ಪ್ರೊ. ಪ್ರಫುಲ್ಲ ಚಂದ್ರ ರೇ: ಗುರುರಾಜ್ ಜಯಪ್ರಕಾಶ್

ಪ್ರಫುಲ್ಲ ಚಂದ್ರರು ಆಗಸ್ಟ್ 2 1861, ಅವಿಭಜಿತ ಭಾರತದ ಬಂಗಾಳದ ಸುಶಿಕ್ಷಿತ ಮತ್ತು ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಹರೀಶ್ ಚಂದ್ರರು ಜಮೀನುದಾರರಾಗಿದ್ದರು ಗಳಿಕೆಯನ್ನೆಲ್ಲಾ ಒಂದು ಗ್ರಂಥಾಲಯ ಕಟ್ಟಲು ಬಳಸಿದರು. ಒಂಭತ್ತನೇ ವರ್ಷದ ವರೆಗೆ ಅವರು ತನ್ನ ತಂದೆಯ ಶಾಲೆಯಲ್ಲೇ ಕಲಿತರು, ಮುಂದಿನ ಅಭ್ಯಾಸಕ್ಕಾಗಿ ತಂದೆಯ ಪ್ರೋತ್ಸಾಹದೊಂದಿಗೆ ಕೋಲ್ಕತ್ತಾಗೆ ತೆರಳಬೇಕಾಯಿತು. ಅವರು ಶೇಕ್ಸ್‌ಪಿಯರ್‌ ಸಾಹಿತ್ಯ, ಇತಿಹಾಸ, ಭೂಗೋಳ, ಮತ್ತು ಪ್ರಸಿದ್ದ ಪುರುಷರಾ ಜೀವನಚರಿತ್ರೆಯನ್ನು ಪ್ರೀತಿಯಿಂದ ಓದಿದರು. ನಾಲ್ಕನೆಯ ತರಗತಿಯಲ್ಲಿ ತೀವ್ರ ಜೀರ್ಣಕಾರಿ ಅಸ್ವಸ್ಥತೆಯ ಕಾರಣದಿಂದ  ತಮ್ಮ ತವರಿಗೆ ಮರಳಿದರು. ಅನಾರೋಗ್ಯಕ್ಕೆ ದೃತಿಗೆಡದೆ, ತಂದೆಯ ಮನೆಯಲ್ಲಿದ್ದಾ ಪುಸ್ತಕಗಳನ್ನು ಓದುತ್ತಾ ಅನಾರೋಗ್ಯವನ್ನೂ ಉಪಯೋಗಿಸಿಕೊಂಡರು. 

ಎರಡು ವರ್ಷಗಳ ನಂತರ ಮತ್ತೇ ಕೋಲ್ಕತ್ತಾದಲ್ಲಿ ವಿಧ್ಯಾಬ್ಯಾಸ ಮುಂದುವರೆಸಿದರು. ಪ್ರೊಫೆಸರ್ ಅಲೆಗ್ಸ್ಯಾಂಡರ್ ಪೆಡ್ಲೆರ್‌ರವರ ಬಳಿ ರಸಾಯನಶಾಸ್ತ್ರ ಕಲಿತರು, ಪೆಡ್ಲೆರ್‌ರಪ್ರಭಾವ ಪ್ರಫುಲ್ಲರನ್ನು ಸಾಹಿತ್ಯದಿಂದ  ರಸಾಯನಶಾಸ್ತ್ರದೆಡೆ ಆಕರ್ಷಿತರಾಗುವಂತೇ ಮಾಡಿತು. 1882 ಬ್ರಿಟನನ ಈಡನ್ಬರ್ಗ್ ವಿಶ್ವವಿದ್ಯಾಲಯದಲ್ಲಿ  ಸ್ನಾತಕೋತ್ತರ ಪದವಿಗೆ ತೆರಳಿದರು. ಅವರು 1885 ರಲ್ಲಿ ಯಶಸ್ವಿಯಾಗಿ ಸ್ನಾತಕ ಪದವಿ ಪೂರ್ಣಗೊಳಿಸಿದರು. 1887 ರಲ್ಲಿ "ಕಾಂಜಗೇಟೆಡ್ ಸಲ್ಫೇಟ್ಸ್ ಆಫ್ ಕಾಪರ್ ಮಗ್ನೀಸಿಯಮ್ ಗ್ರೂಪ್: ಏ ಸ್ಟಡೀ ಆಫ್ ಐಸೋಮಾರ್ಫಸ್ ಮಿಕ್‌ಚ್ಸ್ಚರ್ಸ್  ಅಂಡ್ ಮಾಲಿಕ್ಯುಲರ್ ಕಾಂಬಿನೇಶನ್ಸ್" ಯನ್ನುವ ಸಂಶೋಧನಾ ಪ್ರಬಂಧಕ್ಕೆ ಡಾಕ್ಟೊರಲ್ ಪದವಿ ಪಡೆದರು. ಈ ಪ್ರಬಂಧವನ್ನು, ಆ ವರ್ಷದ ಅತ್ಯುತ್ತಮ ನಿರ್ಣಯಿಸಿ ಅವರಿಗೆ  "ಹೋಪ್ ಪ್ರಶಸ್ತಿ" ನೀಡಲಾಯಿತು.

