ಪ್ಲಾಸ್ಟಿಕ್: ರೇಖ ಮಾಲುಗೋಡು.


ಕಾಯಿಲೆಯೇ ಏನೆಂದು ಗೊತ್ತಿಲ್ಲದೇ ಹೊಟ್ಟೆ ಉಬ್ಬರಿಸಿ ಅಡ್ಡಬಿದ್ದ ದನದಿಂದ ಕೆಜಿಗಟ್ಟಲೆ ಪ್ಲಾಸ್ಟಿಕ್ ಹೊರತೆಗೆದ ಪಶುವೈದ್ಯ ಎಂದು ಓದುವಾಗ ಮುಂದಿನ ದಿನಗಳಲ್ಲಿ ದನದ ಬದಲು ಮನುಷ್ಯ  ಎನ್ನುವ ಪದ ಬಂದರೆ ಆಶ್ಚರ್ಯವೇನಿಲ್ಲ. ಈಗ ಎಲ್ಲಿ ನೋಡಿದರು ಪ್ಲಾಸ್ಟಿಕ್ ಕವರ್ಗಳದ್ದೇ ಸಾಮ್ರಜ್ಯ.ಪ್ಲಾಸ್ಟಿಕ್ ಪದ ಬಳಕೆಗೆ  ನಮ್ಮ ಕನ್ನಡದಲ್ಲಿ ಸುಲಭವಾಗಿ ಆಡುವಂತ ಪರ್ಯಾಯ ಪದವಿಲ್ಲ. ಆದ್ದರಿಂದ ಬೇರೆ ಆಂಗ್ಲ ಪದದ ತರವೇ ನಮ್ಮನ್ನು ನಾವು ಆಂಗ್ಲಪದಗಳಿಗೆ ಹೊಂದಿಸಿಕೊಂಡು ಬಿಟ್ಟಿದ್ದೇವೆ. 

ನಮ್ಮ ಪರಿಸರ ಶುದ್ದವಾಗಿರಬೇಕೆಂದರೆ ನಾವೇ ಪ್ಲಾಸ್ಟಿಕ್ನ್ನುಆದಷ್ಟು ಕಡಿಮೆ ಮಾಡುತ್ತಾ ಹೋಗಬೇಕು.ನಮ್ಮ ಹಿಂದಿನ ತಲೆಮಾರು ಪ್ಲಾಸ್ಟಿಕ್ ಇಲ್ಲದೇ ಜೀವಿಸುತ್ತಿದ್ದಾರಲ್ಲ ಹಾಗೆ.ನಾವು  ಯಾವುದಾದರು ವಸ್ತುವಿಗೆ ಹೊಂದಿಕೊಂಡ ಮೇಲೆ ಅದರಿಂದ ಹೊರಬರುವುದು ಸ್ವಲ್ಪ ಮಟ್ಟಿಗೆ ಕಷ್ಟವೇನಿಸಬಹುದು, ಅಸಾದ್ಯವೇನಿಲ್ಲ. ಆದ್ದರಿಂದ ಪ್ಲಾಸ್ಟಿಕ್ ಬಳಕೆಯ ಅವಶ್ಯಕತೆಯನ್ನೇ ನಿಧಾನವಾಗಿ ಕಡಿಮೆ ಮಾಡುತ್ತಾ ಹೋಗಬೇಕು.     

