ರೆ ಸ್ರ್ಟಾಂಗ್ ಆಗಿ ಇದ್ದವ್ರು ಸಾಫ್ಟ್ ಆಗಿ ಬಿಡ್ತೇವೆ. ತುಂಬಾ ವೀಕ್ ಆಗ್ತೇವೆ. ವಿಶ್ವಾಸ ಕಳ್ಕೊತೇವೆ. ಎಲ್ಲಾ ಬಿಟ್ಕೊಟ್ಟು ಬಿಡ್ತೇವೆ. ಹೋರಾಟ ಮನೋಭಾವನೇ ಇರಲ್ಲ ನಮಗೆ. ಅದ್ಕೇ ನೀ ಕ್ಯಾರೇಟ್ ತರ ಇರ್ಬೇಡ.”
ಹಾಗೇ ಮುಂದುವರೆದು ಹೇಳಿದ “ನೀನು ಮೊಟ್ಟೆ ತರ ಸೂಕ್ಷ್ಮವಾಗಿದ್ರೆ, ಕಷ್ಟಗಳು ನಿನ್ನ ಗಟ್ಟಿ ಮಾಡ್ತವೆ. ಇನ್ನೂ ಹೆಚ್ಚು ಕಷ್ಟ ಬಂದ್ರೆ ನಿಷ್ಕರುಣಿ ಆಗೋ ಛಾನ್ಸೂ ಇರತ್ತೆ. ಒಂದು ಖುಷಿಯ ಫೀಲೀಂಗೇ ಇರಲ್ಲ ನಿನ್ನತ್ರ. ಅದ್ಕೆ ಮೊಟ್ಟೆ ತರ ಇರ್ಬೇಡ. ನೀನು ಇರೋದೆ ಆದ್ರೆ ಇಲ್ಲಿರೋ ಕಾಫೀ ಬೀಜದಂಗಿರು. ಪ್ರಾಬ್ಲಮ್ಮು ಅನ್ನೋ ಬಿಸಿ ನೀರು ನಿನ್ನ ಅಂತಃಸತ್ವ ಬದಲಾಯಿಸಿಲ್ಲ. ಆದ್ರೆ ನೀನೇ ಪ್ರಾಬ್ಲಮ್ಮನ್ನ ಬದಲಾಯಿಸಿಕೊಂಡೆ. ಕಷ್ಟಗಳೇ ನಿನ್ನಿಂದ ಇಷ್ಟವಾಗೋಯ್ತು. ವಾಟರ್ ಈಗ ಕಾಫಿಯಾಗಿ ಬದಲಾಯ್ತು. ಅದಕ್ಕೆ ಬೇಕಾದ ಒಳ್ಳೆಯ ಗುಣಗಳನ್ನೂ ಹಾಕುವಂತಾಯ್ತು. ಹೊಸ ವಿಷಯಗಳನ್ನು ಕಲಿಬಹುದು.
ಗೆಲುವು ಬೇಕಂದ್ರೆ ಪ್ರಯತ್ನ ಮಾಡಬೇಕು. ಮತ್ತೆ ಮತ್ತೆ ಪ್ರಯತ್ನಿಸಬೇಕು. ಮಾಡೋ ಕೆಲಸದಲ್ಲಿ ನಂಬಿಕೆ ಇರಬೇಕು. ತಾಳ್ಮೆ ಬೇಕು. ಕಷ್ಟಗಳನ್ನ, ಸಮಸ್ಯೆಗಳನ್ನ ಕೇರ್ ಫುಲ್ ಆಗಿ ದೂಡಬೇಕು. ಯಾಕಂದ್ರೆ ಈ ತೊಂದರೆಗಳೇ ನಮ್ಮನ್ನ ಗಟ್ಟಿಮಾಡೋದು. ಅರ್ಥವಾಯ್ತಾ ನೀ ಹೆಂಗಿರ್ಬೇಕು ಅನ್ನೋದು?”
“ಬಾಬಾ ನೀವು ನಂಗೆ ಇಷ್ಟ ಆಗೋದೆ ಈ ಕಾರಣಕ್ಕೆ, ನೀವ್ ಹೇಳೋದು ಅರ್ಥವಾಗ್ದೇ ಇದ್ರೂ ಚೆನ್ನಾಗಿರತ್ತೆ ಕೇಳಕ್ಕೆ. ಲವ್ ಯೂ ಬಾಬಾ” ಅಂತ ಫ್ಲಾಪಿಬಾಯ್ ಮತ್ತೆ ತನ್ನ ಕಾರ್ಯದಲ್ಲಿ ನಿರತನಾದ.
*****
ಜೈ ಪಿಲಾಪಿ..
ಜೈ ಳ'ಗೋರಿ' ಬಾ….. ಬಾ……
🙂
hats off coffee hats off lagori baba !!