ಅವರ ವಿದ್ಯಾರ್ಥಿ ಜೀವನದಲ್ಲಿ "ಕೆಮಿಕಲ್ ಸೊಸೈಟೀ ಆಫ್ ಧಿ ಯೂನಿವರ್ಸಿಟೀ" ಯ ಉಪಾಧ್ಯಕ್ಷರಾಗಿದ್ದರು. ಇದು ಬಹಳ ಅಪರೂಪದ ಘಟನೆ ಏಕೆಂದರೆ ಮತ್ತೊಂದು ದೇಶಕ್ಕೆ ವಿದ್ಯಾರ್ಥಿಗೆ ಉಪಾಧ್ಯಕ್ಷ  ಹುದ್ದೆ ದೊರಕುವುದು ಕಷ್ಟವಾಗಿತ್ತು. 1885 ರಲ್ಲಿ "ಇಂಡಿಯಾ ಬಿಫೋರ್ ಅಂಡ್ ಆಫ್ಟರ್ ಧಿ ಮ್ಯೂಟಿನೀ" ಯನ್ನುವ ಪ್ರಬಂಧಕ್ಕೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ಸಂದಿತು. ಬ್ರಿಟಿಷರು ಹೇಗೆ ಭಾರತ ಜನರ ಅಭಿವೃದ್ಧಿ ಮತ್ತು ಶಿಕ್ಷಣ ನಿರ್ಲಕ್ಷ್ಯ ಮಾಡುತಿದ್ದಾರೆ ಯನ್ನುವ ಪ್ರಬಂಧಗಳನ್ನು  ಪ್ರಕಟಿಸಿದರು. ಬ್ರಿಟನ್ನಲ್ಲೇ ಬ್ರಿಟಿಷರ ದೌರ್ಜನ್ಯವನ್ನು ಪ್ರಕಟಿಸಿ ಭಾರತೀಯ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುತಿದ್ದರು. ಪ್ರಫುಲ್ಲ ಚಂದ್ರರು 1888 ರಲ್ಲಿ ಭಾರತಕ್ಕೆ ಹಿಂದಿರುಗಿದರು, ಬ್ರಿಟಿಷರು ಭಾರತೀಯನೆಂಬ ಕಾರಣಕ್ಕೆ ಇಂಪೀರೀಯಲ್ ಸರ್ವಿಸ್  ನೀಡಲು ನೀರಾಕರಿಸಿದರು. ಪ್ರಫುಲ್ಲ ಚಂದ್ರರು ಕೇವಲ 250 ರುಪಾಯಿಗೆ  ಪ್ರೊವಿನ್ಶಿಯಲ್ ಸರ್ವಿಸ್ ಮಾಡಬೇಕಾದ ಪರಿಸ್ಥಿತಿ ಏರ್ಪಟ್ಟಿತ್ತು. 