ಕೆಲವೊಂದು ದಿನಸಿ ಅಂಗಡಿಗಳಲ್ಲಿ ದಿನಸಿಗಳನ್ನು ಮೊದಲೇ  ಪ್ಲಾಸ್ಟಿಕ್ ಕವರ್ಗಳಿಗೆ ಹಾಕಿ ಸಿದ್ದ ಮಾಡಿಟ್ಟಿರುತ್ತಾರೆ, ಕೆಲವೊಂದು ದಿನಸಿ ಅಂಗಡಿಗಳಲ್ಲಿ  ನಮ್ಮ ಅವಶ್ಯಕತೆಗೆ ತಕ್ಕ ಹಾಗೆ ದಿನಸಿಗಳನ್ನು  ತೂಕ ಮಾಡಿ  ಪ್ಲಾಸ್ಟಿಕ್ ಕವರ್ಗೆ ಹಾಕಿ ಕೊಡುತ್ತಾರೆ. ಅದನ್ನು ನಯವಾಗಿ ತಿರಸ್ಕರಿಸಿ ನೀವೇ ಮನೆಯಿಂದ ತೆಗೆದುಕೊಂಡ ಹೋದ ಬಟ್ಟೆ ಚೀಲಕ್ಕೆ ಅಥವಾ ಕಾಗದದ ಚೀಲಕ್ಕೆ(ಕವರ್ಗೆ) ಹಾಕಿಸಿಕೊಂಡು ಬನ್ನಿ. ಕಾಗದದ ಕವರ್ ಒಡೆದು ಹೋಗಬಹುದು ಮತ್ತು ಕಾಗದದಲ್ಲಿರುವ ಮುದ್ರಣಾವಾಗಿರುವ ಬಣ್ಣದಿಂದ ಅರೋಗ್ಯಕ್ಕೆ ಹಾನಿಯಾಗಬಹುದು. ಇದು ನನ್ನಿಂದಲೂ ಸಾಧ್ಯಾವಾಗುತ್ತಿಲ್ಲ. ನಾವು ಅಂಗಡಿಯವರ ಹತ್ತಿರ ನಮಗೆ ಪ್ಲಾಸ್ಟಿಕ್ ಕವರ್ ಬೇಡ ನಾವು ತಂದಿರುವ ಚೀಲಗಳಿಗೆ ಹಾಕಿ ಎಂದರೆ ಅವರು ನಮ್ಮನ್ನು ನೋಡುವ ರೀತಿಗೆ ಅಲ್ಲಿಂದ ಜಾಗ ಖಾಲಿ ಮಾಡಲೇಬೇಕು. ಒಮ್ಮೊಮ್ಮೆ ಪ್ಲಾಸ್ಟಿಕ್ ಕವರ್ ಗೆ ಹಾಕಿಯಾಯ್ತು ತಗಂಡು ಹೋಗ್ತೀರಾ ಇಲ್ಲಾವಾ ಎನ್ನುವ ರೀತಿ, ಎಲ್ಲಾ ಅಂಗಡಿಯವರು ಆ ರೀತಿ ಇರುವುದಿಲ್ಲ,  ಕೆಲವೊಂದು ಅಂಗಡಿಯವರು ನಮ್ಮ ಸಾಮಜಿಕ ಕಳಕಳಿಗೆ ಒಳ್ಳೆ ರೀತಿಯಲ್ಲಿ ಸ್ಪಂದಿಸುತ್ತಾರೆ. ಅಂಗಡಿಯವರು ಪ್ಲಾಸ್ಟಿಕ್ ಕವರ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿದರೆ   (ನಿಲ್ಲಿಸಿದರೆ)ಜನಸಾಮನ್ಯರು ಅದಕ್ಕೆ ಹೊಂದಿಕೊಳ್ಳುತ್ತಾ ಹೋಗುತ್ತಾರೆ. 

ಈಗ ಹಾಲು ಬರುವುದು ಪ್ಲಾಸ್ಟಿಕ್ ಕವರ್ಗಳಲ್ಲೇ, ಅದನ್ನು ನಿಲ್ಲಿಸಿ ನೇರವಾಗಿ ಬಳಕೆದಾರ ಮತ್ತು ಉತ್ಪಾದಕನ ನಡುವೆ ಸಂಪರ್ಕ ಕಲ್ಪಿಸಿದರೆ ಹಾಲು ಪ್ಲಾಸ್ಟಿಕ್ ಕವರ್ಗಳಲ್ಲಿ  ಬರುವುದನ್ನು ನಿಲ್ಲಿಸಬಹುದು. ಆದರೆ ಬಳಕೆದಾರನಿಗೆ ತಲುಪಿಸುವವರೆಗೆ ಹಾಲು ಹಾಲಾಹಲ ಆಗದೇ ಇರುವ ಹಾಗೆ ನೋಡಿಕೊಳ್ಳುವುದೇ ದೊಡ್ಡ ಸಮಸ್ಯೆ, ದಾರಿ ಮಧ್ಯೆ ಕಲಬೆರಕೆದಾರಿಂದ ಹಾಲನ್ನು ಕಾಪಾಡುವುದು. ಜನರು sealed ದಿನಸಿಗಳನ್ನು ಇಷ್ಟಪಡಲಿಕ್ಕೆ ಪ್ರಾರಂಭವಾಗಿದ್ದ ಕಾರಣವೇ ಕಲಬೆರಕೆ ಇರುವುದಿಲ್ಲ ಎಂದು. ಎಲ್ಲಾ ಜನರು ಪ್ರಾಮಣಿಕರಾದರೇ ನಾವೇಲ್ಲಾರೂ  ಪ್ಲಾಸ್ಟಿಕ್ ಕವರ್ಗಳಿಂದ ಸ್ವಲ್ಪ ಮಟ್ಟಿಗಾದರು ಮುಕ್ತಿ ಪಡಯಬಹುದೇನೋ.ಹಾಲಿನ ಕವರ್ನ ಮೇಲೊಂದು ಕವರ್ ಹಾಕಿ ಕೊಡುತ್ತಾರೆ,ನಮಗೆ ಹಾಲಿನ ಕವರ್  ಮೇಲೆ ಮತ್ತೊಂದು ಬೇಡವೆಂದರು ಹಾಕಿಟ್ಟಾಗಿದೆ ತೆಗೆದುಕೊಂಡು ಹೋಗ್ತೀರಾ ಇಲ್ಲವಾ ಎನ್ನುವ ದೋರಣೆ ಬೇರೆ. ಬೇಕರಿಯಲ್ಲಿ ಕೊಡುವ ತಿಂಡಿಗೆ ಬಟ್ಟೆ ಚೀಲ ಆಗುವುದೇ ಇಲ್ಲಾ. ರಟ್ಟಿನ ಪೆಟ್ಟಿಗೆಗೆ ಹಾಕಿದರು ಮೇಲೊಂದು ಪ್ಲಾಸ್ಟಿಕ್ ಕವರ್, ಅದೆಲ್ಲಾ ಸೇರುವುದು ಕಸದ ತೊಟ್ಟಿಗೇನೆ.

ತರಕಾರಿ ತರಲಿಕ್ಕೆ ಹೋದರು ಅಷ್ಟೆ,ತರಕಾರಿ ತೂಕ ಮಾಡಿ ಸೀದಾ ಕವರ್ಗೆ ಬೇಡ ಎಂದರೆ   ಛೇ! ತಗಂಡು ಹೋಗಿ ಅಂತಾ, ನಮಗೇನೊ ಅದರಿಂದ ಒಳ್ಳೆಯದಾಗುತ್ತೇನೊ ಎನ್ನುವ ರೀತಿ. ನಮಗೆ ಸ್ವಲ್ಪ ಪರಿಚಯದವರಾದರೆ ಕವರ್ ಕೊಡಬೇಡಿ ಅಂದರೆ ಸುಮ್ಮನೆ ಪರಿಸರ ಹಾಳು ಅಂತಾ ಹೇಳಿದರೆ ಜನ ಕೇಳಬೇಕಲ್ಲಾ ಎನ್ನುತ್ತಾರೆ. ಅವರಿಗೆ ಬಿಡಿಸಿ ಹೇಳಲು ನಮಗೆ ತಾಳ್ಮೆಯು ಮತ್ತು ಅವರಿಗೆ ಕೇಳುವ ತಾಳ್ಮೆಯು ಇಲ್ಲ ಈ ಗಡಿಬಿಡಿ ಯುಗದಲ್ಲಿ. ಪ್ಲಾಸ್ಟಿಕ್ ಕವರ್  ಕೊಡಲಿಕ್ಕೆ ಹೆದರುವುದು ಎಲ್ಲಾದರು ತಪಾಸಣೆಗೆ ಬಂದ ಒಂದು ನಾಲ್ಕು ದಿನ ಅಷ್ಟೆ,ಮತ್ತೆ ಮಾಮುಲಿ, ಇಲ್ಲದೆ ಇದ್ದರೆ ಗ್ರಾಹಕರೆಲ್ಲಾ ಬೇರೆ ಅಂಗಡಿಗೆ ಹೋಗುತ್ತಾರೆ. ಇನ್ನು ಕುಡಿಯುವ ನೀರಿನ ಬಾಟಲಿ ಹಾಗು ತಂಪು ಪಾನೀಯಗಳ ಬಾಟಲಿಗಳನ್ನಂತು ಕೇಳುವುದೇ ಬೇಡ ಕುಡಿದು ಎಲ್ಲೇಂದರಲ್ಲಿ ಬಿಸಾಡಿರುತ್ತಾರೆ. ಆದ್ದರಿಂದ ಪಯಣಿಸುವಾಗ ಆದಷ್ಟು ನೀರನ್ನು ಮನೆಯಿಂದ ತೆಗೆದುಕೊಂಡು ಹೋದರೆ ಖಾಲಿಯಾದ ಮೇಲೆ ಕುಡಿಯುವ ನೀರಿನ ಘಟಕಗಳಿಂದ (ಸರ್ಕಾರ ಶುಧ್ಧ ಕುಡಿಯುವ ನೀರಿನ ಘಟಕಗಳನ್ನು ಎಲ್ಲಾ ಕಡೆ ಸ್ಥಾಪಿಸಿದರೆ) ಬಾಟಲಿಗಳನ್ನು ತುಂಬಿಸಕೊಳ್ಳಬಹುದು,