ಪ್ರೊ. ಪ್ರಫುಲ್ಲ ಚಂದ್ರ ರೇ

ಆ ದಿನಗಳಲ್ಲಿ, ರಸಾಯನಶಾಸ್ತ್ರದ ಸಂಶೋಧನೆ ಮಾಡಲು ಭಾರತದಲ್ಲಿ ಹೆಚ್ಚಿನ ಪ್ರಯೋಗಾಲಯಗಳು ಇರಲಿಲ್ಲ. ಮುಂದಿನ ದಿನಗಳಲ್ಲಿ ಭಾರತ ಸ್ವಾತಂತ್ರ್ಯ ಪಡೆದುಕೊಳ್ಳುವುದು ಎಂಬುದ್ದನ್ನು ಮನಗಂಡಿದ್ದ ಅವರು, ಹೆಚ್ಚಿನ ಸಂಶೋಧನೆ ಭಾರತಕ್ಕೆ ಅಗತ್ಯ ಎಂದು ಆ ದಿನಗಳಲ್ಲೆ ಅವರು ಪ್ರತಿಪಾದಿಸುತಿದ್ದರು. ಅಂತಾರಾಷ್ಟ್ರೀಯ ಗುಣಮಟ್ಟದ ವಿದ್ಯಾರ್ಥಿಗಳು ಭಾರತಕ್ಕೆ ಅವಶ್ಯಕ ಎಂದು ಬಲವಾಗಿ ನಂಬಿದ್ದರು. ಆದ್ದರಿಂದ ಅವರು ಮೊದಲ ರಸಾಯನಶಾಸ್ತ್ರದ ಪ್ರಯೋಗಾಲಯವನ್ನು ಪ್ರೆಸಿಡೆನ್ಸಿ ಕಾಲೇಜ್ ನಲ್ಲಿ ಅನಾನುಕೂಲ ಪರಿಸ್ಥಿತಿಯಲ್ಲಿ ನಿರ್ಮಿಸಿದರು. ಅವರು ಸಂಶೋಧನೆಗಳು ಕೇವಲ ಹಣ ಮತ್ತು  ಸುರಕ್ಷಿತ ಭವಿಷ್ಯಕ್ಕೆ ಮಾಡಬಾರದು ಎಂದು ವಾದಿಸುತಿದ್ದರು. ನಿಧಾನವಾಗಿ ಅವರು ಉತ್ತಮ ವಿದ್ಯಾರ್ಥಿ ಗುಂಪುನ್ನು ನಿರ್ಮಿಸಿದರು. ಅವರು, ದೇಶದ ರಸಾಯನಶಾಸ್ತ್ರದ ಪ್ರಗತಿಗಳನ್ನು ಚರ್ಚಿಸಲು ಇಂಡಿಯನ್ ಕೆಮಿಕಲ್ ಸೊಸೈಟೀಯನ್ನುವ ವೇದಿಕೆ ನಿರ್ಮಿಸದರು. ಈಜಿಪ್ಟ್, ಸಿರಿಯ ಮತ್ತು ಚೀನಾದ ಪೂರ್ವಜರ ರಸಾಯನಶಾಸ್ತ್ರದ ಸಾಧನೆಗಳ ಹಾಗೆ ಭಾರತೀಯರ ರಸಾಯನಶಾಸ್ತ್ರದ ಸಾಧನೆಗಳನ್ನು "ಧಿ ಹಿಸ್ಟರೀ ಆಫ್ ಹಿಂದೂ ಕೆಮಿಸ್ಟ್ರೀ"ಎಂಬ ಪುಸ್ತಕವನ್ನು ರಚಿಸಿದರು. ಲೋಹವಿದ್ಯೆ ಮತ್ತು ಆಯುರ್ವೇದಗಳ ಪ್ರಗತಿ ಎಷ್ಟು ಉತ್ತುಂಗದಲ್ಲಿತ್ತು ಎನ್ನುವುದನ್ನು ದಾಕಲಿಸಿದರು. 