ಇನ್ನು ಸೋಂಬೇರಿ ಪ್ರಪಂಚದ ಅನ್ ಲೈನ್ ಶಾಪಿಂಗ್ ಮಾಡಿ ಅದು ಪ್ಯಾಕ್ ಬರುವ ರೀತಿ ಅಬ್ಬಬ್ಬಾ! ಒಳಗಡೆ ಗಾಳಿ ತುಂಬಿದ ಪ್ಲಾಸ್ಟಿಕ್ ಕವರ್, ನಂತರ ನಾವು ಆಯ್ಕೆ ಮಾಡಿದ ವಸ್ತುಗಳು,  ಅದು ಸಹ ಪ್ಲಾಸ್ಟಿಕ್ ಕವರ್ನಲ್ಲಿಯೇ. ಇನ್ನು ice cream cup ಮತ್ತು ಪ್ಲಾಸ್ಟಿಕ್ cup ನಲ್ಲಿ  ಜನ  ಕಾಪಿ  ಮತ್ತು ಟೀ ಕುಡಿದು ಅಲ್ಲಲ್ಲೆ ಎಸೆಯುವುದು, ಹಾಗು ಈಗಿನ ಜನರ use and throw pen ಮತ್ತು ಅದರ ಕವರ್ ರಸ್ತೆಯಲ್ಲಿ ಹಾರಾಡುವ ಪ್ಲಾಸ್ಟಿಕ್ ಕವರ್, ಕಟ್ಟಿರುವ ಮೋರಿ ಒಂದೊ ಎರಡೋ ಹೇಳಿ ಮುಗಿಸಲಿಕ್ಕೆ ಆಗುವುದಿಲ್ಲ, ಒಟ್ಟಾರೆಯಾಗಿ ನಾವೆಲ್ಲಾರು ಸೇರಿ ನಮ್ಮ ಮುಂದಿನ ಜನಾಂಗಕ್ಕೆ ಸ್ವಚ್ಛ ಹಾಗು ಶುಧ್ಧವಾದ ಪರಿಸರವನ್ನು ಬಿಟ್ಟು ಹೋಗಣ, ಯಾರಿಗೆ ಏನು ಹೇಳಿ ಪ್ರಯೋಜನ, ನಾವೇಲ್ಲರೂ ನಮ್ಮ ಬದುಕುವ ರೀತಿ ನೀತಿಗಳನ್ನು ಬದಲಿಸಿಕೊಳ್ಳಬೇಕು,
-ರೇಖ ಮಾಲುಗೋಡು.


  

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x