ಆಚಾರ್ಯ ರಾಯ್ ಹೇಗೆ ಭಾರತೀಯ ವಿಜ್ಞಾನ ಕುಂಟಿತವಾಗಲು ಮೂರು ಕಾರಣಗಳನ್ನು ಗುರುತಿಸಿದರು. 1. ಜಾತಿ ಪದ್ದತಿಗಳಿಂದ ಕೆಳ ಜಾತಿಯವರನ್ನು ವಿಜ್ಞಾನದಿಂದ ದೂರ ತಳ್ಳಿದ್ದು. 2. ಕೆಳ ಜಾತಿಯ ಆಸಕ್ತ ಜನ ವಿಜ್ಞಾನದ ಚರ್ಚೆಗಳಿಂದ ದೊರ ಆಗಿದ್ದು. 3.  ಭೌತಿಕ ವಿಜ್ಞಾನದ ಜೊತೆ ಅದ್ವೈತ ಸಿದ್ದಂತದಿಂದ ಬದಲಾದ ವೇದಾಂತದ ತತ್ವಶಾಸ್ತ್ರಗಳ ಅವಾಸ್ತವಿಕತೆ ಜೊತೆಗೊಡಿದ್ದು. ಅಂದಿಂನ ದಿನಗಳಲ್ಲಿ ಬ್ರಿಟಿಷರು, ಸಂಪೂರ್ಣವಾಗಿ ಭಾರತೀಯ ಮಾರುಕಟ್ಟೆ ಮೇಲೆ ಪ್ರಾಬಲ್ಯ ಹೊಂದಿ ಭಾರತೀಯ ಖನಿಜ ಸಂಪತ್ತನ್ನು ಲೂಟಿ ಮಾಡುತಿದ್ದರು. ಬ್ರಿಟಿಷ್ ಔಷಧಿಗಳನ್ನು ಬಹಿಷ್ಕರಿಸಿ, ಭಾರತದಲ್ಲೇ  ರಾಸಾಯನಿಕ ಔಷಧ ಕೈಗಾರಿಕೆಗಗಳನ್ನು ನಿರ್ಮಿಸಲು ಮುಂದಾದರು.  ಆರ್ಥಿಕ ಸ್ವಾತಂತ್ರ್ಯ ರಾಜಕೀಯ ಸ್ವಾತಂತ್ರ್ಯದಷ್ಟೇ ಮುಖ್ಯ ಎಂದು ಪ್ರತಿಪಾದಿಸುತಿದ್ದರು. ಭಾರತದ ಕೈಗಾರಿಕೆಗಳ ಪ್ರಗತಿಗೆ  

ಸ್ಥಳೀಯ ಔಷಧಿಗಳ ಪ್ರಯೋಗಗಳನ್ನು ನಡೆಸಲು 91ರ ಹರೆಯದಲ್ಲಿ ಮನೆಯಲ್ಲೇ ಒಂದು ಪ್ರಯೋಗಾಲಯವನ್ನು ನಿರ್ಮಿಸಿದರು. ಪ್ರಯೋಗಗಳು ಯಶಸ್ವಿಯಾದ ನಂತರ ತಮ್ಮ ಸ್ವಂತ ಹಣ ಖರ್ಚು ಮಾಡಿ, ಆ ಔಷಧಗಳನ್ನು ಮಾರುಕಟ್ಟೆಗೆ ತರಲು ಪ್ರಯತ್ನಸುತಿದ್ದರು. ಸ್ವತಃ ತಾವೇ ಪ್ರತಿ ಅಂಗಡಿಗಳಿಗೆ ಹೋಗಿ ತಮ್ಮ ಔಷಧಗಳ ಉಪಯೋಗಗಳನ್ನು ವಿವರಿಸುತಿದ್ದರು.ಹೀಗೆ ನಿದಾನವಾಗಿ "ಬೆಂಗಾಲ್ ಕೆಮಿಕಲ್ & ಫಾರ್ಮಸೆಟಿಕಲ್ಸ್ ವರ್ಕ್ಸ್" ಶುರು ಮಾಡಿದರು. ಆಚಾರ್ಯ ಪ್ರಫುಲ್ಲ ಚಂದ್ರ ಇನ್ನೂ ಅನೇಕ ಉದ್ಯಮಗಳನ್ನು (ಕೋಲ್ಕತ್ತಾ ಪಾಟರೀ ವರ್ಕ್ಸ್, ಬೆಂಗಾಲ್ ಎನ್ಯಾಮಲ್ ವರ್ಕ್ಸ್, ನ್ಯಾಶನಲ್ ಟ್ಯಾನರೀ ವರ್ಕ್ಸ್ , ಬೆಂಗಾಲ್ ಸ್ಟೀಮ್ ನ್ಯಾವಿಗೇಶನ್ ಕಂಪನೀ ಮುಂತಾದವುಗಳು) ರಚಿಸಲು ಪ್ರಮುಕ ಪತ್ರವಹಿಸಿದರು. 

ಅವರು ಸಕ್ರಿಯ ಸ್ವಾತಂತ್ರ್ಯ ಚಳುವಳಿಯಲ್ಲಿ ಮತ್ತು ರಾಜಕೀಯದಲ್ಲಿ ಭಾಗವಹಿಸದಿದ್ದರೋ ಕಾಂಗ್ರೆಸ್ನ ಚರ್ಚೆಗಳಲ್ಲಿ ಭಾಗಿಯಾಗುತಿದ್ದರು. 1920ರ ಅಸಹಕಾರ ಚಳವಳಿಯಲ್ಲಿ ಭಾಗಿಯಾಗಿ ವಿದೇಶಿ ಸರಕುಗಳನ್ನು ಬಹಿಷ್ಕರಿಸಲು ಕರೆ ಕೊಟ್ಟರು.  ಧರ್ಮದ ಆಧಾರದ ಮೇಲೆ ನಡೆಯುವ ರಾಷ್ಟ್ರೀಯತೆಯನ್ನು ಬಲವಾಗಿ ವಿರೋದಿಸುತಿದ್ದರು. ಸುಭಾಸ್ ಚಂದ್ರ ಬೋಸ್ ರು  ಮತ್ತೇ ಕಾಂಗ್ರೆಸ್ನ ಅದ್ಯಕ್ಷರಾಗಬೇಕೆಂದು ಸಾರ್ವಜನಿಕ ಹೇಳಿಕೆಗಳನ್ನು ಕೊಟ್ಟರು. ಇಂತಹ ಮಹಾನ್ ಚೇತನ ಜೂನ್ 16 1944 ರಂದು ನಿಧನರಾದರು. ಅವರು 1917 ರಲ್ಲಿ ನೈಟ್ ಹುಡ್ ಪ್ರಶಸ್ತಿಯನ್ನು ಗಳಿಸಿದರು. ಸ್ವಾತಂತ್ರ್ಯ ನಂತರ ಭಾರತದಲ್ಲಿ ಯಾವ ಪ್ರಶಸ್ತಿಗಳು ಇವರಿಗೆ ಬರದಿದ್ದು ವಿಪರ್ಯಾಸ ಮತ್ತು ಇಂದಿನ ಅನೇಕ ರಸಾಯನಶಾಸ್ತ್ರಜ್ಞರು ಮರೆಯುತಿರುವುದು ದುರಂತ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Amulya
Amulya
8 years ago

Nice work bro

amita
amita
8 years ago

Hi Guru Please provide translation so that more people enjoy and appreciate it.

2
0
Would love your thoughts, please comment.x
()
x